ಈ 30 ಸೆಕೆಂಡುಗಳ ಪರೀಕ್ಷೆಯಿಂದ ಮನೆಯಲ್ಲಿಯೇ ನಿಮ್ಮ ಆರೋಗ್ಯ ಹೇಗಿದೆ ಎಂಬುದನ್ನು ತಿಳಿದುಕೊಳ್ಳಬಹುದು!

30-11-21 11:38 am       Source: Boldsky Kannada   ಡಾಕ್ಟರ್ಸ್ ನೋಟ್

ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ನಿಯಮಿತ ತಪಾಸಣೆ ಮತ್ತು ಆರೋಗ್ಯ ಪರೀಕ್ಷೆಗಳು ತುಂಬಾ ಮುಖ್ಯ.

ಉತ್ತಮ ಆರೋಗ್ಯ ಕಾಪಾಡಿಕೊಳ್ಳಲು ನಿಯಮಿತ ತಪಾಸಣೆ ಮತ್ತು ಆರೋಗ್ಯ ಪರೀಕ್ಷೆಗಳು ತುಂಬಾ ಮುಖ್ಯ. ಅದಕ್ಕಾಗಿಯೇ ವರ್ಷಕ್ಕೆ ಒಂದು ಬಾರಿಯಾದರೂ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು ಎನ್ನುವುದು. ಇದರಿಂದ ನಮ್ಮ ಅರಿವಿಗೆ ಬಾರದ ಸಮಸ್ಯೆಗಳನ್ನು ತಿಳಿದುಕೊಂಡು, ಅಪಾಯದ ಮಟ್ಟ ತಲುಪುವ ಮುನ್ನವೇ ಚಿಕಿತ್ಸೆ ಕೊಡಿಸಲು ಸಾಧ್ಯವಾಗುವುದು. ಆದರೆ, ಹೆಚ್ಚಿನವರಿಗೆ ಆರೋಗ್ಯ ತಪಾಸಣೆಗೆ ತೆರಳುವುದೆಂದರೆ ಅಸಡ್ಡೆ. ಅಂತಹವರು ಈ ಸರಳ ಪರೀಕ್ಷೆಗಳನ್ನು ಸ್ವಯಂ ಮನೆಯಲ್ಲಿಯೇ ಮಾಡಿಕೊಳ್ಳಬಹುದು. ಇದರಿಂದ ನೀವು ಆರೋಗ್ಯವಾಗಿದ್ದೀರಾ ಅಥವಾ ಇಲ್ಲವೇ ಎಂದು ತಕ್ಕ ಮಟ್ಟಿಗೆ ಊಹಿಸಬಹುದು. ತದನಂತರ ವೈದ್ಯಕೀಯ ತಪಾಸಣೆ ಮಾಡಿಸಿಕೊಳ್ಳಬಹುದು. ಅದು ಹೇಗೆ ಎಂಬುದನ್ನು ಇಲ್ಲಿ ನೋಡೋಣ.

ಆರೋಗ್ಯ ಯಾವ ಸ್ಥಿತಿಯಲ್ಲಿದೆ ಎಂದು ತಿಳಿದುಕೊಳ್ಳಲು ಮನೆಯಲ್ಲಿಯೇ ಮಾಡಿಕೊಳ್ಳಬಹುದಾದ ಸಣ್ಣ ಪರೀಕ್ಷೆಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಪರೀಕ್ಷೆ 1: ಕೈಯನ್ನು ಮುಷ್ಠಿ ಹಿಡಿದು, ಹಿಸುಕಿಕೊಳ್ಳಿ:

