ಈಕೆಯ ಕಾಲೇ ಒಂದೂವರೆ ಮೀಟರ್ ; ಹೀಗೂ ಗಿನ್ನೆಸ್ ರೆಕಾರ್ಡ್ !

09-10-20 02:36 pm       Headline Karnataka News Network   ಸ್ಪೆಷಲ್ ಕೆಫೆ

ಮ್ಯಾಸಿ ಕುರಿನ್ ಎಂಬಾಕೆ ತನ್ನ ಉದ್ದನೆಯ ಕಾಲುಗಳಿಂದಾಗಿ ಜಗತ್ತಿನ ಅತಿ ಉದ್ದದ ಕಾಲು ಹೊಂದಿರುವ ಮಹಿಳೆ ಎಂಬ ಹೆಗ್ಗಳಿಕೆ ಪಡೆದಿದ್ದಾಳೆ.

ಟೆಕ್ಸಾಸ್, ಅಕ್ಟೋಬರ್ 09: ಕೆಲವರು ಏನೆಲ್ಲಾ ಸಾಧನೆ ಮಾಡಿಕೊಂಡು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಮಾಡುತ್ತಾರೆ. ಇಲ್ಲೊಬ್ಬಳು 17ರ ಹರೆಯದ ಹುಡುಗಿ ತನ್ನ ಉದ್ದ ಕಾಲುಗಳಿಂದಲೇ ಗಿನ್ನೆಸ್ ಪುಸ್ತಕ ಸೇರಿದ್ದಾಳೆ. ಅಮೆರಿಕದ ಟೆಕ್ಸಾಸ್ ನಗರದ ನಿವಾಸಿ ಮ್ಯಾಸಿ ಕುರಿನ್ ಎಂಬಾಕೆ ತನ್ನ ಉದ್ದನೆಯ ಕಾಲುಗಳಿಂದಾಗಿ ಜಗತ್ತಿನ ಅತಿ ಉದ್ದದ ಕಾಲು ಹೊಂದಿರುವ ಮಹಿಳೆ ಎಂಬ ಹೆಗ್ಗಳಿಕೆ ಪಡೆದಿದ್ದಾಳೆ.

ಈ ಹುಡುಗಿಯ ಕಾಲು ಸರಿಸುಮಾರು ಒಂದೂವರೆ ಮೀಟರ್ ಇದೆ. ಎಡದ ಕಾಲು 135.267 ಸೆಂಟಿ ಮೀಟರ್ ಇದ್ದರೆ, ಬಲದ ಕಾಲು 134.3 ಸೆಂಟಿ ಮೀಟರ್ ಉದ್ದವಿದೆ ಎಂದು ಗಿನ್ನೆಸ್ ವರ್ಲ್ಡ್ ರೆಕಾರ್ಡ್ ಸಮಿತಿ ಹೇಳಿದೆ. ಹುಡುಗಿ ನಿಂತರೆ ಆರಡಿ ಹತ್ತು ಇಂಚು ಇದ್ದರೆ, ಒಟ್ಟು ದೇಹದಲ್ಲಿ 60 ಶೇಕಡಾ ಉದ್ದ ಕಾಲುಗಳದ್ದೇ ಆಗಿದೆ ಎಂದು ಸಮಿತಿ ಹೇಳಿಕೆಯಲ್ಲಿ ತಿಳಿಸಿದೆ. ತನ್ನ ಉದ್ದ ಕಾಲಿನ ಬಗ್ಗೆ ಮ್ಯಾಸಿ ಕುರಿನ್ ಹೆಮ್ಮೆ ವ್ಯಕ್ತಪಡಿಸುತ್ತಿದ್ದು, ಉದ್ದನೆಯ ವ್ಯಕ್ತಿಗಳು ಕೀಳರಿಮೆ ಹೊಂದಬೇಡಿ ಎಂದು ಹೇಳುತ್ತಾಳೆ. 

A 17-year-old teenager from Texas, USA, has broken two world records thanks to her long legs. Maci Currin was certified by Guinness World Records as having the world's longest legs.