ಬ್ರೇಕಿಂಗ್ ನ್ಯೂಸ್
26-08-23 11:02 pm Girdhar Shetty ಕ್ರೈಂ
ಪುತ್ತೂರು, ಆಗಸ್ಟ್ 26: ಒಂದರೆ ಕ್ಷಣದ ಸಿಟ್ಟು ಮನುಷ್ಯನನ್ನು ಕೆಲವೊಮ್ಮೆ ಎಂಥ ಕೃತ್ಯವನ್ನೂ ಮಾಡಿಸುತ್ತೆ ಅನ್ನೋದು ಇದಕ್ಕೆ. ಪುತ್ತೂರಿನಲ್ಲಿ ಹದಿಹರೆಯದ ಯುವತಿಯನ್ನು ನಡುಬೀದಿಯಲ್ಲಿ ಕತ್ತು ಸೀಳಿ ಕೊಂದು ಮುಗಿಸಿದ ಆ ಯುವಕನೂ ಅಂತಹದ್ದೇ ಸಿಟ್ಟಿಗೆ ಬಲಿಯಾದವನು. ಆತನ ಸಿಟ್ಟಿನ ಭರಕ್ಕೆ ಸಿಲುಕಿದ ಹದಿಹರೆಯದ ಹುಡುಗಿ ತನ್ನ ಪ್ರಾಣವನ್ನೇ ಬಿಟ್ಟಿದ್ದಾಳೆ. ಇಷ್ಟಕ್ಕೂ ಆ ಇಬ್ಬರದ್ದೂ ಲವ್, ಸೆಕ್ಸ್ ಮತ್ತು ಹಣದ ಮೇಲಿನ ವಾಂಛೆಯ ಕತೆ.
ಮೊನ್ನೆ ಪುತ್ತೂರಿನ ಮಹಿಳಾ ಠಾಣೆಯ ಬಳಿಯಲ್ಲೇ ಕೊಲೆಯಾದ ವಿಟ್ಲದ ಅಳಿಕೆ ನಿವಾಸಿ ಗೌರಿ ಎಂಬ 18ರ ಹುಡುಗಿ ಮತ್ತು ಆಕೆಯನ್ನು ಕೊಲೆಗೈದು ಪೊಲೀಸರಿಗೆ ಸಿಕ್ಕಿಬಿದ್ದ ಪದ್ಮರಾಜ್ ಎನ್ನುವ ಯುವಕ ಇಬ್ಬರೂ ಕಳೆದ ನಾಲ್ಕು ವರ್ಷಗಳಿಂದ ಪ್ರೀತಿಸುತ್ತಿದ್ದ ಪ್ರಣಯ ಜೀವಿಗಳು. ಪ್ರಣಯ ಎಂದ ಮೇಲೆ ಅವರ ನಡುವೆ ಎಲ್ಲವೂ ಇತ್ತು. ಕೊಡು –ಕೊಳ್ಳುವಿಕೆಯ ಸಂಬಂಧದ ಜೊತೆಗೆ ಸಾಕಷ್ಟು ಹಣವನ್ನೂ ಪದ್ಮರಾಜ್ ಆಕೆಗಾಗಿ ಖರ್ಚು ಮಾಡಿದ್ದನಂತೆ. ಅಷ್ಟೇ ಅಲ್ಲ, ಮೊಬೈಲನ್ನೂ ತೆಗೆದುಕೊಟ್ಟು ತನ್ನೊಂದಿಗೆ ಮಾತ್ರ ಸಂಬಂಧ ಇರಿಸಿಕೊಳ್ಳುವಂತೆ ನೋಡಿಕೊಂಡಿದ್ದ.
ಇಷ್ಟಕ್ಕೂ ಗೌರಿ ತುಂಬ ಬಡತನದ ಹುಡುಗಿ. ಮನೆಯಲ್ಲಿದ್ದ ತಂದೆ ನಾಲ್ಕು ವರ್ಷದ ಹಿಂದೆ ಯಾವುದೋ ಕೇಸಿನಲ್ಲಿ ತಗ್ಲಾಕ್ಕೊಂಡು ಜೈಲು ಸೇರಿದ್ದರೆ, ತಾಯಿ ಬಡತನದಿಂದಾಗಿ ಒಬ್ಬಳೇ ಮಗಳನ್ನೂ ಸರಿಯಾಗಿ ನೋಡಿಕೊಳ್ಳಲಾಗದೆ ಹಾಗೇ ಬಿಟ್ಟಿದ್ದಳು.. 9ನೇ ಕ್ಲಾಸಲ್ಲಿದ್ದಾಗಲೇ ಆಕೆಯ ಹಿಂದೆ ಬಿದ್ದಿದ್ದ ಪದ್ಮರಾಜ್ ಆಗಷ್ಟೇ ಬಂಟ್ವಾಳ, ವಿಟ್ಲಕ್ಕೆ ಬಂದು ಜೆಸಿಬಿಯಲ್ಲಿ ಕೆಲಸ ಮಾಡುತ್ತಿದ್ದಾತ. ಮೊದಲಿಗೆ, ಜೆಸಿಬಿ ಸಹಾಯಕನಾಗಿದ್ದಾತ ಬಳಿಕ ತಾನೇ ಡ್ರೈವಿಂಗ್ ಕಲಿತು ಎಲ್ಲವನ್ನೂ ಮಾಡಿಕೊಂಡಿದ್ದ. ಹೀಗಾಗಿ ವಿಟ್ಲ ಆಸುಪಾಸಿನಲ್ಲಿ ಪದ್ಮರಾಜ್ ಒಳ್ಳೆಯ ಕೆಲಸವನ್ನೂ ಗಿಟ್ಟಿಸಿಕೊಂಡಿದ್ದ. ಇಂಥ ಸಮಯದಲ್ಲೇ ಗೌರಿಯ ಪರಿಚಯ, ಸ್ನೇಹಕ್ಕೆ ತಿರುಗಿಸಿತ್ತು. ಹೈಸ್ಕೂಲಲ್ಲಿ ಇರುವಾಗಲೇ ಬೇಕಾಬಿಟ್ಟಿ ಹಣ ಸುರಿಯುತ್ತ ಆಕೆಯ ಬೇಕು- ಬೇಡಗಳನ್ನು ಪೂರೈಸುತ್ತಿದ್ದ ಪದ್ಮರಾಜ್ ಬಗ್ಗೆ ಗೌರಿ ತಾಯಿಗೂ ತಿಳಿದಿತ್ತು. ಮನೆಯಲ್ಲಿನ ಬಡತನದ ಮುಂದೆ ಆಕೆಗೂ ಬಿಡಿಕಾಸೇ ಹೆಚ್ಚಾಗಿತ್ತು. ಗೌರಿಯ ಹಿಂದೆ ಬಿದ್ದ ಯುವಕ ಮತ್ತು ಹುಡುಗಿ ಬಗ್ಗೆ ಉತ್ತಮ ಅಭಿಪ್ರಾಯ ಇರಲಿಲ್ಲ. ಈಚೆಗೆ ಗಲ್ಫ್ ಉದ್ಯೋಗಿ ಒಬ್ಬನಿಗೆ ಈಕೆಯ ಸಂಬಂಧ ಕುದುರಿದಾಗ, ಸ್ಥಳೀಯರೇ ಅಡ್ಡಹಾಕಿದ್ದರಂತೆ.
ನೋಡೋಕೆ ತುಂಬ ಮುಗ್ಥೆಯಂತಿದ್ದ ಗೌರಿ ಈ ಮೊದಲು ವಿಟ್ಲದಲ್ಲಿ ಯಾವುದೋ ಅಂಗಡಿಯಲ್ಲಿ ಕೆಲಸಕ್ಕಿದ್ದಳು. ಅಲ್ಲಿರುವಾಗಲೇ ಎರಡು ವರ್ಷಗಳ ಹಿಂದೊಮ್ಮೆ ಪದ್ಮರಾಜ್ ಮತ್ತು ಗೌರಿಯ ನಡುವೆ ವಿರಸ ಉಂಟಾಗಿತ್ತು. ಆಕೆಯ ಸಿಟ್ಟು ಎಷ್ಟಿತ್ತು ಅಂದರೆ, ನೇರವಾಗಿ ವಿಟ್ಲ ಠಾಣೆಗೆ ಹೋಗಿ ತನ್ನ ಪ್ರಿಯತಮನ ವಿರುದ್ಧವೇ ದೂರು ಹೇಳಿಕೊಂಡಿದ್ದಳು. ಪೊಲೀಸರು ಇಬ್ಬರನ್ನೂ ಕರೆದು ವಾರ್ನಿಂಗ್ ನೀಡಿದ್ದರು. ಅಲ್ಲದೆ, ಇನ್ನು ಆಕೆಯ ಉಸಾಬರಿಗೆ ಬರಲೇಬಾರದು, ಫೋನ್ ಮಾಡಬಾರದು ಎಂದು ಪದ್ಮರಾಜನಲ್ಲಿ ಮುಚ್ಚಳಿಕೆಯನ್ನೂ ಬರೆದು ಕಳುಹಿಸಿದ್ದರು. ಅದರಂತೆ, ಮೂರು ತಿಂಗಳು ಸಂಪರ್ಕವನ್ನು ಕಡಿದುಕೊಂಡಿದ್ದ ಪದ್ಮರಾಜ ಮತ್ತೆ ಆಕೆಯ ಸ್ನೇಹ ಸಂಪಾದಿಸಿದ್ದ. ಅಷ್ಟೇ ಅಲ್ಲ, ಇಬ್ಬರೂ ಗಾಢ ಗೆಳೆತನವನ್ನು ಮತ್ತೆ ಶುರು ಮಾಡಿದ್ದರು. ಇವರ ಮಧ್ಯೆ ಹಣಕಾಸಿನ ಸಂಬಂಧ ಇತ್ತು ಎನ್ನುವುದಕ್ಕೆ ಪ್ರತಿ ಬಾರಿ ಆಕೆಗೆ ಮೊಬೈಲಿನಲ್ಲಿ ಗೂಗಲ್ ಪೇ ಮಾಡಿರುವುದೂ ಪೊಲೀಸರಿಗೆ ಸಾಕ್ಷ್ಯವಾಗಿ ಸಿಕ್ಕಿದೆ.
ಇತ್ತೀಚೆಗೆ ಪುತ್ತೂರಿನಲ್ಲಿ ಕೆಲಸ ಸಿಕ್ಕಿದೆಯೆಂದು ಗೌರಿ ಫ್ಯಾನ್ಸಿ ಅಂಗಡಿಗೆ ಸೇರಿದ್ದಳು. ಇದಕ್ಕೆ ಪದ್ಮರಾಜ್ ಒಪ್ಪಿರಲಿಲ್ಲ, ನೀನು ಕೆಲಸಕ್ಕೆ ಹೋಗುವುದು ಬೇಡ. ತನ್ನನ್ನು ಮದುವೆಯಾಗಿ ಜೊತೆಗೇ ಇರು ಎಂದು ಹೇಳಿ ಒತ್ತಾಯಿಸಿದ್ದ. ಆದರೆ ಆಕೆ ಮಾತ್ರ ಈತನ ಮಾತು ಕೇಳಿರಲಿಲ್ಲ. ಈ ನಡುವೆ, ಆಕೆಯಲ್ಲಿ ಎರಡು ಮೊಬೈಲ್ ಗಳು ಬಂದಿದ್ದವು. ಒಂದು ತಾನು ತೆಗೆಸಿಕೊಟ್ಟಿದ್ದು ಇನ್ನೊಂದು ಎಲ್ಲಿಂದ ಬಂತು ಅನ್ನುವ ವಿಚಾರದಲ್ಲಿ ಪದ್ಮರಾಜ್ ಕಿರಿಕ್ ಮಾಡಿದ್ದ. ಇದೇ ವಿಚಾರದಲ್ಲಿ ಇಬ್ಬರ ಮಧ್ಯೆ ಮತ್ತೆ ಜಗಳ ಉಂಟಾಗಿತ್ತು. ಪದ್ಮರಾಜ್ ನೈಜ ಪ್ರೀತಿಯಿಂದ ಆಕೆಯನ್ನು ಬಯಸಿದ್ದರೆ, ಆಕೆಯ ಮನಸ್ಸಿನಲ್ಲಿ ಪುತ್ತೂರಿನ ಪೇಟೆಯ ಹೊಸತನದ ಗಾಳಿ ಸೋಕಿತ್ತು. ಎರಡು ಮೊಬೈಲ್ ಇರುವುದೇ ಪದ್ಮರಾಜ್ ಮನಸ್ಸಿನಲ್ಲಿ ಸಂಶಯದ ಹುಳ ಎಬ್ಬಿಸಿತ್ತು. ಇನ್ಯಾರದ್ದೋ ಯುವಕನ ಜೊತೆಗೆ ಈಕೆ ಹೋಗುತ್ತಿದ್ದಾಳೆ ಎಂದುಕೊಂಡು ಪ್ರಶ್ನೆ ಮಾಡಲಾರಂಭಿಸಿದ್ದ. ಅಷ್ಟೇ ಅಲ್ಲ, ತಾನು ಫೋನ್ ಮಾಡುತ್ತಿದ್ದಾಗ ರಿಸೀವ್ ಮಾಡದೇ ಇದ್ದುದಕ್ಕೆ ಸಿಟ್ಟು ಮಾಡಿಕೊಂಡಿದ್ದ.
ತನ್ನನ್ನು ಬೇಕೆಂದೇ ದೂರ ಮಾಡುತ್ತಿದ್ದಾಳೆ ಎಂಬ ವಿಚಾರವನ್ನೇ ಮುಂದಿಟ್ಟು ಮೊನ್ನೆಯೂ ಪದ್ಮರಾಜ್ ಜಗಳ ಆರಂಭಿಸಿದ್ದ. ಬೆಳಗ್ಗೆ ಫ್ಯಾನ್ಸಿ ಅಂಗಡಿಗೇ ನೇರವಾಗಿ ಬಂದು ಮಾತಿಗೆಳೆದಿದ್ದ. ಆದರೆ ಅಂಗಡಿ ಮಾಲೀಕ, ನೀವು ಹೊರಗಡೆ ಹೋಗಿ ಮಾತನಾಡಿಕೊಂಡು ಬನ್ನಿ ಎಂದು ಕಳಿಸಿದ್ದರು. ಆನಂತರ, ಇಬ್ಬರ ನಡುವೆ ಬೈದಾಟ ಶುರುವಾಗಿ ಆಕೆ, ನಿನ್ನ ಮೇಲೆ ಹಿಂದೊಮ್ಮೆ ವಿಟ್ಲದಲ್ಲಿ ದೂರು ಕೊಟ್ಟಿದ್ದೀನಿ, ಈಗ ಮತ್ತೆ ಮಹಿಳಾ ಠಾಣೆಯಲ್ಲಿ ಕೇಸು ಕೊಡ್ತೀನಿ, ದೂರು ಕೊಟ್ಟರೆ ನೀನು ಜೈಲಿಗೆ ಹೋಗ್ತೀಯ ಎಂದು ಆಕೆ ರಾಗ ಶುರು ಮಾಡಿದ್ದಾಳೆ. ಇದರಿಂದ ಸಿಟ್ಟಿಗೆದ್ದ ಪದ್ಮರಾಜ್ ತಾನು ಕೊಟ್ಟ ಮೊಬೈಲ್ ಕೊಡು, ಹಿಂದೆ ಕೊಟ್ಟಿದ್ದ ಎರಡು ಲಕ್ಷದಷ್ಟು ಹಣವನ್ನೂ ಕೊಡು ಎಂದು ಸಿಟ್ಟು ತೋರಿಸಿದ್ದ. ಆಕೆ ನಾನಿವತ್ತು ದೂರು ಕೊಟ್ಟೇ ಕೊಡ್ತೀನಿ, ನೀನು ಬೇಡ ಎನ್ನುತ್ತಲೇ ಪೊಲೀಸ್ ಠಾಣೆಯತ್ತ ನಡೆದುಕೊಂಡು ಹೋದರೆ, ನೋಡು ನೀನು ಪೊಲೀಸ್ ದೂರು ಕೊಟ್ಟರೆ ಹಾಗೇ ಬಿಡಲ್ಲ. ಕೊಂದೇ ಬಿಡುತ್ತೇನೆ ಎಂದಿದ್ದ. ನೋಡೋಣ ಎನ್ನುತ್ತಲೇ ಆಕೆ ನಡೆದುಹೋಗಿದ್ದಳು.
