ಸರಿಯಾಗಿ ನಿದ್ದೆ ಬರುತ್ತಿಲ್ಲ, ಈ ಸಮಸ್ಯೆಯಿಂದ ಮುಕ್ತಿ ಹೊಂದುವುದು ಹೇಗೆ? ಇಲ್ಲಿದೆ ಮಾಹಿತಿ

03-09-21 03:26 pm       SOURCE: News 18 Kannada   ಡಾಕ್ಟರ್ಸ್ ನೋಟ್

ನಿದ್ರೆ ಎಂಬುದು ಮನುಷ್ಯನಿಗೆ ಅತಿ ಮುಖ್ಯವಾಗಿ ಬೇಕಿರುವ ಅಂಶ. ಸರಿಯಾದ ನಿದ್ರೆ ಇಲ್ಲದಿದ್ದರೆ ಓರ್ವ ವ್ಯಕ್ತಿ ಮಾನಸಿಕ ಅಸ್ವಸ್ಥ ಕೂಡ ಆಗಬಹುದು ಎನ್ನುತ್ತದೆ ಸಂಶೋಧನೆ.

ಕೆಲವರಿಗೆ ನಿದ್ರಾ ಹೀನತೆ ಅತಿಯಾಗಿ ಕಾಡುತ್ತಿರುತ್ತದೆ. ಅಂಥವರು ನಿದ್ರಾ ದೇವಿಯನ್ನು ಒಲಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡುತ್ತಿರುತ್ತಾರೆ. ಆದರೆ, ಅದು ಸಾಧ್ಯವೇ ಆಗಿರುವುದಿಲ್ಲ. ನಿದ್ರಾ ಹೀನತೆಯಿಂದ ಮುಕ್ತಿ ಹೊಂದೋಕೆ ಹೀಗೆ ಮಾಡಿ.

ನಿದ್ರೆ ಎಂಬುದು ಮನುಷ್ಯನಿಗೆ ಅತಿ ಮುಖ್ಯವಾಗಿ ಬೇಕಿರುವ ಅಂಶ. ಸರಿಯಾದ ನಿದ್ರೆ ಇಲ್ಲದಿದ್ದರೆ ಓರ್ವ ವ್ಯಕ್ತಿ ಮಾನಸಿಕ ಅಸ್ವಸ್ಥ ಕೂಡ ಆಗಬಹುದು ಎನ್ನುತ್ತದೆ ಸಂಶೋಧನೆ.

ಕೆಲವರಿಗೆ ನಿದ್ರಾ ಹೀನತೆ ಅತಿಯಾಗಿ ಕಾಡುತ್ತಿರುತ್ತದೆ. ಅಂಥವರು ನಿದ್ರಾ ದೇವಿಯನ್ನು ಒಲಿಸಿಕೊಳ್ಳಲು ಸಾಕಷ್ಟು ಪ್ರಯತ್ನ ಮಾಡುತ್ತಿರುತ್ತಾರೆ. ಆದರೆ, ಅದು ಸಾಧ್ಯವೇ ಆಗಿರುವುದಿಲ್ಲ.

ಹಾಗಿದ್ದರೆ, ಸುಲಭವಾಗಿ ನಿದ್ರೆ ಮಾಡೋಕೆ ಏನು ಮಾಡಬೇಕು ಎಂದು ಕೇಳಿದರೆ ತಂಪು ಕೊಠಡಿಯಲ್ಲಿ ಮಲಗಬೇಕು ಎನ್ನುತ್ತಾರೆ ವೈದ್ಯರು. ಇದಕ್ಕೆ ಕಾರಣವೂ ಇದೆ.

ತಂಪಾದ ಕೊಠಡಿಯಲ್ಲಿ ಮಲಗಿದರೆ ನಿಮ್ಮ ಚಯಾಪಚಯ ಕ್ರಿಯೆ ಉತ್ತಮವಾಗುತ್ತದೆ. ದೇಹದಲ್ಲಿ ಬಿಳಿ ಹಾಗೂ ಕಂದು ಬಣ್ಣದ ಫ್ಯಾಟ್ ಗಳಿರುತ್ತವೆ. ಬಿಳಿ ಕೊಬ್ಬು ಆರೋಗ್ಯಕರವಲ್ಲ. ಇನ್ನು, ಕಂದು ಬಣ್ಣದ ಫ್ಯಾಟ್ ದೇಹದ ತಾಪಮಾನವನ್ನು ನಿರ್ಧರಿಸುತ್ತದೆ. ಹೀಗಾಗಿ ನೀವು ತಂಪಾದ ಕೊಠಡಿಯಲ್ಲಿ ಮಲಗಿದರೆ ನಿಮ್ಮ ದೇಹ ಕಂದು ಬಣ್ಣದ ಕೊಬ್ಬನ್ನು ಉತ್ಪಾದನೆ ಮಾಡಿ, ಅದನ್ನು ಸುಡುವ ಕೆಲಸ ಮಾಡುತ್ತದೆ. ಈ ಮೂಲಕ ನಿಮ್ಮ ದೇಹದ ತಾಪಮಾನ ಹೆಚ್ಚುತ್ತದೆ. ಇದರಿಂದ ಚಯಾಪಚಯ ಕ್ರಿಯೆ ಉತ್ತಮವಾಗುತ್ತದೆ.

ಒತ್ತಡ ಕಡಿಮೆ ಮಾಡುತ್ತದೆ: ತಂಪಾದ ಕೊಠಡಿಯಲ್ಲಿ ಮಲಗಿದರೆ ಮಾನಸಿಕವಾಗಿ ಹಾಗೂ ದೈಹಿಕವಾಗಿ ನಿಮ್ಮ ಒತ್ತಡ ಕಡಿಮೆ ಆಗುತ್ತದೆ.

ತುಂಬಾ ಸೆಖೆ ಇರುವ ಕೊಠಡಿಯಲ್ಲಿ ಮಲಗಿದರೆ ನಿಮ್ಮ ದೇಹ ಬೆವರಿನಿಂದ ತೊಯ್ದು ತೊಪ್ಪೆಯಾಗುತ್ತದೆ. ಇದರಿಂದ ನೀವು ಚಂಚಲಗೊಂಡು ನಿದ್ರೆ ದೂರವಾಗಬಹುದು.

ನಿದ್ರಾ ಹೀನತೆ ಕಡಿಮೆ ಆಗಬಹುದು: ಅನೇಕರು ನಿದ್ರಾ ಹೀನತೆಯಿಂದ ಬಳಲುತ್ತಿರುತ್ತಾರೆ. ಇದಕ್ಕೆ ಕಾರಣ ಅವರು ನಿದ್ರಿಸುವ ಕೊಠಡಿಯ ಟೆಂಪ್ರೇಚರ್! ಹೀಗಾಗಿ ತಂಪಾದ ವಾತಾವರಣ ಇರುವ ಕೊಠಡಿಯಲ್ಲಿ ನಿದ್ರಿಸುವುದನ್ನು ರೂಢಿ ಮಾಡಿಕೊಳ್ಳುವುದು ಉತ್ತಮ ಎನ್ನುತ್ತಾರೆ ವೈದ್ಯರು.