ಶಾರುಖ್ ಪುತ್ರನಿಗೆ ಡ್ರಗ್ಸ್ ಉರುಳು ; ಬಾಲಿವುಡ್ ಅಂಗಳದಲ್ಲಿ ಬಿರುಗಾಳಿ ಎಬ್ಬಿಸಿದ ಅಧಿಕಾರಿ ಯಾರು ಗೊತ್ತಾ? ಎರಡೇ ವರ್ಷದಲ್ಲಿ 17 ಸಾವಿರ ಕೋಟಿಯ ಡ್ರಗ್ ಸೀಜ್ !

07-10-21 09:30 pm       Headline Karnataka News Network   ಸ್ಪೆಷಲ್ ಕೆಫೆ

ಡ್ರಗ್ಸ್ ನಂಟಿನಲ್ಲಿ ಸೂಪರ್ ಸ್ಟಾರ್ ಶಾರುಖ್ ಖಾನ್ ಪುತ್ರ ಸಿಕ್ಕಿಬೀಳುತ್ತಿದ್ದಂತೆ ಸಮೀರ್ ವಾಂಖೇಡೆ ಎಂಬ ಅಧಿಕಾರಿಯ ಹೆಸರು ಮುನ್ನೆಲೆಗೆ ಬಂದಿದೆ. ಯಾಕಂದ್ರೆ, ಬಾಲಿವುಡ್ ನಟ- ನಟಿಯರು ಡ್ರಗ್ಸ್ ನಂಟು ಹೊಂದಿದ್ದಾರೆಂಬ ಆರೋಪ ಹಿಂದಿನಿಂದ ಇತ್ತಾದರೂ, ಪೊಲೀಸರು ಬಂಧಿಸುವುದಕ್ಕೆ ಧೈರ್ಯ ತೋರಿರಲಿಲ್ಲ.

ಮುಂಬೈ, ಅ.7: ಡ್ರಗ್ಸ್ ನಂಟಿನಲ್ಲಿ ಸೂಪರ್ ಸ್ಟಾರ್ ಶಾರುಖ್ ಖಾನ್ ಪುತ್ರ ಸಿಕ್ಕಿಬೀಳುತ್ತಿದ್ದಂತೆ ಸಮೀರ್ ವಾಂಖೇಡೆ ಎಂಬ ಅಧಿಕಾರಿಯ ಹೆಸರು ಮುನ್ನೆಲೆಗೆ ಬಂದಿದೆ. ಯಾಕಂದ್ರೆ, ಬಾಲಿವುಡ್ ನಟ- ನಟಿಯರು ಡ್ರಗ್ಸ್ ನಂಟು ಹೊಂದಿದ್ದಾರೆಂಬ ಆರೋಪ ಹಿಂದಿನಿಂದ ಇತ್ತಾದರೂ, ಪೊಲೀಸರು ಬಂಧಿಸುವುದಕ್ಕೆ ಧೈರ್ಯ ತೋರಿರಲಿಲ್ಲ. ಇದೀಗ ಸೂಪರ್ ಸ್ಟಾರ್ ಪುತ್ರನನ್ನೇ ಎನ್ ಸಿಬಿ ಅಧಿಕಾರಿಗಳು ಬಂಧಿಸಿದ್ದು, ಇದರ ಬೆನ್ನಲ್ಲೇ ಸಮೀರ್ ವಾಂಖೇಡೆ ಎನ್ನುವ ಖಡಕ್ ಅಧಿಕಾರಿಯ ಕೆಲಸ ಸದ್ದು ಮಾಡಿದೆ. ತಣ್ಣಗಿನ ಸಮುದ್ರ ಮಧ್ಯದಿಂದಲೇ ಈ ಅಧಿಕಾರಿ ಬಾಲಿವುಡ್ ಅಂಗಳದಲ್ಲಿ ಬೆವರಿನ ನೆರಿಗೆ ಮೂಡಿಸಿದ್ದಾರೆ.