ಈ ವ್ಯಾಯಾಮದಲ್ಲಿ, ಮೊದಲಿಗೆ ನಿಮ್ಮ ಕೈಯನ್ನು ಮುಷ್ಠಿ ಮಾಡಿ, 30 ಸೆಕೆಂಡುಗಳ ಕಾಲ ಹಿಸುಕಿಕೊಂಡು ಹಿಡಿದುಕೊಳ್ಳಿ, ನಂತರ ಮುಷ್ಠಿಯನ್ನು ಬಿಡಿ. ಈಗ ನಿಮ್ಮ ಅಂಗೈಯು ಮೊದಲಿಗಿಂತ ಸ್ವಲ್ಪ ಬಿಳಿಯಾಗಿರುವುದನ್ನು ಗಮನಿಸಬಹುದು. ಕಡಿಮೆ ರಕ್ತದ ಹರಿವು ಇದಕ್ಕೆ ಕಾರಣ. ಸ್ವಲ್ಪ ಸಮಯ ಕಾದು, ನಿಮ್ಮ ಅಂಗೈಯನ್ನು ಗಮನಿಸಿ. ಅದು ಸಾಮಾನ್ಯ ಬಣ್ಣಕ್ಕೆ ಹಿಂತಿರುಗಲು ತೆಗೆದುಕೊಳ್ಳುವ ಅವಧಿಯನ್ನು ಪರಿಶೀಲಿಸಿ. ನಿಮ್ಮ ಕೈಯ ಬಣ್ಣ ಸಾಮಾನ್ಯ ಬಣ್ಣಕ್ಕೆ ತಕ್ಷಣವೇ ಹಿಂದಿರುಗಿದರೆ, ನಿಮ್ಮ ರಕ್ತನಾಳಗಳು ಆರೋಗ್ಯವಾಗಿವೆ ಎಂದರ್ಥ. ಒಂದು ವೇಳೆ ನಿಮ್ಮ ಕೈ ಬಿಳಿ ಬಣ್ಣದಿಂದ ಸಾಮಾನ್ಯ ಬಣ್ಣಕ್ಕೆ ಹಿಂತಿರುಗಲು ಹತ್ತು ಸೆಕೆಂಡುಗಳಿಗಿಂತ ಹೆಚ್ಚು ಸಮಯ ತೆಗದುಕೊಂಡರೆ, ಇದು ಅಪಧಮನಿಕಾಠಿಣ್ಯದ ಸಂಕೇತವಾಗಿರಬಹುದು. ಅಂದರೆ, ಈ ಸ್ಥಿತಿಯು ಹೃದಯದಿಂದ ದೇಹದ ಇತರ ಭಾಗಗಳಿಗೆ ಆಮ್ಲಜನಕ ಮತ್ತು ಪೋಷಕಾಂಶಗಳನ್ನು ಸಾಗಿಸುವ ರಕ್ತನಾಳಗಳು ದಪ್ಪ ಮತ್ತು ಗಟ್ಟಿಯಾಗುವುದು. ಇದು ಕಾಲಾನಂತರದಲ್ಲಿ ಹೃದಯ, ಮೆದುಳು, ಕಿಡ್ನಿ ಸೇರಿದಂತೆ ಎಲ್ಲದಕ್ಕೂ ಹಾನಿ ಮಾಡುತ್ತದೆ. ಆದ್ದರಿಂದ ಜಾಗರೂಕರಾಗಿರಿ.

ಪರೀಕ್ಷೆ 2: ನಿಮ್ಮ ಉಗುರುಗಳ ಬುಡವನ್ನು ಒತ್ತಿ:

ನಿಮ್ಮ ಉಗುರುಗಳ ಮೂಲ ಅಥವಾ ಬುಡವನ್ನು 5 ಸೆಕೆಂಡುಗಳ ಕಾಲ ಒತ್ತಿ ಹಿಡಿಯಿರಿ. ಹಿಂದಿನ ವ್ಯಾಯಾಮದಂತೆಯೇ, ಈ ಸಂದರ್ಭದಲ್ಲಿ ಬೆರಳಿನ ಉಗುರುಗಳು ಬಿಳಿಯಾಗುತ್ತವೆ. ಆದರೆ, ಈ ವ್ಯಾಯಾಮದಲ್ಲಿ, ರಕ್ತವು ಸಾಮಾನ್ಯ ಸ್ಥಿತಿಗೆ ಮರಳಲು 3 ಸೆಕೆಂಡುಗಳಿಗಿಂತ ಹೆಚ್ಚು ಸಮಯ ತೆಗೆದುಕೊಳ್ಳುವುದಿಲ್ಲ. ಉಗುರಿನಲ್ಲಿ ನೋವು ಮತ್ತು ಅಸ್ವಸ್ಥತೆಯನ್ನು ಅನುಭವಿಸಿದರೆ, ಪ್ರತಿ ಬೆರಳಿನ ನೋವು ನಿಮಗೆ ಏನು ಹೇಳುತ್ತಿದೆ ಎಂಬುದು ಇಲ್ಲಿದೆ:

- ಹೆಬ್ಬೆರಳಲ್ಲಿನ ನೋವು ಉಸಿರಾಟದ ಸಮಸ್ಯೆಗಳನ್ನು ಸೂಚಿಸುತ್ತದೆ.

