ಬ್ರೇಕಿಂಗ್ ನ್ಯೂಸ್
25-08-23 07:01 pm HK News Desk ಕ್ರೈಂ
ಚೆನ್ನೈ, ಆಗಸ್ಟ್ 25: ಇಂದು ಅಂಗೈ ಅಗಲದ ಮೊಬೈಲ್ ಇದ್ದರೆ ಸಾಕು, ಕುಳಿತಲ್ಲಿಂದಲೇ ಎಲ್ಲಾ ವಿದ್ಯೆಗಳನ್ನೂ ಕಲಿಯಬಹುದು. ಆದರೆ ಈ ಕಲಿಕೆಯನ್ನು ಪ್ರಯೋಗಿಸಲು ಹೊರಟಾಗಲೇ ತಾವು ಕಲಿತ ವಿದ್ಯೆ ಅಪೂರ್ಣ ಎನ್ನುವುದು ಅರಿವಾಗುವುದು. ಇಂತಹ ಪ್ರಯೋಗ, ಸಾಮಾನ್ಯ ವಿಷಯಗಳ ಮೇಲೆ ನಡೆದರೆ ದೊಡ್ಡ ಸಮಸ್ಯೆಯಾಗಲಾರದು. ಆದರೆ ಜೀವದ ಮೇಲೆ ನಡೆದರೆ? ತಮಿಳುನಾಡಿನಲ್ಲಿ ವ್ಯಕ್ತಿಯೊಬ್ಬ ತನ್ನ ಗರ್ಭಿಣಿ ಪತ್ನಿಗೆ ಸ್ವತಃ ತಾನೇ ಹೆರಿಗೆ ಮಾಡಿಸಲು ಹೋಗಿ ಆಕೆಯ ಜೀವ ತೆಗೆದ ದಾರುಣ ಘಟನೆ ವರದಿಯಾಗಿದೆ.
ಯೂಟ್ಯೂಬ್‌ನಲ್ಲಿ ನೋಡಿ ಕಲಿತ ತಂತ್ರವನ್ನು ಬಳಸಿಕೊಂಡು, ಮನೆಯಲ್ಲಿಯೇ ಸಹಜ ಹೆರಿಗೆ ಮಾಡಿಸಲು ಗಂಡ ಮುಂದಾಗಿದ್ದಾನೆ. ಇದರ ಪರಿಣಾಮ ಪ್ರಸವದ ವೇಳೆ ವಿಪರೀತ ರಕ್ತಸ್ರಾವ ಉಂಟಾಗಿ 27 ವರ್ಷದ ಮಹಿಳೆ ಮೃತಪಟ್ಟಿದ್ದಾಳೆ. ತಮಿಳುನಾಡಿನ ಕೃಷ್ಣಗಿರಿ ಜಿಲ್ಲೆಯಲ್ಲಿ ಘಟನೆ ನಡೆದಿದ್ದು, ಹೊಕ್ಕಳು ಬಳ್ಳಿಯನ್ನು ಸರಿಯಾಗಿ ಕತ್ತರಿಸಲು ಆತನಿಗೆ ಸಾಧ್ಯವಾಗದೆ ಇದ್ದಿದ್ದರಿಂದ ಮಹಿಳೆಯಲ್ಲಿ ಭಾರಿ ಪ್ರಮಾಣದಲ್ಲಿ ರಕ್ತ ಸೋರಿಕೆಯಾಗಿದೆ.
ಪೊಚಂಪಳ್ಳಿ ಸಮೀಪದ ಪುಲಿಯಾಂಪಟ್ಟಿ ನಿವಾಸಿಯಾಗಿದ್ದ ಲೋಕನಾಯಕಿಯ ಸಾವಿನ ಕುರಿತು ಪ್ರಾಥಮಿಕ ಆರೋಗ್ಯ ಕೇಂದ್ರದ (ಪಿಎಚ್‌ಸಿ) ವೈದ್ಯಕೀಯ ಅಧಿಕಾರಿ ರಾಧಿಕಾ ಅವರು ಪೊಲೀಸರಿಗೆ ದೂರು ನೀಡಿದ್ದಾರೆ.
ಮಂಗಳವಾರ ಮುಂಜಾನೆ ಲೋಕನಾಯಕಿಯಲ್ಲಿ ಪ್ರಸವ ವೇದನೆ ಕಾಣಿಸಿಕೊಂಡಿತ್ತು. ಆಕೆಯ ಗಂಡ ಮಾದೇಶ್, ತಾನು ಯೂಟ್ಯೂಬ್ ನೋಡಿ ಕಲಿತಿದ್ದ ಹೆರಿಗೆ ವಿಧಾನವನ್ನು ಆಕೆಯ ಮೇಲೆ ಪ್ರಯೋಗಿಸಿದ್ದಾನೆ. ಹೆರಿಗೆ ವೇಳೆ ಹೊಕ್ಕಳು ಬಳ್ಳಿಯನ್ನು ಸಮರ್ಪಕವಾಗಿ ಕತ್ತರಿಸಿರಲಿಲ್ಲ. ಇದರಿಂದ ವಿಪರೀತ ರಕ್ತಸ್ರಾವವಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಮಹಿಳೆಯನ್ನು, ನವಜಾತ ಗಂಡು ಶಿಶುವಿನ ಜತೆ ಪಿಎಚ್‌ಸಿಗೆ ಕರೆತರಲಾಗಿತ್ತು. ಆದರೆ ಆಕೆ ಮೃತಪಟ್ಟಿದ್ದಾಳೆ ಎಂದು ವೈದ್ಯರು ಘೋಷಿಸಿದರು.
