ಬ್ರೇಕಿಂಗ್ ನ್ಯೂಸ್
13-08-23 06:06 pm HK News Desk ಕ್ರೈಂ
ಕೋಜಿಕ್ಕೋಡ್, ಆಗಸ್ಟ್ 13: 78 ವರ್ಷದ ವ್ಯಕ್ತಿಯೊಬ್ಬರು ತನ್ನ ರೈಲು ಟಿಕೆಟನ್ನು ಕ್ಯಾನ್ಸಲ್ ಮಾಡಲು ಹೋಗಿ 4 ಲಕ್ಷ ರೂಪಾಯಿ ಕಳಕೊಂಡ ಘಟನೆ ಕೇರಳದ ಕೋಜಿಕ್ಕೋಡ್ ಜಿಲ್ಲೆಯಲ್ಲಿ ನಡೆದಿದೆ. ಮೊಹಮ್ಮದ್ ಬಶೀರ್ ಎಂಬವರು ರೈಲ್ವೇಯ ಐಆರ್ ಸಿಟಿಸಿ ವೆಬ್ ಸೈಟ್ ನಲ್ಲಿ ರೈಲು ಟಿಕೆಟನ್ನು ರದ್ದುಪಡಿಸಲು ಯತ್ನಿಸಿ ಆನ್ಲೈನ್ ವಂಚಕರ ಬಲೆಗೆ ಸಿಲುಕಿ 4 ಲಕ್ಷ ರೂಪಾಯಿ ಕಳಕೊಂಡಿದ್ದಾರೆ.
ಬಶೀರ್ ರೈಲು ಟಿಕೆಟನ್ನು ರದ್ದುಪಡಿಸಲು ಫೇಕ್ ವೆಬ್ ಸೈಟಿಗೆ ಎಂಟ್ರಿ ಕೊಟ್ಟಿದ್ದರು. ಕೆಲ ಹೊತ್ತಿನಲ್ಲೇ ಬಶೀರ್ ಗೆ ರೈಲ್ವೇ ಅಧಿಕಾರಿಯೆಂದು ಇಂಗ್ಲಿಷ್ ಮತ್ತು ಹಿಂದಿಯಲ್ಲಿ ಮಾತನಾಡುತ್ತಿದ್ದ ಅಪರಿಚಿತನ ಕರೆ ಬಂದಿದ್ದು, ರೈಲು ಟಿಕೆಟ್ ಕ್ಯಾನ್ಸಲ್ ಮಾಡಲು ತಾನು ಹೇಳಿದಂತೆ ಮಾಡುವಂತೆ ಸೂಚಿಸಿದ್ದಾನೆ. ಆತನ ಸೂಚನೆಯಂತೆ, ಗೂಗಲ್ ನಲ್ಲಿ ಟಿಕೆಟ್ ಕ್ಯಾನ್ಸಲ್ ಮಾಡಲು ಹೇಳಿದ ರೀತಿಯಲ್ಲೇ ಮಾಡಿದ್ದರು. ಅಲ್ಲದೆ, ಬ್ಯಾಂಕ್ ಖಾತೆ ಮತ್ತು ಎಟಿಎಂ ಕಾರ್ಡ್ ನಂಬರ್ ಪಡೆದಿದ್ದು, ರೈಲು ಟಿಕೆಟಿನ ರದ್ದಾದ ಹಣವನ್ನು ಖಾತೆಗೆ ಹಿಂತಿರುಗಿಸುವುದಾಗಿ ನಂಬಿಸಿದ್ದ. ಸ್ವಲ್ಪ ಹೊತ್ತಿನಲ್ಲೇ ಬಶೀರ್ ಅವರ ಮೊಬೈಲಿನಲ್ಲಿ ಬ್ಲೂ ಮಾರ್ಕ್ ಬಂದಿದ್ದು, ಅಷ್ಟರಲ್ಲಿ ಇಡೀ ಮೊಬೈಲ್ ಮತ್ತು ಅದರಲ್ಲಿದ್ದ ಅಪ್ಲಿಕೇಶನ್ ಮಾಹಿತಿಯನ್ನು ಆಗಂತುಕ ಪಡೆದುಕೊಂಡಿದ್ದ.
