ಬೆಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳಿಗೆ ಡ್ರಗ್ಸ್ ; ಮಲಯಾಳಂ ನಟ ಸೇರಿ ಮೂವರ ಬಂಧನ 

23-09-22 06:35 pm       Bangalore Correspondent   ಕ್ರೈಂ

ಬೆಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿಕೊಂಡು ಡ್ರಗ್ಸ್ ಮಾರಾಟ ಮಾಡುತ್ತಿದ್ದ ಮಲಯಾಳಿ ಕಿರುತೆರೆ ನಟ ಸೇರಿ ಮೂವರನ್ನು‌ ಬೆಂಗಳೂರಿನ ಹೆಚ್ಎಸ್ಆರ್ ಲೇಔಟ್ ಪೊಲೀಸರು ಬಂಧಿಸಿದ್ದಾರೆ. 

ಬೆಂಗಳೂರು, ಸೆ.23 : ಬೆಂಗಳೂರಿನಲ್ಲಿ ಕಾಲೇಜು ವಿದ್ಯಾರ್ಥಿಗಳನ್ನೇ ಟಾರ್ಗೆಟ್ ಮಾಡಿಕೊಂಡು ಡ್ರಗ್ಸ್ ಮಾರಾಟ ಮಾಡುತ್ತಿದ್ದ ಮಲಯಾಳಿ ಕಿರುತೆರೆ ನಟ ಸೇರಿ ಮೂವರನ್ನು‌ ಬೆಂಗಳೂರಿನ ಹೆಚ್ಎಸ್ಆರ್ ಲೇಔಟ್ ಪೊಲೀಸರು ಬಂಧಿಸಿದ್ದಾರೆ. 

ಮಲಯಾಳಂ ನಟ ಶಿಯಾಜ್ ಮತ್ತು ಈತನ ಸ್ನೇಹಿತರಾದ ಮೊಹಮ್ಮದ್ ಶಾಹಿದ್ ಹಾಗೂ ಮಂಗಲ್ ತೋಡಿ ಜಿತೀನ್ ಬಂಧಿತರು. ಆರೋಪಿಗಳಿಂದ 13 ಲಕ್ಷ ರೂ. ಮೌಲ್ಯದ ಮಾದಕ ವಸ್ತುಗಳನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.

ಆರೋಪಿಗಳು ಹೆಚ್​​ಎಸ್ಆರ್, ಕೋರಮಂಗಲ ಭಾಗದಲ್ಲಿನ ಪ್ರತಿಷ್ಠಿತ ಕಾಲೇಜುಗಳನ್ನು ಗುರಿಯಾಗಿಸಿಕೊಂಡು ಡ್ರಗ್ ವ್ಯವಹಾರ ನಡೆಸುತ್ತಿದ್ದರು. ಕೇರಳದಿಂದ ಗಾಂಜಾ ಮತ್ತು ಎಂಡಿಎಂಎ ತರಿಸಿ ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿದ್ದರು ಎಂಬುದು ತಿಳಿದು ಬಂದಿದೆ. ಪ್ರಕರಣ ಸಂಬಂಧ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ. 

Argentina drugs: Adulterated cocaine kills 20 in Buenos Aires - BBC News

ಡ್ರಗ್​ ಪೆಡ್ಲರ್ ನ 1.6 ಕೋಟಿ ಮೌಲ್ಯದ ಆಸ್ತಿ ಜಪ್ತಿ 

ಬೆಂಗಳೂರು ನಗರ ಸಿಸಿಬಿ ಘಟಕದ ಮಾದಕ ದ್ರವ್ಯ ನಿಗ್ರಹ ದಳವು ನಗರದಲ್ಲಿ ಡ್ರಗ್​ ಪೆಡ್ಲರ್​ ಓರ್ವನಿಗೆ ಸೇರಿದ 1.60 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಿದೆ. ಸಿಸಿಬಿ ಪ್ರಕಾರ, ಆರೋಪಿ ಮಾದಕ ವಸ್ತು ದಂಧೆಯಲ್ಲಿ ತೊಡಗಿಸಿಕೊಂಡು ಚರ ಮತ್ತು ಸ್ಥಿರ ಆಸ್ತಿಗಳನ್ನು ಖರೀದಿಸಿದ್ದ. ಎನ್​ಡಿಪಿಎಸ್​ ಕಾಯಿದೆ 5ಎ, ಕಾಲಮ್ 68 (e) ಮತ್ತು (f) ಅಡಿಯಲ್ಲಿ ಆಸ್ತಿಯನ್ನು ವಶಕ್ಕೆ ಪಡೆದುಕೊಳ್ಳಲಾಗಿದೆ.

ಡ್ರಗ್​ ಪೆಡ್ಲರ್​ನನ್ನು ಮೃತ್ಯುಂಜಯ, ಅಲಿಯಾಸ್ ಜಯಣ್ಣ ಎಂದು ಗುರುತಿಸಲಾಗಿದೆ. ಈತನನ್ನು ಪೊಲೀಸ್ ಇನ್ಸ್‌ಪೆಕ್ಟರ್ ಬಿ.ಎಸ್. ಅಶೋಕ್ ಅವರು ಜುಲೈನಲ್ಲಿ ಬಂಧಿಸಿ 80 ಲಕ್ಷ ಮೌಲ್ಯದ ಹಾಶಿಶ್ ಆಯಿಲ್ ಮತ್ತು ಗಾಂಜಾ ವಶಕ್ಕೆ ಪಡೆದಿದ್ದರು.

The Karnataka police have arrested three drug peddlers, including a small screen actor in Kerala, and seized 191 grams of MDMA and 2.80 kilograms of ganja valued at Rs 13 lakh from them on Friday.The accused are identified as Siyaz, Mohammad Shahid and Mangal Thodi Jathin. All the accused are from Kerala and accused Shiyaz worked as an actor in Malayalam television.