ಸ್ವಲ್ಪ ಹೊತ್ತಿನಲ್ಲೇ ಮತ್ತೊಂದು ಫ್ಯಾನ್ಸಿ ಅಂಗಡಿಯಿಂದ ಚೂರಿ ಖರೀದಿಸಿಕೊಂಡು ಬೈಕಿನಲ್ಲಿ ಬಂದ ಪದ್ಮರಾಜ್ ಆಕೆಯನ್ನು ಅಡ್ಡ ಹಾಕಿದ್ದ. ಫೋನ್ ಕೊಡುತ್ತೇನೆಂದು ಆಕೆಯನ್ನು ಹತ್ತಿರ ಕರೆದು ಮತ್ತೆ ಜಗಳ ಮಾಡಿದ್ದು ಮಾತಿಗೆ ಮಾತು ಬೆಳೆಯುತ್ತಲೇ ಕೈಯಲ್ಲಿದ್ದ ಚೂರಿಯಿಂದ ಕತ್ತು ಸೀಳಿ ಹಾಕಿದ್ದ. ಅಲ್ಲಿದ್ದ ಜನರು ನೋಡುತ್ತಿದ್ದಾಗಲೇ ಕತ್ತು ಸೀಳಿದ್ದ. ಆಕೆ ನೆಲಕ್ಕೆ ಬೀಳುತ್ತಲೇ ಅಲ್ಲಿದ್ದವರು ಹತ್ತಿರ ಬರುತ್ತಿದ್ದುದನ್ನು ಕಂಡು ಯಾರಾದ್ರೂ ಬಳಿಗೆ ಬಂದರೆ ಕೊಂದು ಬಿಡ್ತೇನೆಂದು ಹೆದರಿಸಿ ಅಲ್ಲಿಂದ ಕಾಲ್ಕಿತ್ತಿದ್ದ. ಸ್ವಲ್ಪ ಮುಂದೆ ಹೋಗುತ್ತಲೇ ಆಟೋ ಹಿಡಿದು ಅಲ್ಲಿಂದ ಪರಾರಿಯಾಗಿದ್ದ. ಅಷ್ಟರಲ್ಲಿಯೇ ಬಳಿಯೇ ಇದ್ದ ಪೊಲೀಸರಿಗೆ ಮಾಹಿತಿ ಲಭಿಸಿತ್ತು. ಮಧ್ಯಾಹ್ನ 1.45ರ ಸುಮಾರಿಗೆ ಘಟನೆ ನಡೆದಿದ್ದರಿಂದ ಠಾಣೆಯಲ್ಲಿ ಹೆಚ್ಚೇನು ಸಿಬಂದಿ ಇರಲಿಲ್ಲ. ಒಂದಷ್ಟು ಮಂದಿ ಅಲ್ಲಿಯೇ ಇದ್ದ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಉಟ ಮಾಡಿ ಬರೋಣ ಎಂದು ಅತ್ತ ನಡೆದಿದ್ದರು. ಚೂರಿ ಇರಿತ ಆಗಿದೆ ಎಂದು ತಿಳಿಯುತ್ತಲೇ ಊಟಕ್ಕೆ ಹೋಗುತ್ತಿದ್ದವರು ಓಡಿ ಬಂದಿದ್ದರು. ಸಾರ್ವಜನಿಕರ ಮಾಹಿತಿ ಆಧರಿಸಿ ಆರೋಪಿಯ ಹಿಡಿಯಲು ನಾಕಾಬಂದಿ ಹಾಕಿದ್ದರು. ಸ್ವಲ್ಪ ಹೊತ್ತಿನಲ್ಲಿಯೇ ಆತನನ್ನು ಹಿಡಿದು ಕೈಕೋಳ ತೊಡಿಸಿದ್ದರು.