ಬಾಲಿವುಡ್ ಮತ್ತು ಮುಂಬೈ ಅಂಡರ್ ವರ್ಲ್ಡ್ ಇವರೆಡನ್ನೂ ಬೆಸೆದಿರುವುದು ಅಂದ್ರೆ ಡ್ರಗ್ಸ್. ನಶೆಯ ಲೋಕವನ್ನು ಆಳುವುದೇ ಅಂಡರ್ ವರ್ಲ್ಡ್ ಅನ್ನುವ ಮಾತಿದೆ. ಆದರೆ, ಕಳೆದ ಎರಡು ವರ್ಷಗಳಲ್ಲಿ ಬಾಲಿವುಡ್ ಜಗತ್ತಿನ ಹಲವಾರು ನಟ- ನಟಿಯರನ್ನು ಬಲೆಗೆ ಕೆಡವಿದ್ದು ಆ ಒಬ್ಬನೇ ಅಧಿಕಾರಿ. ಸಮೀರ್ ವಾಂಖೇಡೆ ಎನ್ನುವ ಐಆರ್ ಎಸ್ ಅಧಿಕಾರಿಯ ಹೆಸರು ಕೇಳಿದರೆ, ಬಾಲಿವುಡ್ ಜಗತ್ತು ನಿದ್ದೆಯಲ್ಲೂ ಛಳಕು ಮೂಡಿಸುವಷ್ಟರ ಮಟ್ಟಿಗೆ ಬೆಚ್ಚಿ ಹೋಗಿದೆ.

ಸಮೀರ್ ವಾಂಖೇಡೆ 2008ನೇ ಬ್ಯಾಚಿನ ಇಂಡಿಯನ್ ರೆವಿನ್ಯೂ ಸರ್ವಿಸ್ ಅಧಿಕಾರಿ. ಮೊದಲಿಗೆ ಮುಂಬೈ ಏರ್ಪೋರ್ಟ್ ನಲ್ಲಿ ಕಸ್ಟಮ್ ಅಧಿಕಾರಿಯಾಗಿ ಪೋಸ್ಟಿಂಗ್ ಆಗಿದ್ದರು. ಸಮೀರ್ ಕಸ್ಟಮ್ ಅಧಿಕಾರಿಯಾಗಿದ್ದ ಸಂದರ್ಭದಲ್ಲಿ ಎರಡು ಸಾವಿರಕ್ಕೂ ಹೆಚ್ಚು ಬಾಲಿವುಡ್ ಸೆಲೆಬ್ರಿಟಿಗಳ ವಿರುದ್ಧ ಕೇಸು ದಾಖಲಿಸಿದ್ದರು. ವಿದೇಶದಿಂದ ತೆರಿಗೆ ತಪ್ಪಿಸಿಕೊಂಡು ಬೆಲೆಬಾಳುವ ವಸ್ತುಗಳನ್ನು ತರುತ್ತಿದ್ದ ಬಗ್ಗೆ ಪ್ರಕರಣ ದಾಖಲಿಸಿ, ಬಿಸಿ ಮುಟ್ಟಿಸಿದ್ದರು. ಇವರು ಪ್ರಕರಣ ಎದುರಿಸಿದವರಲ್ಲಿ ಅನುರಾಗ್ ಕಶ್ಯಪ್, ವಿವೇಕ್ ಓಬೆರಾಯ್, ರಾಮಗೋಪಾಲ್ ವರ್ಮಾನಂಥವರೂ ಇದ್ದಾರೆ.

ವಿಶ್ವಕಪ್ ಟ್ರೋಫಿಯನ್ನೇ ಬಿಟ್ಟಿರಲಿಲ್ಲ ! 

