ಅಣಬೆ ಸೇವನೆಯಿಂದ ನಮ್ಮ ದೇಹಕ್ಕೆ ಎಂತಹ ಪ್ರಯೋಜನವಿದೆ ಗೊತ್ತಾ?

11-01-22 10:54 pm       Source: Boldsky Kannada   ಡಾಕ್ಟರ್ಸ್ ನೋಟ್

ತರಕಾರಿಗಳಲ್ಲಿ ಅಣಬೆಗಳು ತನ್ನದೇ ಆದ ಸ್ಥಾನ ಪಡೆದುಕೊಂಡಿವೆ. ಇದರಲ್ಲಿ ನಾನಾ ಬಗೆಗಳಿದ್ದು, ಬಹಳ ಆರೋಗ್ಯಕಾರಿ.

ತರಕಾರಿಗಳಲ್ಲಿ ಅಣಬೆಗಳು ತನ್ನದೇ ಆದ ಸ್ಥಾನ ಪಡೆದುಕೊಂಡಿವೆ. ಇದರಲ್ಲಿ ನಾನಾ ಬಗೆಗಳಿದ್ದು, ಬಹಳ ಆರೋಗ್ಯಕಾರಿ. ಆಡುಭಾಷೆಯಲ್ಲಿ ನಾಯಿ ಕೊಡೆ ಎಂದು ಕರೆಯಲ್ಪಡುವ ಮಶ್ರೂಮ್ ಅಥವಾ ಅಣಬೆಗಳಲ್ಲಿ ಕೆಲವೊಂದು ವಿಷಕಾರಿ ಕೂಡ ಇರುತ್ತದೆ. ಅವುಗಳನ್ನು ಸರಿಯಾಗಿ ಗುರುತಿಸುವುದು ಮುಖ್ಯ.

ಅಡುಗೆಗೆ ರುಚಿ ಹೆಚ್ಚು ಬರಲೆಂದು ಅಣಬೆಯನ್ನು ಉಪಯೋಗಿಸುವವರು ಅಧಿಕ ಜನ, ಆದರೆ ಅಣಬೆಗಳು ಬರೀ ರುಚಿ, ಪರಿಮಳ ವರ್ಧಕಗಳಷ್ಟೇ ಅಲ್ಲ, ಅದಕ್ಕೂ ಮೀರಿದ ಆರೋಗ್ಯಕರ ಉಪಯೋಗಗಳು ಹಲವು ಇವೆ. ಹಾಗಾದರೆ, ಅಣಬೆಯನ್ನು ಸೇವಿಸುವುದರಿಂದ ಆಗುವ ಆರೋಗ್ಯಕರ ಪ್ರಯೋಜನಗಳನ್ನು ಈ ಲೇಖನದ ಮೂಲಕ ತಿಳಿಯೋಣ ಬನ್ನಿ.

ಅಣಬೆಗಳನ್ನು ಸೇವಿಸುವುದರಿಂದ ಸಿಗುವ ಆರೋಗ್ಯ ಪ್ರಯೋಜನಗಳೇನು ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಪೋಷಕಾಂಶಗಳ ಕೊರತೆ ನೀಗಿಸುವುದು: ಅಣಬೆ ಸೇವನೆಯಿಂದ ದೇಹಕ್ಕೆ ಕಬ್ಬಿಣ ಅಂಶ ದೊರೆತು ಹಿಮೋಗ್ಲೋಬಿನ್, ಕೆಂಪು ರಕ್ತ ಕಣಗಳು ಹೆಚ್ಚಾಗುತ್ತದೆ. ಅಣಬೆಯು ದೇಹದ ಎಲ್ಲಾ ಭಾಗಗಳಿಗೆ ಆಮ್ಲಜನಕ ದೊರೆಯುವಂತೆ ಮಾಡುತ್ತದೆ, ಅಲ್ಲದೇ ಚಯಾಪಚಯ ಕ್ರಿಯೆಯನ್ನು ಹೆಚ್ಚಿಸುತ್ತದೆ. ಅಣಬೆಯಲ್ಲಿ ವಿಟಮಿನ್ ಬಿ ಇರುವುದರಿಂದ ದೇಹಕ್ಕೆ ಶಕ್ತಿ ಕೊಡುತ್ತದೆ. ಅಲ್ಲದೇ ದೇಹದ ಅಂಗಾಂಗಗಳು ಆಕ್ಟೀವ್ ಆಗಿ ಕೆಲಸ ಮಾಡುವಂತೆ ಮಾಡುತ್ತದೆ. ಇದು ದೇಹಕ್ಕೆ ವರ್ಧಿತ ಪೋಷಣೆಯನ್ನು ನೀಡುವುದು. ಅಲ್ಲದೆ ದೇಹದಲ್ಲಿರುವ ಪೋಷಕಾಂಶ ಕೊರತೆಯನ್ನು ನೀಗಿಸುವುದು.

