ಬ್ರೇಕಿಂಗ್ ನ್ಯೂಸ್
28-02-26 11:12 am Mangalore Staffer ಕ್ರೈಂ
ಮಂಗಳೂರು, ಫೆ.28: ಚೈನ್ ಲಿಂಕ್ ಹೆಸರಲ್ಲಿ ಜನಸಾಮಾನ್ಯರನ್ನು ಮೋಸಗೊಳಿಸಿ ಕೋಟಿ ಕೋಟಿ ಹಣ ಲೂಟಿ ಮಾಡುತ್ತಿರುವ ಬ್ಲೇಡ್ ಕಂಪನಿ ವೆಕ್ಸನ್ ವಿರುದ್ಧ ಮಂಗಳೂರಿನ ಕದ್ರಿ ಠಾಣೆಯಲ್ಲಿ ಕೊನೆಗೂ ಎಫ್ಐಆರ್ ದಾಖಲಾಗಿದೆ. ಹಣ ಕೊಟ್ಟು ಮೋಸ ಹೋಗಿರುವ ಸ್ವಸ್ತಿಕ್ ಬಿಸಿನೆಸ್ ಸ್ಕೂಲ್ ಬಿಕಾಂ ವಿದ್ಯಾರ್ಥಿನಿಯೊಬ್ಬರ ದೂರಿನಂತೆ ಪ್ರಕರಣ ದಾಖಲಾಗಿದೆ.
ವೆಕ್ಸನ್ ಎನ್ನುವುದು ಮಹಾರಾಷ್ಟ್ರ ಮೂಲದ ನಕಲಿ ಕಂಪನಿಯಾಗಿದ್ದು, ಕುದ್ರೋಳಿಯ ಅಳಕೆಯಲ್ಲಿ ಕಾರ್ಯಾಚರಿಸುತ್ತಿದೆ. ಸಂಸ್ಥೆಯ ಸ್ಥಾಪಕ ದಿಗ್ವಿಜಯ್ ದೇಸಾಯಿ, ಸಹ ಸಂಸ್ಥಾಪಕರಾದ ರಾಮಚಂದ್ರ ಶೇವಳೆ, ಸುನಿಲ್ ಸಾವಂತ್, ಅನಾನ್ ಅಹೈರ್, ಮಂಗಳೂರಿನ ಕಚೇರಿಯಲ್ಲಿ ಉದ್ಯೋಗಿಗಳಾಗಿರುವ ಪಲ್ಲವಿ, ಅಂಜಲಿ, ನವ್ಯಾ, ನಿವೇಶ್, ಜಯಶ್ರೀ ಮತ್ತು ಜುನೈದ್ ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪೈಕಿ ಅಂಜಲಿ, ನವ್ಯಾ ಬೇರೆ ಬೇರೆ ಕಾಲೇಜುಗಳ ವಿದ್ಯಾರ್ಥಿನಿಯರಾಗಿದ್ದಾರೆ.



ಕಳೆದ ಜನವರಿ ತಿಂಗಳಲ್ಲಿ ತನ್ನನ್ನು ಪರಿಚಯದ ನವ್ಯಾ ಎಂಬಾಕೆ ಮಧ್ಯಾಹ್ನ 2ರಿಂದ 5 ಗಂಟೆಯ ವರೆಗೆ ಪಾರ್ಟ್ ಟೈಮ್ ಕೆಲಸವಿದ್ದು, ತಿಂಗಳಿಗೆ 15 ಸಾವಿರದಿಂದ 30 ಸಾವಿರ ದುಡಿಯಬಹುದು ಎಂದು ಹೇಳಿ ವೆಕ್ಸನ್ ಕಂಪನಿಗೆ ಕರೆದೊಯ್ದಿದ್ದಳು. ಮೊದಲಿಗೆ ವೆಬ್ ಡೆವಲಪರ್, ವೆಬ್ ಡಿಸೈನರ್, ಡಾಟಾ ಎಂಟ್ರಿ ಜಾಬ್ ಎಂದು ಕೆಲಸಕ್ಕೆ ಕರೆದಿದ್ದು, ಅಲ್ಲಿ ಮೂರು ದಿನದ ವಸತಿ ಸಹಿತ ತರಬೇತಿಯೆಂದು ಹೇಳಿ 2500 ರೂ. ಪಡೆದಿದ್ದರು. ಆದರೆ ತರಬೇತಿ ಬದಲು ಮಾರ್ಕೆಟಿಂಗ್ ಮಾಡಲು ಹೇಳಿದ್ದು, ಇದರಿಂದ ದೊಡ್ಡ ಮೊತ್ತ ಸಂಪಾದಿಸಬಹುದು ಎಂದು ಹೇಳಿ ಬ್ರೇನ್ ವಾಷ್ ಮಾಡಿದ್ದಾರೆ.
