ಬ್ರೇಕಿಂಗ್ ನ್ಯೂಸ್
14-08-23 10:59 pm Bangalore Correspondent ಕ್ರೈಂ
ಬೆಂಗಳೂರು, ಆಗಸ್ಟ್ 14: ಬ್ಯಾಂಕಿನಿಂದ ಒಂದೂವರೆ ಕೋಟಿ ಸಾಲ ಪಡೆದು ವಂಚಿಸಿದ್ದ ಹಿರಿಯ ವಕೀಲರೊಬ್ಬರಿಗೆ ಹೈಕೋರ್ಟ್ ಛೀಮಾರಿ ಹಾಕಿದೆ. ಸಾಲ ಪಡೆದು ತೀರಿಸದೇ ಇದ್ದರೆ, ಆತ ಸಾಲಗಾರನೇ.. ಆತ ವೃತ್ತಿಯಲ್ಲಿ ವಕೀಲ ಅಥವಾ ನ್ಯಾಯಾಧೀಶ ಅನ್ನುವ ಭೇದ ಇರುವುದಿಲ್ಲ. ಬೇರೆ ಆಸ್ತಿಗಳನ್ನು ಹೊಂದಿದ್ದರೂ ದಿವಾಳಿತನ ಎಂದು ಹೇಳಿ ಸಾಲದಿಂದ ಪಾರಾಗಲು ಸಾಧ್ಯವಿಲ್ಲ. ಸಾಲದ ಹಣವನ್ನು ವಸೂಲಿ ಮಾಡಲು ಬ್ಯಾಂಕಿಗೆ ಹಕ್ಕಿರುತ್ತದೆ ಎಂದು ಹೈಕೋರ್ಟ್ ಹೇಳಿದ್ದಲ್ಲದೆ, ಆರೋಪಿ ವಕೀಲರಿಗೆ ಸಂಬಂಧಪಟ್ಟ ಆಸ್ತಿಯನ್ನು ಮಾರಾಟ ಮಾಡಿ ಸಾಲದ ಹಣವನ್ನು ತುಂಬಿಸಿಕೊಳ್ಳಲು ಬ್ಯಾಂಕಿಗೆ ಅವಕಾಶ ನೀಡಿದೆ.
ಬೆಂಗಳೂರಿನ ಹಿರಿಯ ವಕೀಲರಾಗಿರುವ ರವೀಂದ್ರನಾಥ ಕಾಮತ್ ಮತ್ತು ಸಾಲ ನೀಡಿದ್ದ ಸುಬ್ರಹ್ಮಣ್ಯೇಶ್ವರ ಕೋ ಆಪರೇಟಿವ್ ಬ್ಯಾಂಕ್ ಜೊತೆಗಿನ ವ್ಯಾಜ್ಯದಲ್ಲಿ ಕೋರ್ಟ್ ಈ ತೀರ್ಪು ನೀಡಿದೆ. ರವೀಂದ್ರನಾಥ ಕಾಮತ್, 2017ರಲ್ಲಿ ಬ್ಯಾಂಕಿನಿಂದ 1.50 ಕೋಟಿ ಸಾಲ ಪಡೆದಿದ್ದು, ಈ ವೇಳೆ 120 ಕಂತುಗಳಲ್ಲಿ ತಿಂಗಳಿಗೆ 2.37 ಲಕ್ಷ ರೂ.ನಂತೆ 14.5 ಶೇಕಡಾ ಬಡ್ಡಿಯೊಂದಿಗೆ ಮರು ಪಾವತಿಗೆ ಒಪ್ಪಂದ ಆಗಿತ್ತು. ಆದರೆ, ಸಾಲ ಪಡೆದ ಬಳಿಕ ಹಣ ಪಾವತಿ ಮಾಡದೆ ರವೀಂದ್ರನಾಥ ಕಾಮತ್ ವಂಚಿಸಿದ್ದಾಗಿ ಬ್ಯಾಂಕಿನ ಜನರಲ್ ಮ್ಯಾನೇಜರ್ ಬೆಂಗಳೂರಿನ ಸ್ಥಳೀಯ ಕೋರ್ಟಿನಲ್ಲಿ ದಾವೆ ಹೂಡಿದ್ದರು.
