ಮಳೆಗಾಲದಲ್ಲಿ ಗರ್ಭಿಣಿಯರು ಈ ಕ್ರಮಗಳನ್ನು ಅನುಸರಿಸಿ

04-09-21 02:22 pm       Source: News 18 Kannada   ಡಾಕ್ಟರ್ಸ್ ನೋಟ್

ಮಹಿಳೆಯರಿಗೆ ಗರ್ಭಾವಸ್ಥೆ ಎನ್ನುವುದು ಜೀವನದ ಅತ್ಯಂತ್ಯ ಅದ್ಭುತ ಕ್ಷಣ. ಅವರ ಬದುಕಿಗೆ ಹೊಸ ಆಯಾಮವನ್ನು ನೀಡುವ ಘಳಿಗೆ ಇದು. ಗರ್ಭಿಣಿಯರಾದ ಮೇಲೆ ಹೆಚ್ಚು ಜವಾಬ್ದಾರಿಗಳಿರುತ್ತದೆ

ಮಹಿಳೆಯರಿಗೆ ಗರ್ಭಾವಸ್ಥೆ ಎನ್ನುವುದು ಜೀವನದ ಅತ್ಯಂತ್ಯ ಅದ್ಭುತ ಕ್ಷಣ. ಅವರ ಬದುಕಿಗೆ ಹೊಸ ಆಯಾಮವನ್ನು ನೀಡುವ ಘಳಿಗೆ ಇದು. ಗರ್ಭಿಣಿಯರಾದ ಮೇಲೆ ಹೆಚ್ಚು ಜವಾಬ್ದಾರಿಗಳಿರುತ್ತದೆ. ಅವರು ತಮ್ಮ ಆರೋಗ್ಯದ ಜೊತೆ ಮಗುವಿನ ಆರೋಗ್ಯವನ್ನು ಸಹ ನೋಡಿಕೊಳ್ಳಬೇಕಾಗುತ್ತದೆ. ಹಲವಾರು ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು ಮಾನಸಿಕವಾಗಿ ಕುಗ್ಗುವಂತೆ ಮಾಡುತ್ತವೆ. ಹಾಗಾಗಿ ಗರ್ಭಿಣಿ ಮಹಿಳೆಯರು ತಮ್ಮ ಆರೋಗ್ಯದ ಮೇಲೆ ಹೆಚ್ಚು ಗಮನವಹಿಸಬೇಕು. 

ಮೊದಲು ಆಹಾರ ಪದ್ದತಿಯನ್ನು ಸರಿಯಾಗಿ ನಿಭಾಯಿಸಬೇಕು. ಸಿಕ್ಕ ಸಿಕ್ಕ ಆಹಾರ ಪದಾರ್ಥಗಳನ್ನು ಸೇವನೆ ಮಾಡುವುದು ಒಳ್ಳೆಯದಲ್ಲ.  ಹೆಚ್ಚು ಕಾಳಜಿಯಿಂದ ಆಹಾರ ಸೇವನೆ ಮಾಡಬೇಕಾಗುತ್ತದೆ. ಏಕೆಂದರೆ ಗರ್ಭಿಣಿಯರು ಯಾವುದೇ ಆಹಾರ ಸೇವನೆ ಮಾಡಿದರೂ ಸಹ ಅದರ ಅಂಶ ನೇರವಾಗಿ ಗರ್ಭಕೋಶದಲ್ಲಿ ಬೆಳವಣಿಗೆಯಾಗುತ್ತಿರುವ ಮಗುವಿಗೆ ಹೋಗಿ ತಲುಪುತ್ತದೆ.

ಸರಿಯಾದ ಆಹಾರ ಸೇವನೆ ಮಾಡದಿದ್ದರೆ ಅದು ಮಗುವಿನ ಮೇಲೆ ಪರಿಣಾಮ ಬೀರುತ್ತದೆ. ಮಗು ಬೆಳವಣಿಗೆಯ ಹಂತದಲ್ಲಿದ್ದಾಗ ಹೆಚ್ಚು ಸೂಕ್ಷ್ಮವಾಗಿರುತ್ತದೆ, ಎಲ್ಲಾ ಆಹಾರಗಳನ್ನು ತಡೆದುಕೊಳ್ಳುವ ಶಕ್ತಿ ಇರುವುದಿಲ್ಲ. ಹಾಗಾಗಿ ಈ ವಿಚಾರದಲ್ಲಿ ಗರ್ಭಿಣಿ ಮಹಿಳೆ ಎಚ್ಚರದಿಂದ ಇರಬೇಕು.



