ಈ ಜಿಲ್ಲೆಯ ಜನರು ಟಿವಿ ನೋಡುವಂತಿಲ್ಲ ! ಕೇರಂ ಆಡುವಂತಿಲ್ಲ ! ಮುಲ್ಲಾಗಳ ಫತ್ವಾಕ್ಕೆ ಕಂಗೆಟ್ಟ ಜನ !!

22-08-20 02:16 pm       Headline Karnataka News Network   ಸ್ಪೆಷಲ್ ಕೆಫೆ

ಈ ಜಿಲ್ಲೆಯಲ್ಲಿ ಸಂಗೀತ ಕೇಳುವುದು, ಟಿವಿ ನೋಡುವುದು, ಕೇರಂ ಆಡುವುದು ನಿಷೇಧ. ಇದೆಲ್ಲಾ ಹರಾಮ್ !! ನಿಷೇಧ  ಉಲ್ಲಂಘಸಿ ನಡೆದುಕೊಂಡರೆ 7 ಸಾವಿರ ರೂಪಾಯಿ ವರೆಗೆ ದಂಡ ಕಟ್ಟಬೇಕು.

ಮುರ್ಶಿದಾಬಾದ್, ಆಗಸ್ಟ್‌ 22: ಈ ಜಿಲ್ಲೆಯಲ್ಲಿ ಸಂಗೀತ ಕೇಳುವುದು, ಟಿವಿ ನೋಡುವುದು, ಕೇರಂ ಆಡುವುದು ನಿಷೇಧ. ಇದೆಲ್ಲಾ ಹರಾಮ್ !! ನಿಷೇಧ ಉಲ್ಲಂಘಸಿ ನಡೆದುಕೊಂಡರೆ 7 ಸಾವಿರ ರೂಪಾಯಿ ವರೆಗೆ ದಂಡ ಕಟ್ಟಬೇಕು. ಇದು ಯಾವುದೋ ಇಸ್ಲಾಮಿಕ್ ರಾಷ್ಟ್ರದ ಕಾನೂನಲ್ಲ. ಇಂತಹದೊಂದು ಜಿಲ್ಲೆ ಭಾರತದಲ್ಲೇ ಇದೆ ಎಂದರೆ ನೀವು ನಂಬಲೇ ಬೇಕು ! 

ಈ ರೀತಿಯ ಕಟ್ಟಪ್ಪಣೆಯ ಫತ್ವಾ ಹೊರಡಿಸಿರುವುದು ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಜಿಲ್ಲೆಯಲ್ಲಿ. ಈ ಜಿಲ್ಲೆಯ ಮುಸ್ಲಿಂ ಬಾಹುಳ್ಯ ಇರುವ ಪ್ರದೇಶಗಳಲ್ಲಿ ಧರ್ಮ ಗುರುಗಳು ಈ ಫತ್ವಾ ಹೊರಡಿಸಿದ್ದಾರೆ. ಯುವ ಪೀಳಿಗೆಯನ್ನು ಸಂಸ್ಕೃತಿ ಮತ್ತು ನೈತಿಕ ಅಧಃಪತನದತ್ತ ಕೊಂಡೊಯ್ಯುವುದನ್ನು ತಪ್ಪಿಸಲು ಈ ರೀತಿಯ ಫತ್ವಾ ವಿಧಿಸಲಾಗಿದೆ ಎಂದು ಹೇಳಲಾಗಿದೆ. 

ಯುವ ಪೀಳಿಗೆಯಲ್ಲಿ ಸಂಸ್ಕೃತಿ ಉಳಿಸಲು ಜನರು ಕೇರಂ ಆಡುವುದು, ಸಂಗೀತ ಕೇಳುವುದು, ಟಿ.ವಿ ನೋಡಬಾರದೆಂಬ ನಿಯಮ ಜಾರಿಗೊಳಿಸಲಾಗಿದೆ ಎಂಬುದು ಸಮುದಾಯದ ಮುಖ್ಯಸ್ಥರ ಸಮರ್ಥನೆ. 

ಅಲ್ಪಸಂಖ್ಯಾತ ಸಮುದಾಯದ ಮುಖಂಡರು ಮುರ್ಶಿದಾಬಾದ್ ಜಿಲ್ಲೆಯಲ್ಲಿ ಕೆಲವೊಂದು ಚಟುವಟಿಕೆಗಳನ್ನು ನಿಷೇಧಿಸಿ ಫತ್ವಾ ಹೊರಡಿಸಿದ್ದಾರೆ. ಫತ್ವಾದ ಪ್ರಕಾರ ಟಿ.ವಿ ನೋಡುವುದು, ಸಂಗೀತ ಕೇಳುವುದು, ಲಾಟರಿ ಟಿಕೆಟ್ ಮಾರಾಟ, ಮದ್ಯ ಮಾರಾಟ, ಕ್ಯಾರಂ  ಆಡುವುದು ಹರಾಂ ಆಗಿದೆ. ಒಂದು ವೇಳೆ ಫತ್ವಾ ಉಲ್ಲಂಘಿಸಿದರೆ 500 ರೂಪಾಯಿಗಳಿಂದ 7 ಸಾವಿರ ರೂ. ವರೆಗೆ ದಂಡ ತೆರಲೇ ಬೇಕು. 

ಸಾಮಾಜಿಕ ಸುಧಾರಣಾ ಸಮಿತಿಯ ಹೆಸರಿನಲ್ಲಿ ಈ ಆದೇಶ ಹೊರಡಿಸಲಾಗಿದ್ದು, ಸಂಗೀತ ಕೇಳಿದರೆ 1 ಸಾವಿರ ರೂಪಾಯಿ ದಂಡ, ಕೇರಂ  ಆಡಿದರೆ 500 ರೂಪಾಯಿ, ಲಾಟರಿ ಖರೀದಿಸಿದರೆ 2 ಸಾವಿರ  ರೂಪಾಯಿ ಮತ್ತು ಮದ್ಯ ಮಾರಾಟ ಮಾಡಿದರೆ, 7 ಸಾವಿರ  ರೂಪಾಯಿ ದಂಡವನ್ನು ವಿಧಿಸಲಾಗುತ್ತದೆ ಎಂದು ಫತ್ವಾದಲ್ಲಿ ತಿಳಿಸಲಾಗಿದೆ.