ಅದರಂತೆ, ಸ್ಥಳೀಯ ಕೋರ್ಟ್ ಸಾಲಗಾರನ ಆಸ್ತಿ ಜಪ್ತಿಪಡಿಸಿ ಸಾಲದ ಮೊತ್ತವನ್ನು ತುಂಬಿಕೊಳ್ಳಲು 2021ರಲ್ಲಿ ಆದೇಶ ಮಾಡಿತ್ತು. ಸ್ಥಳೀಯ ಕೋರ್ಟ್ ತೀರ್ಪನ್ನು ಪ್ರಶ್ನಿಸಿ ರವೀಂದ್ರನಾಥ ಕಾಮತ್ ಹೈಕೋರ್ಟಿನಲ್ಲಿ ರಿಟ್ ಅರ್ಜಿ ಸಲ್ಲಿಸಿದ್ದರು. ಹೈಕೋರ್ಟಿನಲ್ಲಿ ಆರೋಪಿ ರವೀಂದ್ರನಾಥ ಕಾಮತ್ ಪಾರ್ಟಿ ಇನ್ ಪರ್ಸನ್ ಆಗಿ ಮತ್ತು ದಿವಾಕರ್ ಕೆ. ಹೆಚ್ಚುವರಿ ವಕೀಲರಾಗಿ ವಾದಿಸಿದ್ದರು. ಕೋವಿಡ್ ಕಾರಣದಿಂದ ನಷ್ಟಗೊಂಡು ಸಾಲ ತೀರಿಸಲು ಕಷ್ಟವಾಗಿತ್ತು ಎಂದು ಹೇಳಿದ್ದಲ್ಲದೆ, ಪ್ರತೀ ಬಾರಿ ವಿಚಾರಣೆ ಸಂದರ್ಭದಲ್ಲಿ ಸಾಲದ ಹಣ ಕಟ್ಟುವುದಾಗಿ ಹೇಳಿ ವಕೀಲರು ಗಡುವು ಕೇಳಿಕೊಂಡು ಬಂದಿದ್ದರು. ಈ ನಡುವೆ, 62 ಲಕ್ಷ ರೂಪಾಯಿ ಹಣವನ್ನು ಬ್ಯಾಂಕಿಗೆ ಕಟ್ಟಿರುವ ಬಗ್ಗೆ ಮಾಹಿತಿ ನೀಡಿದ್ದರು.
ಸತತ ಮನವಿ, ಗಡುವಿನ ಬಳಿಕ ಕಳೆದ ಮಾರ್ಚ್ ತಿಂಗಳಲ್ಲಿ ಹೈಕೋರ್ಟ್ 25 ಲಕ್ಷ ಡಿಪಾಸಿಟ್ ಮಾಡುವಂತೆ ಹೇಳಿದ್ದಲ್ಲದೆ, 70 ಲಕ್ಷ ಹಣವನ್ನು ಕೋರ್ಟಿನ ಮೂಲಕ ಜಮಾ ಮಾಡುವ ಬಗ್ಗೆ ಸೂಚಿಸಿತ್ತು. ಆದರೆ ಕೋರ್ಟ್ ಆದೇಶವನ್ನು ಪಾಲಿಸದೆ ರವೀಂದ್ರನಾಥ ಕಾಮತ್ ನಿರ್ಲಕ್ಷ್ಯ ಮಾಡಿದ್ದರು. ಈ ಬಗ್ಗೆ ಬ್ಯಾಂಕಿನ ಪರ ವಕೀಲರು, ಆರೋಪಿ ವಕೀಲರು ಕೊಡಗಿನಲ್ಲಿ ಮತ್ತು ಬೆಂಗಳೂರಿನಲ್ಲಿ ಆಸ್ತಿ ಹೊಂದಿರುವ ಬಗ್ಗೆ ತಿಳಿಸಿದ್ದು, ಅದನ್ನು ಜಪ್ತಿ ಮಾಡಲು ಅವಕಾಶ ಕೇಳಿದ್ದರು. ಬ್ಯಾಂಕಿನದ್ದು ಸಾರ್ವಜನಿಕ ಆಸ್ತಿಯಾಗಿದ್ದರಿಂದ ಅದನ್ನು ಕಟ್ಟಿಸಿಕೊಳ್ಳದೆ ಬೇರೆ ಗತಿಯಿಲ್ಲ ಎಂದು ವಾದಿಸಿದ್ದರು. ಆನಂತರ, ಜುಲೈ ಒಳಗೆ ನಿಗದಿಯಂತೆ ಆರೋಪಿ ಹಣ ಪಾವತಿ ಮಾಡದೇ ಇದ್ದಲ್ಲಿ ಆಸ್ತಿ ಜಪ್ತಿ ಮಾಡುವ ಬಗ್ಗೆ ಹೈಕೋರ್ಟ್ ಸೂಚಿಸಿತ್ತು. ಆದರೆ ಬ್ಯಾಂಕಿನವರು 70 ಲಕ್ಷ ಹಣದ ಜೊತೆಗೆ 12 ಲಕ್ಷ ಜಿಎಸ್ಟಿ ಇನ್ನಿತರ ತೆರಿಗೆಯನ್ನೂ ಪಾವತಿ ಮಾಡಬೇಕೆಂದು ಕೇಳಿಕೊಂಡಿದ್ದರು. ಹೀಗಾಗಿ ಹಣ ಪಾವತಿ ಆಗಿರಲಿಲ್ಲ.
