ಕರಿದ ಎಣ್ಣೆಯನ್ನು ಮತ್ತೆ ಅಡುಗೆಗೆ ಬಳಕೆ ಮಾಡುತ್ತೀರಾ? ಅದಕ್ಕೂ ಮುನ್ನ ಈ ವಿಷಯ ಅರಿಯಿರಿ

30-09-21 12:07 pm       Source: News 18 Kannada   ಡಾಕ್ಟರ್ಸ್ ನೋಟ್

ಕರಿದ ಎಣ್ಣೆಯನ್ನು ಸಾಧಾರಣವಾಗಿ ಒಮ್ಮೆ ಬಳಕೆ ಮಾಡಿದರೆ ಯಾವುದೇ ಸಮಸ್ಯೆ ಇಲ್ಲ. ಆದರೆ, ಅದನ್ನು ದೀರ್ಘ ಕಾಲದವರೆಗೆ ಬಿಟ್ಟು, ಮತ್ತೆ ಕರಿಯಲು ಅಥವಾ ಇನ್ನಿತರ ಅಡುಗೆಗೆ ಬಳಸುವುದು ಸುರಕ್ಷಿತವಲ್ಲ.

ಕರಿದ ತಿಂಡಿ ಮಾಡಿದ ಬಳಿಕ ಉಳಿದಬಳಕೆ ಮಾಡಿದ ಎಣ್ಣೆಯನ್ನು ಪುನಃ ಅಡುಗೆಗೆ ಬಳಕೆ ಮಾಡುವುದು ಸಾಮಾನ್ಯ. ಈ ಕರಿದ ಎಣ್ಣೆಯನ್ನು ಪಲ್ಯ, ಸಾರಿನ ಒಗ್ಗರಣೆಗೆ ಬಳಕೆ ಮಾಡುತ್ತಾರೆ. ಕೆಲವೊಮ್ಮೆ ಮತ್ತೊಮ್ಮೆ ಕರಿಯಲು ಕೂಡ ಬಳಸುತ್ತಾರೆ. ಆದರೆ, ಈ ರೀತಿ ಎಣ್ಣೆಗಳನ್ನು ಪದೇ ಪದೇ ಮರು ಬಳಕೆ ಮಾಡುವುದು ಸುರಕ್ಷಿತವೇ?

ಕರಿದ ಎಣ್ಣೆಯನ್ನು ಸಾಧಾರಣವಾಗಿ ಒಮ್ಮೆ ಬಳಕೆ ಮಾಡಿದರೆ ಯಾವುದೇ ಸಮಸ್ಯೆ ಇಲ್ಲ. ಆದರೆ, ಅದನ್ನು ದೀರ್ಘ ಕಾಲದವರೆಗೆ ಬಿಟ್ಟು, ಮತ್ತೆ ಕರಿಯಲು ಅಥವಾ ಇನ್ನಿತರ ಅಡುಗೆಗೆ ಬಳಸುವುದು ಸುರಕ್ಷಿತವಲ್ಲ.

ದೀರ್ಘ ಕಾಲದ ಬಳಿಕೆ ಬಳಕೆ ಮಾಡಿದ ಎಣ್ಣೆಯನ್ನು ಮರು ಬಳಕೆ ಮಾಡುವುದರಿಂದ ಅನೇಕ ಅನಾರೋಗ್ಯಕ್ಕೆ ತುತ್ತಾಗುವ ಸಾಧ್ಯತೆ ಇದೆ. ಇವು ಕೆಟ್ಟ ಕೊಬ್ಬನ್ನು ಉತ್ಪತ್ತಿ ಮಡುತ್ತದೆ. ಇದರಿಂದ ಕ್ಯಾನ್ಸರ್​ಗೆ ತುತ್ತಾಗುವ ಸಾಧ್ಯತೆ ಕೂಡ ಇದೆ.

ಕರಿದ ಎಣ್ಣೆಯನ್ನು ಅತಿಯಾಗಿ ಬಳಸುವುದರಿಂದ ಅಡ್ಡಪರಿಣಾಮಗಳು ಉಂಟಾಗಬಹುದು ಎಂದು ತಜ್ಞರು ಎಚ್ಚರಿಸಿದ್ದಾರೆ. ಒಂದಕ್ಕಿಂತ ಹೆಚ್ಚು ಬಾರಿ ಬಳಸಿದ ಎಣ್ಣೆಯನ್ನು ಮರುಬಳಕೆ ಮಾಡುವುದು ಸೂಕ್ತವಲ್ಲ. ಇದರಿಂದ ಹೃದ್ರೋಗ, ಅಲ್​ಜೈಮರ್ ಮತ್ತು ಪಾರ್ಕಿನ್ಸನ್ ಕಾಯಿಲೆಗೆ ತುತ್ತಾಗು ಸಾಧ್ಯತೆ ಇದೆ.

