ನೀಲಕಂಠ ಭಾನುಪ್ರಕಾಶ್ ಈಗ ವಿಶ್ವದ ಅತಿ ವೇಗದ ಮಾನವ ಕ್ಯಾಲ್ಕ್ಯುಲೇಟರ್

26-08-20 12:53 am       Headline Karnataka News Network   ಸ್ಪೆಷಲ್ ಕೆಫೆ

ಗಣಿತ ತಜ್ಞೆ ಶಕುಂತಲಾ ದೇವಿ ಬಳಿಕ ಇದೀಗ ಹೈದರಾಬಾದಿನ ನೀಲಕಂಠ ಭಾನು ಪ್ರಕಾಶ್ ವಿಶ್ವದ ಅತಿ ವೇಗದ ಮಾನವ ಕ್ಯಾಲ್ಕ್ಯುಲೇಟರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ಹೈದರಾಬಾದ್, ಆಗಸ್ಟ್ 25: ಮಾನವ ಕಂಪ್ಯೂಟರ್ ಎಂದೇ ಕರೆಸಿಕೊಳ್ಳುವ ಗಣಿತ ತಜ್ಞೆ ಶಕುಂತಲಾ ದೇವಿ ಬಳಿಕ ಇದೀಗ ಹೈದರಾಬಾದಿನ ನೀಲಕಂಠ ಭಾನು ಪ್ರಕಾಶ್ ವಿಶ್ವದ ಅತಿ ವೇಗದ ಮಾನವ ಕ್ಯಾಲ್ಕ್ಯುಲೇಟರ್ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.

ನೀಲಕಂಠ ಅವರು ದೆಹಲಿಯ ಸೇಂಟ್ ಸ್ಟೀಫನ್ ಕಾಲೇಜಿನ ವಿದ್ಯಾರ್ಥಿಯಾಗಿದ್ದಾರೆ. ಭಾನು ಇತ್ತೀಚೆಗೆ ಲಂಡನ್‌ನಲ್ಲಿ ನಡೆದ ಮೈಂಡ್ ಸ್ಪೋರ್ಟ್ಸ್ ಒಲಿಂಪಿಯಾಡ್ ನಲ್ಲಿ ನಡೆದ ಮಾನಸಿಕ ಲೆಕ್ಕಾಚಾರ ವಿಶ್ವ ಚಾಂಪಿಯನ್‌ಶಿಪ್‌ನಲ್ಲಿ ಭಾರತಕ್ಕೆ ಚಿನ್ನದ ಪದಕವನ್ನು ತಂದುಕೊಟ್ಟು ವಿಶ್ವದ ಅತಿ ವೇಗದ ಕ್ಯಾಲ್ಕ್ಯುಲೇಟರ್ ಆಗಿ ಹೊರಹೊಮ್ಮಿದ್ದಾರೆ.

ಈ ಬಿರುದನ್ನು ಗಣಿತದ ಪ್ರತಿಭೆ ಶಕುಂತಲಾದೇವಿಗೆ ನೀಡಲಾಗಿತ್ತು. ಈ ಸ್ಪರ್ಧೆಯಲ್ಲಿ ಒಟ್ಟು 13 ದೇಶಗಳಿಂದ 30 ಮಂದಿ ಭಾಗವಹಿಸಿದ್ದರು, 10-57ವರ್ಷದವರೆಗಿರುವವರು ಈ ಸ್ಪರ್ಧೆಯಲ್ಲಿ ಭಾಗವಹಿಸಬಹುದಿತ್ತು.

ನನ್ನ ಮೆದುಳು ಕ್ಯಾಲ್ಕ್ಯುಲೇಟರ್‌ಗಿಂತ ವೇಗವಾಗಿ ಕೆಲಸ ಮಾಡುತ್ತದೆ. ಭಾನು 50 ರಾಷ್ಟ್ರೀಯ ಹಾಗೂ 4 ಅಂತಾರಾಷ್ಟ್ರೀಯ ರೆಕಾರ್ಡ್ ಮಾಡಿದ್ದಾರೆ. ಆಸಗ್ಟ್ 15ರಂದು ಲಂಡನ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಈ ಬಿರುದು ಪಡೆದಿದ್ದಾರೆ. ಯುಕೆ, ಜರ್ಮನಿ, ಯುಎಇ, ಫ್ರಾನ್ಸ್, ಗ್ರೀಸ್, ಲೆಬನಾನ್ ದೇಶಗಳು ಭಾಗವಹಿಸಿದ್ದವು. 21 ವರ್ಷದ ವಿದ್ಯಾರ್ಥಿ 29 ಮಂದಿಯನ್ನು ಸೋಲಿಸಿ ಚಿನ್ನದ ಪದಕ ತನ್ನದಾಗಿಸಿಕೊಂಡಿದ್ದಾರೆ. ಗಣಿತ ಪ್ರಯೋಗಾಲಯವನ್ನು ತರೆಯುವುದು ಅವರ ಮುಖ್ಯ ಗುರಿಯಾಗಿದೆ. ಇದು ಕೋಟ್ಯಂತರ ಜನರನ್ನು ತಲುಪುವಂತಾಗಬೇಕು. 'ಪ್ರಧಾನಿ ನರೇಂದ್ರ ಮೋದಿಯವರ ಬಳಿ ಮಾತನಾಡಿ ಭಾರತದಲ್ಲಿ ವಿಷನ್ ಮ್ಯಾಥ್ಸ್ ಕಾನ್ಸೆಪ್ಟ್ ಜಾರಿಗೆ ತರುವಂತೆ ಮಾಡಬೇಕು' ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.