ಬ್ರೇಕಿಂಗ್ ನ್ಯೂಸ್
01-01-24 09:55 pm Giridhar Shetty, Mangaluru ಕರಾವಳಿ
ಮಂಗಳೂರು, ಜ.1: ಲೋಕಸಭೆ ಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಬಗ್ಗೆ ಕಾಂಗ್ರೆಸಿನಲ್ಲಿ ಒಳಗಿಂದೊಳಗೆ ಲೆಕ್ಕಾಚಾರ ನಡೆದಿದೆ. ದಕ್ಷಿಣ ಕನ್ನಡ ಮತ್ತು ಉಡುಪಿ ಕ್ಷೇತ್ರದಲ್ಲಿ ಬಹುತೇಕ ಬಂಟ, ಬಿಲ್ಲವರಿಗೆ ಟಿಕೆಟ್ ಕೊಡುವುದು ವಾಡಿಕೆ ಆಗಿರುವುದರಿಂದ ಈ ಬಾರಿಯೂ ಇದೇ ಸಮುದಾಯಕ್ಕೆ ಟಿಕೆಟ್ ಸಿಗುವುದು ಖಚಿತ. ಆದರೆ ಈ ಎರಡು ಕ್ಷೇತ್ರಗಳನ್ನು ಕಾಂಗ್ರೆಸ್ ಆಟಕ್ಕುಂಟು ಲೆಕ್ಕಕ್ಕಿಲ್ಲ ಅನ್ನುವ ರೀತಿ ಪರಿಗಣಿಸಿದಂತಿದೆ. ಲೋಕಸಭೆ ಸೀಟು ಗೆಲ್ಲಬೇಕೆಂದು ಈ ಭಾಗದ ಕಾಂಗ್ರೆಸ್ ನಾಯಕರು ಲೆಕ್ಕ ಹಾಕಿದಂತಿಲ್ಲ.
ಉಡುಪಿ ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದಲ್ಲಿ ಬಿಲ್ಲವ, ಬಂಟ, ಗೌಡ ಮತ್ತು ಮೊಗವೀರ ಸಮುದಾಯದ ಮತಗಳೇ ಅಧಿಕ. ಈ ಹಿಂದೆ ಲೋಕಸಭೆ ಸ್ಪರ್ಧಿಸಿದ್ದ ಪ್ರಮೋದ್ ಮಧ್ವರಾಜ್ ಈಗ ಬಿಜೆಪಿಯಲ್ಲಿದ್ದಾರೆ. ಹಿಂದೊಮ್ಮೆ ಉಪ ಚುನಾವಣೆಯಲ್ಲಿ ಸಂಸದರಾಗಿ ಆಯ್ಕೆಯಾಗಿದ್ದ ಜಯಪ್ರಕಾಶ್ ಹೆಗ್ಡೆ ಅವರೂ ಬಿಜೆಪಿಯಲ್ಲಿದ್ದಾರೆ. ಹೀಗಾಗಿ ಕಾಂಗ್ರೆಸಿಗೆ ಅಲ್ಲಿ ನಾಯಕರೂ ಇಲ್ಲ, ಸ್ಪರ್ಧಿಸಿದರೆ ಗೆಲ್ಲುತ್ತೇನೆಂಬ ಭರವಸೆ ಇದ್ದವರೂ ಇಲ್ಲ. ಹಾಗಾಗಿ, ಚಾರ್ಮ್ ಇರುವ ಹೆಗ್ಡೆ ಅವರನ್ನು ಬಿಜೆಪಿಯಿಂದ ಕರೆತಂದು ಲೋಕಸಭೆ ಕಣಕ್ಕಿಳಿಸಬೇಕೆಂಬ ಒತ್ತಡ ಕಾಂಗ್ರೆಸ್ ವಲಯದಲ್ಲಿದೆ. ಈ ನೆಲೆಯಲ್ಲಿ ನೋಡಿದರೆ, ಜನತಾ ಪರಿವಾರದಲ್ಲಿದ್ದಾಗಲೇ ಸಿದ್ದರಾಮಯ್ಯ ಜೊತೆಗೆ ಸ್ನೇಹ ಇರುವುದರಿಂದ ಜಯಪ್ರಕಾಶ್ ಹೆಗ್ಡೆ ಅವರನ್ನು ಪಿಕ್ ಮಾಡುವ ಸಾಧ್ಯತೆ ಹೆಚ್ಚು. ಉಡುಪಿಯಲ್ಲಿ ಕಳೆದ ಎರಡು ಬಾರಿಯ ಚುನಾವಣೆಗಳಲ್ಲಿ ಕಾಂಗ್ರೆಸಿಗೆ ಶಾಸಕರೇ ಇಲ್ಲದಿರುವುದರಿಂದ ಪಕ್ಷ ನೆಲೆ ಕಳಕೊಂಡ ಸ್ಥಿತಿಯಲ್ಲಿದೆ. ಆದರೆ ಈ ಬಾರಿ ರಾಜ್ಯದಲ್ಲಿ ಪಕ್ಷ ಅಧಿಕಾರದಲ್ಲಿರುವುದು ಪ್ಲಸ್ ಪಾಯಿಂಟ್. ಜಯಪ್ರಕಾಶ್ ಹೆಗ್ಡೆ ಅಭ್ಯರ್ಥಿಯಾದರೆ, ಕಾಂಗ್ರೆಸಿಗೆ ಮತ್ತೆ ಹಳೆ ಖದರ್ ಬರಬಹುದು ಅನ್ನುವ ಲೆಕ್ಕಾಚಾರ ಇದೆ.
