ಬ್ರೇಕಿಂಗ್ ನ್ಯೂಸ್
08-08-23 02:32 pm Mangalore Correspondent ಕ್ರೈಂ
ಮಂಗಳೂರು, ಆಗಸ್ಟ್ 8: ಮಂಗಳೂರಿನಲ್ಲಿ ಗಾಂಜಾ ಮಿಶ್ರಿತ ಚಾಕಲೇಟ್ ಪತ್ತೆ ಪ್ರಕರಣದಲ್ಲಿ ಪೊಲೀಸರು ಫಾರೆನ್ಸಿಕ್ ವರದಿ ಪಡೆದಿದ್ದು ಚಾಕಲೇಟ್ ನಲ್ಲಿ ಗಾಂಜಾ ಅಂಶ ಪತ್ತೆಯಾಗಿದೆ ಎಂದು ಕಮಿಷನರ್ ಕುಲದೀಪ್ ಜೈನ್ ಮಾಹಿತಿ ನೀಡಿದ್ದಾರೆ. ಅಲ್ಲದೆ, ಇಬ್ಬರು ಆರೋಪಿಗಳ ವಿರುದ್ಧ ಎನ್ ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಜುಲೈ 19ರಂದು ಮೂರು ಗೋಣಿ ಚೀಲಗಳಲ್ಲಿ ಬಚ್ಚಿಟ್ಟಿದ್ದ ಸುಮಾರು 107 ಕೇಜಿ ಬಾಂಗ್ ಚಾಕಲೇಟ್ ಪತ್ತೆಯಾಗಿತ್ತು. ರಥಬೀದಿಯ ವೈಭವ್ ಪೂಜಾ ಸೇಲ್ಸ್ ಅಂಗಡಿ ಮತ್ತು ಫಳ್ನೀರಿನ ಗೂಡಂಗಡಿಯಲ್ಲಿ ಮಾರಾಟಕ್ಕಿಟ್ಟಿದ್ದ ಚಾಕಲೇಟನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಇದೀಗ ಫಾರೆನ್ಸಿಕ್ ತಜ್ಞರ ವರದಿಯಲ್ಲಿ ಚಾಕಲೇಟಿನಲ್ಲಿ ಗಾಂಜಾ ಅಂಶ ಇರುವುದು ಪತ್ತೆಯಾಗಿದ್ದು ಆರೋಪಿಗಳಾದ ಮನೋಹರ್ ಶೇಟ್ (49) ಮತ್ತು ಬೆಚನ್ ಸೋನ್ಕರ್ (34) ವಿರುದ್ಧ ಮಾದಕ ವಸ್ತು ನಿಷೇಧ ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ.
ಪೂಜಾ ಸೇಲ್ಸ್ ಅಂಗಡಿಯಲ್ಲಿ 20 ರೂ.ಗೆ ಚಾಕಲೇಟ್ ಮಾರುತ್ತಿದ್ದ ಬಗ್ಗೆ ವಿದ್ಯಾರ್ಥಿಗಳು ನೀಡಿದ್ದ ಮಾಹಿತಿ ಆಧರಿಸಿ ಪೊಲೀಸರು ಕಾರ್ಯಾಚರಣೆ ನಡೆಸಿದ್ದರು. ಆದರೆ ವೈಭವ್ ಪೂಜಾ ಸೇಲ್ಸ್ ಅಂಗಡಿಯ ಮಾಲಕ ಮನೋಹರ ಶೇಟ್ ಪ್ರತಿ ವರ್ಷವೂ ನವರಾತ್ರಿ, ಹೋಳಿ ಸಂದರ್ಭದಲ್ಲಿ ಬಾಂಗ್ ಚಾಕಲೇಟ್ ಮಾರುತ್ತಿದ್ದೇನೆ. ಈ ಬಾರಿಯೂ ಮಾರಾಟಕ್ಕೆ ತಂದಿರಿಸಿದ್ದಾಗಿ ಹೇಳಿಕೆ ನೀಡಿದ್ದರು.
ಹಾಗಾಗಿ ಪೊಲೀಸರು ಬಾಂಗ್ ಚಾಕಲೇಟ್ ವಶಕ್ಕೆ ಪಡೆದು ನೋಟಿಸ್ ಕೊಟ್ಟು ತೆರಳಿದ್ದರು. ಇದೀಗ ಫಾರೆನ್ಸಿಕ್ ವರದಿ ಆಧರಿಸಿ ಆರೋಪಿಗಳ ವಿರುದ್ಧ ಹೆಚ್ಚುವರಿ ಕೇಸು ದಾಖಲು ಮಾಡಿದ್ದಾರೆ. ಮಂಗಳೂರನ್ನು ಡ್ರಗ್ಸ್ ಮುಕ್ತ ಮಾಡುವ ನಿಟ್ಟಿನಲ್ಲಿ ಸತತವಾಗಿ ಪೊಲೀಸರು ದಾಳಿ ನಡೆಸುತ್ತಿದ್ದು ಕಾಲೇಜು ಕ್ಯಾಂಪಸ್ಗಳಲ್ಲಿ ಜಾಗೃತಿಯನ್ನೂ ಮೂಡಿಸುತ್ತಿದ್ದಾರೆ. ಇದೇ ಸಂದರ್ಭದಲ್ಲಿ ಬಾಂಗ್ ಚಾಕಲೇಟ್ ಮಾರಾಟ ಆಗುತ್ತಿರುವ ಬಗ್ಗೆ ಮಾಹಿತಿ ಆಧರಿಸಿ ಪೊಲೀಸರು ದಾಳಿ ನಡೆಸಿದ್ದರು.
ಬಾಂಗ್ ಅನ್ನೋದು ಉತ್ತರ ಪ್ರದೇಶದಲ್ಲಿ ಕಾಮನ್ ಆಗಿರುವ ಪ ಪದಾರ್ಥ. ಬಾಂಗ್ ಹೆಸರಲ್ಲಿ ಪಾನ್ ಬೀಡಾ ರೀತಿಯಲ್ಲೇ ಮಾರಾಟ ಮಾಡುತ್ತಾರೆ. ಗಾಂಜಾ ಹೂವು ಮತ್ತು ಹಣ್ಣನ್ನು ಬಳಸಿ ಬಾಂಗ್ ತಯಾರಿಸುತ್ತಿದ್ದು ಒಂದು ರೀತಿಯ ಅಮಲು ಪದಾರ್ಥವಾಗಿದೆ. ಅದೇ ಬಾಂಗ್ ಅನ್ನು ಚಾಕಲೇಟಿನಲ್ಲಿ ಮಿಕ್ಸ್ ಮಾಡಿದ್ದು ಅವನ್ನು ಮಾರುಕಟ್ಟೆಗೆ ಬಿಡಲಾಗಿದೆ. ಗಾಂಜಾ ಅಂಶ ಇರುವುದರಿಂದ ಮಾದಕ ವಸ್ತುಗಳ ಮಾರಾಟ ನಿಷೇಧ ಕಾಯ್ದೆಯಡಿ ಬಾಂಗ್ ಚಾಕಲೇಟ್ ಮಾರಾಟವೂ ನಿಷೇಧ ಆಗಿರುತ್ತದೆ.
A case under the NDPS (Narcotic Drugs and Psychotropic Substances) Act has been booked against two petty shopkeepers caught with over Bhang chocolates worth over Rs 17,000 worth possessed by two petty shopkeepers after lab tests.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
11-01-26 09:59 pm
Mangaluru Staff
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm