ಸಫಿಯಾ ಅವರಿಗೆ ಪಿ ಎಚ್ ಡಿ ಪದವಿ

16-09-20 01:42 pm       Mangalore Correspondent   ಸ್ಪೆಷಲ್ ಕೆಫೆ

ಪತ್ರಕರ್ತೆ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮ ವಿಭಾಗದ ಅತಿಥಿ ಉಪನ್ಯಾಸಕಿ ಸಫಿಯಾ ನಯೀಂ ಅವರು ಮಂಡಿಸಿದ ಸಂಶೋಧನಾ ಮಹಾ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯ ಪಿ ಎಚ್ ಡಿ ಪದವಿ ಪ್ರದಾನ ಮಾಡಿದೆ .

ಮಂಗಳೂರು, ಸಪ್ಟೆಂಬರ್ 16: ಪತ್ರಕರ್ತೆ ಹಾಗು ಮಂಗಳೂರು ವಿಶ್ವವಿದ್ಯಾನಿಲಯದ ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮ ವಿಭಾಗದ ಅತಿಥಿ ಉಪನ್ಯಾಸಕಿ ಸಫಿಯಾ ನಯೀಂ ಅವರು ಮಂಡಿಸಿದ ಸಂಶೋಧನಾ ಮಹಾ ಪ್ರಬಂಧಕ್ಕೆ ಮಂಗಳೂರು ವಿಶ್ವವಿದ್ಯಾಲಯ ಪಿ ಎಚ್ ಡಿ ಪದವಿ ಪ್ರದಾನ ಮಾಡಿದೆ. ಸಫಿಯಾ ಅವರು ದಿ. ಅಬ್ದುಲ್ ಹಮೀದ್ ವೇಣೂರು ರಬ್ಬಿಅಮ್ಮ ದಂಪತಿಯ ಪುತ್ರಿ ಕೋಸ್ಟಲ್ ಡೈಜೆಸ್ಟ್ ಡಾಟ್ ಕಾಮ್ ಸಂಪಾದಕ ನಯೀಮ್ ಸಿದ್ದಿಕ್ ಅವರ ಪತ್ನಿ.

ಸಫಿಯಾ ಪತ್ರಿಕೋದ್ಯಮ ವಿಭಾಗದ  ಪ್ರೊಫೆಸರ್ ವಹೀದಾ ಸುಲ್ತಾನ ಮಾರ್ಗದರ್ಶನದಲ್ಲಿ ರಚಿಸಿದ್ದ ಇಂಪ್ಯಾಕ್ಟ್ ಆಫ್ ಸೋಷಿಯಲ್ ನೆಟ್ ವರ್ಕಿಂಗ್ ಸೈಟ್ಸ್ ಅಮಂಗ್ ಮೀಡಿಯಾ ಪ್ರೊಫೆಷನಲ್ಸ್ ಇನ್ ಕರ್ನಾಟಕ ಪ್ರಬಂಧಕ್ಕೆ ಡಾಕ್ಟರೇಟ್ ಪದವಿ ನೀಡಲಾಗಿದೆ. ಇವರು ಮೂಡಬಿದ್ರೆ ಆಳ್ವಾಸ್ ಕಾಲೇಜಿನ ಹಳೆಯ ವಿದ್ಯಾರ್ಥಿನಿ .

Join our WhatsApp group for latest news updates