ಇದೇ ವೇಳೆ, ಕೊಪ್ಪ ಮೂಲದ ಸುಧೀರ್ ಕುಮಾರ್ ಮರೊಳ್ಳಿ ಅವರ ಹೆಸರೂ ಕೇಳಿಬರುತ್ತಿದ್ದು, ಕಾಂಗ್ರೆಸಿನಲ್ಲಿರುವ ಅಪರೂಪದ ಪ್ರಖರ ಭಾಷಣಕಾರ ಮತ್ತು ಬಂಟ ಸಮುದಾಯಕ್ಕೆ ಸೇರಿರುವುದರಿಂದ ಅವರಿಗೆ ಟಿಕೆಟ್ ಸಿಕ್ಕರೂ ಅಚ್ಚರಿಯಿಲ್ಲ ಎನ್ನುವ ಮಾತೂ ಕೇಳಿಬರುತ್ತಿದೆ. ಕರಾವಳಿ ಭಾಗದ ಉಡುಪಿ ಜಿಲ್ಲೆಯಲ್ಲಿ ಐದು ಕ್ಷೇತ್ರಗಳಲ್ಲಿ ಬಿಜೆಪಿ ಶಾಸಕರಿದ್ದರೆ, ಚಿಕ್ಕಮಗಳೂರಿನ ಐದು ಕ್ಷೇತ್ರಗಳಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ. ಉಡುಪಿ ಭಾಗದಲ್ಲಿ ಸಂಘಟನಾತ್ಮಕವಾಗಿ ಕೊರತೆ ಇದ್ದರೂ, ಪಕ್ಷಕ್ಕೆ ಮತ ಪ್ರಾಬಲ್ಯ ಇದೆ. ಎರಡೂ ಭಾಗದಲ್ಲಿ ಅಸೆಂಬ್ಲಿಯಲ್ಲಿ ಬಿದ್ದ ಮತಗಳೇ ಕ್ರೋಡೀಕರಣಗೊಂಡರೆ, ಕಾಂಗ್ರೆಸ್ ಗೆಲ್ಲುವುದು ಕಷ್ಟವಾಗಲ್ಲ ಎಂಬ ಗಣಿತ ಇದೆ. ಆದರೆ ಎತ್ತು ಏರಿಗೆಳೆದರೆ, ಕೋಣ ನೀರಿಗೆಳೆಯುವ ಪ್ರವೃತ್ತಿಯೇ ಪಕ್ಷವನ್ನು ಮಣ್ಣು ಮುಕ್ಕಿಸಿದ್ದು ಅನ್ನೋದು ಅಲ್ಲಿನ ಇತಿಹಾಸ.