ಪಿಎಚ್‌ಸಿ ಅಧಿಕಾರಿ ನೀಡಿದ ದೂರಿನ ಅನ್ವಯ ಸಿಆರ್‌ಪಿಸಿ 174 ಸೆಕ್ಷನ್ ಅಡಿ ಪೊಲೀಸರು, ಮಹಿಳೆಯ ಪತಿ ಮಾದೇಶ್ ವಿರುದ್ಧ ಪ್ರಕರಣ ದಾಖಲಿಸಿದ್ದಾರೆ. ಮನೆಯಲ್ಲಿಯೇ ಗರ್ಭಿಣಿಗೆ ಹೆರಿಗೆ ಮಾಡುವುದು ಹೇಗೆ ಎಂಬ ಬಗ್ಗೆ ಯೂಟ್ಯೂಬ್ ಚಾನೆಲ್‌ಗಳನ್ನು ನಿರಂತರವಾಗಿ ವೀಕ್ಷಿಸುತ್ತಿದ್ದ ಎಂದು ಅಕ್ಕಪಕ್ಕದ ಮನೆಯವರು ನೀಡಿದ ಮಾಹಿತಿ ಆಧಾರದಲ್ಲಿ 30 ವರ್ಷದ ಮಾದೇಶ್‌ನನ್ನು ಪೊಲೀಸರು ಬಂಧಿಸಿದ್ದಾರೆ.
ನವಜಾತ ಶಿಶುವನ್ನು ಹೆಚ್ಚಿನ ಚಿಕಿತ್ಸೆಗಾಗಿ ಪೊಚಂಪಳ್ಳಿಯ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಲೋಕನಾಯಕಿಗೆ ಹೆರಿಗೆ ನೋವು ಕಾಣಿಸಿಕೊಂಡಾಗ ಆಕೆಯ ಗಂಡ ಮಾದೇಶ್, ಮನೆಯಲ್ಲಿಯೇ ಹೆರಿಗೆ ಮಾಡಿಸಲು ಪ್ರಯತ್ನಿಸಿದ್ದ. ಆಕೆಯನ್ನು ಆಸ್ಪತ್ರೆಗೆ ಕರೆತರುವಾಗ ಆಕೆ ಮೃತಪಟ್ಟಿದ್ದಳು ಎಂದು ದೂರಿನಲ್ಲಿ ರಾಧಿಕಾ ತಿಳಿಸಿದ್ದಾರೆ.
A 27-year-old woman in Tamil Nadu's Krishnagiri died during delivery due to severe blood loss while her husband attempted a natural birth at home, reportedly using a technique he learned on YouTube. The woman suffered blood loss after her husband failed to cut the umbilical cord properly.
19-04-25 03:04 pm
HK Staff
Janivara, Shivamogga, Suspend: ಜನಿವಾರ ತೆಗೆಸಿದ...
19-04-25 12:24 pm
Bidar Cet Exam, Janivara issue: ಜನಿವಾರ ಹಾಕಿದ್...
18-04-25 05:38 pm
Tumkur, Tiptur, Kidnap, Protest: ಹಾಡಹಗಲೇ ಮಗಳ...
18-04-25 03:38 pm
Grace Ministry Bangalore, Budigere, Ark of th...
17-04-25 05:01 pm
20-04-25 08:42 pm
HK News Desk
Jagdeep Dhankhar, Justice Varma case: ರಾಷ್ಟ್ರ...
18-04-25 02:21 pm
ನ್ಯಾಷನಲ್ ಹೆರಾಲ್ಡ್ ಪ್ರಕರಣ ; ಸೋನಿಯಾ, ರಾಹುಲ್ ವಿರ...
16-04-25 03:54 pm
ಮುಂಬೈ- ದುಬೈ ಮಧ್ಯೆ ಅಂಡರ್ ವಾಟರ್ ಪ್ರಾಜೆಕ್ಟ್ ; ಎರ...
15-04-25 04:40 pm
Mumbai terror attack, Tahawwur Rana David He...
14-04-25 11:25 pm
20-04-25 05:42 pm
Mangalore Correspondent
DK Shivakumar, Dharmasthala temple, Mangalore...
20-04-25 12:51 pm
Wafq Protest Mangalore, Police FIR; ವಕ್ಫ್ ವಿರ...
19-04-25 06:19 pm
Mangalore Waqf protest, Traffic ACP Najma Far...
19-04-25 04:24 pm
Mangalore Bappanadu Mukii, Chariot Collapses;...
19-04-25 10:51 am
20-04-25 10:52 pm
Bangalore Correspondent
ರಾಮಕೃಷ್ಣ ಆಶ್ರಮದ ಕಾರ್ಯದರ್ಶಿಗೇ ಟೋಪಿ ; ಇಡಿ ಅಧಿಕಾ...
20-04-25 07:26 pm
Gold smuggling case, Mangalore Court Verdict,...
19-04-25 10:46 pm
Ullal Gang Rape, Crime, Update, Mangalore: ಗ್...
19-04-25 09:22 pm
Ricky Rai Shot, Crime, Rakesh Malli, Mangalor...
19-04-25 11:01 am