- ತೋರು ಬೆರಳಿನ ಕೊಲೊನ್ ಅಥವಾ ಜೀರ್ಣಾಂಗ ವ್ಯವಸ್ಥೆಗೆ ಸಂಬಂಧಿಸಿದ ಸಮಸ್ಯೆಗಳನ್ನು ಸೂಚಿಸುತ್ತದೆ.

- ಮಧ್ಯದ ಬೆರಳಿನ ನೋವು ಹೃದಯರಕ್ತನಾಳದ ಸಮಸ್ಯೆಗಳ ಸೂಚಕವಾಗಿದೆ.

- ಉಂಗುರದ ಬೆರಳಿನ ಹೃದಯಕ್ಕೆ ಸಂಬಂಧಿಸಿದ ಸಮಸ್ಯೆಗಳನ್ನು ಸೂಚಿಸುವುದು.

- ಅಂತಿಮವಾಗಿ, ಕಿರು ಬೆರಳಿನ ನೋವು ಸಣ್ಣ ಕರುಳಿನ ಸಮಸ್ಯೆಗಳಿಗೆ ಲಿಂಕ್ ಮಾಡಬಹುದು. ಪ್ರತಿಯೊಂದು ಬೆರಳನ್ನು ದೇಹದ ವಿವಿಧ ಭಾಗಗಳಿಗೆ ನಿಕಟವಾಗಿ ಸಂಬಂಧ ಹೊಂದಿರುವುದನ್ನು ಗಮನಿಸಿ, ಯಾವುದೇ ಸಮಸ್ಯೆಗಳನ್ನು ಗುರುತಿಸಬಹುದು.

ಪರೀಕ್ಷೆ 3: ಕಾಲನ್ನು ಮೇಲಕ್ಕೆತ್ತಿ, ಹಿಡಿದುಕೊಳ್ಳಿ:

ಈ ಪರೀಕ್ಷೆಗಾಗಿ, ನಿಮ್ಮ ಮುಖವು ನೆಲಕ್ಕೆ ತಾಗುವಂತೆ ನೆಲದ ಮೇಲೆ ಅಂಗಾತ ಮಲಗಿ. ನಿಮ್ಮ ಕೈಗಳು ದೇಹಕ್ಕೆ ನೇರವಾಗಿರಲಿ. ದೇಹವು ನೆಲದ ಮೇಲೆ ವಿಶ್ರಾಂತಿ ಪಡೆಯುತ್ತಿರುವಾಗ ನಿಮ್ಮ ಎರಡೂ ಕಾಲುಗಳನ್ನು ನಿಧಾನವಾಗಿ ಮೇಲಕ್ಕೆತ್ತಿ. 30 ಸೆಕೆಂಡುಗಳ ಕಾಲ ಅದೇ ಭಂಗಿಯಲ್ಲಿ ಇರಬಹುದೇ ಎಂದು ನೋಡಿ. ಅದೇ, ಭಂಗಿಯಲ್ಲಿ ಸ್ಥಿರವಾಗಿ ಅಥವಾ ಕಾಲುಗಳನ್ನು ಒಟ್ಟಿಗೆ ಇರಿಸಿಕೊಳ್ಳುವಲ್ಲಿ ಸಮಸ್ಯೆಗಳನ್ನು ಎದುರಿಸಿದರೆ, ನಿಮ್ಮ ಹೊಟ್ಟೆ ಅಥವಾ ಬೆನ್ನುಮೂಳೆಯಲ್ಲಿ ಕೆಲವು ಸಮಸ್ಯೆಗಳಿರಬಹುದು ಎಂದರ್ಥ. ಆದರೆ, ಈ ವ್ಯಾಯಾಮಕ್ಕಾಗಿ ಕಾಲನ್ನು ಅತಿಯಾಗಿ ತಗ್ಗಿಸಬೇಡಿ.

 

Short Tests to Conduct at Home to Predict You’re Healthy. Here we talking about Short Tests to Conduct at Home to Predict You’re Healthy.