ದಕ್ಷಿಣ ಕನ್ನಡ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಲು ಹಲವರಿಗೆ ಆಸೆ ಇದ್ದರೂ, ಪಕ್ಷವನ್ನು ಗೆಲ್ಲಿಸುವ ಉಮೇದು ಇದ್ದಂತಿಲ್ಲ. ಯಾರಾದ್ರೂ ಅಭ್ಯರ್ಥಿ ಆದರೆ ಮುಗೀತು ಅನ್ನುವಷ್ಟರ ಮಟ್ಟಿಗೆ ಕಾಂಗ್ರೆಸಿಗರ ಮನಸ್ಥಿತಿಯಿದೆ. ಒಂದೆಡೆ ಹಿಂದುತ್ವ, ಮೋದಿ ಫ್ಯಾಕ್ಟರ್ ಹೆಚ್ಚು ಚಾಲ್ತಿಯಲ್ಲಿ ಇರುವುದರಿಂದ ಅದನ್ನೆದುರಿಸಿ ಕಾಂಗ್ರೆಸಿಗರು ಗೆಲ್ಲಬೇಕೆಂದು ನುಗ್ಗುವ ಛಾತಿ ತೋರಿಸುತ್ತಿಲ್ಲ. ಕಾಂಗ್ರೆಸ್ ಜಿಲ್ಲಾಧ್ಯಕ್ಷ ಹರೀಶ್ ಕುಮಾರ್, ಮಾಜಿ ಸಚಿವ ರಮಾನಾಥ ರೈ, ಬಿಲ್ಲವ ಮುಖಂಡ ಪದ್ಮರಾಜ್ ರಾಮಯ್ಯ ಜೊತೆಗೆ ವಿನಯಕುಮಾರ್ ಸೊರಕೆ ಹೆಸರೂ ಆಕಾಂಕ್ಷಿಗಳ ಪಟ್ಟಿಯಲ್ಲಿ ಕೇಳಿಬರುತ್ತಿದೆ. ಸೊರಕೆ ಸ್ಪರ್ಧೆ ಬಗ್ಗೆ ಮಂಗಳೂರಿನ ಕಾಂಗ್ರೆಸಿಗರಲ್ಲೇ ಅಸಮಾಧಾನ ಇದೆ. ಉಡುಪಿಯಲ್ಲಿ ಪಕ್ಷದ ಕತೆಯನ್ನೇ ಮುಗಿಸಿದ್ದಾರೆ, ಇನ್ನು ಇಲ್ಲಿ ಬಂದು ಏನು ಮಾಡುತ್ತಾರೆ ಅನ್ನುವ ವೈಮನಸ್ಸು ಇದೆ. ಹಾಲಿ ಸಂಸದ ನಳಿನ್ ಕುಮಾರ್ ಬಗ್ಗೆ ಕ್ಷೇತ್ರದಲ್ಲಿ ಅಸಹನೆ ಇದ್ದರೂ, ಅದನ್ನು ಎನ್ ಕ್ಯಾಶ್ ಮಾಡಿಕೊಳ್ಳುವುದು, ಗೆಲ್ಲಲೇಬೇಕೆಂದು ಕಾರ್ಯಕರ್ತರನ್ನು ಹುರಿದುಂಬಿಸುವ ಕೆಲಸ ಇನ್ನೂ ಆಗಿಲ್ಲ.
ಈ ಹಿಂದೆ ಬಿಲ್ಲವರಾದ ಜನಾರ್ದನ ಪೂಜಾರಿ(1977, 1980, 1984, 1989) ಸತತ ನಾಲ್ಕು ಬಾರಿ ಪ್ರತಿನಿಧಿಸಿದ್ದ ದಕ್ಷಿಣ ಕನ್ನಡ ಕ್ಷೇತ್ರವನ್ನು 1991ರ ಚುನಾವಣೆ ಬಳಿಕ ನಿರಂತರವಾಗಿ ಬಿಜೆಪಿ ಗೆಲ್ಲುತ್ತ ಬಂದಿದೆ. ಕಾಂಗ್ರೆಸ್ ಸೋಲಲು ಬಿಜೆಪಿ ವರ್ಚಸ್ಸು ಹೆಚ್ಚಿದ್ದು ಎಷ್ಟು ಕಾರಣವೋ, ಪಕ್ಷದ ಒಳಗಿನ ಗುಂಪುಗಾರಿಕೆ, ಒಳಏಟು ಕೂಡ ಅಷ್ಟೇ ಕಾರಣವಾಗಿತ್ತು. ಇಡೀ ಜಿಲ್ಲೆಯಲ್ಲಿ ನಾಲ್ಕೂವರೆ ಲಕ್ಷದಷ್ಟು ಅಲ್ಪಸಂಖ್ಯಾತ ಮತಗಳಿದ್ದರೂ, ಅವನ್ನು ಸೆಳೆದುಕೊಳ್ಳುವ ಅಥವಾ ಅತಿ ಹೆಚ್ಚು ಪ್ರಾಬಲ್ಯ ಇರುವ ಬಿಲ್ಲವ ಮತಗಳನ್ನು ಆಕರ್ಷಿಸುವ ಯತ್ನ ಆಗಿಯೇ ಇಲ್ಲ. ಈ ಸಲ ಮಂಗಳೂರಿನವರೇ ಸ್ಪೀಕರ್ ಆಗಿದ್ದರೂ, ರಾಜ್ಯದಲ್ಲಿ ಕಾಂಗ್ರೆಸ್ ಅಧಿಕಾರದಲ್ಲಿದ್ದರೂ ಜಿಲ್ಲೆಯಲ್ಲಿ ಪಕ್ಷವನ್ನು ಗಟ್ಟಿಗೊಳಿಸುವಲ್ಲಿ ನಾಯಕರು ಮುಂದಾಗಿಲ್ಲ. ತಾನೇ ಉಸ್ತುವಾರಿ ಅನ್ನುವಂತೆ ಜಿಲ್ಲೆಯ ಬೇಕು- ಬೇಡಗಳಲ್ಲಿ ಕೈಯಾಡಿಸುವಷ್ಟು ಉತ್ಸಾಹವನ್ನು ಖಾದರ್ ಪಕ್ಷದ ಮೇಲೆ ತೋರಿದ್ದಿಲ್ಲ. ಇದೇ ಕಾರಣಕ್ಕೆ ಪೂಜಾರಿ ಅವರನ್ನು ಸೋಲಿಸಿದ ಕಾಲದಿಂದಲೂ ಈವರೆಗೂ ಕಾಂಗ್ರೆಸಿನಲ್ಲಿ ಲೋಕಸಭೆಗೆ ಗೆಲ್ಲುವ ಕುದುರೆಗಳ ಲೆಕ್ಕಾಚಾರವೇ ನಡೆದಿಲ್ಲ. ನಾಯಕರ ಗುಂಪುಗಾರಿಕೆ, ಸ್ಥಳೀಯ ನಾಯಕರ ಅಡ್ಜಸ್ಟ್ ಮೆಂಟ್ ರಾಜಕಾರಣವೇ ಪಕ್ಷಕ್ಕೆ ಮುಳುವಾಗಿದೆ.
