ಅಧಿಕ ಕೊಲೆಸ್ಟ್ರಾಲ್‌ ಹೀಗೂ ಕಡಿಮೆ ಮಾಡಿಕೊಳ್ಳಬಹುದು..!

11-05-22 07:44 pm       Source: Vijayakarnataka   ಡಾಕ್ಟರ್ಸ್ ನೋಟ್

ಅಧಿಕ ಕೊಲೆಸ್ಟ್ರಾಲ್‌ ಮಟ್ಟವನ್ನು ಕೆಲವು ಆಹಾರ ಪದಾರ್ಥಗಳಿಂದ ಕಡಿಮೆ ಮಾಡಿಕೊಳ್ಳಬಹುದಾಗಿದೆ. ಅವುಗಳ ಬಗ್ಗೆ ಮಾಹಿತಿ ಲೇಖನದಲ್ಲಿ ನೀಡಲಾಗಿದೆ ಓದಿ.

ಎಣ್ಣೆಯಲ್ಲಿ ಕರಿದ, ಕೊಬ್ಬಿನಂಶ ಹೆಚ್ಚಾಗಿರುವ ಆಹಾರಗಳನ್ನು ನಾವು ಹೆಚ್ಚಾಗಿ ಸೇವನೆ ಮಾಡುವುದರಿಂದ ಕೊಲೆಸ್ಟ್ರಾಲ್‌ ಮಟ್ಟವು ಕೂಡ ಗಮನಾರ್ಹವಾಗಿ ಏರುತ್ತದೆ.

ವೇಗವಾಗಿ ಓಡುತ್ತಿರುವ ಒತ್ತಡದ ಜೀವನದಿಂದಾಗಿ ಜಂಕ್‌ ಫುಡ್‌, ಬರ್ಗರ್, ಪಿಜ್ಜಾ, ಚಿಪ್ಸ್‌ದಂತಹ ರೆಡಿಮೆಡ್‌ ಆಹಾರಗಳನ್ನು ತಿಂದು ಹೊಟ್ಟೆ ತುಂಬಿಸಿಕೊಳ್ಳುತ್ತೇವೆ. ಇಂತಹ ಕಳಪೆ ಜೀವನಶೈಲಿಯಿಂದಾಗಿ ಕಾಯಿಲೆಗಳನ್ನು ನಾವು ಸುಲಭವಾಗಿ ಆಹ್ವಾನಿಸಬಹುದಾಗಿದೆ.

ಹೆಚ್ಚಿನ ಕೊಲೆಸ್ಟ್ರಾಲ್‌ ಅಪಾಯವನ್ನು ಇಂದಿನ ಪೀಳಿಗೆಯ ಜನರು ಎದುರಿಸುತ್ತಿರುವ ಸಾಮಾನ್ಯವಾದ ಪರಿಸ್ಥಿತಿಗಳಲ್ಲಿ ಒಂದಾಗಿದೆ. ಕೆಟ್ಟ ಕೊಲೆಸ್ಟ್ರಾಲ್‌ ಮಟ್ಟವು ನಿಮ್ಮ ಹೃದಯಕ್ಕೆ ತೊಂದರೆಯನ್ನು ಉಂಟು ಮಾಡಬಹುದು. ಹಾಗಾದರೆ ಯಾವ ಉತ್ತಮ ಆಹಾರಗಳು ಆರೋಗ್ಯಕ್ಕೆ ಒಳ್ಳೆಯದು? ಯಾವ ಆಹಾರಗಳು ಅಧಿಕ ಕೊಲೆಸ್ಟ್ರಾಲ್‌ ಮಟ್ಟಕ್ಕೆ ಚಿಕಿತ್ಸೆ ನೀಡುತ್ತದೆ ಎಂಬುದನ್ನು ಇಲ್ಲಿ ತಿಳಿಯಿರಿ.

ಬೆಟ್ಟದ ನೆಲ್ಲಿಕಾಯಿ

ಕೊಬ್ಬು ಕರಗಿಸೋ 'ಬೆಟ್ಟದ ನೆಲ್ಲಿಕಾಯಿ' ಬಗ್ಗೆ ನಿಮಗೆಷ್ಟು ಗೊತ್ತು..? – Kannada news-  suddiDina (ಸುದ್ದಿ ದಿನ) | kannada Live news | Karnataka news | ಕನ್ನಡ ನ್ಯೂಸ್  | Kannada News Portal

ಬೆಟ್ಟದ ನೆಲ್ಲಿಕಾಯಿ ತಿನ್ನುವಾಗ ನಾಲಿಗೆಗೆ ವಿಭಿನ್ನವಾದ ರುಚಿಯನ್ನು ನೀಡಿ, ಮತ್ತೆ ಸಿಹಿಯ ಅನುಭವವನ್ನು ನೀಡುತ್ತದೆ. ಅದೇ ರೀತಿ ಆರೋಗ್ಯಕ್ಕೂ ಬಹಳಷ್ಟು ಪ್ರಯೋಜನಕಾರಿಯಾಗಿದೆ. ಇದು ಮಧುಮೇಹ ಮತ್ತು ಕೆಟ್ಟ ಕೊಲೆಸ್ಟ್ರಾಲ್‌ ಹೊಂದಿರುವವರಿಗೆ ಅತ್ಯುತ್ತಮವಾಗಿದೆ.

