ಬ್ರೇಕಿಂಗ್ ನ್ಯೂಸ್
01-09-26 11:17 pm HK News Desk ಕರಾವಳಿ
ಪುತ್ತೂರು, ಸೆ.1 ಕಾಂಗ್ರೆಸಿನಲ್ಲಿ ಸಿಟ್ಟುಗೊಂಡು ಸಾಮಾಜಿಕ ಕಾರ್ಯಕರ್ತನಾಗಿ ಬದಲಾಗಿರುವ ಹಕೀಂ ಕೂರ್ನಡ್ಕ ತಮ್ಮ ಬಗ್ಗೆ ಜಾಲತಾಣದಲ್ಲಿ ಕೇವಲವಾಗಿ ಟೀಕಿಸಿದ್ದಾರೆ, ಶಾಸಕ ಅಶೋಕ ರೈ ಪರ ಇರುವ ಮುಸ್ಲಿಮರ ಬಗ್ಗೆ ಅವಹೇಳನ ಮಾಡಿದ್ದಾರೆಂದು ಕಾಂಗ್ರೆಸಿಗರದ್ದೇ ಒಂದು ಗುಂಪು ಹಕೀಂ ಮೇಲೆ ಹಲ್ಲೆಗೆ ಯತ್ನಿಸಿ ಘೆರಾವ್ ಹಾಕಿದ ಘಟನೆ ಪುತ್ತೂರಿನಲ್ಲಿ ನಡೆದಿದ್ದು ಬಳಿಕ ಪೊಲೀಸರೇ ಮಧ್ಯಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ.
ಪುತ್ತೂರು ಪ್ರೆಸ್ ಕ್ಲಬ್ ನಲ್ಲಿ ಸುದ್ದಿಗೋಷ್ಟಿ ನಡೆಸುತ್ತಾರೆಂದು ತಿಳಿದು ಹಕೀಂ ಕೂರ್ನಡ್ಕ ವಿರುದ್ಧ ಶಾಸಕ ಅಶೋಕ್ ರೈ ಬೆಂಬಲಿಗರು ಎನ್ನಲಾದ ಗುಂಪು ಅಲ್ಲಿ ಸೇರಿದ್ದು ಪೊಲೀಸರ ಎದುರಲ್ಲೇ ಅವಾಚ್ಯ ಪದಗಳಿಂದ ನಿಂದಿಸಿ ತೀವ್ರ ಜಟಾಪಟಿ ನಡೆಸಿದ್ದಾರೆ. 50ಕ್ಕೂ ಹೆಚ್ಚು ಮಂದಿ ಆಗಮಿಸಿದ್ದು ಹಕೀಂ ಕೂರ್ನಡ್ಕ ವಿರುದ್ಧ ಘೇರಾವ್ ಹಾಕಿದ್ದಾರೆ. ಮುಸ್ಲಿಂ ಮಹಿಳೆಯರೂ ಈ ಗುಂಪಿನಲ್ಲಿ ಬಂದಿದ್ದು ವಿಶೇಷ.

