ಮೊಡವೆಯಿಂದಾದ ಕಪ್ಪುಕಲೆಗಳನ್ನು ತೆಗೆಯಲು ಈ ಸಲಹೆಗಳನ್ನು ಪಾಲಿಸಿ

13-09-21 01:22 pm       Shreeraksha, Boldsky   ಡಾಕ್ಟರ್ಸ್ ನೋಟ್

ವಿಟಮಿನ್ ಸಿ ಕಪ್ಪು ಕಲೆಗಳನ್ನು ಮಾಯ ಮಾಡುವಲ್ಲಿ ಹೆಚ್ಚು ಪರಿಣಾಮಕಾರಿ. ಇದು ಅನೇಕ ಸಿಟ್ರಸ್ ಹಣ್ಣುಗಳಲ್ಲಿ ನೈಸರ್ಗಿಕವಾಗಿದ್ದು, ಅನೇಕ ಸೌಂದರ್ಯ ಉತ್ಪನ್ನಗಳನ್ನು ಬಳಸುವ ಘಟಕಾಂಶವಾಗಿದೆ.

ಹೆಣ್ಣುಮಕ್ಕಳ ನಿದ್ದೆಗೆಡಿಸುವಲ್ಲಿ ಮೊಡವೆಗಳ ಪಾತ್ರ ಬಹಳ ದೊಡ್ಡದು, ಹೆಣ್ಣು ಮಾತ್ರವಲ್ಲ, ಪುರುಷರೂ ಸಹ ಈ ಮೊಡವೆ ಸಮಸ್ಯೆಗೆ ಈಗೀಗ ಹೆಚ್ಚೆಚ್ಚು ಬಲಿಯಾಗುತ್ತಿದ್ದಾರೆ. ಮೊಡವೆಯ ಗುಳ್ಳೆಗಳ ನೋವು ಒಂದೆಡೆಯಾದರೆ, ಕೊನೆಗೆ ಅದು ನೀಡುವ ಕಪ್ಪು ಕಲೆಯ ಕೊಡುಗೆ ಮತ್ತೊಂದೆಡೆ. ಇದರಿಂದ ಸಾಕಷ್ಟು ಜನರು ಪರದಾಡುತ್ತಿದ್ದು, ಈ ಕಲೆಗಳನ್ನು ಕಡಿಮೆಮಾಡಲು ದುಬಾರಿ ಉತ್ಪನ್ನಗಳನ್ನೂ ಬಳಸುವುದುಂಟು. ಆದರೆ ಕಲೆಗಳು ಮಾತ್ರ ಹಾಗೆಯೇ ಉಳಿದುಬಿಡುತ್ತವೆ.

ಆದ್ದರಿಂದ ನಾವಿಲ್ಲಿ ಇಂತಹ ಮೊಡವೆಯಿಂದ ಉಂಟಾದ ಕಪ್ಪುಕಲೆಗಳನ್ನು ಕಡಿಮೆಮಾಡಲು ಕೆಲವೊಂದು ಸಲಹೆಗಳನ್ನು ನೀಡಲಿದ್ದೇವೆ.

ಮೊಡವೆಯಿಂದ ಉಂಟಾದ ಕಪ್ಪುಕಲೆಗಳನ್ನು ಕಡಿಮೆಮಾಡಲು ಕೆಲವೊಂದು ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ:

ವಿಟಮಿನ್ ಸಿ ಸಹಕಾರಿ:

ವಿಟಮಿನ್ ಸಿ ಕಪ್ಪು ಕಲೆಗಳನ್ನು ಮಾಯ ಮಾಡುವಲ್ಲಿ ಹೆಚ್ಚು ಪರಿಣಾಮಕಾರಿ. ಇದು ಅನೇಕ ಸಿಟ್ರಸ್ ಹಣ್ಣುಗಳಲ್ಲಿ ನೈಸರ್ಗಿಕವಾಗಿದ್ದು, ಅನೇಕ ಸೌಂದರ್ಯ ಉತ್ಪನ್ನಗಳನ್ನು ಬಳಸುವ ಘಟಕಾಂಶವಾಗಿದೆ. ವಿಟಮಿನ್ ಸಿ ಹೇರಳವಾಗಿರುವ ಉತ್ಪನ್ನಗಳನ್ನು ಬಳಸಿದ ನಂತರ, ಕಪ್ಪು ಕಲೆಗಳು ಮಾಯವಾಗಿ, ಹೊಳೆಯುವ ತ್ವಚೆ ನಿಮ್ಮದಾಗುವುದು. ಸಲಹೆ: ಉತ್ತಮವಾದ ವಿಟಮಿನ್ ಸಿ ಸಿರಮ್ ಅನ್ನು ಆಯ್ಕೆ ಮಾಡಿ, ಮುಖ ತೊಳೆದ ನಂತರ ಪ್ರತಿದಿನ ಹಚ್ಚಿ.

ರೆಟಿನಾಲ್ ನ್ನು ಪ್ರಯತ್ನಿಸಿ:

ರೆಟಿನಾಲ್ ಕಪ್ಪು ಕಲೆಗಳನ್ನು ಹೋಗಲಾಡಿಸುವ ಅತ್ಯುತ್ತಮ ಪದಾರ್ಥಗಳಲ್ಲಿ ಒಂದಾಗಿದೆ. ಇದರ ನಿಯಮಿತ ಬಳಕೆಯಿಂದಾಗಿ ಚರ್ಮಕ್ಕೆ ಟೋನ್ ಹಾಗೂ ಯಾವುದೇ ಹಾನಿಯಿಂದ ತಡೆಯುವುದು. ಇದು ಕಾಣದಿರುವ ಕಪ್ಪು ಕಲೆಗಳಿಗೆ ಚಿಕಿತ್ಸೆ ನೀಡಲು ಚರ್ಮದ ಪದರಗಳ ಆಳಕ್ಕೆ ಸೇರಿಕೊಳ್ಳುತ್ತದೆ. ಆದ್ದರಿಂದ ನಿಮ್ಮ ತ್ವಚೆ ದಿನಚರಿಯಲ್ಲಿ ರೆಟಿನಾಲ್ ಕ್ರೀಮ್ ಅಥವಾ ಸೀರಮ್ ಅನ್ನು ಸೇರಿಸಿ, ಇದರಿಂದ ಮೊಡವೆಗಳು ನಿಯಂತ್ರಣಕ್ಕೆ ಬರುತ್ತವೆ .



ಮಜ್ಜಿಗೆ:

ಮಜ್ಜಿಗೆಯಲ್ಲಿ ಲ್ಯಾಕ್ಟಿಕ್ ಆಸಿಡ್ ಸಮೃದ್ಧವಾಗಿದ್ದು, ತ್ವಚೆಯ ಡೆಡ್ ಸೆಲ್ ಗಳನ್ನು ನಿಧಾನವಾಗಿ ಹೊರಹಾಕಲು ಮತ್ತು ಕಪ್ಪು ಕಲೆಗಳನ್ನು ಹೋಗಲಾಡಿಸಿ, ಚರ್ಮವನ್ನು ಹೊಳೆಯುವಂತೆ ಮಾಡಲು ಇದು ಉತ್ತಮವಾಗಿದೆ . ಇದು ನಿಮ್ಮ ಚರ್ಮದ ಪಿಎಚ್ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಸಲಹೆ: ನಿಮ್ಮ ಮುಖಕ್ಕೆ ಹತ್ತಿಯ ಉಂಡೆ ಬಳಸಿ ಮಜ್ಜಿಗೆಯನ್ನು ಹಚ್ಚಿ. ಇದನ್ನು 20 ನಿಮಿಷಗಳ ಕಾಲ ಬಿಡಿ ನಂತರ ತೊಳೆಯಿರಿ.



