ಬ್ರೇಕಿಂಗ್ ನ್ಯೂಸ್
21-01-26 11:53 am Mangalore Correspondent ಕರಾವಳಿ
ಮಂಗಳೂರು, ಜ.21 : ಧರ್ಮಸ್ಥಳ ಗ್ರಾಮದ ಸಾಮೂಹಿಕ ಶವ ದಫನ ಪ್ರಕರಣದಲ್ಲಿ ತನಿಖೆ ನಡೆಸುತ್ತಿರವ ಎಸ್ಐಟಿ ಅಧಿಕಾರಿಗಳು ಬಂಗ್ಲೆಗುಡ್ಡೆ ಕಾಡಿನಲ್ಲಿ ಪತ್ತೆಯಾದ ಏಳು ಅಸ್ಥಿಪಂಜರಗಳನ್ನು ವಿಧಿವಿಜ್ಞಾನ ಪ್ರಯೋಗಕ್ಕಾಗಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಿದ್ದಾರೆ.
ಸೌಜನ್ಯಾ ಮಾವ ವಿಠಲ ಗೌಡ ನೀಡಿದ ದೂರಿನಂತೆ 2025ರ ಸೆ.17, 18ರಂದು ಬಂಗ್ಲೆಗುಡ್ಡೆ ಕಾಡಿನಲ್ಲಿ ಶೋಧ ಕಾರ್ಯ ನಡೆಸಲಾಗಿತ್ತು. ಈ ಸಂದರ್ಭ ಪತ್ತೆಯಾದ ಅಸ್ಥಿಪಂಜರಗಳನ್ನು ಸುರಕ್ಷಿತವಾಗಿ ಇರಿಸಲಾಗಿತ್ತು. ಐದು ತಿಂಗಳ ಬಳಿಕ ಅಸ್ಥಿಪಂಜರದ ಪೂರ್ವಾಪರ ತಿಳಿಯಲು ಎಫ್ಎಸ್ಎಲ್ ಪರೀಕ್ಷೆಗೆ ಕಳುಹಿಸಲಾಗಿದೆ.
ಬೆಳ್ತಂಗಡಿ ಎಸ್ಐಟಿ ಅಧಿಕಾರಿಗಳು ಧರ್ಮಸ್ಥಳ ಗ್ರಾಮದ ನೇತ್ರಾವತಿಯ ಬಂಗ್ಲೆಗುಡ್ಡೆಯಲ್ಲಿ ಸೆ.17ರಂದು ಐದು ಮತ್ತು ಸೆ.18ರಂದು ಎರಡು ಸೇರಿ ಒಟ್ಟು ಏಳು ಅಸ್ಥಿಪಂಜರಗಳನ್ನು ವಶಪಡಿಸಿಕೊಡಿದ್ದರು. ಜ.20ರಂದು ಬೆಳಗ್ಗೆ ಬೆಳ್ತಂಗಡಿ ಎಸ್ಐಟಿ ಕಚೇರಿಯಿಂದ ಹೆಚ್ಚಿನ ತನಿಖೆಗಾಗಿ ಬೆಂಗಳೂರಿನಲ್ಲಿರುವ ಎಫ್ಎಸ್ಎಲ್ ಕಚೇರಿಗೆ ರವಾನೆ ಮಾಡಲಾಗಿದೆ.
ಬಂಗ್ಲೆಗುಡ್ಡೆ ಕಾಡಿನಲ್ಲಿ ನೂರಾರು ಅಸ್ಥಿಪಂಜರಗಳಿವೆ ಎಂದು ಸೌಜನ್ಯಾ ಮಾವ ವಿಠಲ ಗೌಡ ಹೇಳಿಕೆ ನೀಡಿದ್ದರು. ಎಸ್ಐಟಿ ಈ ಬಗ್ಗೆ ಯಾವುದೇ ಶೋಧ ನಡೆಸುತ್ತಿಲ್ಲ ಎಂದು ಪುರಂದರ ಗೌಡ ಎಂಬವರು ಹೈಕೋರ್ಟ್ನಲ್ಲಿ ಅರ್ಜಿ ಸಲ್ಲಿಸಿದ್ದರು. ಈ ಸಂಬಂಧ ನ್ಯಾಯಾಲಯ ಉತ್ತರ ನೀಡುವಂತೆ ಸೂಚಿಸಿದ್ದು ಬಳಿಕ ಎಸ್ಐಟಿಗೆ ನೋಟಿಸ್ ಜಾರಿ ಮಾಡಿತ್ತು. ಇದರಂತೆ ಎಸ್ಐಟಿ ವಿಠಲ ಗೌಡ ಉಪಸ್ಥಿತಿಯಲ್ಲಿ ಶೋಧ ಕಾರ್ಯಾಚರಣೆ ನಡೆಸಿತ್ತು. ಪ್ರಕರಣದ ಮೂಲ ದೂರುದಾರ, ಸಾಕ್ಷಿದಾರ ಚಿನ್ನಯ್ಯನ ಅನುಪಸ್ಥಿತಿಯಲ್ಲಿ ಈ ಶೋಧ ಕಾರ್ಯ ನಡೆದಿತ್ತು. ಈ ಸಂದರ್ಭ ನೆಲ ಅಗೆದು ಶೋಧ ನಡೆಸಿರಲಿಲ್ಲ. ನೆಲದ ಮೇಲ್ಮೈನಲ್ಲಿ ಇರಿಸಿದ್ದ ಮಾನವ ತಲೆಬುರುಡೆ, ಎಲುಬಿನ ಚೂರುಗಳನ್ನು ಸಂಗ್ರಹಿಸಲಾಗಿತ್ತು. ಚಿನ್ನಯ್ಯ ನೀಡಿದ ದೂರಿನಂತೆ, ಜು.28ರಿಂದ ಆ.13ರ ವರೆಗೆ ಸುಮಾರು 17 ಕಡೆ ಅಗೆದಿದ್ದ ಎಸ್ಐಟಿಗೆ ಚಿನ್ನಯ್ಯ ಹೇಳಿದಷ್ಟು ಪ್ರಮಾಣದ ಅಸ್ಥಿಪಂಜರ ಸಿಕ್ಕಿರಲಿಲ್ಲ.
