ಬ್ರೇಕಿಂಗ್ ನ್ಯೂಸ್
03-03-26 12:26 pm HK News Staffer ದೇಶ - ವಿದೇಶ
ಟೆಹ್ರಾನ್, ಮಾರ್ಚ್ 3: ಅಮೆರಿಕ-ಇಸ್ರೇಲ್ ಮೇಲಿನ ಕಿಚ್ಚಿಗೆ ಇರಾನ್, ತನ್ನ ನೆರೆಯ ದೇಶಗಳ ಮೇಲೆ ಪ್ರತೀಕಾರದ ದಾಳಿ ನಡೆಸುತ್ತಿದೆ. ಆದರೆ ಎರಡು ದಿನ ಸಹಿಸಿಕೊಂಡಿದ್ದ ಕೊಲ್ಲಿ ರಾಷ್ಟ್ರಗಳು ಈಗ ಇರಾನ್ ವಿರುದ್ಧವೇ ತಿರುಗಿ ಬಿದ್ದಿವೆ. ಇರಾನ್ ತಮ್ಮ ತೈಲ ಸಂಸ್ಕರಣಾ ಘಟಕಗಳ ಮೇಲೆ ಟಾರ್ಗೆಟ್ ಮಾಡಿರುವಂತೆಯೇ ಸಿಡಿದೆದ್ದಿರುವ ನೆರೆಯ ದೇಶಗಳು ಪ್ರತಿದಾಳಿಗೆ ಮುಂದಾಗಿವೆ. ಇನ್ನೊಂದೆಡೆ, ಸೈಪ್ರಸ್ ಮೇಲಿನ ದಾಳಿಗೆ ಕೆರಳಿರುವ ಗ್ರೀಕ್ ಸಹ ಸಮರಕ್ಕೆ ಧುಮುಕುವ ಸೂಚನೆ ನೀಡಿದೆ.
ಸೌದಿ ಅರೇಬಿಯಾದ ಅತಿ ದೊಡ್ಡ ತೈಲ ಘಟಕ 'ರಾಸ್ ತನುರಾ' ಮೇಲೆ ಹಾಗೂ ಕತಾರ್ನ ರಾಸ್ ಲಾಫನ್ ಎಲ್ಎನ್ಜಿ ಉತ್ಪಾದನಾ ಘಟಕದ ಮೇಲೆ ಇರಾನ್ ಕ್ಷಿಪಣಿ ಹಾಗೂ ಡೋನ್ ದಾಳಿ ನಡೆಸಿದೆ. ಈ ದಾಳಿಗೆ ಸೌದಿ ಅರೇಬಿಯಾ ಕೆರಳಿದ್ದು "ದೇಶದ ಇಂಧನ ಪ್ರಾಬಲ್ಯ ನೆಲೆಯ ಮೇಲಿನ ದಾಳಿಗೆ ಪ್ರತ್ಯುತ್ತರ ನೀಡಲು ಸಿದ್ಧ. ಇರಾನಿಯನ್ ತೈಲ ಘಟಕಗಳೇ ನಮ್ಮ ಮುಂದಿನ ಗುರಿ. ಸೂಕ್ತ ರೀತಿಯಲ್ಲಿ ಮರುತ್ತರ ನೀಡಲಾಗುವುದು ಎಂದು ಸೌದಿ ಸರಕಾರ ಗುಡುಗಿದೆ.