ನಿಂಬೆ ರಸ:

ಇದು ಸಿಟ್ರಸ್ ಹಣ್ಣಾಗಿರುವುದರಿಂದ, ಇದರಲ್ಲಿ ಹೆಚ್ಚಿನ ವಿಟಮಿನ್ ಸಿ ಅಂಶವಿದೆ. ನಿಂಬೆ ರಸ ಹಾಕಿದ ಫೇ್ ಪ್ಯಾಕ್ ಹಾಕಿಕೊಳ್ಳುವುದರಿಂದ ಎಣ್ಣೆಯುಕ್ತ ತ್ವಚೆ ಹೊಂದಿರುವವರಿಗೆ ಸಹಕಾರಿ ಜೊತೆಗೆ ಕಪ್ಪು ಕಲೆಗಳನ್ನು ಬೇಗನೇ ಮಾಯಮಾಡುವುದು. ಸಲಹೆ: ಒಂದು ಚಮಚ ಜೇನುತುಪ್ಪ ಮತ್ತು ಒಂದು ಚಮಚ ನಿಂಬೆ ರಸವನ್ನ ಬೆರೆಸಿ ಫೇಸ್ ಮಾಸ್ಕ್ ಮಾಡಿ. ಇದನ್ನು 15 ನಿಮಿಷಗಳ ಕಾಲ ಹಾಗೆಯೇ ಬಿಡಿ ನಂತರ ತೊಳೆಯಿರಿ.



ಪಿಂಪಲ್ ಪ್ಯಾಚ್:

ಇವುಗಳ ಅದ್ಭುತ ಪ್ರಯೋಜನಗಳ ಬಗ್ಗೆ ನಿಮ್ಮಲ್ಲಿ ಹೆಚ್ಚಿನವರು ತಿಳಿದಿರಬೇಕು. ಈ ಪ್ಯಾಚ್ ಗಳು ಹೈಡ್ರೊಕೊಲಾಯ್ಡ್ ಬ್ಯಾಂಡೇಜ್ ಆಗಿದ್ದು, ನಿಮ್ಮ ಮೊಡವೆಗೆ ಹಚ್ಚಿ, ದಿನವಿಡೀ ಬಿಡಬಹುದು. ಇವುಗಳು ಮೊಡವೆಗಳನ್ನು ಒಣಗಿಸಿ, ಯಾವುದೇ ಕಪ್ಪು ಕಲೆಗಳ ಗುರುತು ಬಿಡದೆ ಅದನ್ನು ನಿಧಾನವಾಗಿ ಹೊರಹಾಕುತ್ತವೆ. ಸಲಹೆ: ನೀವು ಸ್ನಾನಕ್ಕೆ ಹೋದರೂ ಪ್ಯಾಚ್ ಗಳು ಉಳಿಯುತ್ತವೆ. ಇದು ನಿಮ್ಮ ಮೊಡವೆಗಳು ಸೋಂಕಿಗೆ ಒಳಗಾಗುವುದನ್ನು ತಪ್ಪಿಸಿ, ಒಂದು ರಾತ್ರಿಯಲ್ಲಿ ಮರೆಮಾಡುತ್ತವೆ.



ಸ್ಯಾಲಿಸಿಲಿಕ್ ಆಮ್ಲ:

ಈ ಘಟಕಾಂಶವು ಅತ್ಯಂತ ಪ್ರಸಿದ್ಧ ಮೊಡವೆ ಹೋರಾಟಗಾರರಲ್ಲಿ ಒಂದಾಗಿದ್ದು, ಕಪ್ಪು ಕಲೆಗಳಂತಹ ಸಮಸ್ಯೆಗಳಿಗೂ ಸಹ ಕೆಲಸ ಮಾಡುತ್ತದೆ. ಸ್ಯಾಲಿಸಿಲಿಕ್ ಆಸಿಡ್ ಒಂದು ಎಕ್ಸ್‌ಫೋಲಿಯೇಟಿಂಗ್ ಏಜೆಂಟ್ ಆಗಿದ್ದು, ಅದು ಮೊಡವೆ ಉಂಟುಮಾಡುವ ಬ್ಯಾಕ್ಟೀರಿಯಾವನ್ನು ಮತ್ತು ಇತರ ಡೆಡ್ ಸೆಲ್‌ಗಳ ಜೊತೆಗೆ ಕಪ್ಪು ಕಲೆಗಳನ್ನು ಕೂಡ ತೆಗೆದುಹಾಕುತ್ತದೆ .