Congress in Mangalore seems least interested in contesting the MP elections. Congress in Mangalore seems least interested in contesting the MP electionsThe Congress has decided to select candidates for the upcoming Lok Sabha elections. Since it is customary to give tickets to most of the Banta and Billavas in Dakshina Kannada and Udupi constituencies, it is certain that the same community will get tickets this time too.
01-08-25 02:55 pm
Bangalore Correspondent
ಧರ್ಮ 'ಸ್ಥಳ' ಕೇಸ್ ; ಪಾಯಿಂಟ್ ನಂ.1ರಲ್ಲಿ ಸಿಕ್ಕ...
01-08-25 01:31 pm
ಕೆಆರ್ ಐಡಿಎಲ್ ನಿಗಮವನ್ನೇ ಗುಡಿಸಿ ಹಾಕಿದ ಗುಮಾಸ್ತ !...
01-08-25 11:47 am
ಪಾಕಿಸ್ತಾನದಿಂದಲೇ ಭಾರತವನ್ನು ಸ್ಫೋಟಿಸುತ್ತೇನೆ ! ಗೋ...
31-07-25 11:20 pm
Kolar woman blood group: ಕೋಲಾರದ ಮಹಿಳೆಯಲ್ಲಿ ವಿ...
31-07-25 10:20 am
01-08-25 11:44 am
HK News Desk
2008ರ ಮಾಲೆಗಾಂವ್ ಸ್ಫೋಟ ಪ್ರಕರಣ ; ಸಾಧ್ವಿ ಪ್ರಜ್ಞ...
31-07-25 10:08 pm
Trump, Modi, Export Tariff: ಸ್ನೇಹಿತ ಎನ್ನುತ್ತಲ...
31-07-25 09:51 am
ಪಾಕಿಸ್ತಾನದ ಡಿಜಿಎಂಒ ಕರೆ ಮಾಡಿ ದಾಳಿ ನಿಲ್ಲಿಸಲು ಮನ...
30-07-25 09:06 am
ಜಾರ್ಖಂಡ್ ನಲ್ಲಿ ಭೀಕರ ರಸ್ತೆ ಅಪಘಾತ ; ಸಿಲಿಂಡರ್...
29-07-25 11:58 am
01-08-25 11:45 am
Mangalore Correspondent
ಬಂಟ್ವಾಳ ಪಿಎಸ್ಐ ಕೀರಪ್ಪ ಕಾಂಬಳೆ ಆತ್ಮಹತ್ಯೆ ಪ್ರಕರಣ...
31-07-25 11:16 pm
MCC Bank to Inaugurate 20th Branch in Byndoor...
31-07-25 10:14 pm
KMC Hospital Attavar Trains Armed Forces Doct...
31-07-25 09:14 pm
Mangalore KMC Attavar, Workshop: ಅತ್ತಾವರ ಕೆಎಂ...
31-07-25 09:05 pm
01-08-25 05:05 pm
Mangalore Correspondent
13 ವರ್ಷದ ಬಾಲಕನ ಕಿಡ್ನಾಪ್ ; 5 ಲಕ್ಷ ರೂ. ಹಣ ತರುವಷ...
01-08-25 04:27 pm
Tumakuru Crime, Principal Arrest: ತುಮಕೂರು ; ಹ...
01-08-25 02:31 pm
Mangalore Crime, Police: ಅಪ್ರಾಪ್ತ ಬಾಲಕಿಯನ್ನು...
31-07-25 06:04 pm
Bangalore Cyber Fraud: ಉದ್ಯೋಗಿಯನ್ನ ನಂಬಿ ಲ್ಯಾಪ...
30-07-25 10:42 pm