ಬ್ರೇಕಿಂಗ್ ನ್ಯೂಸ್
12-05-26 08:15 pm HK News Desk ದೇಶ - ವಿದೇಶ
ಚೆನ್ನೈ, ಮೇ 12: ಇತ್ತ ಸಿಎಂ ವಿಜಯ್ ಜೋಸೆಫ್ ವಿಧಾನಸಭೆಯಲ್ಲಿ ಬಹುಮತ ಸಾಬೀತುಪಡಿಸಲು ಸಿದ್ಧತೆ ನಡೆಸುತ್ತಿರುವಾಗಲೇ ತಮಿಳುನಾಡು ರಾಜಕೀಯ ರೋಚಕ ತಿರುವು ಪಡೆದಿದ್ದು, ಎಸ್ಪಿ ವೇಲುಮಣಿ ಮತ್ತು ಸಿವಿ ಷಣ್ಮುಗಂ ನೇತೃತ್ವದ ಎಐಎಡಿಎಂಕೆಯ ಒಂದು ಬಣ ಟಿವಿಕೆ ನೇತೃತ್ವದ ಸರ್ಕಾರಕ್ಕೆ ಬೆಂಬಲ ಘೋಷಿಸಿದೆ.
ಎಡಪ್ಪಾಡಿ ಪಳನಿಸ್ವಾಮಿ ನೇತೃತ್ವದಲ್ಲಿ ಎಐಎಡಿಎಂಕೆ ಪಕ್ಷವು ಡಿಎಂಕೆ ಜೊತೆಗೆ ಮೈತ್ರಿಗೆ ತೆರೆಮರೆಯ ಹುನ್ನಾರ ನಡೆಸುತ್ತಿರುವಾಗಲೇ ಈ ನಿರ್ಧಾರದಿಂದ ಸಿಡಿದು ನಿಂತ ಒಂದು ಬಣದ ನಾಯಕರು ಪಕ್ಷವನ್ನೇ ಹೋಳು ಮಾಡಿದ್ದಾರೆ.
ಎಸ್ಪಿ ವೇಲುಮಣಿ ಮತ್ತು ಸಿವಿ ಷಣ್ಮುಗಂ ಬಣದ ನಾಯಕರು ಇಂದು ಮುಖ್ಯಮಂತ್ರಿ ವಿಜಯ್ ಅವರನ್ನು ಭೇಟಿ ಮಾಡಿ, ಅವರ ನೇತೃತ್ವದ ಸರ್ಕಾರಕ್ಕೆ ತಮ್ಮ ಬೆಂಬಲ ಘೋಷಿಸಿದ್ದಾರೆ. ಷಣ್ಮುಗಂ ಬಣದಲ್ಲಿ 30 ಶಾಸಕರಿದ್ದಾರೆ ಎನ್ನಲಾಗಿದೆ.

ಪಕ್ಷವನ್ನು ಉಳಿಸಲು ಈ ನಿರ್ಧಾರ
ಪಕ್ಷದ ಭವಿಷ್ಯದ ದೃಷ್ಟಿಯಿಂದ ನಾವು ಎಐಎಡಿಎಂಕೆ ಮುಖ್ಯಸ್ಥ ಎಡಪ್ಪಾಡಿ ಕೆ ಪಳನಿಸ್ವಾಮಿ ಅವರಿಗೆ ಕೌನ್ಸಿಲ್ ಸಭೆ ಕರೆಯುವಂತೆ ಒತ್ತಾಯಿಸುತ್ತೇವೆ ಎಂದು ಹೇಳಿದ್ದಾರೆ. ಪಕ್ಷದ ಉಳಿವಿನ ದೃಷ್ಟಿಯಿಂದ ಈ ನಡೆ ಅನಿವಾರ್ಯ. ನಾವು ಡಿಎಂಕೆಗೆ ವಿರುದ್ಧವಾಗಿ ಜಯಲಲಿತಾ ನೇತೃತ್ವದಲ್ಲಿ ಪಕ್ಷವನ್ನು ಸ್ಥಾಪಿಸಿದ್ದೇವೆ. 53 ವರ್ಷಗಳ ಕಾಲ ನಮ್ಮ ರಾಜಕೀಯ ಅದಕ್ಕೆ ವಿರುದ್ಧವಾಗಿತ್ತು. ನಾವು ಡಿಎಂಕೆ ಜೊತೆಗೆ ಮೈತ್ರಿ ಮಾಡಿಕೊಂಡರೆ ಎಐಎಡಿಎಂಕೆ ಅಸ್ತಿತ್ವದಲ್ಲೇ ಇರಲ್ಲ ಎಂದಿದ್ದಾರೆ.