ಇದರಲ್ಲಿ ವಿಟಮಿನ್‌ ಸಿ, ಖನಿಜಗಳು ಮತ್ತು ಅಮೈನೋ ಆಮ್ಲಗಳ ಶ್ರೀಮಂತ ಮೂಲಗಳನ್ನು ಹೊಂದಿದೆ. ಕೆಲವು ಅಧ್ಯಯನಗಳ ಪ್ರಕಾರ, ನೆಲ್ಲಿಕಾಯಿಯು ದೇಹದ ಕೊಲೆಸ್ಟ್ರಾಲ್‌ ಮಟ್ಟವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎಂದು ಹೇಳಲಾಗುತ್ತದೆ.

ನಿಂಬೆ ಹಣ್ಣು

ನಿಂಬೆಹಣ್ಣಿನ ಈ ಮಹತ್ವ ತಿಳಿದ್ರೆ ದಿನಕ್ಕೊಂದು ಲೋಟ ಪಾನಕ ಕಂಡಿತಾ ಕುಡಿತಿರಾ ! - Namma  Kannada Suddi

ಸಿಟ್ರಿಕ್ ಆಮ್ಲದ ಗುಂಪಿಗೆ ಸೇರಿರುವ ನಿಂಬೆ ಹಣ್ಣು ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇದು ಯಥೇಚ್ಚವಾಗಿ ವಿಟಮಿನ್‌ ಸಿ ಮತ್ತು ಉತ್ಕರ್ಷಣ ನಿರೋಧಕಗಳಿಂದ ತುಂಬಿರುತ್ತದೆ. ನಿಂಬೆ ಹಣ್ಣು ದೇಹದ ವಿಷವನ್ನು ಹೊರಹಾಕಲು ಮತ್ತು ದೇಹದ ಉರಿಯೂತವನ್ನು ಕಡಿಮೆ ಮಾಡಲು ಉತ್ತೇಜಿಸುತ್ತದೆ.

ನಿಯಮಿತವಾಗಿ ನಿಂಬೆ ಹಣ್ಣನ್ನು ಬಳಸುವುದರಿಂದ ರಕ್ತದಲ್ಲಿನ ಕೊಲೆಸ್ಟ್ರಾಲ್, ಆಂಟಿಆಕ್ಸಿಡೆಂಟ್‌ ಫ್ಲೇವೊನ್‌ಗಳು ಮತ್ತು ಮಹಿಳೆಯರಲ್ಲಿ ಪಾರ್ಶ್ವವಾಯು ಅಪಾಯವನ್ನು ಕಡಿಮೆ ಮಾಡಬಹುದು.

ಗ್ರೀನ್‌ ಟೀ

Green tea benefits: ಗ್ರೀನ್ ಟೀ ನಮ್ಮ ಆರೋಗ್ಯಕ್ಕೂ ಸೈ, ಅಂದಕ್ಕೂ ಸೈ - Vijaya  Karnataka

ಗ್ರೀನ್‌ ಟೀ ಪಾಲಿಫಿನಾಲ್‌ಗಳ ಸಮೃದ್ಧ ಮೂಲವನ್ನು ಹೊಂದಿದೆ. ಗ್ರೀನ್‌ ಟೀ ತೂಕವನ್ನು ನಿರ್ವಹಣೆ ಮಾಡುವುದರ ಜೊತೆಗೆ ಕೆಟ್ಟ ಕೊಲೆಸ್ಟ್ರಾಲ್‌ ಅನ್ನು ಕಡಿಮೆ ಮಾಡುತ್ತದೆ. ಮಧುಮೇಹ ಹೊಂದಿರುವವರಿಗೆ ಗ್ರೀನ್‌ ಟೀ ಬಹಳ ಉತ್ತಮವಾಗಿದೆ. ಇದರಲ್ಲಿ ಕ್ಯಾಲ್ಸಿಯಂ, ಕಬ್ಬಿಣ, ಪೊಟ್ಯಾಶಿಯಮ್ ಶ್ರೀಮಂತವಾಗಿದ್ದು, ಉತ್ಕರ್ಷಣ ನಿರೋಧಕಗಳನ್ನು ಹೊಂದಿದೆ.

