ಬ್ರೇಕಿಂಗ್ ನ್ಯೂಸ್
03-02-26 11:14 pm Mangaluru Staffer ಕರಾವಳಿ
ಕಾಸರಗೋಡು, ಫೆ.3: ರಾಷ್ಟ್ರೀಯ ಹೆದ್ದಾರಿ 66ರ ಕುಂಬ್ಳೆಯ ಅರಿಕ್ಕಾಡಿಯಲ್ಲಿ ಆರಂಭಿಸಲಾಗಿದ್ದ ಟೋಲ್ ಪ್ಲಾಜಾವನ್ನು ಮುಚ್ಚುವಂತೆ ಕೇಂದ್ರ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯ ಮಂಗಳವಾರ ಆದೇಶಿಸಿದೆ. ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ವಸೂಲಿ ಆರಂಭಿಸಿದ 22 ದಿನಗಳ ಬಳಿಕ ವ್ಯಾಪಕ ಜನವಿರೋಧ ಹಿನ್ನೆಲೆಯಲ್ಲಿ ಈ ನಿರ್ಧಾರ ಹೊರಬಿದ್ದಿದೆ.
ಜನವರಿ 12 ರಂದು ಟೋಲ್ ಸಂಗ್ರಹ ಆರಂಭವಾದ ದಿನದಿಂದಲೇ ಅರಿಕ್ಕಾಡಿ ಟೋಲ್ ಪ್ಲಾಜಾ ವಿರುದ್ಧ ವ್ಯಾಪಕ ಪ್ರತಿಭಟನೆಗಳು ವ್ಯಕ್ತವಾಗಿದ್ದವು. ಮಂಜೇಶ್ವರ ಶಾಸಕ ಎ.ಕೆ.ಎಂ. ಅಶ್ರಫ್ ನೇತೃತ್ವದ ಕ್ರಿಯಾ ಸಮಿತಿ ಎರಡನೇ ದಿನದಿಂದಲೇ ಅನಿರ್ದಿಷ್ಟಾವಧಿ ಧರಣಿ ಆರಂಭಿಸಿತ್ತು. ಬಿಜೆಪಿಯನ್ನು ಹೊರತುಪಡಿಸಿ ಉಳಿದೆಲ್ಲಾ ಪ್ರಮುಖ ರಾಜಕೀಯ ಪಕ್ಷಗಳು ಈ ಆಂದೋಲನಕ್ಕೆ ಬೆಂಬಲ ನೀಡಿದ್ದವು. ಜನವರಿ 14ರಂದು ರಾತ್ರಿ ಸಾವಿರಾರು ಮಂದಿ ಏಕಾಏಕಿ ನುಗ್ಗಿ ಬಂದು ಟೋಲ್ ಗೇಟನ್ನು ಒದ್ದು ದಾಂಧಲೆ ನಡೆಸಿದ್ದರು.
ರಾಷ್ಟ್ರೀಯ ಹೆದ್ದಾರಿ ಶುಲ್ಕ ನಿಯಮದ ಪ್ರಕಾರ, ಎರಡು ಟೋಲ್ ಪ್ಲಾಜಾಗಳ ನಡುವೆ ಕನಿಷ್ಠ 60 ಕಿ.ಮೀ. ಅಂತರವಿರಬೇಕು. ಆದರೆ ಅರಿಕ್ಕಾಡಿ ಟೋಲ್ ಪ್ಲಾಜಾವು ತಲಪಾಡಿ ಟೋಲ್ನಿಂದ 22 ಕಿ.ಮೀ. ಅಂತರದಲ್ಲಿದೆ. ಹೀಗಾಗಿ ಇದು ಜನರ ಮೇಲಿನ ಹೊರೆ ಎಂಬ ನೆಲೆಯಲ್ಲಿ ವಿರೋಧ ವ್ಯಕ್ತವಾಗಿತ್ತು.
ಕುಂಬ್ಳೆ ಪೇಟೆಗೆ ಕೇವಲ 1 ಕಿ.ಮೀ. ದೂರದಲ್ಲಿ ಈ ಪ್ಲಾಜಾ ಇರುವುದರಿಂದ ಮತ್ತು ಸ್ಥಳೀಯ ಪ್ರಯಾಣಿಕರಿಗೆ ಇದು ದೊಡ್ಡ ಹೊರೆಯಾಗಿದ್ದರಿಂದ ಜನರು ಪಕ್ಷ ಭೇದ ಮರೆತು ವಿರೋಧಿಸಿದ್ದರು. ಇದೇ ವೇಳೆ, ಕ್ರಿಯಾ ಸಮಿತಿ ಸದಸ್ಯರು ಹೈಕೋರ್ಟ್ ಮೆಟ್ಟಿಲೇರಿ ಹೋರಾಟ ಆರಂಭಿಸಿದ್ದರು. ಇದರ ಜೊತೆಗೆ, ಬಿಜೆಪಿ ಜಿಲ್ಲಾ ಸಮಿತಿ ಮುಖಂಡರು ಕೇಂದ್ರ ಸಾರಿಗೆ ಸಚಿವರಿಗೂ ಮನವಿ ಮಾಡಿ ಟೋಲ್ ಅಕ್ರಮದ ಬಗ್ಗೆ ಮನವರಿಕೆ ಮಾಡಿಸಿದ್ದರು. ಇಂದು ಸಾರಿಗೆ ಇಲಾಖೆ ಟೋಲ್ ಗೇಟ್ ಬಂದ್ ಮಾಡುವ ನಿರ್ಧಾರ ಪ್ರಕಟಿಸಿದ ಬೆನ್ನಲ್ಲೇ ಬಿಜೆಪಿ ಮುಖಂಡ ಸುರೇಂದ್ರನ್ ತನ್ನ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದು ಸಚಿವ ಗಡ್ಕರಿಯವರನ್ನು ಅಭಿನಂದಿಸಿದ್ದಾರೆ.
