ಹ್ವಾಯ್, ನಿಂಗೆ ಕನ್ನಡ ಬತ್ತಿಲ್ಲೇ.. ? ಹೀಗೊಂದು 'ಕನ್ನಡ' ಪ್ರೇಮ !

08-10-20 12:21 pm       Bangalore Correspondent   ಸ್ಪೆಷಲ್ ಕೆಫೆ

ಕುಂದಾಪುರ ಮೂಲದ ದಂಪತಿಗಳು ತಮ್ಮ ಮಗುವಿಗೆ ಕನ್ನಡ ಎನ್ನುವ ಹೆಸರಿಡುವ ಮೂಲಕ ಕನ್ನಡ ಭಾಷೆಯ ಮೇಲಿನ ಅಭಿಮಾನವನ್ನು ವ್ಯಕ್ತಪಡಿಸಿದ್ದಾರೆ.

ಬೆಂಗಳೂರು, ಅಕ್ಟೋಬರ್ 08: ರಾಜಧಾನಿಯಲ್ಲಿ ಕನ್ನಡ ಮರೆಯಾಗುತ್ತಿದೆ, ಇಂಗ್ಲಿಷ್ ಬಳಸದೆ ಕನ್ನಡ ಮಾತಾಡಬೇಕು ಎಂದು ಬೊಗಳೆ ಬಿಡೋರ ಮಧ್ಯೆ ಇಲ್ಲೊಬ್ಬ ದಂಪತಿ ತಮ್ಮ ಮಗುವಿಗೆ ಕನ್ನಡ ಎನ್ನುವ ಹೆಸರಿಟ್ಟು ಸುದ್ದಿಯಾಗಿದ್ದಾರೆ. 

ಉಡುಪಿ ಜಿಲ್ಲೆಯ ಕುಂದಾಪುರ ಮೂಲದ ಪ್ರತಾಪ್ ಶೆಟ್ಟಿ ಹಾಗೂ ಪ್ರತಿಮಾ ಶೆಟ್ಟಿ ದಂಪತಿ ತಮ್ಮ ಹೆಣ್ಣು ಮಗುವಿಗೆ ಕನ್ನಡ ಶೆಟ್ಟಿ ಎಂದು ಹೆಸರಿಟ್ಟಿದ್ದಾರೆ. 25 ವರ್ಷಗಳಿಂದಲೂ ಬೆಂಗಳೂರಿನಲ್ಲಿ ನೆಲೆಸಿರುವ ಪ್ರತಾಪ್ ಶೆಟ್ಟಿ ಕನ್ನಡ ಭಾಷೆಯ ಮೇಲಿನ ಅಭಿಮಾನವನ್ನು ಈ ಮೂಲಕ ವ್ಯಕ್ತಪಡಿಸಿದ್ದಾರೆ. 

ಮರೆಯಾಗುತ್ತಿರುವ ಕನ್ನಡ ಭಾಷೆಯ ಮೇಲಿನ ಅಭಿಮಾನವನ್ನು ಉಳಿಸುವ ನಿಟ್ಟಿನಲ್ಲಿ ಮಗುವಿಗೆ ಕನ್ನಡಾಂಬೆಯ ಹೆಸರನ್ನಿಟ್ಟಿದ್ದೇವೆ. ಮಗುವಿನಲ್ಲಿ ಕನ್ನಡದ ಕಂಪು ಪಸರಿಸುವ ಮಾರ್ಗವನ್ನು ಕಲಿಸುತ್ತೇವೆ ಎಂದು ತಂದೆ ಪ್ರತಾಪ್ ಶೆಟ್ಟಿ ಹೇಳುತ್ತಾರೆ. ಪ್ರತಾಪ್ ಶೆಟ್ಟಿ , ಬೆಂಗಳೂರಿನಲ್ಲಿ ಇಂಟೀರಿಯರ್ ಡಿಸೈನರ್ ಆಗಿದ್ದು ಆಸುಪಾಸಿನ ಇಂಗ್ಲಿಷ್ ಮಕ್ಕಳ ನಡುವೆ ತಮ್ಮ ಮಗುವನ್ನು ವಿಭಿನ್ನವಾಗಿ ಬೆಳೆಸಬೇಕೆಂಬ ಆಲೋಚನೆಯಲ್ಲಿದ್ದಾರೆ.