ಇನ್ನು ಮಳೆಗಾಲದ ಸಮಯದಲ್ಲಿ ಹೆಚ್ಚು ಕಾಳಜಿಯಿಂದ ಇರಬೇಕಾಗುತ್ತದೆ. ಈಗಾಗಲೇ ಎಲ್ಲಾ ಕಡೆ ಮಳೆಗಾಲ ಆರಂಭವಾಗಿದೆ. ಮಳೆಗಾಲದಲ್ಲಿ ಹೆಚ್ಚಾಗಿ ಜನರ ಜೀರ್ಣ ಶಕ್ತಿ ಕಡಿಮೆ ಇರುತ್ತದೆ. ಅದರಲ್ಲೂ ಗರ್ಭಿಣಿಯರು ಹೆಚ್ಚು ಆರೈಕೆ ಮಾಡಿಕೊಳ್ಳಬೇಕು. ಗರ್ಭಾವಸ್ಥೆಯಲ್ಲಿ ಮಹಿಳೆಯರು ಹಲವಾರು ಸಮಸ್ಯೆಗಳನ್ನು ಎದುರಿಸುತ್ತಾರೆ. ಬೆಳಗ್ಗೆ ಸಾಮಾನ್ಯವಾಗಿ ಅವರ ಆರೋಗ್ಯದಲ್ಲಿ ಏರುಪೇರಾಗುತ್ತದೆ. ಹಾಗಾಗಿ ಆಹಾರ ಪದ್ಧತಿಯಲ್ಲಿ ತಮ್ಮ ಜೀರ್ಣ ಶಕ್ತಿಯನ್ನು ವೃದ್ಧಿಸಿಕೊಳ್ಳಲು ಅನುಕೂಲವಾಗುವ ಆಹಾರ ಪದಾರ್ಥಗಳನ್ನು ಸೇರಿಸಿಕೊಳ್ಳುವುದು ಉತ್ತಮ.

ಗರ್ಭಿಣಿ ಮಹಿಳೆಯರು ಮಳೆಗಾಲದಲ್ಲಿ  ಅನುಸರಿಸಬೇಕಾದ ಆಹಾರ ಪದ್ಧತಿ ಇಲ್ಲಿದೆ.

ಗರ್ಭಿಣಿ ಮಹಿಳೆಯರು ಮಾಂಸಹಾರ ಸೇವನೆ ಮಾಡುವ ಮುನ್ನ ಎಚ್ಚರ ವಹಿಸಬೇಕು. ಯಾವುದೇ ಕಾರಣಕ್ಕೂ ಸರಿಯಾಗಿ ಬೇಯಿಸಿದ ಆಹಾರಗಳನ್ನು ಸೇವನೆ ಮಾಡಬಾರದು. ಏಕೆಂದರೆ ಹಸಿ ಮಾಂಸದಿಂದ ಹಾನಿಕಾರಕ ಬ್ಯಾಕ್ಟೀರಿಯಾಗಳು ನೇರವಾಗಿ ದೇಹ ಪ್ರವೇಶ ಮಾಡುತ್ತವೆ, ಇದು ಗರ್ಭಿಣಿಯ ಆರೋಗ್ಯಕ್ಕೂ ಮತ್ತು ಮಗುವಿನ ಬೆಳವಣಿಗೆಗೆ ಹಾನಿಕಾರಕ.  ಅದರಲ್ಲೂ ಮಳೆಗಾಲದಲ್ಲಿ ಮಾಂಸಾಹಾರದಿಂದ ಆರೋಗ್ಯ ಸಮಸ್ಯೆ ತುಂಬಾ ಹೆಚ್ಚು ಬರುವ ಸಾಧ್ಯತೆ ಇರುತ್ತದೆ.