The Special Investigation Team (SIT), probing the alleged mass burial case in Dharmasthala village, has sent seven human skeletons recovered from the Banglegudde forest to the Forensic Science Laboratory (FSL) in Bengaluru for detailed examination.
15-02-26 10:38 pm
HK News Desk
Nelamangala Accident, 5 Killed: ಹೊಸಕೋಟೆ ದುರಂತ...
15-02-26 10:22 am
ಲೋಕಾಯುಕ್ತ ಬಲೆಗೆ ಬಿದ್ದ 'ಜನರ ಧನ ನುಂಗಿದ ಜನಾರ್ಧನ'...
13-02-26 10:45 pm
Hoskote Accident, Latest Update: ಹೊಸಕೋಟೆ ಅಪಘಾ...
13-02-26 09:18 pm
ಹೊಸಕೋಟೆ ಬಳಿ ಸರಣಿ ಅಪಘಾತ ; ಕ್ಯಾಂಟರ್ ಡ್ರೈವರ್ ಎಡವ...
13-02-26 10:41 am
16-02-26 12:53 pm
HK Staffer
ಮಗನಿಲ್ಲದ ಮೇಲೆ ದುಬಾರಿ ಕಾರು ಯಾಕೆ ? ಆತನ ಸಮಾಧಿ ಪಕ...
15-02-26 04:01 pm
ಖಲಿಸ್ತಾನಿ ಉಗ್ರನ ಹತ್ಯೆಗೆ ಸಂಚು ; ತಪ್ಪೊಪ್ಪಿಕೊಂಡ...
14-02-26 10:55 pm
ಬಾಂಗ್ಲಾದಲ್ಲಿ ಚುನಾವಣೆ ; ಒಂದು ಸ್ಥಾನ ಗೆದ್ದ ಬಿಜೆಪ...
14-02-26 08:13 pm
ಜಗತ್ತು ನೋಡುವ ಮುನ್ನವೇ ಕಣ್ಮುಚ್ಚಿ 5 ಮಕ್ಕಳಿಗೆ ಜೀವ...
14-02-26 01:51 pm
16-02-26 11:13 pm
Mangaluru Staffer
ಬಿಕರ್ನಕಟ್ಟೆ ಸರ್ಕಾರಿ ಶಾಲೆಯಲ್ಲಿ ರಂಗಮಂಟಪ ಲೋಕಾರ್ಪ...
16-02-26 11:06 pm
ಹಂಪಿಯ ಮರ್ಯಾದೆ ಹರಾಜು ಹಾಕಿದ್ದ ಪ್ರಕರಣ ; ಪ್ರವಾಸಿ...
16-02-26 11:02 pm
Manjunath Bhandary MLC: ಕೆಪಿಸಿಸಿ ಕಾರ್ಯಾಧ್ಯಕ್ಷ...
16-02-26 01:48 pm
Thokottu Accident, Mangalore: ಖಾಸಗಿ ಶಾಲಾ ಬಸ್ಸ...
16-02-26 09:33 am
16-02-26 04:01 pm
HK News Desk
Manish kottary, Marriage Fraud, Mangalore: ಮ್...
15-02-26 05:08 pm
ಪ್ರೇಮಿಗಳ ದಿನವೇ ದುರಂತ ಅಂತ್ಯ ಕಂಡ ಜೋಡಿ ; ಪ್ರೀತಿಗ...
14-02-26 10:47 pm
Indian Bank Gold Robbery, Bangalore: ಬೆಂಗಳೂರು...
14-02-26 07:37 pm
Mangalore Drugs, CCB Police: ಬೆಂಗಳೂರಿನಿಂದ ಎಂಡ...
13-02-26 03:35 pm