ಹದಿಹರೆಯದ ಮೈಮಾಟ, ಹುಚ್ಚು ಹುಡುಗಾಟ ಆಕೆಯನ್ನು ಸೋಕಿ ಬರುತ್ತಿದ್ದ ಸ್ವಚ್ಛಂದ ಗಾಳಿಯಲ್ಲಿ ಒಂದಷ್ಟು ಕಾಲ ವಿಹರಿಸುವಂತೆ ಮಾಡಿತ್ತು. ಆದರೆ ಅದೇ ಸ್ವಚ್ಛಂದ ಗಾಳಿಯೇ ಆಕೆಯನ್ನು ನಡುಬೀದಿಯಲ್ಲಿ ಬಲಿ ತೆಗೆದುಕೊಂಡಿದ್ದು ವಿಪರ್ಯಾಸ. ತಾನು ಕಾಸು ಕೊಟ್ಟಿದ್ದೇನೆ, ಮೊಬೈಲ್ ಕೊಡಿಸಿದ್ದೇನೆ, ನಿನ್ನ ಮನೆಗೂ ಹಣ ಕೊಟ್ಟು ಸಲಹಿದ್ದೇನೆ ಎಂಬ ಅಹಂಭಾವ 23 ವರ್ಷದ ಯುವಕನನ್ನು ಮಾಡಬಾರದ ಕೆಲಸಕ್ಕೆ ಪ್ರೇರೇಪಿಸಿತ್ತು. ಕೆಲವೊಮ್ಮೆ ಹುಡುಗಿಯರ ಈ ರೀತಿಯ ಚೆಲ್ಲಾಟವೇ ಹುಡುಗರಿಂದ ಅತಿರೇಕದ ನಡೆಗಳಿಗೆ ಪ್ರೇರಣೆಯನ್ನೂ ನೀಡುತ್ತದೆ ಅನ್ನುವುದು ಸತ್ಯ.
Puttur Murder of girl by JCB driver near temple, exclusive crime report by Headline Karnataka
11-01-25 02:11 pm
HK News Desk
Asha Strick, CM Siddaramaiah ಆಶಾ ಕಾರ್ಯಕರ್ತೆಯರ...
10-01-25 11:01 pm
G Parameshwara: ನಕ್ಸಲರು ತಮ್ಮಲ್ಲಿದ್ದ ಶಸ್ತ್ರಾಸ್...
10-01-25 07:03 pm
NT chairman SN Subrahmanyan: ಇನ್ಫೋಸಿಸ್ ನಾರಾಯಣ...
10-01-25 02:44 pm
Car Accident, Chamarajanagar: ಶಬರಿಮಲೆ ಯಾತ್ರಿಕ...
10-01-25 02:06 pm
09-01-25 12:11 pm
HK News Desk
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
11-01-25 04:57 pm
Mangaluru Correspondent
Lava Kusha Jodukare Kambala, Mangalore; ತೃತೀಯ...
11-01-25 02:25 pm
Mangalore Annamalai, Naxals: ನಕ್ಸಲ್ ಶರಣಾಗತಿ ಬ...
11-01-25 12:44 pm
Mangalore, Missing, Marriage; ಮುಸ್ಲಿಂ ಯುವತಿಯನ...
10-01-25 11:14 pm
Mini Olympics, Mangalore- Uudpi: ಜ.17ರಿಂದ 23...
10-01-25 06:23 pm
10-01-25 11:05 pm
HK News Desk
Bangladeshi national illegal, Mangalore: ಮುಕ್...
10-01-25 09:51 pm
Mangalore Robbery, Crime, Singari Beedi: ಸಿಂಗ...
10-01-25 10:11 am
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm
Drugs, Mangalore Crime: ಗೋವಾದಿಂದ ಮಂಗಳೂರಿಗೆ ಹೈ...
09-01-25 10:32 pm