ಹೆಚ್ಚಿಟ್ಟ ಹಣ್ಣುಗಳ ಸೇವನೆ ಹಾನಿಕಾರಕ. ಗರ್ಭೀಣಿ ಮಹಿಳೆಯರು ಎಷ್ಟು ಸಾಧ್ಯವೋ ಅಷ್ಟು ಎಚ್ಚರಿಕೆಯಿಂದ ಇರಬೇಕಾಗುತ್ತದೆ. ಹಣ್ಣುಗಳ ಸೇವನೆ ಮಾಡುವುದು ಗರ್ಭಿಣಿಯರ ಆರೋಗ್ಯಕ್ಕೆ ಮತ್ತು ಮಗುವಿನ ಆರೋಗ್ಯಕ್ಕೆ ಉತ್ತಮ. ಆದರೆ ಹಣ್ಣುಗಳನ್ನು ಹೆಚ್ಚಿಟ್ಟು ನಂತರ ಸೇವನೆ ಮಾಡುವುದು ಒಳ್ಳೆಯದಲ್ಲ. ಹೆಚ್ಚಿದ ಹಣ್ಣುಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ತುಂಬಾ ಹಾನಿಕರ  ಎಂದು ತಜ್ಞರು ಹೇಳುತ್ತಾರೆ.

ಏಕೆಂದರೆ ಹೆಚ್ಚಿದ ಹಣ್ಣುಗಳ ಮೇಲೆ ಫಂಗಸ್ ಸೋಂಕು ಉಂಟಾಗಿರುತ್ತದೆ. ಇದು ಹಣ್ಣುಗಳಿಂದ ನೀರಿನ ಅಂಶವನ್ನು ಮೊದಲೇ ಹೀರಿಕೊಂಡಿರುತ್ತದೆ. ಇಂತಹ ಹಣ್ಣುಗಳನ್ನು ತಿನ್ನುವುದರಿಂದ ಆರೋಗ್ಯಕ್ಕೆ ಯಾವುದೇ ಪ್ರಯೋಜನವಿಲ್ಲ ಬದಲಿಗೆ ಸಮಸ್ಯೆಗಳು ಉಂಟಾಗುತ್ತದೆ. ಇನ್ನು  ರೆಫ್ರಿಜರೇಟರ್ ನಲ್ಲಿ ಇಟ್ಟಂತಹ ಹಣ್ಣುಗಳನ್ನು ಯಾವುದೇ ಕಾರಣಕ್ಕೂ ಸೇವನೆ ಮಾಡಬೇಡಿ.



ಮಳೆಗಾಲದಲ್ಲಿ ದೇಹದಲ್ಲಿ ಜೀರ್ಣಶಕ್ತಿಯ ಕೊರತೆ ಕೂಡ ಉಂಟಾಗಿರುತ್ತದೆ. ಇದು ದೇಹದಿಂದ ವಿಷಕಾರಿ ತ್ಯಾಜ್ಯಗಳನ್ನು ಹೊರಹಾಕಲು ಸಮಸ್ಯೆ ಮಾಡುತ್ತದೆ. ಹೀಗಾಗಿ ಗರ್ಭಿಣಿ ಮಹಿಳೆಯರು ಈ ಕಾರಣದಿಂದ ಹೆಚ್ಚು ನೀರು ಕುಡಿಯುವ ಅಭ್ಯಾಸ ಮಾಡಿಕೊಳ್ಳುವುದು ಉತ್ತಮ. ಮಹಿಳೆಯರ ದೇಹದಲ್ಲಿ ಉಳಿಯುವ ಮತ್ತು ವಿಷಕಾರಿ ಅಂಶಗಳು ಗರ್ಭಕೋಶದಲ್ಲಿ ಇನ್ನೂ ಬೆಳವಣಿಗೆಯ ಹಂತದಲ್ಲಿರುವ ಪುಟ್ಟ ಮಗುವಿನ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಇನ್ನು ಗರ್ಭೀಣಿ ಮಹಿಳೆಯರು ಬಿಸಿ ನೀರು ಕುಡಿಯುವ ಅಭ್ಯಾಸವನ್ನು ಮಾಡಿಕೊಳ್ಳಿ.