ರೈಸ್ ಕುಕ್ಕರನ್ನು ವರಿಸಿ ಒಂದೇ ದಿನದಲ್ಲಿ ಸೆಲೆಬ್ರಿಟಿಯಾಗಿಬಿಟ್ಟ ಮದುವೆ ಗಂಡು !

01-10-21 09:42 pm       Headline Karnataka News Network   ಸ್ಪೆಷಲ್ ಕೆಫೆ

ರೈಸ್ ಕುಕ್ಕರನ್ನು ವರಿಸಿದ್ದಾಗಿ ಫೇಸ್ಬುಕ್ ಪೋಸ್ಟ್ ಹಾಕಿ, ನಾಲ್ಕೇ ದಿನದಲ್ಲಿ ಇಡೀ ದೇಶದಲ್ಲಿ ಸೆಲೆಬ್ರಿಟಿ ಅನ್ನುವಷ್ಟರ ಮಟ್ಟಿಗೆ ಪ್ರಸಿದ್ಧಿ ಪಡೆದಿದ್ದಾನೆ.

ನವದೆಹಲಿ, ಅ.1: ಇಂಡೋನೇಶ್ಯಾದಲ್ಲೊಬ್ಬ ರೈಸ್ ಕುಕ್ಕರನ್ನು ವರಿಸಿದ್ದಾಗಿ ಹೇಳಿ ಹುಬ್ಬೇರಿಸಿದ್ದಾನೆ. ರೈಸ್ ಕುಕ್ಕರನ್ನು ವರಿಸಿದ್ದಾಗಿ ಫೇಸ್ಬುಕ್ ಪೋಸ್ಟ್ ಹಾಕಿ, ನಾಲ್ಕೇ ದಿನದಲ್ಲಿ ಇಡೀ ದೇಶದಲ್ಲಿ ಸೆಲೆಬ್ರಿಟಿ ಅನ್ನುವಷ್ಟರ ಮಟ್ಟಿಗೆ ಪ್ರಸಿದ್ಧಿ ಪಡೆದಿದ್ದಾನೆ.

ಖೊಯಿರುಲ್ ಆನಮ್ ಎಂಬ ಯುವಕ ಇಂಡೋನೇಶ್ಯಾದಲ್ಲಿ ಕಳೆದ ಒಂದು ವಾರದಲ್ಲಿ ಫುಲ್ ಫೇಮಸ್ ಆಗಿದ್ದಾನೆ. ಅದಕ್ಕೆ ಕಾರಣವಾಗಿದ್ದು ಆತ ರೈಸ್ ಕುಕ್ಕರನ್ನು ವರಿಸಿದ್ದಾಗಿ ಫೇಸ್ಬುಕ್ಕಲ್ಲಿ ಹಾಕ್ಕೊಂಡಿದ್ದ ಫೋಟೊ. ಮದುವೆ ಗಂಡಿನ ರೀತಿ ಬಿಳಿ ಪೋಷಾಕು ಧರಿಸಿದ್ದ ಖೊಯಿರುಲ್, ವಧುವಿನಂತೆ ಶೃಂಗರಿಸಿದ್ದ ರೈಸ್ ಕುಕ್ಕರಿಗೆ ಮುತ್ತು ಕೊಡುತ್ತಿದ್ದ ಫೋಟೋ, ಮತ್ತೊಂದರಲ್ಲಿ ಕುಕ್ಕರನ್ನು ಜೊತೆಗೆ ನಿಲ್ಲಿಸಿ ತೆಗೆಸಿಕೊಂಡಿದ್ದ ಫೋಟೋ ಇತ್ತು. ಇನ್ನೊಂದು ಫೋಟೋದಲ್ಲಿ ಮದುವೆ ಬಗ್ಗೆ ಸರಕಾರಿ ದಾಖಲಾತಿಯಲ್ಲಿ ರಿಜಿಸ್ಟರ್ ಪತ್ರ ಮಾಡಿಕೊಂಡಿದ್ದೂ ಇತ್ತು.