ಇದೇ ವೇಳೆ, ಅಮೆರಿಕದೊಂದಿಗೆ ಬಾಂಧವ್ಯ ಬೆಳೆಸಿ, ಸೇನಾ ನೆಲೆಗೆ ಅವಕಾಶ ನೀಡಿರುವ ನೆರೆಯ ದೇಶಗಳ ಮೇಲೆ ಇರಾನ್ ದಾಳಿ ತೀವ್ರಗೊಳಿಸಿದೆ. ಏಕಕಾಲದಲ್ಲಿ ಅಮೆರಿಕ, ಇಸ್ರೇಲ್ ಮತ್ತು ಸುತ್ತಲಿನ ಮುಸ್ಲಿಂ ದೇಶಗಳ ಮೇಲೂ ಇರಾನ್ ಸಮರ ಸಾರಿದೆ. ಕೊಲ್ಲಿ ದೇಶಗಳು ಸೇನಾ ನೆಲೆಗಳಿಗೆ ಅವಕಾಶ ಮಾಡಿಕೊಟ್ಟಿದ್ದನ್ನು ಬಿಟ್ಟರೆ, ರಾಜಕೀಯವಾಗಿ ತಟಸ್ಥ ನೀತಿ ಹೊಂದಿದ್ದವು. ಆದರೂ ಅಮೆರಿಕ ಮೇಲಿನ ಸಿಟ್ಟಿನಿಂದ ಇರಾನ್ ತಮ್ಮ ಮೇಲೆ ದಾಳಿ ನಡೆಸಿದ್ದು ಈ ದೇಶಗಳನ್ನು ಕೆರಳಿಸಿದೆ.
ಸೋಮವಾರ ಸೌದಿ ಅರೇಬಿಯಾ, ಕತಾರ್, ಯುಎಇ, ಬಹರೇನ್, ಕುವೈತ್, ಒಮನ್ ದೇಶಗಳ ಮೂಲಸೌಕರ್ಯ ವ್ಯವಸ್ಥೆ, ಸೇನಾ ನೆಲೆಗಳು, ಜನವಸತಿ ಪ್ರದೇಶ, ವಿಮಾನ ನಿಲ್ದಾಣ, ತೈಲ ಹಾಗೂ ಅನಿಲ ಸಂಸ್ಕರಣ ಘಟಕಗಳ ಮೇಲೆ ಏಕಕಾಲದಲ್ಲಿ ಇರಾನ್ ಮಿಲಿಟರಿಯು ನೂರಾರು ಕ್ಷಿಪಣಿಗಳನ್ನು ಪ್ರಯೋಗಿಸಿದೆ. ಇದೇ ವೇಳೆ, ಇರಾನ್ ಪರವಾಗಿ ಹೆಜ್ಬುಲ್ಲಾ ಬಂಡುಕೋರರು ಲೆಬನಾನ್ ವಾಯುನೆಲೆ ಬಳಸಿಕೊಂಡು ಇಸ್ರೇಲ್ ಮೇಲೆ ಕ್ಷಿಪಣಿ ಹಾರಿಸಿದೆ. ಇದಕ್ಕೆ ಪ್ರತಿಯಾಗಿ ಇಸ್ರೇಲ್ ಲೆಬನಾನ್ ಗುರಿಯಾಗಿಸಿ ಮಿಸೈಲ್ ದಾಳಿ ನಡೆಸಿದೆ.
