ಬ್ರೇಕಿಂಗ್ ನ್ಯೂಸ್
21-01-26 01:31 pm HK News Desk ಕರ್ನಾಟಕ
ಚಾಮರಾಜನಗರ, ಜ 21 : ಮಲೆ ಮಹದೇಶ್ವರ ಬೆಟ್ಟದ ತಾಳಬೆಟ್ಟಕ್ಕೆ ಪಾದಯಾತ್ರೆಗೆ ಹೊರಟ್ಟಿದ್ದ ಭಕ್ತರ ಮೇಲೆ ಚಿರತೆ ದಾಳಿ ನಡೆಸಿದ್ದು, ಘಟನೆಯಲ್ಲಿ ಓರ್ವ ಯುವಕ ಬಲಿಯಾಗಿರುವ ಘಟನೆ ಚಾಮರಾಜನಗರದಲ್ಲಿ ನಡೆದಿದೆ. ಮೃತ ಯುವಕನನ್ನು ಪ್ರವೀಣ್ ಎಂದು ಗುರುತಿಸಲಾಗಿದ್ದು, ಮಂಡ್ಯ ತಾಲೂಕಿನ ನಿವಾಸಿ ಎಂಬ ಮಾಹಿತಿ ಲಭ್ಯವಾಗಿದೆ.
ಚಾಮರಾಜನಗರ ಜಿಲ್ಲೆಯ ಮಲೆ ಮಹದೇಶ್ವರ ಬೆಟ್ಟಕ್ಕೆ ಮಂಡ್ಯ ತಾಲೂಕಿನ ಚಿರನಹಳ್ಳಿ ಗ್ರಾಮದಿಂದ ಪಾದಯಾತ್ರೆಗೆ ಹೊರಟ್ಟಿದ್ದರು. ಇಂದು ಬೆಳಗಿನ ಜಾವ ಪಾದಯಾತ್ರೆ ಹೋಗುವ ವೇಳೆ ಏಕಾಏಕಿ ಚಿರತೆ ದಾಳಿ ಮಾಡಿದ್ದು, ಈ ವೇಳೆ ಚಿರತೆ ನೊಡ್ತಿದ್ದಂತೆ ಸ್ಥಳದಿಂದ ಸ್ನೇಹಿತರು ಓಡಿ ಹೋಗಿ ಜೀವ ರಕ್ಷಿಸಿಕೊಂಡಿದ್ದಾರೆ. ಆದರೆ ದಾಳಿಯಲ್ಲಿ ಸಿಕ್ಕ ಪ್ರವೀಣ್ ನನ್ನ ಚಿರತೆ ಎಳೆದುಕೊಂಡು ಹೋಗಿದೆ.

ಕೂಡಲೇ ಅರಣ್ಯ ಇಲಾಖೆ ಸಿಬ್ಬಂದಿಗೆ ಸ್ಥಳೀಯರು ಮಾಹಿತಿ ನೀಡಿದ್ದು, ಈ ವೇಳೆ ಚಿರತೆ ಇರೋದನ್ನು ಅರಣ್ಯ ಇಲಾಖೆ ಗುರುತಿಸಿದ್ದಾರೆ. ಸದ್ಯ ಯುವಕನ ಶವದ ಬಳಿಯೇ ಚಿರತೆ ಇರೋದು ಕಂಡು ಬಂದಿತ್ತು. ಈ ಹಿನ್ನೆಲೆಯಲ್ಲಿ ಚಿರತೆ ಸೆರೆಗೆ "ಚಿರತೆ ಟಾಸ್ಕ್ ಫೋರ್ಸ್" ಕರೆಸಿ ಕಂದಕದಲ್ಲಿದ್ದ ಮೃತದೇಹವನ್ನು ಹೊರಕ್ಕೆ ಕರೆತಂದಿದ್ದಾರೆ. ಸ್ಥಳದಲ್ಲಿ ಅರಣ್ಯ ಹಾಗೂ ಪೊಲೀಸ್ ಸಿಬ್ಬಂದಿ ಬೀಡುಬಿಟ್ಟಿದ್ದಾರೆ.
