ಬ್ರೇಕಿಂಗ್ ನ್ಯೂಸ್
23-10-20 02:16 pm Mangalore Correspondent ಕರಾವಳಿ
ಮಂಗಳೂರು, ಅಕ್ಟೋಬರ್ 23: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಇನ್ನು ಕೆಲವೇ ದಿನಗಳಲ್ಲಿ ಗೌತಮ್ ಅದಾನಿ ಒಡೆತನದ ಅದಾನಿ ಸಮೂಹ ಸಂಸ್ಥೆ ಪಾಲಾಗಲಿದೆ. ಇದೇ ಅ. 31ರ ಬಳಿಕ ನಿಲ್ದಾಣದ ಪೂರ್ತಿ ಕಾರ್ಯಾಚರಣೆಯನ್ನು ಅದಾನಿ ಕಂಪನಿ ವಹಿಸಿಕೊಳ್ಳಲಿದೆ. ಈ ಬಗ್ಗೆ ಅದಾನಿ ಮಂಗಳೂರು ಇಂಟರ್‌ನ್ಯಾಷನಲ್ ಏರ್‌ಪೋರ್ಟ್ ಲಿಮಿಟೆಡ್ ಕಂಪೆನಿ ಜತೆ ವಿಮಾನ ಯಾನ ಸಚಿವಾಲಯವು ಒಪ್ಪಂದಕ್ಕೆ ಅಂತಿಮ ಸಹಿ ಹಾಕಿದೆ.
ಕೆಲವು ತಿಂಗಳ ಕಾಲ ನಿರ್ವಹಣೆ ನೋಡಿಕೊಳ್ಳಲು ಮಂಗಳೂರು ವಿಮಾನ ನಿಲ್ದಾಣದ ನಿರ್ದೇಶಕರೇ ಮುಂದುವರಿಯಲಿದ್ದಾರೆ. ಬಳಿಕ ಅದಾನಿ ಕಂಪೆನಿಯು ಸಿಇಓ ಆಗಿ ಪ್ರತ್ಯೇಕ ಅಧಿಕಾರಿಯನ್ನು ನಿಯೋಜಿಸಲಿದೆ.
ಮಂಗಳೂರು ವಿಮಾನ ನಿಲ್ದಾಣವನ್ನು ಸಾರ್ವಜನಿಕ ಮತ್ತು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಲು ಭಾರತ ಸರಕಾರ ಅದಾನಿ ಗ್ರೂಪ್‌ಗೆ 50 ವರ್ಷಗಳ ಅವಧಿಗೆ ಗುತ್ತಿಗೆ ನೀಡಿದೆ. 2018ರ ಡಿಸೆಂಬರ್‌ನಲ್ಲಿ ಪಿಪಿಪಿ ಮಾದರಿಯಲ್ಲಿ ಅಭಿವೃದ್ಧಿಗೆ ಟೆಂಡರ್ ಆಹ್ವಾನಿಸಲಾಗಿತ್ತು. ಟೆಂಡರ್ ಪ್ರಕ್ರಿಯೆ ನಡೆದು, 2020ರ ಫೆಬ್ರವರಿಯಲ್ಲಿ ಅದಾನಿ ಸಂಸ್ಥೆಯ ಜತೆಗೆ ಒಪ್ಪಂದ ಅಂತಿಮ ಮಾಡಲಾಗಿತ್ತು. ಅದಾನಿ ಸಂಸ್ಥೆಯ ಬಳಿಕ ಇತರ ನಿರ್ವಹಣೆಗಾಗಿ ಜರ್ಮನಿಯ ಕಂಪೆನಿ ಜತೆಗೆ ಹೊರಗುತ್ತಿಗೆ ಮಾಡಲಿದೆ ಎನ್ನಲಾಗುತ್ತಿದೆ.