ಹಕೀಂ ಕೂರ್ನಡ್ಕ ಪುತ್ತೂರಿನ ಪ್ರೆಸ್ ಕ್ಲಬ್ ನಲ್ಲಿ ಪತ್ರಿಕಾಗೋಷ್ಠಿ ಕರೆದಿದ್ದು ಇದಕ್ಕಾಗಿ ಅಲ್ಲಿಗೆ ಬಂದಿದ್ದರು. ಆದರೆ ಎರಡು ದಿನಗಳ ಹಿಂದೆ ಶಾಸಕ ಅಶೋಕ್ ರೈ ವಿರುದ್ಧ ಈತ ಆಡಿಯೋ ಹರಿಬಿಟ್ಟಿದ್ದು ಅದರಲ್ಲಿ ಶಾಸಕರ ವೈಫಲ್ಯವನ್ನ ಹೇಳಿದ್ದಲ್ಲದೆ, ಅಭಿಮಾನಿಗಳ ಬಗ್ಗೆ ಅವಹೇಳನ ಮಾಡಿದ್ದರು. ಶಾಸಕ ಅಶೋಕ ರೈ ತಮ್ಮ ಶಾಸಕರ ಕಚೇರಿಯಲ್ಲಿ ಪ್ರತಿ ಸೋಮವಾರ ಉಚಿತ ಊಟ ಏರ್ಪಡಿಸಿದ್ದು ನಿನ್ನೆ ಊಟಕ್ಕೆ ಬಂದಿದ್ದ ಮಹಿಳೆಯರಿಗೂ ವಾಟ್ಸಪ್ ಗ್ರೂಪಿನಲ್ಲಿ ನಿಂದನೆ ಮಾಡಿದ್ದರು ಎನ್ನಲಾಗಿದೆ. ಇದರಿಂದ ಸಿಟ್ಟಾಗಿದ್ದ ಅಶೋಕ್ ಬೆಂಬಲಿಗರು ಪ್ರೆಸ್ ಕ್ಲಬ್ ಹೊರಗಡೆ ಗಲಾಟೆ ಮಾಡಿದ್ದಾರೆ.

ಬಳಿಕ ಶಾಸಕ ಅಶೋಕ್ ರೈಯವರೂ ಸ್ಥಳಕ್ಕೆ ಬಂದಿದ್ದು ಪೊಲೀಸರು ಬಂದು ಹಕೀಂ ಅವರನ್ನು ಸ್ಥಳದಿಂದ ಕರೆದೊಯ್ದಿದ್ದಾರೆ. ಈ ವೇಳೆ, ಕೆಲವರು ಹಲ್ಲೆಗೂ ಮುಂದಾಗಿದ್ದು ಪೊಲೀಸರು ಅವರನ್ನು ದೂರ ತಳ್ಳಿ ಹಕೀಂ ಅವರನ್ನು ಜೀಪಿನಲ್ಲಿ ಕೂರಿಸಿ ಅಲ್ಲಿಂದ ಪಾರು ಮಾಡಿದ್ದಾರೆ. ಬಳಿಕ ಪೊಲೀಸ್ ಭದ್ರತೆ ಮೂಲಕ ಮನೆಗೆ ತಲುಪಿಸಿದ್ದಾರೆ. ಅಶೋಕ್ ರೈ ಬೆಂಬಲಿಗರನ್ನ ಪೊಲೀಸರು ಚದುರಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಇದೇ ವೇಳೆ,ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಅಶೋಕ ರೈ, ತನಗೂ ಆ ವ್ಯಕ್ತಿಗೂ ಯಾವುದೇ ದ್ವೇಷ ಇಲ್ಲ. ನನ್ನ ಬಗ್ಗೆಯೂ ನಿಂದನೆ, ಅವಹೇಳನ ಮಾಡಿದ್ದಾರೆ. ಆದರೆ ನಾವು ರಾಜಕಾರಣಿಗಳು, ಟೀಕೆಗಳನ್ನೂ ಕೇಳುತ್ತೇವೆ. ಸುಮ್ಮನಿರುತ್ತೇವೆ. ಹಾಗಂತ ಜನಸಾಮಾನ್ಯರು ಹಾಗೆಯೇ ಬಿಡುತ್ತಾರೆಯೇ. ಅವರ ಬಗ್ಗೆ ಅವಹೇಳನ, ನಿಂದನೆ ಮಾಡಿದ್ದಕ್ಕೆ ಪ್ರಶ್ನಿಸಲು ಬಂದಿದ್ದಾರೆ. ನಾನು ಗಲಾಟೆ ಬೇಡ ಎಂದು ಹೇಳಲು ಬಂದಿದ್ದೇನೆ. ಇಲ್ಲಿ ಸೇರಿದವರೆಲ್ಲ ನಮ್ಮದೇ ಜನರು. ಇಲ್ಲಿ ಮುಸ್ಲಿಂ ಮಹಿಳೆಯರಿದ್ದು ಅವರೂ ಹಕೀಂ ವಿರುದ್ಧ ಇಲ್ಲಿ ಬಂದಿದ್ದಾರೆ. ಪೊಲೀಸರು ಆತನಿಗೆ ಬುದ್ಧಿ ಕಲಿಸಬೇಕು. ಬೇರೇನೂ ಬೇಕಾಗಿಲ್ಲ ಎಂದು ಹೇಳಿದರು.