ಈ ರೀತಿಯ ವಿಚಿತ್ರ ಮದುವೆಯನ್ನು ನೋಡಿದ ಇಂಡೋನೇಶ್ಯಾದ ಜನ ಖೊಯಿರುಲ್ ಹುಚ್ಚಿಗೆ ಲೈಕ್ ಕೊಟ್ಟಿದ್ದೇ ಕೊಟ್ಟಿದ್ದು. ಅದರ ಜೊತೆಗೆ, ಆತನ ಮದುವೆ ಫೋಟೋವನ್ನೂ ಷೇರ್ ಮಾಡಿದ್ದಾರೆ. ನಾಲ್ಕೇ ದಿನದಲ್ಲಿ ಖೊಯಿರುಲ್ ಹಾಕಿದ್ದ ಫೋಟೋ ದೇಶಾದ್ಯಂತ ಭಾರೀ ವೈರಲ್ ಆಗಿತ್ತು. ಏಳು ಸಾವಿರ ಲೈಕ್ಸ್ ಮತ್ತು ಹತ್ತು ಸಾವಿರ ಮಂದಿ ಫೇಸ್ಬುಕ್ ಪೇಜನ್ನು ಷೇರ್ ಮಾಡಿದ್ದರು. ರೈಸ್ ಕುಕ್ಕರನ್ನು ಮದುವೆಯಾಗಿದ್ದ ಬಗ್ಗೆ ಹೇಳಿಕೊಂಡಿದ್ದಲ್ಲದೆ, ಕೆಳಗೆ ಹೀಗಂತ ಬರೆದುಕೊಂಡಿದ್ದ. ಬಿಳಿಯಾಗಿರುವ ಪ್ರೀತಿಯ ಮತ್ತು ಅತ್ಯಂತ ವಿಧೇಯ ರೈಸ್ ಕುಕ್ಕರ್. ನೀನಿಲ್ಲದೆ, ನನ್ನ ಅನ್ನ ಬೇಯುವುದೇ ಇಲ್ಲ..!  

ಆನಂತರ ನಾಲ್ಕು ದಿನಗಳಲ್ಲಿ ಖೊಯಿರುಲ್ ಮದುವೆ ವಿಚಾರ ಭಾರೀ ಸುದ್ದಿಯಾಗುತ್ತಲೇ ಅದೇ ಫೇಸ್ಬುಕ್ ಪೇಜ್ ನಲ್ಲಿ ಡೈವರ್ಸ್ ಘೋಷಣೆಯನ್ನೂ ಮಾಡಿದ್ದಾನೆ. ನಾನು ರೈಸ್ ಕುಕ್ಕರ್ ಗೆ ಡೈವರ್ಸ್ ನೀಡಿದ್ದೇನೆ. ಅದರಲ್ಲಿ ರೈಸ್ ಮಾತ್ರ ಬೇಯುತ್ತದೆ, ಬೇರೇನೂ ಆಗೋದಿಲ್ಲ ಎಂದಿದ್ದಾನೆ. ಇಷ್ಟಾಗುತ್ತಲೇ ಖೊಯಿರುಲ್ ಆನಮ್, ಇಂಡೋನೇಶ್ಯಾದಲ್ಲಿ ದೊಡ್ಡ ಸೆಲೆಬ್ರಿಟಿಯ ರೀತಿ ಪ್ರಸಿದ್ಧಿ ಪಡೆದಿದ್ದಾನೆ. ಆತನನ್ನು ಸ್ಥಳೀಯ ವಾಹಿನಿಗಳು ಕರೆದು ಸಂದರ್ಶನವನ್ನೂ ಮಾಡತೊಡಗಿವೆ.

This might sound unbelievable but it’s true that Khoirul Anam, an Indonesian man, found himself on top of the trends list this week after he married his rice cooker. Yes, that’s correct. On Facebook, Khoirul shared pictures from his wedding with the rice cooker and no prizes for guessing that the post has gone viral on social media.