ತೂಕ ಇಳಿಕೆಗೆ ಸಹಾಯ ಮಾಡುವುದು:

ಅಣಬೆಯು ಕಡಿಮೆ ಪ್ರಮಾಣದ ಕ್ಯಾಲೋರಿಯನ್ನು ಒಳಗೊಂಡಿದ್ದು, ಆರೋಗ್ಯ ಸುಧಾರಣೆಗೆ ಸಹಾಯ ಮಾಡುವುದು. ತೂಕವನ್ನು ಕಡಿಮೆ ಮಾಡಿಕೊಳ್ಳಲು ಬಯಸುವವರು ಅಣಬೆಯನ್ನು ತಪ್ಪದೇ ಸೇವಿಸಬೇಕು. ಅಣಬೆ ಕಾರ್ಬೋಹೈಡ್ರೇಟ್ ಮತ್ತು ಕೊಬ್ಬುಗಳನ್ನು ಕಡಿಮೆ ಮಾಡುತ್ತದೆ. ಜೊತೆಗೆ ಇದು ಅಧಿಕ ಪ್ರಮಾಣದ ಪ್ರೋಟೀನ್‍ಗಳಿಂದ ಕೂಡಿದೆ. ಇದು ದೇಹದಲ್ಲಿ ಇರುವ ಕೊಬ್ಬುಗಳನ್ನು ಸುಲಭವಾಗಿ ಕರಗಿಸಲು ಸಹಾಯ ಮಾಡುವುದು.

ವಿಟಮಿನ್ ಡಿ ಹೆಚ್ಚಿಸುವುದು:​

ದೇಹದಲ್ಲಿ ವಿಟಮಿನ್ ಡಿ ಅಂಶವನ್ನು ಹೆಚ್ಚಿಸಿಕೊಳ್ಳಲು ಸೂರ್ಯನ ಕಿರಣ ಹಾಗೂ ಕೆಲವು ಸೀಮಿತ ಆಹಾರ ಪದಾರ್ಥಗಳನ್ನು ಸೇವಿಸಬೇಕು. ಅಂತಹ ವಿಶೇಷ ಶಕ್ತಿ ಹಾಗೂ ವಿಟಮಿನ್ ಡಿ ಅಂಶವನ್ನು ದೇಹಕ್ಕೆ ನೀಡುವ ಶಾಖಹಾರಿ ಎಂದರೆ ಅಣಬೆ. ಬಿಳಿ ಅಣಬೆಗಳು ಕ್ಯಾಲ್ಶಿಯಂ ಹೊಂದಿರುವುದರಿಂದ ಮೂಳೆಗಳ ಆರೋಗ್ಯವನ್ನು ಹೆಚ್ಚಿಸುತ್ತದೆ. ನಿಯಮಿತವಾಗಿ ಅಣಬೆಯನ್ನು ಸೇವಿಸುತ್ತಾ ಬಂದರೆ ಮೂಳೆಗೆ ಸಂಬಂಧಿಸಿದ ಸಮಸ್ಯೆ ದೂರವಾಗುತ್ತದೆ.

​ಕೊಲೆಸ್ಟ್ರಾಲ್ ಕಡಿಮೆ ಮಾಡುವುದು:

ಅಣಬೆಯು ನೇರ ಪ್ರೋಟೀನ್ ಅನ್ನು ನೀಡುತ್ತದೆ. ಇದು ದೇಹಕ್ಕೆ ಅಗತ್ಯವಾದ ಫೈಬರ್‍ಅನ್ನು ನೀಡುವುದರ ಜೊತೆಗೆ, ದೇಹದಲ್ಲಿ ಇರುವ ಕೆಟ್ಟ ಕೊಲೆಸ್ಟ್ರಾಲ್‍ಗಳನ್ನು ಕಡಿಮೆ ಮಾಡಲು ಕಿಣ್ವಗಳನ್ನು ಉತ್ಪತ್ತಿ ಮಾಡುತ್ತದೆ. ಚಿಟನ್ ಮತ್ತು ಬೀಟಾ-ಗ್ಲುಕನ್‍ನಂತೆಯೇ ಪಿಷ್ಟ ರಹಿತ ಪಾಲಿಸ್ಯಾಕರೈಡ್‍ಗಳನ್ನು ನೀಡುತ್ತದೆ. ಇದು ಕೊಲೆಸ್ಟ್ರಾಲ್ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುವುದು.

