ಬ್ರೇಕಿಂಗ್ ನ್ಯೂಸ್
16-01-26 12:31 pm Mangalore Correspondent ಕರಾವಳಿ
ಉಳ್ಳಾಲ, ಜ.16 : ದೇಶದ ಪ್ರಸಿದ್ಧ ಶಾಪಿಂಗ್ ಮಾಲ್ ಡಿಮಾರ್ಟ್ ಸಂಸ್ಥೆಯ ಶಾಖೆಯೊಂದು ಉಳ್ಳಾಲ ತಾಲೂಕಿನ ಕುಂಪಲ- ಬೈಪಾಸ್ ಎಂಬಲ್ಲಿ ನಿರ್ಮಾಣಗೊಳ್ಳುತ್ತಿದ್ದು, ಶಾಪಿಂಗ್ ಮಾಲ್ ನಲ್ಲಿ ಉದ್ಯೋಗಾವಕಾಶ ಇರೋದಾಗಿ ಯಾರೋ ವಿಘ್ನ ಸಂತೋಷಿಗಳು ಜಾಲತಾಣಗಳಲ್ಲಿ ಜಾಹಿರಾತು ಹರಿಯಬಿಟ್ಟಿದ್ದು, ಉದ್ಯೋಗ ಅರಸಿ ಮಾಲ್ ಕಡೆಗೆ ಧಾವಿಸಿ ಬಂದ ನೂರಾರು ಮುಗ್ಧ ಜನರಿಗೆ ಅಲ್ಲಿನ ಸೆಕ್ಯುರಿಟಿ ಸಿಬ್ಬಂದಿಯ ಮಾತು ಕೇಳಿ ಶಾಕ್ ಆಗಿದೆ.
ಸಾಮಾಜಿಕ ಜಾಲತಾಣವನ್ನ ಎಷ್ಟರ ಮಟ್ಟಿಗೆ ದುರುಪಯೋಗ ಪಡಿಸಬಹುದೆಂಬುದಕ್ಕೆ ಕುಂಪಲ -ಬೈಪಾಸಿನ ನೂತನ ಡಿಮಾರ್ಟ್ ನಲ್ಲಿ ಉದ್ಯೋಗಾವಕಾಶದ ಜಾಹಿರಾತು ಹರಿಯಬಿಟ್ಟ ಬೆಳವಣಿಗೆಯೇ ನಿದರ್ಶನ. ಜಾಲತಾಣಗಳಲ್ಲಿ ಇಂತಹ ಕಂಟೆಂಟ್ ಗಳನ್ನ ಸೃಷ್ಟಿಸುವವರಿಗೆ ಮನಸ್ಸಿಗೆ ಒಂದಷ್ಟು ವಿಘ್ನ ಸಂತೋಷ ಲಭಿಸಬಹುದು. ಆದರೆ ಇಂತಹ ಸುಳ್ಳು ಜಾಹಿರಾತುಗಳನ್ನೇ ನಂಬಿ ಕೆಲಸ ಅರಸಿ ಬಂದವರ ಗೋಳನ್ನು ಕೇಳುವಾಗ ಎಂಥವರಿಗೂ ಬೇಸರವಾಗದೆ ಇರಲಾರದು.




ಕುಂಪಲ- ಬೈಪಾಸ್ ನಲ್ಲಿ ನಿರ್ಮಾಣಗೊಳ್ಳುತ್ತಿರುವ ಡಿಮಾರ್ಟ್ ಶಾಪಿಂಗ್ ಮಾಲ್ ಗೆ ಸಿಬ್ಬಂದಿಗಳು ಬೇಕಾಗಿದ್ದು, ಅನಕ್ಷರಸ್ಥರಿಂದ ಹಿಡಿದು ಪದವೀಧರರಿಗೂ ಉದ್ಯೋಗಾವಕಾಶಗಳು ಲಭ್ಯವಿದೆಯೆಂಬ ಜಾಹಿರಾತನ್ನು ಹರಿಯಬಿಟ್ಟಿದ್ದು ಕಳೆದ ನಾಲ್ಕೈದು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿಶೇಷವೆಂದರೆ ಜಾಹಿರಾತಿನಲ್ಲಿ ಡಿಮಾರ್ಟ್ ಸಂಸ್ಥೆಗೆ ಸಂಬಂಧಿಸಿದ ಯಾವುದೇ ಫೋನ್ ನಂಬರ್, ಈಮೇಲ್ ವಿಳಾಸಗಳನ್ನು ಹಾಕಿಲ್ಲ. ಅನೇಕ ಮಂದಿ ಸುಶಿಕ್ಷಿತರು ಕೂಡ ಇಂತಹ ಜಾಹಿರಾತುಗಳನ್ನ ಸರಿಯಾಗಿ ಪರಿಶೀಲಿಸದೆ ವಿವಿಧ ವಾಟ್ಸಪ್ ಗ್ರೂಪ್ಗಳಿಗೆ ನೂಕಿದ್ದಲ್ಲದೆ, ತಮ್ಮ ಸ್ಟೇಟಸ್ ಗಳಿಗೂ ಅಪ್ಲೋಡ್ ಮಾಡಿದ್ದರು.
