ರಾಮಮಂದಿರ ಶಿಲಾನ್ಯಾಸ : ಅಯೋಧ್ಯೆಯ ಪೂರ್ಣ ಕಥಾಹಂದರ ಇಲ್ಲಿದೆ

04-08-20 10:54 am       Special Correspondant   ಸ್ಪೆಷಲ್ ಕೆಫೆ

ಅಯೋಧ್ಯೆ ರಾಮ ಮಂದಿರ ವಿಚಾರ ಇಂದು ನಿನ್ನೆಯದಲ್ಲ. ಇದು ಶತಮಾನಗಳ ಹಳೆಯ ವಿವಾದವಾಗಿದೆ. ವಾದ -ವಿವಾದ, ಕಾನೂನು ಹೋರಾಟ , ಭೂ ವಿವಾದ ಹೀಗೆ ಎಲ್ಲವನ್ನೂ ಮೆಟ್ಟಿ ನಿಂತು ಇಂದು ಯಶಸ್ವಿಯಾಗಿ ಶಿಲಾನ್ಯಾಸದತ್ತ ಹೆಜ್ಜೆ ಇಟ್ಟಿರುವ ಪುಣ್ಯ ಭೂಮಿ ಅಯೋಧ್ಯೆಯ ಇತಿಹಾಸವನ್ನು ಕೆದಕಲೇಬೇಕಾಗಿದೆ.

ಅಯೋಧ್ಯೆ: ಹಿಂದೂಗಳು ಶತಮಾನಗಳಿಂದ ಕಾದು ಕುಳಿತಿದ್ದ ಆಯೋಧ್ಯೆ ರಾಮಮಂದಿರದ ಶಿಲಾನ್ಯಾಸ ಅಗಸ್ಟ್ 5 ಅಂದರೆ ನಾಳೆ ಈಡೇರಲಿದೆ. ಶ್ರೀರಾಮ ಜನಿಸಿದ ಮುಹೂರ್ತದಲ್ಲೇ ನಾಳೆ ಭೂಮಿಪೂಜೆ ನೆರವೇರಿಸಲಾಗುತ್ತದೆ ಎಂದು ಹೇಳಲಾಗಿದೆ. ಶ್ರೀ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಟ್ರಸ್ಟ್ ಹೇಳಿರುವ ಪ್ರಕಾರ 12.15 ರ ಸಮಯಕ್ಕೆ ಭೂಮಿ ಪೂಜೆ ನೆರವೇರಲಿದೆ.

ರಾಮ ಭೂಮಿಗಾಗಿ ದೇಶದ 2,000 ಪುಣ್ಯಕ್ಷೇತ್ರಗಳಿಂದ ಮಣ್ಣು ಸಂಗ್ರಹಿಸಿ ತರಲಾಗಿದೆ. ಹಾಗೇ 100 ಪವಿತ್ರ ನದಿಗಳ ನೀರನ್ನು ತರಲಾಗಿದೆ. ಇವುಗಳನ್ನು ರಾಮಮಂದಿರ ನಿರ್ಮಾಣದ ವೇಳೆ ಬಳಸಲಾಗುತ್ತದೆ.

ಇನ್ನು ಈ ಅಯೋಧ್ಯೆ ರಾಮ ಮಂದಿರ ವಿಚಾರ ಇಂದು ನಿನ್ನೆಯದಲ್ಲ. ಇದು ಶತಮಾನಗಳ ಹಳೆಯ ವಿವಾದವಾಗಿದೆ. ವಾದ -ವಿವಾದ, ಕಾನೂನು ಹೋರಾಟ , ಭೂ ವಿವಾದ ಹೀಗೆ ಎಲ್ಲವನ್ನೂ ಮೆಟ್ಟಿ ನಿಂತು ಇಂದು ಯಶಸ್ವಿಯಾಗಿ ಶಿಲಾನ್ಯಾಸದತ್ತ ಹೆಜ್ಜೆ ಇಟ್ಟಿರುವ ಪುಣ್ಯ ಭೂಮಿ ಅಯೋಧ್ಯೆಯ ಇತಿಹಾಸವನ್ನು ಕೆದಕಲೇಬೇಕಾಗಿದೆ.

