ಬ್ರೇಕಿಂಗ್ ನ್ಯೂಸ್
03-02-26 05:34 pm Bangalore Correspondent ಕರ್ನಾಟಕ
ಬೆಂಗಳೂರು, ಫೆ.3 : ಕಾನ್ಪಿಡೆಂಟ್ ಗ್ರೂಪ್ ಮುಖ್ಯಸ್ಥ ಸಿ.ಜೆ. ರಾಯ್ ಆತ್ಮಹತ್ಯೆ ಸುದ್ದಿ ಸಂಚಲನ ಮೂಡಿಸಿರುವಾಗಲೇ ಸಾವಿಗೂ ಮುನ್ನ ಬರೆದಿಟ್ಟಿದ್ದಾರೆ ಎನ್ನಲಾದ ಒಂಬತ್ತು ಪುಟಗಳ ಡೆತ್ ನೋಟ್ ಪೊಲೀಸರಿಗೆ ಲಭಿಸಿದೆ. ಡೈರಿಯಲ್ಲಿ ಬರೆದ ಸುದೀರ್ಘ ಡೆತ್ ನೋಟ್ ನಲ್ಲಿ ಅವರು ತಮ್ಮ ಸಾವಿನ ಬಗ್ಗೆ ಹೇಳಿಕೊಂಡಿದ್ದಾರೆ. ಆತ್ಮಹತ್ಯೆಗೆ ಕಾರಣವಾದ ಅಂಶಗಳನ್ನು ಉಲ್ಲೇಖಿಸಿದ್ದು ಎಸ್ಐಟಿ ತನಿಖೆಗೆ ಹೊಸ ದಿಕ್ಕು ತೋರಿಸಿದೆ.
ಸಿ.ಜೆ. ರಾಯ್ ಡೆತ್ ನೋಟ್ನಲ್ಲಿ ತಮ್ಮ ಕುಟುಂಬಸ್ಥರಿಗೆ ಕ್ಷಮೆ ಯಾಚಿಸಿದ್ದಾರೆ. "ತೀವ್ರವಾದ ನಿರ್ಧಾರವನ್ನು ತೆಗೆದುಕೊಳ್ಳುತ್ತಿದ್ದೇನೆ. ನನ್ನನ್ನು ಕ್ಷಮಿಸಿ" ಎಂದವರು ಕುಟುಂಬಸ್ಥರಲ್ಲಿ ಹೇಳಿದ್ದಾರೆ. ಅಲ್ಲದೆ, ತಮಗೆ ಯಾರಿಂದ ಎಷ್ಟು ಹಣ ಬರಬೇಕಿದೆ ಎಂಬ ವಿವರಗಳನ್ನು ಡೆತ್ ನೋಟ್ನಲ್ಲಿ ಉಲ್ಲೇಖಿಸಿದ್ದಾರೆ. ಸಾವಿನ ನಂತರ ಉದ್ಯಮ, ವ್ಯವಹಾರವನ್ನು ಯಾರು ನೋಡಿಕೊಳ್ಳಬೇಕು, ಉತ್ತರಾಧಿಕಾರಿಗಳು ಯಾರಾಗಬೇಕು ಎಂಬುದನ್ನು ಉಲ್ಲೇಖಿಸಿದ್ದಾರೆ ಎನ್ನಲಾಗಿದೆ.
ಪೊಲೀಸ್ ಮೂಲಗಳ ಪ್ರಕಾರ, ಈ ಪತ್ರದಲ್ಲಿ ಉದ್ಯಮದ ಏರಿಳಿತಗಳು, ಸಾಲದ ಹೊರೆ ಮತ್ತು ಹಲವು ಗಣ್ಯರ ಹೆಸರುಗಳನ್ನು ಉಲ್ಲೇಖಿಸಲಾಗಿದೆ. ಇದಲ್ಲದೆ, ಕರ್ನಾಟಕ ಮತ್ತು ಕೇರಳದ ರಾಜಕಾರಣಿಗಳು, ಉದ್ಯಮ ಪಾಲುದಾರರ ಬಗ್ಗೆಯೂ ಉಲ್ಲೇಖ ಇದೆ. 'ಕಾನ್ಪಿಡೆಂಟ್ ಗ್ರೂಪ್'ನೊಂದಿಗೆ ಹಿಂದಿನಿಂದಲೂ ಕೆಲಸ ಮಾಡುತ್ತಿರುವವರನ್ನು ಯಾವುದೇ ಕಾರಣಕ್ಕೂ ಕೈಬಿಡಬಾರದು. ಅವರನ್ನು ಜೊತೆಯಲ್ಲೇ ಇಟ್ಟುಕೊಳ್ಳಬೇಕು. ಅವರೆಲ್ಲಾ ನಂಬಿಕಸ್ಥ ವ್ಯಕ್ತಿಗಳು ಎಂದು ಸಿ.ಜೆ. ರಾಯ್ ಡೆತ್ ನೋಟ್ನಲ್ಲಿ ಬರೆದಿದ್ದಾರೆ. ಮೂರು ದಿನಗಳ ಹಿಂದೆ ಐಟಿ ಇಲಾಖೆ ಅಧಿಕಾರಿಗಳ ಕರೆ ಹಿನ್ನೆಲೆಯಲ್ಲಿ ದುಬೈನಿಂದ ರಾಯ್ ಬೆಂಗಳೂರಿಗೆ ಬಂದಿದ್ದರು. ಎಸ್ಐಟಿ ಅಧಿಕಾರಿಗಳು ಡೆತ್ ನೋಟ್ ಪರಿಶೀಲಿಸುತ್ತಿದ್ದು ಇದರ ಆಧಾರದ ಮೇಲೆ ಸಿ.ಜೆ. ರಾಯ್ ಪತ್ನಿ ಮತ್ತು ಮಕ್ಕಳಿಂದ ಹೇಳಿಕೆಗಳನ್ನು ಪಡೆಯಲಿದ್ದಾರೆ.