ಮಿಸೈಲ್ ದಾಳಿಗೆ ಸೌದಿ, ಕತಾರ್ ತೈಲ ಘಟಕ ಬಂದ್:
ಸೌದಿ ಅರೇಬಿಯಾದ ಅರಾಮ್ಕೊದಲ್ಲಿರುವ ರಾಸ್ ತನುರಾ ತೈಲ ಸಂಸ್ಕರಣಾ ಘಟಕ ನಿತ್ಯ 5.50 ಲಕ್ಷ ಬ್ಯಾರಲ್ ಕಚ್ಚಾತೈಲ ಉತ್ಪಾದಿಸುತ್ತಿದ್ದು ಸದ್ಯ ಇರಾನ್ ದಾಳಿ ಬಳಿಕ ಘಟಕವನ್ನು ಸ್ಥಗಿತಗೊಳಿಸಲಾಗಿದೆ. ಭದ್ರವಾದ ರಕ್ಷಣಾ ವ್ಯವಸ್ಥೆಯನ್ನು ಭೇದಿಸಿ ಇರಾನ್ ಕ್ಷಿಪಣಿ ಹಾರಿ ಬಂದಿದ್ದು ತೈಲ ಘಟಕಕ್ಕೆ ಅಪ್ಪಳಿಸಿದೆ. ಕತಾರ್ ನಲ್ಲಿರುವ ರಾಸ್ ಲಫಾನ್ ತೈಲ ಘಟಕದ ಮೇಲೂ ದಾಳಿಯಾಗಿದೆ. ಜಾಗತಿಕವಾಗಿ ಶೇ.20ರಷ್ಟು ತೈಲ ಉತ್ಪಾದಿಸುತ್ತಿದ್ದ ಘಟಕವನ್ನು ಕತಾರ್ ಸ್ಥಗಿತಗೊಳಿಸಿದ್ದು ಯುರೋಪ್, ಏಷ್ಯಾ ದೇಶಗಳಲ್ಲಿ ಅನಿಲ ಕೊರತೆ ಹೆಚ್ಚಲಿದೆ. ಯುರೋಪ್ ನಲ್ಲಿ ಶೇ.50 ರಷ್ಟು ತೈಲ ಬೆಲೆ ಏರಿಕೆಯಾಗಿದೆ. ಇದೇ ವೇಳೆ, ದಾಳಿ ಭೀತಿಯಲ್ಲಿ ಇಸ್ರೇಲ್ ತನ್ನ ಲೆವಿಯಾಥಾನ್ ತೈಲ ಘಟಕವನ್ನು ಮುಚ್ಚಿದೆ.
ಅಮೆರಿಕದಿಂದ ಮತ್ತಷ್ಟು ಸೇನೆ:
ಈಗಾಗಲೇ ಅಬ್ರಹಾಂ ಲಿಂಕನ್ ಹೆಸರಿನ ಅತಿದೊಡ್ಡ ವಿಮಾನ ವಾಹಕ ನೌಕೆ ಗಲ್ಫ್ ಭಾಗದಲ್ಲಿ ಬಂದು ನಿಂತಿದೆ. ವಾಯು ನೆಲೆಗಳಲ್ಲದೆ ಈ ನೌಕೆಯಿಂದಲೂ ಅಮೆರಿಕದ ಯುದ್ಧ ವಿಮಾನಗಳು ಹಾರಿ ಬರುತ್ತವೆ. ಗಲ್ಫ್ ದೇಶಗಳಲ್ಲಿ 12 ಕಡೆ ಅಮೆರಿಕದ ಮಿಲಿಟರಿ ಬೇಸ್ ಗಳಿದ್ದು ಅವುಗಳಿಂದಲೂ ಮಿಸೈಲ್ ದಾಳಿಯಾಗುತ್ತಿವೆ. ಇಷ್ಟಿದ್ದರೂ, ಅಮೆರಿಕದ ಯುದ್ಧ ತಂತ್ರ ಆರಂಭಿಕ ಹಂತದಲ್ಲಿದೆ ಎಂದು ಅಧ್ಯಕ್ಷ ಟ್ರಂಪ್ ಹೇಳಿದ್ದು ಸಂಧಾನ ಮಾತುಕತೆಯನ್ನು ನಿರಾಕರಿಸಿದ್ದರಿಂದ ಇರಾನ್ ಮೇಲಿನ ದಾಳಿಗೆ ದೊಡ್ಡ ಮಟ್ಟದ ಸೇನೆ ಸಜ್ಜುಗೊಳಿಸಲಾಗುತ್ತಿದೆ ಎಂದಿದ್ದಾರೆ.
11-03-26 07:16 pm
HK News Staffer
ಪರಿಷತ್ ಚುನಾವಣೆಗೆ ಸಿಗದ ಟಿಕೆಟ್ ; ಬಿಜೆಪಿ ರಾಜ್ಯ ಶ...