2011ರಲ್ಲಿ ಭಾರತ ಕ್ರಿಕೆಟ್ ತಂಡ ವಿಶ್ವ ಕಪ್ ಗೆದ್ದು ಟ್ರೋಫಿ ಹಿಡಿದು ತಂದಾಗಲೂ ಸಮೀರ್ ವಾಂಖೇಡೆ ಮುಂಬೈ ಏರ್ಪೋರ್ಟ್ ಪ್ರವೇಶಕ್ಕೆ ಬಿಟ್ಟಿರಲಿಲ್ಲ. ಚಿನ್ನದ ಕೋಟಿಂಗ್ ಇದ್ದುದರಿಂದ ಟ್ರೋಫಿಗೆ ಎಂಟ್ರಿ ಕೊಡಲು ಕಸ್ಟಮ್ಸ್ ಡ್ಯೂಟಿ ಕಟ್ಟಲೇಬೇಕೆಂದು ಷರತ್ತು ವಿಧಿಸಿದ್ದರು. ಆನಂತರ ಕಸ್ಟಮ್ಸ್ ಸುಂಕ ತೆತ್ತ ಬಳಿಕವೇ ವಿಶ್ವಕಪ್ ಟ್ರೋಫಿ ಪ್ರವೇಶಕ್ಕೆ ಅನುಮತಿ ನೀಡಲಾಗಿತ್ತು. ಆನಂತರ 2013ರಲ್ಲಿ ಖ್ಯಾತ ಸೆಲೆಬ್ರಿಟಿ ಮಿಕಾ ಸಿಂಗ್ ಅವರನ್ನೂ ಸಮೀರ್ ವಾಂಖೇಡೆ ಬಂಧಿಸಿದ್ದರು. ವಿದೇಶಿ ಕರೆನ್ಸಿ ಜೊತೆಗೆ ಏರ್ಪೋರ್ಟ್ ಬಂದಿದ್ದ ಮಿಕಾ ಸಿಂಗ್ ಅವರ ವಿರುದ್ಧ ಕೇಸು ದಾಖಲಿಸಿದ್ದರು. ಸಮೀರ್ ವಾಂಖೇಡೆ ಕಸ್ಟಮ್ ಅಧಿಕಾರಿಯಾಗಿದ್ದ ವೇಳೆ ಸೆಲೆಬ್ರಿಟಿಗಳಿಗೂ ಉಳಿಗಾಲ ಇರಲಿಲ್ಲ. ಎರಡು ಸಾವಿರಕ್ಕೂ ಹೆಚ್ಚು ಮಂದಿ ಬಾಲಿವುಡ್, ಮಾಡೆಲ್ ಇನ್ನಿತರ ಸೆಲೆಬ್ರಿಟಿಗಳನ್ನೇ ಬುಕ್ ಮಾಡಿದ್ದರು.

ಕಸ್ಟಮ್ ಅಧಿಕಾರಿಯಾಗಿದ್ದ ಬಳಿಕ ಎನ್ಐಎ ಅಧಿಕಾರಿಯಾಗಿದ್ದ ಸಮೀರ್ ವಾಂಖೇಡೆ ಅವರನ್ನು ಎರಡು ವರ್ಷಗಳ ಹಿಂದೆ ಮುಂಬೈ ಎನ್ ಸಿಬಿ ವಲಯ ನಿರ್ದೇಶಕರಾಗಿ ನೇಮಕ ಮಾಡಲಾಗಿತ್ತು. ಎರಡು ವರ್ಷಗಳಲ್ಲಿ ಸಮೀರ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಬರೋಬ್ಬರಿ 17 ಸಾವಿರ ಕೋಟಿಗೂ ಹೆಚ್ಚು ಮೊತ್ತದ ಡ್ರಗ್ಸ್ ಜಪ್ತಿ ಮಾಡಿದ್ದಾರೆ. ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿನ ಬಳಿಕ ಡ್ರಗ್ಸ್ ನಂಟಿನ ಬಗ್ಗೆ ತನಿಖೆ ಕೈಗೆತ್ತಿಕೊಂಡ ಸಮೀರ್ ವಾಂಖೇಡೆ ಮಿಂಚು ಹರಿಸಿದ್ದರು. ಯಾರೂ ಅಂದುಕೊಂಡಿರದ ರೀತಿ ಸುಶಾಂತ್ ಗೆಳತಿ ರಿಯಾ ಚಕ್ರವರ್ತಿ ಸೇರಿದಂತೆ ಬಾಲಿವುಡ್ಡಿನ ಹಲವು ಖ್ಯಾತ ನಾಮರನ್ನು ಡ್ರಗ್ಸ್ ಪ್ರಕರಣದಲ್ಲಿ ಬಂಧಿಸಿ, ಜೈಲಿಗಟ್ಟಿದ್ದು ಸಮೀರ್ ಸಾಧನೆಯಾಗಿತ್ತು.