ಎಣ್ಣೆಯನ್ನು ದೀರ್ಘಕಾಲದವರೆಗೆ ಬಿಸಿ ಮಾಡಿದ್ದರೆ ಅದನ್ನು ಮತ್ತೆ ಹುರಿಯಲು ಬಳಸಬಾರದು. ಹಾಗೆಯೇ ಬೇಯಿಸಿದ ಆಹಾರಕ್ಕೆ ಕೂಡ ಇದರ ಬಳಕೆ ಮಾಡುವ ಮುನ್ನ ಎಚ್ಚರಿಕೆ ವಹಿಸಬೇಕು

ಅಡುಗೆ ಎಣ್ಣೆಗಳನ್ನು ಅತಿಯಾಗಿ ಕುದಿಸುವುದು ಆರೋಗ್ಯಕ್ಕೆ ಹಾನಿಕಾರಕ ಕೂಡ. ಇವುಗಳನ್ನು ಡುಗೆಯಲ್ಲಿ ಮರು ಬಳಕೆ ಮಾಡುವುದರಿಂದ ಕೆಲ ಹಾನಿಕಾರಕ ಅಂಶ ಬಿಡುಗಡೆಯಾಗುತ್ತದೆ.

ಇನ್ನು ಈ ಕರಿದ ಎಣ್ಣೆಯನ್ನು ಮತ್ತೆ ಅಡುಗೆಗೆ ಬಳಸುವ ಬದಲು ಬಯೋಡೀಸೆಲ್ ತಯಾರಿಸಿದರೆ ಮಾಲಿನ್ಯದ ಸಮಸ್ಯೆಯನ್ನು ತಪ್ಪಿಸಬಹುದು ಎನ್ನುತ್ತಾರೆ ಭಾರತೀಯ ಆಹಾರ ಸುರಕ್ಷತೆ ಮತ್ತು ಗುಣಮಟ್ಟ ಪ್ರಾಧಿಕಾರ ತಜ್ಞ ಪಿವಿಎನ್​ ಮಾಧವ್​​.

ಕೇಂದ್ರ ಸರ್ಕಾರ ಕೂಡ ಕರಿದ ಎಣ್ಣೆಯನ್ನು ಜೈವಿಕ ಡೀಸೆಲ್ ಉತ್ಪಾದನೆಗೆ ಮಾತ್ರ ಬಳಸಲು 2018 ರಲ್ಲಿ ಆದೇಶ ಹೊರಡಿಸಿತು. ಅಲ್ಲದೇ ಈ ಎಣ್ಣೆಯಲ್ಲಿ ಹೇಗೆ ಡಿಸೇಲ್​ ತಯಾರಿಸಬಹುದು ಎಂದು ಕೂಡ ವಿವರಿಸಿದ್ದರು.

ಅಡುಗೆ ಮಾಡಿದ ನಂತರ ಉಳಿದ ಎಣ್ಣೆಯನ್ನು ತಣ್ಣಗಾಗಿಸಿ ನಂತರ ಸ್ಟ್ರೈನರ್ ಮೂಲಕ ಗಾಳಿಯಾಡದ ಪಾತ್ರೆಯಲ್ಲಿ ಸುರಿಯಬೇಕು. ಆಗ ಆ ಎಣ್ಣೆಯಲ್ಲಿ ಯಾವುದೇ ಆಹಾರ ಕಣಗಳು ಇರುವುದಿಲ್ಲ.

ಎಣ್ಣೆಯನ್ನು ಮರುಬಳಕೆ ಮಾಡುವ ಮೊದಲು ಪ್ರತಿ ಬಾರಿ ಎಣ್ಣೆಯ ಬಣ್ಣ ಮತ್ತು ದಪ್ಪವನ್ನು ಪರೀಕ್ಷಿಸಬೇಕು. ಇಲ್ಲ ಆರೋಗ್ಯಕ್ಕೆ ಹಾನಿ ಹೆಚ್ಚು. ಈ ಹಿನ್ನಲೆ ಆರೋಗ್ಯ ದೃಷ್ಟಿಯಿಂದ ಈ ಬಗ್ಗೆ ಯೋಚಿಸಿ ಬಳಕೆ ಮಾಡಬೇಕು