ಕೆಲ ಹೊತ್ತಿನಲ್ಲೇ ಬ್ಯಾಂಕ್ ಖಾತೆಯಿಂದ ಹಂತ ಹಂತವಾಗಿ ಹಣ ಖಾಲಿಯಾಗಿದ್ದರ ಮೆಸೇಜ್ ಬಂದಿತ್ತು. ನಾಲ್ಕು ಪ್ರಯತ್ನದಲ್ಲಿ 4.5 ಲಕ್ಷ ರೂ. ವರೆಗೆ ಹಣವನ್ನು ವಂಚಕರು ಕಿತ್ತುಕೊಂಡಿದ್ದರು. ಅಷ್ಟರಲ್ಲಿ ಬಶೀರ್ ಬ್ಯಾಂಕ್ ಕಚೇರಿಗೆ ತಿಳಿಸಿ, ತನ್ನ ಖಾತೆಯನ್ನು ಬ್ಲಾಕ್ ಮಾಡಿಸಿದ್ದು ಸೈಬರ್ ಪೊಲೀಸರಿಗೂ ದೂರು ನೀಡಿದ್ದಾರೆ. ಆನಂತರವೂ ಅಪರಿಚಿತರು ಬೇರೆ ಬೇರೆ ಮೊಬೈಲ್ ಸಂಖ್ಯೆಯಿಂದ ನಾಲ್ಕು ಬಾರಿ ಬಶೀರ್ ಅವರಿಗೆ ಫೋನ್ ಮಾಡಿದ್ದರು. ಪೊಲೀಸರ ತನಿಖೆಯಲ್ಲಿ ಮೊಬೈಲಿನಲ್ಲಿ Rest Desk ಎಂಬ ಹೆಸರಿನ ಏಪ್ ಡೌನ್ಲೋಡ್ ಮಾಡಲು ತಿಳಿಸಿದ್ದು, ಡೌನ್ಲೋಡ್ ಮಾಡಿದ ಬೆನ್ನಲ್ಲೇ ಮೊಬೈಲ್ ಮಾಹಿತಿ ಸೋರಿಕೆಯಾಗಿತ್ತು ಅನ್ನುವುದು ಪತ್ತೆಯಾಗಿದೆ. ಅಲ್ಲದೆ, ಪಶ್ಚಿಮ ಬಂಗಾಳದ ಕೊಲ್ಕತ್ತಾದಲ್ಲಿರುವ ನಾಲ್ಕು ಬ್ಯಾಂಕ್ ಖಾತೆಗಳಿಗೆ 4,05,919 ರೂಪಾಯಿ ಹಣ ಹೋಗಿರುವುದು ಪತ್ತೆಯಾಗಿದೆ. ಬಶೀರ್ ಗೆ ಕರೆ ಮಾಡಿದ್ದು ಬಿಹಾರ ಮತ್ತು ಪಶ್ಚಿಮ ಬಂಗಾಳದಿಂದ ಎನ್ನುವ ಮಾಹಿತಿಯನ್ನು ಪೊಲೀಸರು ಪತ್ತೆ ಮಾಡಿದ್ದಾರೆ.
A 78-year-old man attempting to cancel train tickets on the IRCTC website lost Rs 4 lakh in an online scam, falling victim to a fake website and a person posing as a railway employee who gained access to his device and personal information. Scammers deployed various malware tools such as Remote Access Trojans (RATs), keyloggers, and spyware to control his device, leading to the unauthorized withdrawal of funds from his bank accounts.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 12:31 pm
Mangalore Correspondent
Akanksha Death, Punjab, Dharmasthala, Mangalo...
18-05-25 12:42 pm
Ullal, U T Khader, Mangalore: ಎರಡು ವರ್ಷವಾದರೂ...
17-05-25 10:09 pm
Mangalore Balmatta Accident, Bus, Video: ನಿಂತ...
17-05-25 08:52 pm
Sakleshpur Subrahmanya Railway Electrificatio...
17-05-25 01:01 pm
19-05-25 03:35 pm
HK News Desk
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm
Mangalore Stabbing, Panemangalore, Crime, Att...
16-05-25 11:06 pm