ಡ್ರಗ್ಸ್ ಬೆನ್ನುಬಿದ್ದ ಬಳಿಕ ಸಮೀರ್ ಮೇಲೆ ಹಲವರು ಕೆಂಗಣ್ಣು ಬೀರಿದ್ದರು. ಇದರ ಪರಿಣಾಮ ಎನ್ನುವಂತೆ, ಕಳೆದ ನವೆಂಬರ್ ತಿಂಗಳಲ್ಲಿ ಡ್ರಗ್ಸ್ ಕಾರ್ಯಾಚರಣೆಗೆ ಇಳಿದಿದ್ದ ಸಮೀರ್ ವಾಂಖೇಡೆ ಮತ್ತು ಆರು ಮಂದಿಯ ತಂಡದ ಮೇಲೆ ವಿದ್ರೋಹಿಗಳು ದಾಳಿ ನಡೆಸಲು ಮುಂದಾಗಿದ್ದರು. ಗೋರೆಗಾಂವ್ ನಲ್ಲಿ ಡ್ರಗ್ ಪೆಡ್ಲರ್ ಗಳ ವಿರುದ್ಧ ಕಾರ್ಯಾಚರಣೆ ನಡೆಸುತ್ತಿದ್ದಾಗಲೇ ತಂಡವೊಂದು ಹಲ್ಲೆಗೆ ಮುಂದಾಗಿತ್ತು. ದಾಳಿಯಿಂದ ಸಮೀರ್ ಸ್ವಲ್ಪದರಲ್ಲಿ ಪಾರಾಗಿದ್ದರು. ಆನಂತರ, ದಾಳಿ ನಡೆಸಲು ಬಂದ ತಂಡವನ್ನು ಯಾವುದೇ ಕಾರಣಕ್ಕೂ ಹಾಗೇ ಬಿಡಲಾರೆ ಎಂದು ಸಮೀರ್ ಅಬ್ಬರಿಸಿದ್ದು ಹಿಂದಿ ಮಾಧ್ಯಮಗಳಲ್ಲಿ ಸುದ್ದಿಯಾಗಿತ್ತು.