15-09-26 09:13 pm
HK News Staffer
Imran Pasha, Pratap Simha: ನಿನ್ನಂತಹ ಒಂದು ಲಕ್...
15-09-26 04:46 pm
ಬಿಜೆಪಿಯವರಿಗೆ ಕೊಬ್ಬು ಹೆಚ್ಚಾಗಿದೆ ಅದಕ್ಕೆ ಬಳ್ಳಾರಿ...
12-09-26 09:40 pm
ಯತ್ನಾಳ್ ಆರೋಪಿಸಿದರೂ ವಿಜಯೇಂದ್ರ ಮನೆ ಮೇಲೆ ಇಡಿ, ಐಟ...
12-09-26 09:38 pm
ಮಸೀದಿ ಮುಂದೆ ಗಣೇಶ ಮೆರವಣಿಗೆ ಮಾಡಿದ್ರೆ ಗ್ರಹಚಾರ ಬಿ...
12-09-26 09:36 pm
13-09-26 09:00 pm
HK News
80s ಫೋಟೋ ಟ್ರೆಂಡ್ಗೆ ಮಾರುಹೋಗಿದ್ದೀರಾ? ಹುಷಾರ್ ;...
12-09-26 01:10 pm
ಕಾಶ್ಮೀರಿ ಪಂಡಿತರಿಗೆ ಮತ್ತೆ ಬೆದರಿಕೆ ; ಉದ್ಯೋಗ ಬಿಟ...
10-09-26 01:23 pm
ನೇಪಾಳ ಪ್ರವಾಹ ; ಹತ್ತು ದಿನಗಳ ಬಳಿಕ ಜಲವಿದ್ಯುತ್ ಸು...
05-09-26 11:55 am
ಮುಂದಿನ ಒಂದು ವರ್ಷದಲ್ಲಿ ಒಂದು ಸಾವಿರ ವಿದ್ಯಾಭಾರತಿ...
04-09-26 08:14 pm
15-09-26 09:18 pm
HK News Staffer
Satish Kumpala, Manglore: ಕಾಟಾಚಾರಕ್ಕೆ ಸಂಪುಟ ಸ...
15-09-26 07:46 pm
U T Khader, KDP Meeting, Bharath Sheety, Hari...
15-09-26 06:52 pm
Aravind Bolar Controversy, Mangalore: “ಎಂಕ್ ಮ...
15-09-26 05:29 pm
U T Khader, KDP Meeting, Sudheer Reddy Ips: :...
15-09-26 05:27 pm
15-09-26 09:19 pm
HK News Staffer
Mangalore Blackmail: ಫೋಟೋ ಮಾರ್ಫ್ ಮಾಡಿ ಬ್ಲ್ಯಾಕ...
15-09-26 12:55 pm
Manyda Accident: ಗಣೇಶ ಹಬ್ಬ ಮುಗಿಸಿ ಬೆಂಗಳೂರಿಗೆ...
15-09-26 12:48 pm
ಗಣೇಶ ಹಬ್ಬದ ಬೆನ್ನಲ್ಲೇ ಕರ್ನಾಟಕದಲ್ಲಿ ಸರಣಿ ದುರಂತ:...
15-09-26 12:41 pm
ಗಣೇಶೋತ್ಸವದ ಸಂಭ್ರಮದ ನಡುವೆ ಭೀಕರ ದುರಂತ: ಅಗ್ನಿ ಅವ...
15-09-26 10:31 am