ಇತ್ತೀಚೆಗೆ ಯೂಟ್ಯೂಬ್ ಸಂದರ್ಶನದಲ್ಲಿ ಅವರು, ತಮಗೆ ದಿಢೀರ್ ಸಾವು ಎದುರಾದರೆ ಉದ್ಯಮದ ಎಲ್ಲ ವಿಚಾರ ಪತ್ನಿಗೆ ತಿಳಿದಿದೆ, ಯಾವುದೇ ಗೊಂದಲ ಬೇಕಾಗಲ್ಲ ಎಂದು ಹೇಳಿದ್ದರು. ಹೀಗಾಗಿ ಸಿ.ಜೆ.ರಾಯ್ ಅವರ ಹಣಕಾಸಿನ ವಿವರಗಳು ಪತ್ನಿಗೆ ತಿಳಿದಿವೆ ಎನ್ನಲಾಗುತ್ತಿದ್ದು ಈ ಬಗ್ಗೆ ಪತ್ನಿಯಿಂದ ಹೆಚ್ಚಿನ ವಿವರಗಳನ್ನು ಪಡೆಯಲು ಎಸ್ಐಟಿ ಅಧಿಕಾರಿಗಳು ಮುಂದಾಗಿದ್ದಾರೆ.
A nine-page death note allegedly written by Confident Group chief C.J. Roy before his suicide has been recovered by police. In the letter, Roy reportedly apologized to his family, detailed financial liabilities, named business associates and politicians from Kerala and Karnataka, and outlined succession plans for his business. The SIT is examining the note as part of its ongoing investigation.
15-02-26 10:38 pm
HK News Desk
Nelamangala Accident, 5 Killed: ಹೊಸಕೋಟೆ ದುರಂತ...
15-02-26 10:22 am
ಲೋಕಾಯುಕ್ತ ಬಲೆಗೆ ಬಿದ್ದ 'ಜನರ ಧನ ನುಂಗಿದ ಜನಾರ್ಧನ'...
13-02-26 10:45 pm
Hoskote Accident, Latest Update: ಹೊಸಕೋಟೆ ಅಪಘಾ...
13-02-26 09:18 pm
ಹೊಸಕೋಟೆ ಬಳಿ ಸರಣಿ ಅಪಘಾತ ; ಕ್ಯಾಂಟರ್ ಡ್ರೈವರ್ ಎಡವ...
13-02-26 10:41 am
16-02-26 12:53 pm
HK Staffer
ಮಗನಿಲ್ಲದ ಮೇಲೆ ದುಬಾರಿ ಕಾರು ಯಾಕೆ ? ಆತನ ಸಮಾಧಿ ಪಕ...
15-02-26 04:01 pm
ಖಲಿಸ್ತಾನಿ ಉಗ್ರನ ಹತ್ಯೆಗೆ ಸಂಚು ; ತಪ್ಪೊಪ್ಪಿಕೊಂಡ...
14-02-26 10:55 pm
ಬಾಂಗ್ಲಾದಲ್ಲಿ ಚುನಾವಣೆ ; ಒಂದು ಸ್ಥಾನ ಗೆದ್ದ ಬಿಜೆಪ...
14-02-26 08:13 pm
ಜಗತ್ತು ನೋಡುವ ಮುನ್ನವೇ ಕಣ್ಮುಚ್ಚಿ 5 ಮಕ್ಕಳಿಗೆ ಜೀವ...
14-02-26 01:51 pm
16-02-26 11:13 pm
Mangaluru Staffer
ಬಿಕರ್ನಕಟ್ಟೆ ಸರ್ಕಾರಿ ಶಾಲೆಯಲ್ಲಿ ರಂಗಮಂಟಪ ಲೋಕಾರ್ಪ...
16-02-26 11:06 pm
ಹಂಪಿಯ ಮರ್ಯಾದೆ ಹರಾಜು ಹಾಕಿದ್ದ ಪ್ರಕರಣ ; ಪ್ರವಾಸಿ...
16-02-26 11:02 pm
Manjunath Bhandary MLC: ಕೆಪಿಸಿಸಿ ಕಾರ್ಯಾಧ್ಯಕ್ಷ...
16-02-26 01:48 pm
Thokottu Accident, Mangalore: ಖಾಸಗಿ ಶಾಲಾ ಬಸ್ಸ...
16-02-26 09:33 am
16-02-26 04:01 pm
HK News Desk
Manish kottary, Marriage Fraud, Mangalore: ಮ್...
15-02-26 05:08 pm
ಪ್ರೇಮಿಗಳ ದಿನವೇ ದುರಂತ ಅಂತ್ಯ ಕಂಡ ಜೋಡಿ ; ಪ್ರೀತಿಗ...
14-02-26 10:47 pm
Indian Bank Gold Robbery, Bangalore: ಬೆಂಗಳೂರು...
14-02-26 07:37 pm
Mangalore Drugs, CCB Police: ಬೆಂಗಳೂರಿನಿಂದ ಎಂಡ...
13-02-26 03:35 pm