ಈ ಅಯೋಧ್ಯೆ ರಾಮ ಮಂದಿರದವ್ಯಾಜ್ಯಗಳನ್ನು ನೋಡುತ್ತಾ ಹೋದರೆ, 

  • 1528 ರಲ್ಲಿ ಅಯೋಧ್ಯೆಯಲ್ಲಿ ಮೊಘಲ್ ಸಾಮ್ರಾಟ್ ಬಾಬರ್ ಕಮಾಂಡರ್ ಮಿರ್ ಬಾಕಿ ಬಾಬ್ರಿ ಮಸೀದಿ ನಿರ್ಮಾಣ ಮಾಡಿದ್ದರು. 
  • 1885 ರಲ್ಲಿ ಈ ವಿವಾದಗ್ರಸ್ತ ಭೂಮಿಯಲ್ಲಿ ಗೋಪುರ ನಿರ್ಮಾಣಕ್ಕೆ ಅವಕಾಶ ಕೋರಿ ಮಹಾಂತ ರಘುವೀರ್ ದಾಸ್ ಫೈಜಾಬಾದ್ ಜಿಲ್ಲಾ  ನ್ಯಾಯಾಲಯ ಮೆಟ್ಟಿಲೇರಿದ್ದರು. ಆದರೆ ಅವರ ಅರ್ಜಿ ತಿರಸ್ಖøತಗೊಂಡಿತ್ತು.
  • 1949 ರಲ್ಲಿ ಬಾಬ್ರಿ ಮಸೀದಿಯಲ್ಲಿ ರಾಮಲಲ್ಲಾ ವಿಗ್ರಹಗಳ ಪ್ರತಿಷ್ಠಾಪನೆ ಮಾಡಲಾಗಿತ್ತು.
  •  1950 ರಲ್ಲಿ ಈ ವಿಗ್ರಹಗಳ ಪೂಜೆಗೆ ಅನುಮತಿ ಕೋರಿ ಗೋಪಾಲ್ ಶಿಮ್ಲಾ ಹಾಗೂ ರಾಮಚಂದ್ರ ದಾಸ್ ರಿಂದ ಕೋರ್ಟ್‍ಗೆ ಅರ್ಜಿಗೆ ಸಲ್ಲಿಕೆ ಮಾಡಲಾಗಿತ್ತು. 
  • 1959 ರಲ್ಲಿ ಮತ್ತೆ ಜಾಗದ ಸ್ವಾಧೀನ ಕೋರಿ ನಿರ್ಮೋಹಿ ಅಖಾರರು ಅರ್ಜಿ ಸಲ್ಲಿಸಿದ್ದರು.
  • 1981 ರಲ್ಲಿ ಸುನ್ನಿ ವಕ್ಫ್ ಮಂಡಳಿಯಿಂದಲೂ ಜಾಗ ಒಡೆತನದ ಮನವಿ ಸಲ್ಲಿಕೆಯಾಗಿತ್ತು. 
  • 1986 ರಲ್ಲಿ ದೊಡ್ಡ ಮಟ್ಟದ ಬೆಳವಣಿಗೆ ಆಗಿ  ಈ ವಿವಾದಭರಿತ ಜಾಗದಲ್ಲಿ ಹಿಂದೂಗಳ ಪೂಜೆಗೆ ಅನುವು ಮಾಡಿಕೊಡಲು ಸರ್ಕಾರ ಆದೇಶ ಮಾಡಿತ್ತು. 
  • 1989 ರಲ್ಲಿ ಈ ಭೂಮಿಯ ವಿಷಯದಲ್ಲಿ ಯಥಾಸ್ಥಿತಿ ಕಾಯ್ದುಕೊಂಡು ಹೋಗುವಂತೆ ಅಲಹಾಬಾದ್ ಹೈಕೊರ್ಟ್ ಆದೇಶಿಸಿತ್ತು. 
  • 1990 ರಲ್ಲಿ ಬಿಜೆಪಿ ಮುಖಂಡ ಆಲ್ ಕೆ ಆಡ್ವಾಣಿ ದೇಶಾದ್ಯಂತ ಅಯೋಧ್ಯೆ ರಥ ಯಾತ್ರೆ ನಡೆಸಿದ್ದರು. ದೇಶದ ಹಿಂದೂಗಳನ್ನು ಭಾವನಾತ್ಮಕವಾಗಿ, ರಾಜಕೀಯ ಒಗ್ಗೂಡಿಸಿದ್ರು. 
  • 1992, ಡಿಸೆಂಬರ್ 6 ರಂದು ಬಾಬ್ರಿ ಮಸೀದಿಯ ದ್ವಂಸ ನಡೆಯಿತು. 