ಇದೇ ವೇಳೆ, ಅದಾನಿ ಸಂಸ್ಥೆಯು ಲಕ್ನೋ ಮತ್ತು ಅಹ್ಮದಾಬಾದ್ ಏರ್ಪೋರ್ಟನ್ನೂ ಗುತ್ತಿಗೆ ಪಡೆದಿದ್ದು ಕ್ರಮವಾಗಿ ನ.2 ಮತ್ತು 11 ರಂದು ಆಡಳಿತ ವಹಿಸಿಕೊಳ್ಳಲಿದೆ. ಲಾಕ್ಡೌನ್ ಕಾರಣದಿಂದ ಈ ಮೂರು ವಿಮಾನ ನಿಲ್ದಾಣಗಳ ಗುತ್ತಿಗೆ ಪ್ರಕ್ರಿಯೆ ವಿಳಂಬವಾಗಿತ್ತು. ಇದಲ್ಲದೆ, ಗುವಾಹಟಿ, ಜೈಪುರ್ ಮತ್ತು ತ್ರಿವೆಂಡ್ರಮ್ ವಿಮಾನ ನಿಲ್ದಾಣಗಳ ಗುತ್ತಿಗೆಯನ್ನೂ ಅದಾನಿ ಕಂಪನಿಯೇ ಪಡೆದಿದ್ದು ಅವುಗಳನ್ನೂ ಸದ್ಯದಲ್ಲೇ ತಮ್ಮ ತೆಕ್ಕೆಗೆ ಪಡೆಯಲಿದ್ದಾರೆ. ಇವೆಲ್ಲವೂ ಕೇಂದ್ರ ಸರ್ಕಾರದ ಅಧೀನದಲ್ಲಿದ್ದ ಭಾರತೀಯ ವಿಮಾನ ನಿಲ್ದಾಣ ಪ್ರಾಧಿಕಾರದಡಿ ನಿರ್ವಹಣೆ ಆಗುತ್ತಿದ್ದವು.
ದೇಶದ ಎರಡನೇ ಅತಿದೊಡ್ಡ ಏರ್ಪೋರ್ಟ್ ಆಗಿರುವ ಮುಂಬೈ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನೂ ತನ್ನ ವಶಕ್ಕೆ ಪಡೆಯಲು ಅದಾನಿ ಕಂಪೆನಿ ಮುಂದಾಗಿದೆ. ಇಲ್ಲಿ ವರೆಗೆ ಜಿವಿಕೆ ಗ್ರೂಪ್ ಎನ್ನುವ ಕಂಪನಿ ಇದರ ಉಸ್ತುವಾರಿ ಹೊತ್ತಿತ್ತು. ಎಲ್ಲವೂ ಅಂದ್ಕೊಂಡ ಹಾಗೆ ನಡೆದರೆ ಕೆಲವೇ ತಿಂಗಳಲ್ಲಿ ಮುಂಬೈ ಏರ್ಪೋರ್ಟ್ ಅದಾನಿ ಪಾಲಾಗಲಿದೆ.

ಮತ್ತೆ ಆರು ವಿಮಾನ ನಿಲ್ದಾಣಗಳನ್ನು ಕೇಂದ್ರ ಸರಕಾರ ಪಿಪಿಪಿ ಮಾದರಿ ನೆಪದಲ್ಲಿ ಖಾಸಗಿಗೆ ನೀಡಲು ಪ್ರಕ್ರಿಯೆ ಆರಂಭಿಸಿದೆ. ವಾರಣಾಸಿ, ಅಮೃತಸರ, ಭುಬನೇಶ್ವರ್, ರಾಯ್ಪುರ್, ಇಂದೋರ್ ಮತ್ತು ತಿರುಚ್ಚಿ ವಿಮಾನ ನಿಲ್ದಾಣಗಳ ಅಭಿವೃದ್ಧಿಗಾಗಿ ಖಾಸಗಿ ಕಂಪನಿಗೆ ವಹಿಸಲಿದೆ. ಇವು ಕೂಡ ಅದಾನಿ ಸಂಸ್ಥೆಯ ಪಾಲಾದರೆ, ಭಾರತದಲ್ಲಿ ಬಹುತೇಕ ವಿಮಾನ ನಿಲ್ದಾಣಗಳ ನಿರ್ವಹಣೆ ಹೊಣೆಯನ್ನು ಅದಾನಿಗೆ ವಹಿಸಿದಂತಾಗುತ್ತದೆ. ಅದಾನಿ ಕಂಪನಿಯೂ ಭಾರತದಲ್ಲಿ ಏರ್ಪೋರ್ಟ್ ನಿರ್ವಹಣೆ ಹೊಣೆ ಹೊತ್ತ ದೈತ್ಯ ಕಂಪನಿಯಾಗಿ ಹೊರಹೊಮ್ಮಲಿದೆ.