11-03-26 06:14 pm
ಲಕ್ಕುಂಡಿಯಲ್ಲಿ ಸಿಕ್ಕ ನಿಧಿ 500 ರಿಂದ 600 ವರ್ಷ ಹಳ...
11-03-26 12:57 pm
ಶಿಕ್ಷಕರಿಗೆ ಬೀದಿ ನಾಯಿ ನಿಯಂತ್ರಣ ಜವಾಬ್ದಾರಿ ಕೊಟ್ಟ...
11-03-26 11:48 am
LPG ಸಿಲಿಂಡರ್ ಪೂರೈಕೆ ಸ್ಥಗಿತ ; ಬೆಂಗಳೂರಿನಲ್ಲಿ ಹಲ...
10-03-26 01:47 pm
10-03-26 09:46 pm
HK News Desk
ಹರ್ಮುಜ್ ಜಲಸಂಧಿಯಲ್ಲಿ ತೈಲ ಹಡಗು ಬಂಧಿ ; ಜಗತ್ತಿಗೆ...
10-03-26 04:30 pm
ಕಚ್ಚಾ ತೈಲ ದರ ಏರಿಕೆ ; ಪಾಕಿಸ್ತಾನದಲ್ಲಿ ಅಲ್ಲೋಲಕಲ್...
10-03-26 01:31 pm
ಇರಾನ್ ನೂತನ ಸರ್ವೋಚ್ಚ ನಾಯಕನಾಗಿ ಆಯತುಲ್ಲಾ ಮೊಜ್ತಬ...
09-03-26 01:44 pm
ಇರಾನ್ ಮೇಲೆ ಮತ್ತೊಂದು ಭಾರಿ ದಾಳಿಗೆ ಟ್ರಂಪ್ ಸಿದ್ಧ...
07-03-26 11:58 am
11-03-26 09:15 pm
Mangalore Correspondent
ಬಾಡಿಗೆ ಮನೆಯಲ್ಲಿ ಡ್ರಗ್ಸ್ ಮಾರಾಟ ; ಬಂಟ್ವಾಳದ ನೇರಳ...
11-03-26 07:22 pm
ಗ್ಯಾಸ್ ಬಿಕ್ಕಟ್ಟು ; ಕುಕ್ಕೆ ಸುಬ್ರಹ್ಮಣ್ಯಕ್ಕೆ ತಟ್...
11-03-26 06:26 pm
ಕುತ್ತಾರಿನಲ್ಲಿ ಹಿಟ್ ಆಂಡ್ ರನ್ ಪ್ರಕರಣ ; ಬೈಕ್ ಧಾ...
11-03-26 03:25 pm
ಕಂಬಳಕ್ಕೆ ಪ್ರದೇಶದ ಗಡಿ ಇಲ್ಲ ; ಕರಾವಳಿ ಸಂಸ್ಕೃತಿ ಬ...
11-03-26 11:54 am
11-03-26 10:58 am
HK News Staffer
ಕೇರಳ ಚುನಾವಣೆ ಹಿನ್ನೆಲೆ ; ರೈಲಿನಲ್ಲಿ ತಪಾಸಣೆ ಬಿಗಿ...
10-03-26 08:32 pm
ಉಪ್ಪಿನಂಗಡಿ ; ಖಾಸಗಿ ವ್ಯಕ್ತಿ ಮನೆಯಲ್ಲಿ ಅಕ್ರಮ ಶೇಖ...
10-03-26 07:01 pm
ಬಾಗಲಕೋಟೆಯಲ್ಲಿ ಹೋಳಿ ಆಚರಣೆ ವೇಳೆ ಕಿರಿಕ್ ; 19 ವರ...
10-03-26 01:49 pm
Vexon fraud Company, FIR: ಬ್ಲೇಡ್ ಕಂಪನಿ ವೆಕ್ಸನ...
28-02-26 11:12 am