ಓಟ್ಸ್

7 Delicious Ways to Eat Oats That Don't Involve Oatmeal | Real Simple

ಓಟ್ಸ್ ತೂಕ ನಿರ್ವಹಿಸುವವರ ನೆಚ್ಚಿನ ಆಹಾರವಾಗಿದೆ. ಅಧಿಕ ಕೊಲೆಸ್ಟ್ರಾಲ್‌ ಹೊಂದಿರುವವರು ಪ್ರತಿನಿತ್ಯ ನಿಯಮಿತವಾಗಿ ಓಟ್ಸ್ ಅನ್ನು ಸೇವನೆ ಮಾಡಬಹುದು. ರುಚಿಗೆ ತಾಜಾ ಬಾಳೆಹಣ್ಣು, ಕೆಲವು ಸ್ಟ್ರಾಬೆರಿಗಳನ್ನು ಮಿಶ್ರಣ ಮಾಡಿ ಸೇವನೆ ಮಾಡಬಹುದು. ಇದು ನಿಮ್ಮ ಜೀರ್ಣಕ್ರಿಯೆಯನ್ನು ಉತ್ತೇಜಿಸುವ ಮೂಲಕ ಚಯಾಪಚಯ ಕ್ರಿಯೆಯನ್ನು ವೇಗಗೊಳಿಸುತ್ತದೆ. ಹಾಗೆಯೇ ಕೆಟ್ಟ ಕೊಲೆಸ್ಟ್ರಾಲ್‌ ಮಟ್ಟವನ್ನು ಕಡಿಮೆ ಮಾಡಲು ಉತ್ತೇಜಿಸುತ್ತದೆ.

ಬೀನ್ಸ್‌

Beans – ಬೀನ್ಸ್ - mammasminimart

ಪೌಷ್ಟಿಕಾಂಶಭರಿತ ತರಕಾರಿಗಳಲ್ಲಿ ಈ ಬೀನ್ಸ್ ಕೂಡ ಒಂದಾಗಿದೆ. ಬೀನ್ಸ್‌ ತೂಕ ನಷ್ಟಕ್ಕೆ, ಕೆಟ್ಟ ಕೊಲೆಸ್ಟ್ರಾಲ್‌ಗೆ ಚಿಕಿತ್ಸೆ ನೀಡಲು ಬಹಳ ಪ್ರಯೋಜನಕಾರಿಯಾಗಿದೆ. ಇದು ವಿಶೇಷವಾಗಿ ಕರಗುವ ಫೈಬರ್‌ನಿಂದ ಸಮೃದ್ಧವಾಗಿದೆ. ಫೈಬರ್‌ನಿಂದ ಕೂಡಿರುವ ಬೀನ್ಸ್ ಅನ್ನು ಸೇವನೆ ಮಾಡುವುದರಿಂದ ಪದೇ ಪದೇ ಹಸಿವಾಗುವುದನ್ನು ತಡೆಯುತ್ತದೆ. ಇದರ ಪರಿಣಾಮ ಹೆಚ್ಚೆಚ್ಚು ಕ್ಯಾಲೋರಿಗಳ ಸೇವನೆಯನ್ನು ತಗ್ಗಿಸುತ್ತದೆ.

ಹಣ್ಣುಗಳು

ಹಣ್ಣು-ತರಕಾರಿಗಳು ಹೆಚ್ಚು ಕಾಲ ಫ್ರೆಶ್ ಆಗಿ ಇರಲು ಹೀಗೆ ಮಾಡಿ | Tips and Tricks to  Keep Fruits and Vegetables Fresh in Kannada - Kannada BoldSky

ಕೆಟ್ಟ ಕೊಲೆಸ್ಟ್ರಾಲ್‌ ಅನ್ನು ಕಡಿಮೆ ಮಾಡುವ ಹಣ್ಣುಗಳನ್ನು ಸೇವನೆ ಮಾಡುವುದು ಬಹಳ ಒಳ್ಳೆಯದು. ಅವುಗಳೆಂದರೆ ಸೇಬು, ದ್ರಾಕ್ಷಿಗಳು, ಸ್ಟ್ರಾಬೆರಿಗಳು, ಸಿಟ್ರಸ್‌ ಹಣ್ಣುಗಳು. ಮುಖ್ಯವಾಗಿ ಈ ಹಣ್ಣುಗಳು ಪೆಕ್ಟಿನ್‌ನಲ್ಲಿ ಸಮೃದ್ಧವಾಗಿವೆ.

Best Food For High Cholesterol Levels In Kannada.