ಫಾಜಿಲ್ ಕೊಲೆ ಪ್ರಕರಣ ; ಕೃತ್ಯಕ್ಕೆ ಬಳಸಿದ್ದ ಕಾರಿನ ಮಾಲಕ ಸೆರೆ, ಆರೋಪಿಗಳ ಮಾಹಿತಿ ಲಭ್ಯ, ಇನ್ನೂ ಪತ್ತೆಯಾಗದ ಕಾರು ! 

31-07-22 12:47 pm       Mangalore Correspondent   ಕ್ರೈಂ

ಸುರತ್ಕಲ್ ನಲ್ಲಿ ಭೀಕರ ಹತ್ಯೆಗೊಳಗಾದ ಮಹಮ್ಮದ್ ಫಾಜಿಲ್ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕೃತ್ಯಕ್ಕೆ ಬಳಸಿದ್ದ ಕಾರಿನ ಮಾಲಕನನ್ನು ಬಂಧಿಸಿದ್ದಾರೆ. 

ಮಂಗಳೂರು, ಜುಲೈ 31 : ಸುರತ್ಕಲ್ ನಲ್ಲಿ ಭೀಕರ ಹತ್ಯೆಗೊಳಗಾದ ಮಹಮ್ಮದ್ ಫಾಜಿಲ್ ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಕೃತ್ಯಕ್ಕೆ ಬಳಸಿದ್ದ ಕಾರಿನ ಮಾಲಕನನ್ನು ಬಂಧಿಸಿದ್ದಾರೆ. 

ಸುರತ್ಕಲ್ ಬಳಿಯ ನಿವಾಸಿ ಅಜಿತ್ ಡಿಸೋಜ ಬಂಧಿತನಾಗಿದ್ದು ಆತ ತನ್ನ ಹುಂಡೈ ಇಯೋನ್ ಕಾರನ್ನು ಬಾಡಿಗೆ ಕೊಟ್ಟಿದ್ದ. ಆರೋಪಿಗಳು ಕಾರನ್ನು ಪಡೆದು ಕೊಲೆ ಕೃತ್ಯ ಎಸಗಿದ್ದರು. ಸಿಸಿಟಿವಿಯಲ್ಲಿ ದಾಖಲಾದ ದೃಶ್ಯಗಳನ್ನು ಆಧರಿಸಿ ಹುಂಡೈ ಇಯೋನ್ ಕಾರು ಎನ್ನುವುದು ತಿಳಿದುಬಂದಿತ್ತು.‌ ಆದರೆ ಕಾರಿನ ನಂಬರ್ ಸ್ಪಷ್ಟವಾಗಿ ತಿಳಿದುಬಂದಿರಲಿಲ್ಲ. ಹೀಗಾಗಿ ಆ ಮಾಡೆಲಿನಲ್ಲಿ ಮಂಗಳೂರಿನಲ್ಲಿ ನೋಂದಣಿಯಾದ ಕಾರುಗಳ ಬಗ್ಗೆ ಮಾಹಿತಿ ಸಂಗ್ರಹಿಸಿ ಹಲವರನ್ನು ವಿಚಾರಣೆಗೊಳಪಡಿಸಿದ್ದೆವೆ. ಎಂಟಕ್ಕೂ ಹೆಚ್ಚು ಕಾರುಗಳನ್ನು ವಶಕ್ಕೆ ಪಡೆಯಲಾಗಿತ್ತು. ಕೆಲವನ್ನು ಸುರತ್ಕಲ್ ಠಾಣೆಯಲ್ಲಿ ಇರಿಸಲಾಗಿದೆ. 

ಕೊನೆಗೆ, ಅಜಿತ್ ಡಿಸೋಜ ಕಾರನ್ನು ಬಾಡಿಗೆ ಕೊಡುವ ಮಾಹಿತಿ ಪಡೆದು ವಿಚಾರಣೆ ನಡೆಸಲಾಗಿತ್ತು. ಆತನ ಕಾರನ್ನು ಬಾಡಿಗೆ ಪಡೆದವರೇ ಕೃತ್ಯ ಎಸಗಿದ್ದರು ಎನ್ನೋದು ಖರೆಯಾಗುತ್ತಲೇ ಕಾರಿನ ಮಾಲಕನನ್ನು ಅರೆಸ್ಟ್ ‌ಮಾಡಿದ್ದೇವೆ. ಆದರೆ ಕೃತ್ಯಕ್ಕೆ ಬಳಸಿದ್ದ ಕಾರು ಇನ್ನೂ ಪೊಲೀಸರ ವಶಕ್ಕೆ ಸಿಕ್ಕಿಲ್ಲ.‌ ಅದು ಇನ್ನೂ ಆರೋಪಿಗಳ ಬಳಿಯೇ ಇರುವ ಶಂಕೆಯಿದೆ. ಆರೋಪಿಗಳ ಬಗ್ಗೆ ಖಚಿತ ಮಾಹಿತಿ ಸಿಕ್ಕಿದ್ದು ಶೋಧ ನಡೆಸಲಾಗಿದೆ. ನಾವು ಬಂಧಿಸುತ್ತೇವೆ ಎಂದು ಪೊಲೀಸ್ ಕಮಿಷನರ್ ಶಶಿಕುಮಾರ್ ಹೇಳಿದ್ದಾರೆ. 

ಸದ್ಯಕ್ಕೆ ಬಂಧಿಸಿರುವ ಆರೋಪಿಯನ್ನು ಇನ್ನೂ ವಿಚಾರಣೆಗೆ ಒಳಪಡಿಸಲಿದ್ದು ಕೋರ್ಟಿಗೆ ಹಾಜರುಪಡಿಸಿ ಕಸ್ಟಡಿಗೆ ಪಡೆಯುತ್ತೇವೆ. ಈತನಿಗೆ ಒಬ್ಬ ಆರೋಪಿಯ ಪರಿಚಯ ಇದೆ, ಆ ವ್ಯಕ್ತಿ ಯಾವಾಗಲೂ ಕಾರು ತೆಗೆದುಕೊಂಡು ಹೋಗುತ್ತಿದ್ದ.‌ ಅದರ ಆಧಾರದಲ್ಲಿ ನಾವು ತನಿಖೆ ನಡೆಸ್ತೀವಿ. ಶೀಘ್ರದಲ್ಲೇ ಆರೋಪಿಗಳ ಬಂಧನ ಮಾಡುತ್ತೇವೆ ಎಂದು ತಿಳಿಸಿದ್ದಾರೆ.

Surathkal Fazil Murder case, car owner Ajith Dsouza who had rented the car for the murder has been arrested Mangalore Police. The car is still missing as the accused have escaped using the car. The police are in search of the missing car and the accused.