ದೇಶದ ಒಟ್ಟು 12 ವಿಮಾನ ನಿಲ್ದಾಣಗಳನ್ನು ಖಾಸಗಿ ಸಹಭಾಗಿತ್ವದಲ್ಲಿ ಅಭಿವೃದ್ಧಿ ಪಡಿಸಲಿದ್ದು 13 ಸಾವಿರ ಕೋಟಿ ಹೂಡಿಕೆ ನಿರೀಕ್ಷೆ ಇದೆ ಎಂದು ವಿಮಾನ ಸಚಿವಾಲಯ ತಿಳಿಸಿದೆ.
he Adani Group is all set to take over operation and management of Mangaluru International Airport on October 31, as per the announcement by Airports Authority of India (AAI) on Thursday. Following the pandemic, taking over the airport was delayed by the Adani Group.
02-03-26 09:19 pm
HK News Staffer
ಗಲ್ಫ್ ಯುದ್ಧ; ಬಳ್ಳಾರಿಯಿಂದ ದುಬೈ ಟೂರ್ ತೆರಳಿದ್ದ 5...
01-03-26 09:20 pm
ಅಯತೊಲ್ಲಾ ಖಮೇನಿ ಹತ್ಯೆ ; ಚಿಕ್ಕಬಳ್ಳಾಪುರದ ಅಲೀಪುರದ...
01-03-26 05:16 pm
ಮಡಿಕೇರಿ ; ಕಾಡಾನೆ ದಾಳಿಗೆ ಪಿಯುಸಿ ವಿದ್ಯಾರ್ಥಿನಿ ಬ...
01-03-26 04:59 pm
ರಾಜ್ಯ ಮುಸ್ಲಿಮರಿಗೆ ಸ್ವರ್ಗ, ಹಿಂದುಗಳಿಗೆ ನರಕವಾಗಿದ...
01-03-26 04:56 pm
03-03-26 04:30 pm
HK News Staffer
ಊಟಕ್ಕೂ ಹಣವಿಲ್ಲ, ದಯವಿಟ್ಟು ಸಹಾಯ ಮಾಡಿ..! ಮಾಸ್ಕೋ...
03-03-26 04:14 pm
ಗಲ್ಫ್ ಉದ್ವಿಗ್ನ ; ವಿವಿಧೆಡೆ ಸಿಲುಕಿರುವ ಭಾರತೀಯರನ್...
03-03-26 04:11 pm
ಗಲ್ಫ್ ದೇಶಗಳ ತೈಲ ಘಟಕಗಳೇ ಟಾರ್ಗೆಟ್ ; ಇರಾನ್ ಕ್ಷಿಪ...
03-03-26 12:26 pm
ಗಲ್ಫ್ ಯುದ್ಧ ಹೊಡೆತ ; 80 ಡಾಲರ್ ದಾಟಿದ ಕಚ್ಚಾ ತೈಲದ...
02-03-26 09:23 pm
03-03-26 03:10 pm
HK News Staffer
ನಿಷ್ಠಾವಂತ ಆರೆಸ್ಸೆಸ್ ಕಾರ್ಯಕರ್ತ, ಮಂಗಳೂರಿನ ಬಿಜೆಪ...
03-03-26 02:39 pm
ನಾಲ್ಕು ವರ್ಷಗಳ ಪ್ರೀತಿ ನಿರಾಕರಿಸಿದ ಪ್ರೇಯಸಿ; ವಿರಸ...
03-03-26 10:37 am
ಪಾಂಡೇಶ್ವರ ಲೆವೆಲ್ ಕ್ರಾಸಿಂಗ್ ರಸ್ತೆ ಚತುಷ್ಪಥ ಅಭ...
02-03-26 10:06 pm
ಉಳ್ಳಾಲ ಮಸೀದಿ ಬಳಿ ಬಾಂಬ್ ಸ್ಫೋಟಿಸುತ್ತೇನೆಂದು ಪ್ರಚ...
02-03-26 07:57 pm
28-02-26 11:12 am
Mangalore Staffer
Mangalore Cybercrime,Fraud, Arrest: ಸ್ನೇಹಿತನಿ...
27-02-26 09:23 pm
Mangalore, Car Street, Fight: ನಡು ರಸ್ತೆಯಲ್ಲಿ...
27-02-26 01:32 pm
Shivamogga Fraud, Police: ಸೈಬರ್ ಅಪರಾಧಕ್ಕೆ ಬಳಸ...
27-02-26 12:34 pm
ಅಮೆರಿಕದ ಷೇರು ಹೆಸರಿನಲ್ಲಿ 1.77 ಕೋಟಿ ರೂ. ಹೂಡಿಕೆ...
26-02-26 11:04 pm