ಚುನಾವಣೆಯ ನಂತರ ನಾವು ಯಾವುದೇ ಮೈತ್ರಿ ಇಲ್ಲದೆ ನಿಲ್ಲುತ್ತೇವೆ. ನಮ್ಮ ಪಕ್ಷವನ್ನು ಬಲಪಡಿಸುವತ್ತ ನಮ್ಮ ಗಮನ ಇರಬೇಕು. ಎಐಎಡಿಎಂಕೆ ಶಾಸಕರಾಗಿ ಆಯ್ಕೆಯಾದವರು ಪಕ್ಷದ ಬೆಳವಣಿಗೆ ದೃಷ್ಟಿಯಿಂದ ಟಿವಿಕೆಗೆ ತಮ್ಮ ಬೆಂಬಲ ನೀಡಲು ನಿರ್ಧರಿಸಿದ್ದಾರೆ ಎಂದು ವೇಲು ಮಣಿ ಮತ್ತು ಷಣ್ಮುಗಂ ತಿಳಿಸಿದ್ದಾರೆ. ಪಳನಿಸ್ವಾಮಿ ಪರವಾಗಿ 17 ಶಾಸಕರಿದ್ದರೆ, ವೇಲು ಮಣಿ ಪರವಾಗಿ 30 ಶಾಸಕರಿದ್ದಾರೆ ಎನ್ನಲಾಗುತ್ತಿದೆ. ವಿಜಯ್ ಸರ್ಕಾರ ವಿಶ್ವಾಸ ಮತ ಯಾಚನೆ ಸಂದರ್ಭದಲ್ಲಿ ವೇಲು ಮಣಿ ನೇತೃತ್ವದಲ್ಲಿ ಶಾಸಕರು ವಿಜಯ್ ಪರ ನಿಲ್ಲುವ ಸಾಧ್ಯತೆಯಿದೆ. ರಾಜ್ಯಪಾಲರ ಸೂಚನೆಯಂತೆ ಸಿಎಂ ವಿಜಯ್ ಮೇ 13ರಂದು ಸದನದಲ್ಲಿ ವಿಶ್ವಾಸಮತ ಸಾಬೀತು ಮಾಡಬೇಕಿದೆ.
08-06-26 12:37 pm
HK News Staffer
ರಾಮಲಿಂಗಾರೆಡ್ಡಿ ರಾಜೀನಾಮೆ ಡ್ರಾಮಾಗೆ ಟ್ವಿಸ್ಟ್ ; ಡ...
06-06-26 12:49 pm
ಎಂಬಿಬಿಎಸ್ ಪದವಿ ಮುಗಿಸಿದ ಬೆನ್ನಲ್ಲೇ ಸರ್ಕಾರಿ ಆಸ್ಪ...
05-06-26 07:14 pm
ಬೆಂಗಳೂರು ಖಾತೆಗಾಗಿ ರಾಮಲಿಂಗಾರೆಡ್ಡಿ ಬಂಡಾಯ: ಮನವೊಲ...
05-06-26 06:19 pm
ರಾಮಲಿಂಗಾ ರೆಡ್ಡಿ ಕಚೇರಿ ಎದುರಲ್ಲಿ ಪ್ರತಿಭಟನೆ ; ಕಾ...
05-06-26 05:23 pm
06-06-26 10:42 pm
HK News Desk
ನೀಟ್ ಪ್ರಶ್ನೆಪತ್ರಿಕೆ ಸೋರಿಕೆ ; ಜಿರಳೆಗಳ ಮುಖವಾಡ ಧ...
06-06-26 05:48 pm
ತಮಿಳುನಾಡಿನಲ್ಲಿ ಅಣ್ಣಾಮಲೈ ಸಂಚಲನ ; ಬಿಜೆಪಿಗೆ ಗುಡ್...
05-06-26 02:34 pm
ಯೋಗಿಜೀ ನಮ್ಮನ್ನು ಕ್ಷಮಿಸಿ..! ಇನ್ನೆಂದೂ ಅಪರಾಧ ಕೃತ...
04-06-26 04:19 pm
20 ವರ್ಷಗಳ ಹಿಂದೆ ಬರೆದಿದ್ದ ಪರೀಕ್ಷೆಗೆ ಈಗ ಬಂತು ಸರ...
03-06-26 09:17 pm
07-06-26 03:38 pm
Mangalore Correspondent
Apex Capital Fraud Investment, Mangalore: ಬಿಜ...
07-06-26 01:57 pm
ಮುರಿನಕಟ್ಟೆ ಧ್ವಂಸ ಪ್ರಕರಣಕ್ಕೆ ಮತ್ತೆ ಕಾವು ; ಭಟ್ಕ...
05-06-26 01:25 pm
ಪಿನಾಕಿನಿ ಹೊಳೆಯಲ್ಲಿ ಹೆಚ್ಚಾದ ಹೂಳು, ಬದಲಾದ ಹರಿವಿನ...
04-06-26 12:51 pm
ಇನ್ನು ವಿಧಾನಮಂಡಲದಲ್ಲೂ ಡಿಜಿಟಲ್ ಟಚ್ ! 6 ತಿಂಗಳಲ್ಲ...
02-06-26 04:18 pm
08-06-26 03:14 pm
HK News Staffer
ಪಬ್ಜಿ ಚಟಕ್ಕೆ ಬಿದ್ದು ಅಪ್ಪ - ಅಕ್ಕನನ್ನ ಚಟ್ಟಕ್ಕೆ...
08-06-26 02:20 pm
ಹಾಸನದ ಜಿಲ್ಲಾ ನ್ಯಾಯಾಲಯದ ಎದುರೇ ರೌಡಿಶೀಟರ್ ಬರ್ಬರ...
08-06-26 12:33 pm
ಕೋಟೆಕಾರು ದರೋಡೆ ಪ್ರಕರಣದಲ್ಲಿ ಮತ್ತೊಬ್ಬ ಆರೋಪಿ ಬಂಧ...
07-06-26 03:08 pm
ಉಡುಪಿಗೆ ತೆರಳುತ್ತಿದ್ದ ಬಸ್ಗೆ ಹುಲಿಕಲ್ ಘಾಟ್ನಲ್...
06-06-26 09:01 pm