ಇದನ್ನೇ ನಂಬಿದ ಮುಗ್ಧ ಜನರು ನಿನ್ನೆಯಿಂದ ಬೈಪಾಸಿನ ಡಿಮಾರ್ಟ್ ಎದುರಲ್ಲಿ ಜಮಾಯಿಸಿದ್ದು ಕೆಲಸಕ್ಕಾಗಿ ಮುಗಿ ಬಿದ್ದಿದ್ದಾರೆ. ಅಸಲಿಗೆ ಡಿಮಾರ್ಟ್ ಸಂಸ್ಥೆಯು ಉದ್ಯೋಗಾವಕಾಶದ ಬಗ್ಗೆ ಯಾವುದೇ ಜಾಹಿರಾತು ನೀಡಿಲ್ಲವೆಂದು ಉದ್ಯೋಗ ಅರಸಿ ಬಂದ ಜನರಲ್ಲಿ ಡಿಮಾರ್ಟ್ ಸೆಕ್ಯುರಿಟಿ ಸಿಬ್ಬಂದಿ ಸಮಜಾಯಿಷಿ ನೀಡಿ ಬೇಸ್ತು ಬಿದ್ದಿದ್ದಾರೆ.
ಇದೇ ಫೆಬ್ರವರಿ ತಿಂಗಳ ಕೊನೆಯೊಳಗೆ ಡಿಮಾರ್ಟ್ ಶಾಪಿಂಗ್ ಮಾಲ್ ವಹಿವಾಟು ಆರಂಭಿಸಲಿದ್ದು, ಕಟ್ಟಡದ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ. ಅದಾಗಲೇ ನಿನ್ನೆಯಿಂದ ಸುಮಾರು ಐನೂರಕ್ಕೂ ಅಧಿಕ ಮಂದಿ ಇಲ್ಲಿಗೆ ಉದ್ಯೋಗ ಅರಸಿ ಬರುತ್ತಲೇ ಇದ್ದಾರೆಂದು ಡಿಮಾರ್ಟ್ ಶಾಪಿಂಗ್ ಮಾಲ್ ನ ಸೆಕ್ಯುರಿಟಿ ಸಿಬ್ಬಂದಿ ತಿಳಿಸಿದ್ದಾರೆ.
A false job advertisement circulating on social media claiming employment opportunities at the upcoming D-Mart shopping mall near Kumpala Bypass in Ullal taluk has left hundreds of job seekers shocked and disappointed. Misled by viral posts promising jobs for everyone from unskilled workers to graduates, people rushed to the construction site over the past few days. However, D-Mart security personnel clarified that the company has not issued any recruitment notification so far.
15-02-26 10:38 pm
HK News Desk
Nelamangala Accident, 5 Killed: ಹೊಸಕೋಟೆ ದುರಂತ...
15-02-26 10:22 am
ಲೋಕಾಯುಕ್ತ ಬಲೆಗೆ ಬಿದ್ದ 'ಜನರ ಧನ ನುಂಗಿದ ಜನಾರ್ಧನ'...
13-02-26 10:45 pm
Hoskote Accident, Latest Update: ಹೊಸಕೋಟೆ ಅಪಘಾ...
13-02-26 09:18 pm
ಹೊಸಕೋಟೆ ಬಳಿ ಸರಣಿ ಅಪಘಾತ ; ಕ್ಯಾಂಟರ್ ಡ್ರೈವರ್ ಎಡವ...
13-02-26 10:41 am
16-02-26 12:53 pm
HK Staffer
ಮಗನಿಲ್ಲದ ಮೇಲೆ ದುಬಾರಿ ಕಾರು ಯಾಕೆ ? ಆತನ ಸಮಾಧಿ ಪಕ...
15-02-26 04:01 pm
ಖಲಿಸ್ತಾನಿ ಉಗ್ರನ ಹತ್ಯೆಗೆ ಸಂಚು ; ತಪ್ಪೊಪ್ಪಿಕೊಂಡ...
14-02-26 10:55 pm
ಬಾಂಗ್ಲಾದಲ್ಲಿ ಚುನಾವಣೆ ; ಒಂದು ಸ್ಥಾನ ಗೆದ್ದ ಬಿಜೆಪ...
14-02-26 08:13 pm
ಜಗತ್ತು ನೋಡುವ ಮುನ್ನವೇ ಕಣ್ಮುಚ್ಚಿ 5 ಮಕ್ಕಳಿಗೆ ಜೀವ...
14-02-26 01:51 pm
16-02-26 11:13 pm
Mangaluru Staffer
ಬಿಕರ್ನಕಟ್ಟೆ ಸರ್ಕಾರಿ ಶಾಲೆಯಲ್ಲಿ ರಂಗಮಂಟಪ ಲೋಕಾರ್ಪ...
16-02-26 11:06 pm
ಹಂಪಿಯ ಮರ್ಯಾದೆ ಹರಾಜು ಹಾಕಿದ್ದ ಪ್ರಕರಣ ; ಪ್ರವಾಸಿ...
16-02-26 11:02 pm
Manjunath Bhandary MLC: ಕೆಪಿಸಿಸಿ ಕಾರ್ಯಾಧ್ಯಕ್ಷ...
16-02-26 01:48 pm
Thokottu Accident, Mangalore: ಖಾಸಗಿ ಶಾಲಾ ಬಸ್ಸ...
16-02-26 09:33 am
16-02-26 04:01 pm
HK News Desk
Manish kottary, Marriage Fraud, Mangalore: ಮ್...
15-02-26 05:08 pm
ಪ್ರೇಮಿಗಳ ದಿನವೇ ದುರಂತ ಅಂತ್ಯ ಕಂಡ ಜೋಡಿ ; ಪ್ರೀತಿಗ...
14-02-26 10:47 pm
Indian Bank Gold Robbery, Bangalore: ಬೆಂಗಳೂರು...
14-02-26 07:37 pm
Mangalore Drugs, CCB Police: ಬೆಂಗಳೂರಿನಿಂದ ಎಂಡ...
13-02-26 03:35 pm