ಧರ್ಮಸ್ಥಳಕ್ಕೆ ಬಂದಿದ್ದ ಯಾತ್ರಾರ್ಥಿಗಳ ಕಾರಿನ ಗಾಜು ಒಡೆದು ಲಕ್ಷಾಂತರ ಮೌಲ್ಯದ ಸೊತ್ತು ಕಳವು 

28-08-23 10:36 pm       Mangalore Correspondent   ಕ್ರೈಂ

ರ್ಮಸ್ಥಳಕ್ಕೆ ಯಾತ್ರಾರ್ಥಿಗಳಾಗಿ ಬಂದಿದ್ದ ಉತ್ತರ ಕರ್ನಾಟಕದ ಗದಗ ಮೂಲದ ಭಕ್ತರು ನಿಲ್ಲಿಸಿದ್ದ ಕಾರಿನ ಗಾಜು ಒಡೆದು ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ. 

ಬೆಳ್ತಂಗಡಿ, ಆಗಸ್ಟ್ 28: ಧರ್ಮಸ್ಥಳಕ್ಕೆ ಯಾತ್ರಾರ್ಥಿಗಳಾಗಿ ಬಂದಿದ್ದ ಉತ್ತರ ಕರ್ನಾಟಕದ ಗದಗ ಮೂಲದ ಭಕ್ತರು ನಿಲ್ಲಿಸಿದ್ದ ಕಾರಿನ ಗಾಜು ಒಡೆದು ಲಕ್ಷಾಂತರ ಮೌಲ್ಯದ ವಸ್ತುಗಳನ್ನು ಕಳವು ಮಾಡಿರುವ ಘಟನೆ ನಡೆದಿದೆ. 

ಗದಗ ಮಾಗಡಿ ಗ್ರಾಮದ ನಿವಾಸಿ ಬಸವರಾಜ ಗುಡಸಲಮನಿ (38) ಎಂಬವರು ಆ.26 ರಂದು ಬೆಳಗ್ಗೆ ಧರ್ಮಸ್ಥಳಕ್ಕೆ ದೇವರ ದರ್ಶನಕ್ಕೆ ಕಾರಿನಲ್ಲಿ ಬಂದಿದ್ದರು. ಕಾರನ್ನು ಲಾಕ್‌ ಮಾಡಿ ದೇವಸ್ಥಾನದ ಹತ್ತಿರ ನಿಲ್ಲಿಸಿ ದೇವರ ದರ್ಶನಕ್ಕೆ ಹೋಗಿದ್ದ ವೇಳೆ ಯಾರೋ ಕಳ್ಳರು ಕೃತ್ಯ ಎಸಗಿದ್ದಾರೆ. 

ದರ್ಶನ ಮುಗಿಸಿ ಹಿಂತಿರುಗಿದ ವೇಳೆ ನಿಲ್ಲಿಸಿದ್ದ ಕಾರಿನ ಗ್ಲಾಸನ್ನು ಕಳ್ಳರು ಒಡೆದು ಅದರಲ್ಲಿದ್ದ ವಸ್ತುಗಳನ್ನು ಕಳವುಗೈದಿದ್ದಾರೆ. ಕಾರಿನಲ್ಲಿ ವ್ಯಾನಿಟಿ ಬ್ಯಾಗ್‌ ನಲ್ಲಿಟ್ಟಿದ್ದ 40 ಗ್ರಾಂ. ತೂಕದ ಮಾಂಗಲ್ಯ ಸರ (ಮೌಲ್ಯ 1,96,000 ರೂ.) ಮತ್ತು 1 ಮೊಬೈಲ್‌ ಮೊಬೈಲ್‌ ಅಂದಾಜು ಮೌಲ್ಯ 4,000 ರೂ. ನಗದು ಸೇರಿ ಕಳವವಾದ ಸೊತ್ತಿನ ಮೌಲ್ಯ 2 ಲಕ್ಷ ರೂ. ಆಗಬಹುದು ಎಂದು ದೂರಿನಲ್ಲಿ ದೂರುದಾರರು ಉಲ್ಲೇಖಿಸಿದ್ದಾರೆ. ಧರ್ಮಸ್ಥಳ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

Lakhs items stolen from devotes car at Dharmasthala.