51 ಸಾವಿರ ಕಟ್ಟಿದರೆ ನಿಮಗೆ ಹಲವಾರು ಇಲೆಕ್ಟ್ರಾನಿಕ್, ಕಾಸ್ಮೆಟಿಕ್ ವಸ್ತುಗಳು ಸಿಗುತ್ತವೆ, ಅದೇ ರೀತಿ ನೀವು ನಿಮ್ಮ ಗೆಳೆಯ- ಗೆಳತಿಯರನ್ನು ಕಂಪನಿಗೆ ಸೇರಿಸಿದರೆ ಉತ್ತಮ ಕಮಿಷನ್ ಸಿಗುತ್ತದೆ ಎಂದು ಹೇಳಿ ನಂಬಿಸಿದ್ದಾರೆ. ಮನೆಯಲ್ಲಿ ಸಾಲ ಮಾಡಿ ಹಣ ಕೊಟ್ಟಿದ್ದು ಮೋಸ ಹೋಗಿದ್ದೇನೆ. ಇದೇ ರೀತಿ ಹಲವಾರು ಮಂದಿ ಅಲ್ಲಿದ್ದು, ಮೋಸಕ್ಕೆ ಒಳಗಾಗಿದ್ದಾರೆ. ಅಲ್ಲಿ ಸಿಕ್ಕಿರುವ ವಸ್ತುಗಳೂ ಗುಣಮಟ್ಟದ್ದಲ್ಲ. ಅದೂ ನಕಲಿಯಾಗಿದ್ದು ನಮ್ಮ ಕಾಲೇಜಿನವರಿಗೆ ತಿಳಿಸಿ ತಡವಾಗಿ ದೂರು ನೀಡಿರುವುದಾಗಿ ದೂರಿನಲ್ಲಿ ತಿಳಿಸಿದ್ದಾರೆ. ಕದ್ರಿ ಠಾಣೆ ಪೊಲೀಸರು ಭಾರತೀಯ ನ್ಯಾಯ ಸಂಹಿತೆಯಡಿ 3(5), 316(2), 318(3) ಪ್ರಕಾರ ಕೇಸು ದಾಖಲಿಸಿದ್ದಾರೆ.
Join our WhatsApp group for the latest news and stories on Headline Karnataka: https://t.ly/yCmFN
After multiple complaints, an FIR has finally been registered at Kadri Police Station against the blade company Vexon, accused of cheating the public of crores of rupees under the guise of job offers and chain-link marketing.
10-09-26 05:10 pm
HK News Staffer
ಅಪೆಕ್ಸ್ ಬ್ಯಾಂಕ್ ಅಧ್ಯಕ್ಷ ಗಿರಿ ; ತೀವ್ರ ಲಾಬಿ ನಡೆ...
10-09-26 03:50 pm
ಬೆಳ್ಳಂಬೆಳಗ್ಗೆ ಜಾರಕಿಹೊಳಿಗೆ ಇಡಿ ಶಾಕ್: 18 ಬಾರ್...
09-09-26 10:52 am
ಕಳಸದಲ್ಲಿ ರಸ್ತೆ ಅವ್ಯವಸ್ಥೆಯ ಎಫೆಕ್ಟ್: ‘ಹುಡುಗ-ಹು...
08-09-26 02:24 pm
ಐಪಿಎಸ್ ಅಧಿಕಾರಿಗಳ ಭರ್ಜರಿ ವರ್ಗಾವಣೆ: ಮಂಗಳೂರು ಡಿಸ...
07-09-26 01:33 pm
10-09-26 01:23 pm
HK News Staffer
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
ಹಾರಾಟದ ವೇಳೆ ಪೈಲೆಟ್ ಅಸ್ವಸ್ಥ ; ದೋಹಾ - ಬೆಂಗಳೂರು...
03-09-26 07:27 pm
ಅಯೋಧ್ಯೆ ರಾಮ ಮಂದಿರಕ್ಕೆ ನೂತನ ಸಿಇಓ ಆಗಿ ನಿವೃತ್ತ ಏ...
02-09-26 08:31 pm
10-09-26 09:24 pm
HK News Staffer
ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಪದ್...
10-09-26 10:27 am
ತುಳು ಮಂಗಳೂರಿಗರ ‘ರಾಷ್ಟ್ರಭಾಷೆ’ ; ಕರಾವಳಿಯ ಮೊದಲ ಸ...
09-09-26 09:04 pm
ಬಾರ್ಕೂರಿನಲ್ಲಿ ಅಪರೂಪದ ಸಿಡಿತಲೆ ವೀರಗಲ್ಲು ಪತ್ತೆ ;...
09-09-26 03:29 pm
ಮಂಗಳೂರಿನಲ್ಲಿ ಸಂಪುಟ ಸಭೆ ; ಪುತ್ತೂರಿನಲ್ಲಿ ಆಯುರ್ವ...
09-09-26 02:03 pm
11-09-26 01:09 pm
HK News Staffer
ಬೈಕ್ಗೆ ಡಿಕ್ಕಿ ಹೊಡೆದ ಕಾರು ; ಚಾಮರಾಜನಗರದಲ್ಲಿ ಮೂ...
11-09-26 10:14 am
ಕುಂದಾಪುರದಲ್ಲಿ 8 ಶಾಲಾ ಮಕ್ಕಳ ಬಲಿ ಪಡೆದ ಭೀಕರ ಅಪಘಾ...
10-09-26 08:16 pm
ಬೈಂದೂರಿನಲ್ಲಿ ತೆರವು ಕಾರ್ಯಾಚರಣೆ ವೇಳೆ ಸರಣಿ ಅಪಘಾತ...
10-09-26 02:18 pm
5 ವರ್ಷಗಳಿಂದ ಕೋರ್ಟ್ಗೆ ಹಾಜರಾಗದೆ ತಲೆಮರೆಸಿಕೊಂಡಿದ...
09-09-26 08:16 pm