ರೋಗನಿರೋಧಕ ಶಕ್ತಿ ವೃದ್ಧಿಸುವುದು:

ವಿವಿಧ ಸಂಶೊಧನೆ ಹಾಗೂ ಅಧ್ಯಯನಗಳ ಪ್ರಕಾರ ಅಣಬೆಯು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು ಎಂದು ತಿಳಿದುಬಂದಿದೆ. ಈ ಅಣಬೆಗಳು ಬ್ಯಾಕ್ಟೀರಿಯಾ ವಿರೋಧಿ. ಈ ಕಾರಣದಿಂದ ಅವು ನಮ್ಮನ್ನು ಬ್ಯಾಕ್ಟೀರಿಯಾದ ಸೋಂಕಿನಿಂದ ದೂರವಿಡುತ್ತವೆ. ಅಗತ್ಯವಿರುವ ಶಕ್ತಿಯನ್ನು ಒದಗಿಸುವ ಮೂಲಕ ನಮ್ಮ ಪ್ರತಿರಕ್ಷಣಾ ವ್ಯವಸ್ಥೆಯು ಸರಿಯಾಗಿ ಕಾರ್ಯನಿರ್ವಹಿಸಲು ಅವು ಸಹಾಯ ಮಾಡುತ್ತವೆ.ಸೂಕ್ಷ್ಮ ಜೀವಿಗಳು ಹಾಗೂ ವೈರಸ್‍ಗಳಂತಹ ರೋಗಾಣುಗಳಿಂದ ಆರೋಗ್ಯಕ್ಕೆ ಯಾವುದೇ ಹಾನಿಯುಂಟಾಗದಂತೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದು.

​ಮಧುಮೇಹ ನಿಯಂತ್ರಣ:

ಮಧುಮೇಹಿಗಳಿಗೆ ಅಣಬೆಯು ಅತ್ಯುತ್ತಮ ಆಯ್ಕೆ. ಏಕೆಂದರೆ ಇದು ಕಾರ್ಬೊಹೈಡ್ರೇಟ್, ಹೆಚ್ಚಿನ ಪ್ರೋಟೀನ್, ಖನಿಜಗಳು ಮತ್ತು ಜೀವಸತ್ವಗಳಿಂದ ಮುಕ್ತವಾಗಿದ್ದು, ಮಧುಮೇಹಿಗಳಿಗೆ ಉತ್ತಮ ಆಹಾರ ಎನಿಸಿಕೊಳ್ಳುವುದು. ನೈಸರ್ಗಿಕ ಇನ್ಸುಲಿನ್ ರೀತಿಯಲ್ಲಿ ಅಣಬೆಯು ಕಿಣ್ವಗಳನ್ನು ಒಳಗೊಂಡಿರುತ್ತದೆ. ದೇಹದಲ್ಲಿ ಇರುವ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುವುದು ಹಾಗೂ ನಿಯಂತ್ರಣದಲ್ಲಿ ಇಡುವುದು.

ಕ್ಯಾನ್ಸರ್ ನಿಯಂತ್ರಿಸುವುದು:

ಅಣಬೆಯಲ್ಲಿ ಪರಿಣಾಮಕಾರಿಯಾದ ಪಾಲಿಸ್ಯಾಕರೈಡ್‍ಗಳು ಇವೆ. ಅವು ಆಂಟಿಟ್ಯೂಮರ್ ಏಜೆಂಟ್‍ಗಳಾಗಿವೆ. ದೇಹದೊಳಗೆ ಕ್ಯಾನ್ಸರ್ ಕೋಶಗಳನ್ನು ನಿಯಂತ್ರಿಸಲು ಸಹಾಯ ಮಾಡುವುದು. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವ ಬಿಳಿ ರಕ್ತಕಣಗಳನ್ನು ಹೆಚ್ಚಿಸುವುದು. ಅವು ಕ್ಯಾನ್ಸರ್ ಕೋಶಗಳ ರಚನೆಯನ್ನು ನಿಯಂತ್ರಿಸಲು ಸಹಾಯ ಮಾಡುವುದು. ಪ್ರಾಸ್ಟೇಟ್, ಸ್ತನ, ರಕ್ತ ಸೇರಿದಂತೆ ಇನ್ನಿತರ ಕ್ಯಾನ್ಸರ್ ಸಮಸ್ಯೆಗಳ ವಿರುದ್ಧ ಹೋರಾಡುವುದು.

​ಲೈಂಗಿಕ ಆರೋಗ್ಯ ಕಾಪಾಡುವುದು:

ಅಣಬೆಯು ಸಮೃದ್ಧವಾದ ಸತುವನ್ನು ಒಳಗೊಂಡಿದ್ದಿ, ಪುರುಷರಿಗೆ ಮತ್ತು ಮಹಿಳೆಯರಿಗೆ ಉತ್ತಮ ಫಲವತ್ತತೆ ಹಾಗೂ ಲೈಂಗಿಕ ಆರೋಗ್ಯವನ್ನು ವೃದ್ಧಿಸುವುದು. ಪುರುಷರಿಗೆ ಜನನಾಂಗದ ಅಂಗಗಳ ಪುನಃಸ್ಥಾಪನೆಗೆ ಸಹಾಯ ಮಾಡುವುದು. ಜೊತೆಗೆ ವೀರ್ಯಾಣುಗಳ ಸಂಖ್ಯೆಯಲ್ಲಿ ಹೆಚ್ಚಳವಾಗುವುದು.

Health Benefits of Eating Mushrooms in Winter.