Loan mobile app, women black mail, Mangalore: ಲೋನ್ ಆ್ಯಪ್ ಮೂಲಕ ಸಾಲ ಪಡೆದ ಲೇಡಿ ; ಸಾಲ ಮರುಪಾವತಿಸಿದ ಬಳಿಕವೂ ಹೆಚ್ಚಿನ‌ ಹಣಕ್ಕೆ ಡಿಮ್ಯಾಂಡ್, ನಗ್ನ ಪೊಟೋ ವೈರಲ್​ ಮಾಡುವುದಾಗಿ ಹೇಳಿ ಬ್ಲಾಕ್ ಮೇಲ್ 

25-08-23 06:34 pm       Mangalore Correspondent   ಕ್ರೈಂ

ಲೋನ್ ಆ್ಯಪ್ ಮೂಲಕ ಸಾಲ ಪಡೆದ ಮಹಿಳೆಗೆ ಸಾಲ ಮರುಪಾವತಿಸಿದ ಬಳಿಕವೂ ಹೆಚ್ಚಿನ‌ ಹಣಕ್ಕೆ ಒತ್ತಾಯಿಸಿ ನಗ್ನ ಪೊಟೋ ಹರಿಬಿಡುವ ಬೆದರಿಕೆ ಹಾಕಲಾಗಿದೆ.

ಮಂಗಳೂರು, ಆಗಸ್ಟ್ 25: ಲೋನ್ ಆ್ಯಪ್ ಮೂಲಕ ಸಾಲ ಪಡೆದ ಮಹಿಳೆಗೆ ಸಾಲ ಮರುಪಾವತಿಸಿದ ಬಳಿಕವೂ ಹೆಚ್ಚಿನ‌ ಹಣಕ್ಕೆ ಒತ್ತಾಯಿಸಿ ನಗ್ನ ಪೊಟೋ ಹರಿಬಿಡುವ ಬೆದರಿಕೆ ಹಾಕಲಾಗಿದೆ. ಈ ಬಗ್ಗೆ ನೊಂದ ಮಹಿಳೆ ಪೊಲೀಸ್​ ಠಾಣೆಯಲ್ಲಿ ದೂರು ನೀಡಿದ್ದಾರೆ.

ಏಪ್ರಿಲ್ 15ರಂದು ಮಹಿಳೆ ಗೂಗಲ್ ಪ್ಲೇ ಸ್ಟೋರ್​​ನಿಂದ ಲೋನ್ ಆ್ಯಪ್​ವೊಂದನ್ನು ಡೌನ್​ಲೋಡ್ ಮಾಡಿ, ಅದರಲ್ಲಿ 10,000 ರೂಪಾಯಿ ಲೋನ್​ಗೆ ಅಪ್ಲೈ ಮಾಡಿದ್ದರು. ಕೂಡಲೇ ಅವರ ಖಾತೆಗೆ 7,500 ರೂ. ಕ್ರೆಡಿಟ್ ಆಗಿತ್ತು. ಸ್ವಲ್ಪ ದಿನಗಳ ನಂತರ 10000 ರೂ.ಗಳನ್ನು ಮರು ಪಾವತಿ ಮಾಡಿರುವುದಾಗಿ ಮಹಿಳೆ ದೂರಿನಲ್ಲಿ ತಿಳಿಸಿದ್ದಾರೆ.

ಸಾಲ ತೀರಿಸಿದ ನಂತರದ ದಿನಗಳಲ್ಲಿಯೂ ವಿವಿಧ ವಾಟ್ಸ್​ಆ್ಯಪ್ ನಂಬರ್​ಗಳ ಮೂಲಕ ಮಹಿಳೆಗೆ ಪುನಃ ಕಡ್ಡಾಯವಾಗಿ ಮತ್ತೆ ಲೋನ್​ ಪಡೆಯಬೇಕು ಎಂದು ಒತ್ತಾಯಿಸಿ ಅವರ ಖಾತೆಗೆ 14,000 ರೂ. ಕ್ರೆಡಿಟ್ ಮಾಡಿದ್ದಾರೆ. ಈ ಹಣವನ್ನು ಮಹಿಳೆ ಮರುಪಾವತಿ ಮಾಡಿದ್ದರು. ಆದರೆ, ಪಡೆದ ಹಣವನ್ನೆಲ್ಲ ಪಾವತಿಸಿದ ಬಳಿಕವೂ ಆ್ಯಪ್​ನವರ ಕಿರುಕುಳ ಮುಂದುವರೆದಿದ್ದು, ವಿವಿಧ ಮೊಬೈಲ್ ನಂಬರ್​ಗಳಿಂದ ಕರೆ ಮಾಡಿ ಹೆಚ್ಚಿನ ಹಣಕ್ಕೆ ಒತ್ತಾಯಿಸಿದ್ದಾರೆ. ಹೀಗೆ ಹಂತ ಹಂತವಾಗಿ ತನ್ನ ಕಡೆಯಿಂದ ಒಟ್ಟೂ 51,000 ರೂ.ಗಳನ್ನು ಆ್ಯಪ್​ನವರು ಹಾಕಿಸಿಕೊಂಡಿದ್ದಾರೆ ಎಂದು ಮಹಿಳೆ ದೂರಿದ್ದಾರೆ.

ನಂತರವೂ ಕೂಡ ಮಹಿಳೆಗೆ ವಿವಿಧ ನಂಬರ್​​ಗಳಿಂದ ಕರೆ ಮಾಡಿ ಹಣಕ್ಕಾಗಿ ಬೆದರಿಕೆ ಹಾಕಿದ್ದು, ಮಹಿಳೆಯ ಫೋಟೋವನ್ನು ಓರ್ವ ಹುಡುಗನೊಂದಿಗೆ ನಗ್ನವಾಗಿ ಇರುವ ರೀತಿಯಲ್ಲಿ ಎಡಿಟ್ ಮಾಡಿ ಕಳುಹಿಸಿದ್ದಾರೆ. ಹಣ ಕಳಿಸದಿದ್ದರೆ ಫೋಟೋವನ್ನು ಸಂಬಂಧಿಕರು ಹಾಗೂ ಇತರರಿಗೆ ಕಳುಹಿಸಲಾಗುವುದು ಹಾಗೂ ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್​​ ಮಾಡುವುದಾಗಿಯೂ ಬೆದರಿಕೆ ಹಾಕಿದ್ದಾರೆ ಎಂದು ನೊಂದ ಮಹಿಳೆ ಮಂಗಳೂರು ಸೆನ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.

Loan from mobile app, women black mailed of making nude photo viral in Mangalore.