ಡ್ರಗ್ಸ್ ಕುಳಗಳ ಪಾಲಿಗೆ ಸಿಂಹಸ್ವಪ್ನರಾಗಿರುವ ಸಮೀರ್, ಈ ಬಾರಿ ಅತಿ ದೊಡ್ಡ ಕಾರ್ಯಾಚರಣೆಯನ್ನು ಮಾಡಿದ್ದಾರೆ. ಐಷಾರಾಮಿ ಕ್ರೂಸ್ ಹಡಗಿನಲ್ಲಿ ಎರಡು ರಾತ್ರಿ ಓವರ್ ನೈಟ್ ಪಾರ್ಟಿ ಆಯೋಜಿಸಿದ್ದ ಬಗ್ಗೆ ಮಾಹಿತಿ ಪಡೆದ ಸಮೀರ್ ವಾಂಖೇಡೆ 20 ಮಂದಿಯನ್ನು ತಂಡ ಕಟ್ಟಿಕೊಂಡು ಪ್ರಯಾಣಿಕರ ಸೋಗಿನಲ್ಲಿ ಕ್ರೂಸ್ ಪ್ರವೇಶ ಮಾಡಿದ್ದರು. ಹಡಗು ರಾತ್ರಿಯಾಗುತ್ತಿದ್ದಂತೆ ಸಮುದ್ರ ಮಧ್ಯೆ ತೇಲುತ್ತಾ ಸಾಗುತ್ತಿದ್ದರೆ, ಇತ್ತ ಅಮಲೇರಿಸಿಕೊಂಡಿದ್ದವರು ಡ್ರಗ್ಸ್ ನಶೆಯಲ್ಲಿ ತೇಲಾಡಿದ್ದರು. ಡ್ರಗ್ಸ್ ಸೇವಿಸಿ, ನಶೆಯಲ್ಲಿ ಬೀಳೋ ವರೆಗೂ ಸುಮ್ಮನಿದ್ದುಕೊಂಡೇ ಗಮನಿಸುತ್ತಿದ್ದ ಸಮೀರ್ ಅಂಡ್ ಟೀಮ್, ಕೊಕೇನ್, ಚರಸ್ ಇನ್ನಿತರ ಮಾದಕ ದ್ರವ್ಯಗಳು ಪತ್ತೆಯಾಗುತ್ತಲೇ ತಮ್ಮಲ್ಲಿ ಬಚ್ಚಿಟ್ಟುಕೊಂಡಿದ್ದ ಗನ್ ಎತ್ತಿದ್ದಾರೆ. ಕ್ರೂಸ್ ಮೇಲೇರಿ ಕಿಕ್ ಹತ್ತಿಸಿಕೊಂಡಿದ್ದವರು ಎನ್ ಸಿಬಿ ಅಧಿಕಾರಿಗಳು ಸುತ್ತುವರಿದಿದ್ದನ್ನು ನೋಡಿ ತಮ್ಮ ಇರವನ್ನು ತಾವೇ ನಂಬದಂತಾಗಿದ್ದರು. ಬಾಲಿವುಡ್ ಸೂಪರ್ ಸ್ಟಾರ್ ಶಾರುಖ್ ಖಾನ್ ಪುತ್ರ ಆರ್ಯನ್ ಖಾನ್ ಮತ್ತಿತರ ಖ್ಯಾತ ನಾಮರನ್ನು ಡ್ರಗ್ಸ್ ಬಲೆಯಲ್ಲಿ ಕೆಡವಿದ್ದರು.

ಒಬ್ಬ ಖಡಕ್ ಅಧಿಕಾರಿಯಾಗಿದ್ದುಕೊಂಡು ಯಾವುದೇ ಒತ್ತಡಕ್ಕೂ ಮಣಿಯದೆ ತಮ್ಮದೇ ವ್ಯಾಪ್ತಿಯಲ್ಲಿ ಹೇಗೆ ಕೆಲಸ ಮಾಡಬಹುದು ಅನ್ನೋದನ್ನು ಸಮೀರ್ ವಾಂಖೇಡೆ ತೋರಿಸಿಕೊಟ್ಟಿದ್ದಾರೆ. ಮುಂಬೈನಲ್ಲಿ ಕಸ್ಟಮ್ ಅಧಿಕಾರಿಯಾಗಿದ್ದು ಸೆಲೆಬ್ರಿಟಿಗಳನ್ನು ಹೆಚ್ಚು ಕಾಡಿದ್ದ ಈ ಅಧಿಕಾರಿ, 2017ರಲ್ಲಿ ಖ್ಯಾತ ಮರಾಠಿ ನಟಿ ಕ್ರಾಂತಿ ರೇಡ್ಕರ್ ಅವರನ್ನು ವರಿಸಿದ್ದರು.

The Zonal Director of NCB, Sameer Wankhede, has been in the news ever since the drug abuse allegations tumbled out of the investigations into Sushant Singh Rajput's death last year. He has also been talking to the media about Shah Rukh Khan's son Aryan Khan's arrest on Sunday. Since he has been making headlines of late, we take a look at his career so far...Sameer is the son of a police officer. Before joining the NCB, he was with the National Investigation Agency and has also served in the Air Intelligence Unit. In 2013, when he was working with the customs department at Mumbai airport, he had reportedly caught singer Mika Singh with foreign currency.