  • 2002 ರಲ್ಲಿ ಜಾಗದ ಒಡೆತನ ಯಾರಿಗೆ ಸೇರಿದ್ದು ಅನ್ನೋದರ ವ್ಯಾಜ್ಯದ ಕುರಿತು ಅಲಹಾಬಾದ್ ಹೈ ಕೋರ್ಟ್‍ನಲ್ಲಿ ವಿಚಾರಣೆ ನಡೆಯಿತು.
  • 2010 ರಲ್ಲಿ ಸುನ್ನಿ ವಕ್ಫ್ ಮಂಡಳಿ, ರಾಮ್ ಲಲ್ಲಾ ಮತ್ತು ನಿರ್ಮೋಹಿ ಅಖಾರ ಹೀಗೆ ಮೂರು ವಾರಸುದಾರರಿಗೆ ವಿವಾದಿತ ಜಾಗದ ಸಮಾನ ಹಂಚಿಕೆ ಮಾಡಿ ಕೋರ್ಟ್ ತೀರ್ಪು ನೀಡಿತ್ತು. 
  • 2011 ರಲ್ಲಿ ಅಯೋಧ್ಯೆ ಭೂ ವಿವಾದ ಕುರಿತ ಹಂಚಿಕೆ ಮಾಡಿದ ಹೈ ಕೋರ್ಟ್ ತೀರ್ಪಿಗೆ ಸುಪ್ರೀಂ  ಕೋರ್ಟ್ ತಡೆಯಾಜ್ಞೆ ನೀಡಿತ್ತು.
  • 2017 ರಲ್ಲಿ ಪರಸ್ಪರ ಸಂಧಾನದ ಮೂಲಕ ವ್ಯಾಜ್ಯ ಇತ್ಯರ್ಥಗೊಳಿಸಲು ಸಿಜೆಐ ಜೆ. ಎಸ್. ಖೇಹರ್ ಸಲಹೆ ನೀಡಿದ್ರು. ಇದೇ ಸಮಯದಲ್ಲಿ 1994ರಲ್ಲಿ ನಮಾಜ್ ವಿಷಯದಲ್ಲಿ ಆದ ತೀರ್ಪಿನ ವಿರುದ್ಧ ಸಲ್ಲಿಕೆಯಾದ ಅರ್ಜಿಗಳ ವಿಚಾರಣೆಗೆ ಸುಪ್ರೀಂ ಕೋರ್ಟ್ ತ್ರಿ ಸದಸ್ಯ ಪೀಠ ರಚನೆ ಮಾಡಿತ್ತು. 
  • 2019 ರ ನವೆಂಬರ್ 19 ರಂದು ಸುಪ್ರೀಂ ಕೋರ್ಟ್ ತ್ರಿ ಸದಸ್ಯ ಪೀಠದಿಂದ 1993ರಲ್ಲಿ ಬಾಬ್ರಿ ಮಸೀದಿಯ ಅಕ್ಕ ಪಕ್ಕ ಇರುವ ವಿವಾದಿತ ಜಾಗದ 67 ಎಕರೆ ಭೂಮಿಯು ರಾಮ ಜನ್ಮ ಭೂಮಿ ವ್ಯಾಸ್ ಸಮಿತಿಗೆ ಸೇರಿದ್ದು ಎಂಬ ತೀರ್ಪು ಪ್ರಕಟ
  • 2020 ರ ಫೆಬ್ರವರಿ 5 ರಂದು ಕೇಂದ್ರ ಸರ್ಕಾರದಿಂದ ಶ್ರೀ ರಾಮ ಜನ್ಮ ಭೂಮಿ ತೀರ್ಥ ಕ್ಷೇತ್ರ ಸಕಿತಿಯ ರಚನೆ ಆಯಿತು. ಇದಕ್ಕೆ ಚಂಪತ್ ರಾಯ್ ಅವರನ್ನು ಟ್ರಸ್ಟ್ ಪ್ರಧಾನ ಕಾರ್ಯದರ್ಶಿಯಾಗಿ, ಸ್ವಾಮಿ ಗೋವಿಂದ ದೇವ್ ಗಿರಿ ಅವರನ್ನು ಖಜಾಂಚಿಯಾಗಿಯೂ ನೇಮಕ ಮಾಡಲಾಯಿತು. ಆ ನಂತರದಲ್ಲಿ ಈ ಟ್ರಸ್ಟ್ ಎಲ್ ಆಂಡ್ ಟಿ ಕಂಪೆನಿಗೆ ರಾಮ ಮಂದಿರ ನಿಂರ್ಆಣಕ್ಕೆ ಗುತ್ತಿಗೆ ನೀಡಿತ್ತು.