ಕಳೆದ ಒಂದು ವಾರದಿಂದ ಸತತವಾಗಿ ರಸ್ತೆ ಬದಿಯಲ್ಲಿಯೇ ಚಿರತೆ ಕಾಣಿಸಿಕೊಂಡು ಕುಳಿತಿರುತ್ತಿದ್ದ ವಿಡಿಯೋಗಳು ಸೋಶಿಯಲ್ ಮೀಡಿಯಾದಲ್ಲಿ ಬಹಳ ವೈರಲ್ ಆಗಿತ್ತು. ಆದರೂ ಅರಣ್ಯ ಇಲಾಖೆ ಮಾತ್ರ ತಲೆಕೆಡಿಸಿಕೊಂಡಿಲ್ಲ. ಚಿರತೆ ಒಬ್ಬನನ್ನ ಬಳಿ ಪಡೆದ ನಂತರ ಅರಣ್ಯ ಅಧಿಕಾರಿಗಳು, ಸಿಬಂದಿ ಓಡಿ ಹೋಗಿ ಚಿರತೆಯನ್ನು ಹಿಡಿಯಲು ಹರಸಾಹಸ ಪಡುತ್ತಿದ್ದಾರೆ.
A tragic leopard attack claimed the life of a young devotee in Chamarajanagar district early Tuesday morning. The incident occurred near Talabetta on the Male Mahadeshwara Hills, where a group of devotees had set out on a foot pilgrimage.
15-02-26 10:38 pm
HK News Desk
Nelamangala Accident, 5 Killed: ಹೊಸಕೋಟೆ ದುರಂತ...
15-02-26 10:22 am
ಲೋಕಾಯುಕ್ತ ಬಲೆಗೆ ಬಿದ್ದ 'ಜನರ ಧನ ನುಂಗಿದ ಜನಾರ್ಧನ'...
13-02-26 10:45 pm
Hoskote Accident, Latest Update: ಹೊಸಕೋಟೆ ಅಪಘಾ...
13-02-26 09:18 pm
ಹೊಸಕೋಟೆ ಬಳಿ ಸರಣಿ ಅಪಘಾತ ; ಕ್ಯಾಂಟರ್ ಡ್ರೈವರ್ ಎಡವ...
13-02-26 10:41 am
16-02-26 12:53 pm
HK Staffer
ಮಗನಿಲ್ಲದ ಮೇಲೆ ದುಬಾರಿ ಕಾರು ಯಾಕೆ ? ಆತನ ಸಮಾಧಿ ಪಕ...
15-02-26 04:01 pm
ಖಲಿಸ್ತಾನಿ ಉಗ್ರನ ಹತ್ಯೆಗೆ ಸಂಚು ; ತಪ್ಪೊಪ್ಪಿಕೊಂಡ...
14-02-26 10:55 pm
ಬಾಂಗ್ಲಾದಲ್ಲಿ ಚುನಾವಣೆ ; ಒಂದು ಸ್ಥಾನ ಗೆದ್ದ ಬಿಜೆಪ...
14-02-26 08:13 pm
ಜಗತ್ತು ನೋಡುವ ಮುನ್ನವೇ ಕಣ್ಮುಚ್ಚಿ 5 ಮಕ್ಕಳಿಗೆ ಜೀವ...
14-02-26 01:51 pm
16-02-26 11:13 pm
Mangaluru Staffer
ಬಿಕರ್ನಕಟ್ಟೆ ಸರ್ಕಾರಿ ಶಾಲೆಯಲ್ಲಿ ರಂಗಮಂಟಪ ಲೋಕಾರ್ಪ...
16-02-26 11:06 pm
ಹಂಪಿಯ ಮರ್ಯಾದೆ ಹರಾಜು ಹಾಕಿದ್ದ ಪ್ರಕರಣ ; ಪ್ರವಾಸಿ...
16-02-26 11:02 pm
Manjunath Bhandary MLC: ಕೆಪಿಸಿಸಿ ಕಾರ್ಯಾಧ್ಯಕ್ಷ...
16-02-26 01:48 pm
Thokottu Accident, Mangalore: ಖಾಸಗಿ ಶಾಲಾ ಬಸ್ಸ...
16-02-26 09:33 am
16-02-26 04:01 pm
HK News Desk
Manish kottary, Marriage Fraud, Mangalore: ಮ್...
15-02-26 05:08 pm
ಪ್ರೇಮಿಗಳ ದಿನವೇ ದುರಂತ ಅಂತ್ಯ ಕಂಡ ಜೋಡಿ ; ಪ್ರೀತಿಗ...
14-02-26 10:47 pm
Indian Bank Gold Robbery, Bangalore: ಬೆಂಗಳೂರು...
14-02-26 07:37 pm
Mangalore Drugs, CCB Police: ಬೆಂಗಳೂರಿನಿಂದ ಎಂಡ...
13-02-26 03:35 pm