ಅವಳಿ ಜವಳಿಗಳ ಮದುವೆ ; ಮತ್ತೆ ಅವಳಿಗಳದ್ದೇ ನಿರೀಕ್ಷೆ ! 

20-08-20 04:17 pm       Headline Karnataka News Network   ಸ್ಪೆಷಲ್ ಕೆಫೆ

ಅಮೆರಿಕದಲ್ಲಿ ಇಬ್ಬರು ಅವಳಿ ಸೋದರಿಯರು ಒಂದೇ ದಿನ ಅವಳಿ ಸಹೋದರರನ್ನು ವಿವಾಹವಾಗಿದ್ದರು. ಈ ಅವಳಿ ಜವಳಿಗಳು ಮದುವೆಯ ಬಳಿಕ ಮತ್ತೊಂದು ಅವಳಿ ಸಾಧನೆ ಮಾಡಿದ್ದಾರೆ. 

ವಾಷಿಂಗ್ಟನ್ : ಅವಳಿ ಸಹೋದರರು, ಅವಳಿಗಳನ್ನೇ ಹುಡುಕಿ ಮದುವೆಯಾಗುವುದು ಸಾಮಾನ್ಯ. ಹೀಗೆ ಮದುವೆಯಾದವರು ಸುದ್ದಿಯಾಗುವುದೂ ಕಾಮನ್. ಅಮೆರಿಕದಲ್ಲಿ ಈ ಅವಳಿ ಜವಳಿಗಳು ಮದುವೆಯ ಬಳಿಕ ಮತ್ತೊಂದು ಅವಳಿ ಸಾಧನೆ ಮಾಡಿದ್ದಾರೆ. 

ಅಮೆರಿಕದಲ್ಲಿ ಇಬ್ಬರು ಅವಳಿ ಸೋದರಿಯರು ಒಂದೇ ದಿನ ಅವಳಿ ಸಹೋದರರನ್ನು ವಿವಾಹವಾಗಿದ್ದರು. ಇದೀಗ ಇಬ್ಬರು ಸಹೋದರಿಯರೂ ಒಂದೇ ದಿನ ಗರ್ಭಿಣಿಯಾಗಿದ್ದು ಸುದ್ದಿಗೆ ಗ್ರಾಸವಾಗಿದ್ದಾರೆ.

ಬ್ರಿಟಾನಿ ಮತ್ತು ಬ್ರಿಯಾನಾ ಡೀನ್ ಎಂಬ ಇಬ್ಬರು ಅವಳಿ ಸೋದರಿಯರು ಒಟ್ಟಿಗೆ ಗರ್ಭಿಣಿಯಾದವರು. ಇವರಿಬ್ಬರು ಒಂದೇ ದಿನ ಜೋಶ್ ಮತ್ತು ಜೆರೆಮಿ ಸ್ಯಾಲಿಯರ್ಸ್ ಎಂಬ ಇಬ್ಬರು ಅವಳಿ ಸಹೋದರರನ್ನು ಮದುವೆಯಾಗಿದ್ದರು. ಈ ದಂಪತಿ ಸೇರಿ @salyerstwins ಎಂಬ ಇನ್‍ಸ್ಟಾಗ್ರಾಮ್ ಖಾತೆಯನ್ನು ತೆರೆದಿದ್ದು, ಇಲ್ಲಿ ತಮ್ಮ ಟ್ವಿನ್ಸ್ ವಿಚಾರಗಳನ್ನು ಹಂಚಿಕೊಳ್ಳುತ್ತಿರುತ್ತಾರೆ.

ಇತ್ತೀಚೆಗೆ ಈ ಜೋಡಿ ಫೋಟೋವನ್ನು ಶೇರ್ ಮಾಡಿದ್ದು ಇಬ್ಬರು ಸೋದರಿಯರು ಒಟ್ಟಿಗೆ ಗರ್ಭಿಣಿಯಾಗಿರುವುದನ್ನು ತಿಳಿಸಿದ್ದಾರೆ. ಆಗಸ್ಟ್ 14 ರಂದು ಇನ್‍ಸ್ಟಾಗ್ರಾಮ್‍ನಲ್ಲಿ ಫೋಟೊ ಷೇರ್ ಮಾಡಿದ್ದು ನಾಲ್ವರು ಒಂದೇ ಬಣ್ಣದ ಬಿಕಿನಿ ಉಡುಪನ್ನು ಧರಿಸಿ ಫೋಟೋಗೆ ಪೋಸ್ ಕೊಟ್ಟಿದ್ದಾರೆ. 

ಅಲ್ಲದೆ, ಈ ಸುದ್ದಿಯನ್ನು ನಿಮ್ಮೆಲ್ಲರೊಂದಿಗೆ ಹಂಚಿಕೊಳ್ಳಲು ನಾವು ಹರ್ಷಗೊಂಡಿದ್ದೇವೆ. ನಮ್ಮ ಮಕ್ಕಳು ಸೋದರ ಸಂಬಂಧಿಗಳು ಮಾತ್ರವಲ್ಲದೆ ಒಡಹುಟ್ಟಿದವರ ರೀತಿ ಬೆಳೆಯುತ್ತಾರೆ ಎಂದು ಖುಷಿಯಿಂದ ಬರೆದುಕೊಂಡಿದ್ದಾರೆ. ಈ ಪೋಸ್ಟ್ ಮಾಡಿ ಮೂರು ದಿನಗಳಾಗಿದ್ದು, ಸುಮಾರು 1 ಲಕ್ಷಕ್ಕೂ ಅಧಿಕ ಮಂದಿ ಲೈಕ್ಸ್ ಮಾಡಿದ್ದಾರೆ.

ನೂರಾರು ಮಂದಿ ಕಮೆಂಟ್ ಮಾಡುವ ಮೂಲಕ ಶುಭಾಶಯ ತಿಳಿಸುತ್ತಿದ್ದಾರೆ. ಕೆಲವರು “ನಿಮಗಿಬ್ಬರಿಗೂ ಅವಳಿ ಮಕ್ಕಳು ಆಗುವ ಸಾಧ್ಯತೆಗಳಿವೆಯೇ” ಎಂದು ಪ್ರಶ್ನಿಸಿ ಕೀಟಲೆ ಮಾಡಿದ್ದಾರೆ. ಒಂದು ವೇಳೆ ಅವಳಿ ಮಕ್ಕಳಾದರೆ ಅದು ಮತ್ತೊಂದು ಅದ್ಭುತವಾಗುತ್ತದೆ ಎಂದು ಹೇಳಿದ್ದಾರೆ. ಎರಡು ಜೋಡಿಗಳು 2018ರಲ್ಲಿ ಒಟ್ಟಿಗೆ ಒಂದೇ ದಿನ ಮದುವೆಯಾಗಿದ್ದರು

View this post on Instagram

Guess what!!?? BOTH couples are pregnant! 🤰🤰 We are thrilled and grateful to experience overlapping pregnancies and to share this news with you all! ✨🍀✨🍀✨🍀✨🍀✨ Our children will not only be cousins, but full genetic siblings and quaternary multiples! Can't wait to meet them and for them to meet each other! ✨🍀✨🍀✨🍀✨🍀✨ #SalyersTwins #TwinsMarriedToTwins #expecting #thebump #pregnancyannouncement #pregnancyandbeyond #twinning #dubblebubble #baywatch #babywatch #pregnancyphoto #pregnant #bestpregnancyphotos #maternity #momstobe #dadstobe #twinsisters #twinbrothers #strangethings #identicaltwins #deanetwins #twincouples #twinmoms #twindads #miracle #ourtwinsanewedding #twinwedding #twinpregnancy #pregnancyphotoshoot #dreamcometrue

A post shared by Josh, Jeremy, Brittany, Briana (@salyerstwins) on