ಬಸ್ ಮೇಲೆ ದಾಳಿಗೆ ಮುಂದಾದ ಆನೆ ; ಡ್ರೈವರ್ ಸಮಯಪ್ರಜ್ಞೆಯಿಂದ ಉಳಿಯಿತು ಜನರ ಪ್ರಾಣ

29-09-21 04:59 pm       Headline Karnataka News Network   ಸ್ಪೆಷಲ್ ಕೆಫೆ

ತಮಿಳುನಾಡಿನ ನೀಲಗಿರಿಯಲ್ಲಿ ಆನೆಯು ಸರ್ಕಾರಿ ಬಸ್​ ಮೇಲೆ ದಾಳಿ ಮಾಡಿದ್ದು, ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ತಮಿಳುನಾಡು, ಸೆ.29: ಆನೆಗಳು ಒಮ್ಮೊಮ್ಮೆ ಹೇಗೆ ವರ್ತಿಸುತ್ತವೆ ಎಂದು ಊಹಿಸೋಕೂ ಆಗೋದಿಲ್ಲ. ಈ ಮಾತಿಗೆ ಪ್ರತ್ಯಕ್ಷ ಉದಾಹರಣೆ ಎಂಬಂತೆ ತಮಿಳುನಾಡಿನ ನೀಲಗಿರಿಯಲ್ಲಿ ಆನೆಯು ಸರ್ಕಾರಿ ಬಸ್​ ಮೇಲೆ ದಾಳಿ ಮಾಡಿದ್ದು, ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ವೈರಲ್​ ಆಗಿದೆ.

ಈ ವಿಡಿಯೋದಲ್ಲಿ ಆಕ್ರೋಶಗೊಂಡ ಆನೆ ಬಸ್​ ಕಡೆ ನುಗ್ಗಿದ್ದು ವಿಂಡ್​ಶೀಲ್ಡ್​ನ್ನು ಮುರಿದು ಹಾಕಿದೆ.

ಆನೆಯ ದಾಳಿಯಿಂದ ತಪ್ಪಿಸಿಕೊಳ್ಳಲು ಚಾಲಕ ಬಸ್​ನ್ನು ರಿವರ್ಸ್ ಮಾಡಲು ಮುಂದಾಗಿದ್ದಾರೆ. ಕೆಲ ಸೆಕೆಂಡ್​ಗಳ ಬಳಿಕ ತಮ್ಮ ಸೀಟಿನಿಂದ ಎದ್ದು ನಿಂತ ಚಾಲಕ ಆನೆಯ ಲಕ್ಷ್ಯವನ್ನು ಸೆಳೆದಿದ್ದಾರೆ. ಆ ಸಮಯದಲ್ಲಿ ಪ್ರಯಾಣಿಕರು ಸುರಕ್ಷಿತವಾಗಿ ಬಸ್​ನಿಂದ ಇಳಿದಿದ್ದಾರೆ.

ಈ ವಿಡಿಯೋಗೆ ಸೋಶಿಯಲ್​ ಮೀಡಿಯಾದಲ್ಲಿ 70 ಸಾವಿರಕ್ಕೂ ಅಧಿಕ ವೀವ್ಸ್​ ಸಿಕ್ಕಿದೆ. ನೆಟ್ಟಿಗರು ಚಾಲಕನ ಸಮಯಪ್ರಜ್ಞೆಯನ್ನು ಶ್ಲಾಘಿಸಿದ್ದಾರೆ.

Elephant behaviour can be unpredictable sometimes and  a video where a  tusker attacks a government bus in the Nilgiris, Tamil Nadu, has gone viral on several microblogging sites. The viral video has shared by Supriya Sahu who is the Principal Secretary of Environment Climate Change & Forests of Tamil Nadu. The video features where a furious elephant charging towards the bus and smashing the windshield.