ಇದೇ ವೇಳೆ, ಬಿಜೆಪಿಯಲ್ಲು ಕ್ರೆಡಿಟ್ ಪಡೆಯಲು ಜಿಲ್ಲಾ ಸಮಿತಿ ಮುಖಂಡರು ಜಿಲ್ಲಾಧ್ಯಕ್ಷೆ ಅಶ್ವಿನಿ ನೇತೃತ್ವದಲ್ಲಿ ಕುಂಬಳೆಯಿಂದ ಟೋಲ್ ಗೇಟ್ ವರೆಗೆ ಮಾರ್ಚ್ ನಡೆಸಿ ಜೈಕಾರ ಹಾಕಿದ್ದಾರೆ. ಟೋಲ್ ಕೇಂದ್ರವನ್ನು ಮುಚ್ಚಿರುವುದರಿಂದ ಕಾಸರಗೋಡು ಮತ್ತು ಮಂಗಳೂರು ನಡುವೆ ಸಂಚರಿಸುವ ಸಾವಿರಾರು ವಾಹನ ಸವಾರರಿಗೆ ನಿರಾಳತೆ ಸಿಕ್ಕಂತಾಗಿದೆ.
The toll plaza set up at Arikkady in Kumbla along National Highway 66 has been ordered shut by the Union Ministry of Road Transport and Highways. The decision came just 22 days after toll collection began, following widespread public anger and sustained protests.
15-02-26 10:38 pm
HK News Desk
Nelamangala Accident, 5 Killed: ಹೊಸಕೋಟೆ ದುರಂತ...
15-02-26 10:22 am
ಲೋಕಾಯುಕ್ತ ಬಲೆಗೆ ಬಿದ್ದ 'ಜನರ ಧನ ನುಂಗಿದ ಜನಾರ್ಧನ'...
13-02-26 10:45 pm
Hoskote Accident, Latest Update: ಹೊಸಕೋಟೆ ಅಪಘಾ...
13-02-26 09:18 pm
ಹೊಸಕೋಟೆ ಬಳಿ ಸರಣಿ ಅಪಘಾತ ; ಕ್ಯಾಂಟರ್ ಡ್ರೈವರ್ ಎಡವ...
13-02-26 10:41 am
16-02-26 12:53 pm
HK Staffer
ಮಗನಿಲ್ಲದ ಮೇಲೆ ದುಬಾರಿ ಕಾರು ಯಾಕೆ ? ಆತನ ಸಮಾಧಿ ಪಕ...
15-02-26 04:01 pm
ಖಲಿಸ್ತಾನಿ ಉಗ್ರನ ಹತ್ಯೆಗೆ ಸಂಚು ; ತಪ್ಪೊಪ್ಪಿಕೊಂಡ...
14-02-26 10:55 pm
ಬಾಂಗ್ಲಾದಲ್ಲಿ ಚುನಾವಣೆ ; ಒಂದು ಸ್ಥಾನ ಗೆದ್ದ ಬಿಜೆಪ...
14-02-26 08:13 pm
ಜಗತ್ತು ನೋಡುವ ಮುನ್ನವೇ ಕಣ್ಮುಚ್ಚಿ 5 ಮಕ್ಕಳಿಗೆ ಜೀವ...
14-02-26 01:51 pm
16-02-26 11:13 pm
Mangaluru Staffer
ಬಿಕರ್ನಕಟ್ಟೆ ಸರ್ಕಾರಿ ಶಾಲೆಯಲ್ಲಿ ರಂಗಮಂಟಪ ಲೋಕಾರ್ಪ...
16-02-26 11:06 pm
ಹಂಪಿಯ ಮರ್ಯಾದೆ ಹರಾಜು ಹಾಕಿದ್ದ ಪ್ರಕರಣ ; ಪ್ರವಾಸಿ...
16-02-26 11:02 pm
Manjunath Bhandary MLC: ಕೆಪಿಸಿಸಿ ಕಾರ್ಯಾಧ್ಯಕ್ಷ...
16-02-26 01:48 pm
Thokottu Accident, Mangalore: ಖಾಸಗಿ ಶಾಲಾ ಬಸ್ಸ...
16-02-26 09:33 am
16-02-26 04:01 pm
HK News Desk
Manish kottary, Marriage Fraud, Mangalore: ಮ್...
15-02-26 05:08 pm
ಪ್ರೇಮಿಗಳ ದಿನವೇ ದುರಂತ ಅಂತ್ಯ ಕಂಡ ಜೋಡಿ ; ಪ್ರೀತಿಗ...
14-02-26 10:47 pm
Indian Bank Gold Robbery, Bangalore: ಬೆಂಗಳೂರು...
14-02-26 07:37 pm
Mangalore Drugs, CCB Police: ಬೆಂಗಳೂರಿನಿಂದ ಎಂಡ...
13-02-26 03:35 pm