2020, ಅಗಸ್ಟ್ 5 ಕ್ಕೆ ಈ ಎಲ್ಲಾ ವಾದ ವಿವಾದಗಳನ್ನು ಮೆಟ್ಟಿ ಅಯೋಧ್ಯೆ ಶ್ರೀ ರಾಮ ಮಂದಿರಕ್ಕೆ ಶಿಲಾನ್ಯಾಸ ಈಡೇರಲಿದೆ. 

ಇನ್ನು ಕೋವಿಡ್ ನಿಯಮಗಳು ಜಾರಿ ಇರುವ ಹಿನ್ನೆಲೆ ಈ ರಾಮ ಮಂದಿರ ಶಿಲಾನ್ಯಾಸಕ್ಕೆ 135 ಯತಿಗಳು ಸೇರಿ 175 ಜನರನ್ನು ಮಾತ್ರ ಆಹ್ವಾನಿಸಲಾಗಿದೆ. ಬಿಜೆಪಿಯ ಹಿರಿಯ ನಾಯಕರಾದ ಅಯೋಧ್ಯೆ ರಾಮ ಮಂದಿರಕ್ಕಾಗಿ ಹೋರಾಡಿದ ಎಲ್ ಕೆ ಆಡ್ವಾಣಿ ಸೇರಿದಂತೆ, ಮುರಳಿ ಮನೋಹರ್ ಜೋಶಿ, ಹಿರಿಯ ವಕೀಲ ಕೆ ಪರಾಶರಣ್, ಉಮಾ ಭಾರತಿ ಸೇರಿದಂತೆ ಹಲವು ಗಣ್ಯರಿಗೆ ಭಾಗವಹಿಸಲು ಸಾಧ್ಯವಾಗುತ್ತಿಲ್ಲ. ಇಂದು ಸಂಜೆ 7 ಗಂಟೆ ಇಂದಲೇ ಪೂಜೆ ಪುನಸ್ಖಾರಗಳು ಜರುಗಲಿದ್ದು ನಾಳೆ ಪ್ರಧಾನಿ ಮೋದಿಯವರ ಉಪಸ್ಥಿಯಲ್ಲಿ ಭೂಮಿ ಪೂಜೆ ನೆರವೇರಲಿದ್ದು ರಾಮ ಜನ್ಮ ಭೂಮಿಯು ಐತಿಹಾಸಿಕ ಕ್ಷಣಕ್ಕೆ ಸಾಕ್ಷಿಯಾಗಲಿದೆ.