ಇದೀಗ ಕೋರ್ಟ್, ಸತತ ಮನವಿಯ ಹೊರತಾಗಿಯೂ ಆರೋಪಿ ವಕೀಲರು ಸಾಲ ಮರುಪಾವತಿ ಮಾಡಲು ಸೋತಿದ್ದಾರೆ. ಹೀಗಾಗಿ ಬ್ಯಾಂಕಿಗೆ ಇರುವ ಎಲ್ಲ ಅವಕಾಶಗಳನ್ನು ಮುಕ್ತವಾಗಿಸುವುದಾಗಿ ಹೇಳಿದ್ದಲ್ಲದೆ, ಸಾಲಗಾರನ ಬಗ್ಗೆ ಯಾವುದೇ ರಿಯಾಯಿತಿ ತೋರಲು ಸಾಧ್ಯವಿಲ್ಲ. ಇದರೊಂದಿಗೆ ರಿಟ್ ಅರ್ಜಿಯನ್ನು ವಜಾಗೊಳಿಸುವುದಾಗಿ ಕೃಷ್ಣ ದೀಕ್ಷಿತ್ ಅವರಿದ್ದ ನ್ಯಾಯಪೀಠವು ಆದೇಶ ಮಾಡಿದೆ.
1.5 crore fraud by Lawyer, High court slams advocate, Orders for procession of assets in Bangalore.
19-05-25 04:00 pm
HK News Desk
Bjp, Radha Mohan Das Agarwal: 1971ರ ಯುದ್ಧ ಗೆಲ...
17-05-25 01:44 pm
Santosh Lad, Modi, Pak, War: ಮೋದಿ ತಾವೇ ಸುಪ್ರೀ...
16-05-25 10:04 am
Davanagere Sp, Constable Accident: ದಾವಣಗೆರೆಯಲ...
15-05-25 10:16 pm
Yatnal FIR, Mahatma Gandhi; ಮಹಾತ್ಮ ಗಾಂಧಿ ಪಾಕಿ...
15-05-25 11:59 am
19-05-25 02:25 pm
HK News Desk
ಚಾರ್ಮಿನಾರ್ ಬಳಿಯ ಗುಲ್ಜಾರ್ ಹೌಸ್ನಲ್ಲಿ ಬೆಂಕಿ ಅವ...
19-05-25 01:46 pm
Brijesh Chowta, Tejaswi Surya: ಪಾಕ್ ಪ್ರೇರಿತ ಭ...
18-05-25 08:23 pm
ಪಾಕ್ ಪರವಾಗಿ ಬೇಹುಗಾರಿಕೆ ; ಭಾರತೀಯ ಸೇನಾ ಮಾಹಿತಿ ಸ...
17-05-25 10:51 pm
Donald Trump, Asim Munir: ಡೊನಾಲ್ಡ್ ಟ್ರಂಪ್ ಕುಟ...
17-05-25 03:42 pm
19-05-25 05:22 pm
Mangalore Correspondent
Akanksha Suicide, Dharmasthala, Mangalore: ಏರ...
19-05-25 12:31 pm
Akanksha Death, Punjab, Dharmasthala, Mangalo...
18-05-25 12:42 pm
Ullal, U T Khader, Mangalore: ಎರಡು ವರ್ಷವಾದರೂ...
17-05-25 10:09 pm
Mangalore Balmatta Accident, Bus, Video: ನಿಂತ...
17-05-25 08:52 pm
19-05-25 03:35 pm
HK News Desk
Reshma Bariga, FIR, Mangalore; ಆಪರೇಶನ್ ಸಿಂಧೂರ...
18-05-25 07:45 pm
Suhas Shetty, BJP Corporator Shweta Poojary,...
18-05-25 07:35 pm
Bangalore Cigarette Murder, Video Viral: ಕಾರಿ...
17-05-25 05:00 pm
Mangalore Stabbing, Panemangalore, Crime, Att...
16-05-25 11:06 pm