ಬ್ರೇಕಿಂಗ್ ನ್ಯೂಸ್
01-09-23 05:11 pm Mangalore Correspondent ಕ್ರೈಂ
ಉಳ್ಳಾಲ, ಸೆ.1: ನರಿಂಗಾನ ಗ್ರಾಮದ ಮೊಂಟೆಪದವಿನ ಕರ್ನಾಟಕ ಪಬ್ಲಿಕ್ ಸ್ಕೂಲ್ ನ ಕಿಟಕಿಯ ಸಲಾಕೆ ಮತ್ತು ಬಾಗಿಲು ಮುರಿದು ಕನ್ನ ಹಾಕಿದ ಕಳ್ಳರು 15 ಸಾವಿರ ನಗದು, ಎರಡು ಲ್ಯಾಪ್ ಟಾಪ್ ಮತ್ತು ತನಿಖೆಯ ಜಾಡು ತಪ್ಪಿಸಲು ಸಿಸಿಟಿವಿಯ ಮೂರು ಡಿವಿಆರ್ ಗಳನ್ನೇ ಕದ್ದೊಯ್ದಿದ್ದಾರೆ.
ಕಾಲೇಜು ಹಾಗೂ ಪ್ರೌಢಶಾಲೆ ಕಟ್ಟಡದ ಆವರಣದಲ್ಲಿ ಕಾಲೇಜು ಪ್ರಿನ್ಸಿಪಾಲ್, ಪ್ರೌಢಶಾಲೆ ವೈಸ್ ಪ್ರಿನ್ಸಿಪಾಲ್ ಕಚೇರಿ ಇದ್ದು ಎರಡೂ ಕೊಠಡಿಗಳಿಗೆ ಕಳ್ಳರು ನಿನ್ನೆ ರಾತ್ರಿ ಕನ್ನ ಹಾಕಿದ್ದಾರೆ. ಕಾಲೇಜಿನ ಪ್ರಿನ್ಸಿಪಾಲ್ ಕಚೇರಿಯ ಕಿಟಕಿಯ ಸಲಾಕೆ ಮುರಿಯಲು ಕಳ್ಳರು ವಿಫಲರಾಗಿದ್ದು ಬಾಗಿಲಿನ ಬೀಗ ಮುರಿದು ಒಳ ನುಗ್ಗಿದ್ದಾರೆ. ಒಳಗಿದ್ದ ಮೂರು ಕಪಾಟನ್ನು ಮುರಿದು ದಾಖಲೆ ಪತ್ರಗಳನ್ನ ತಡಕಾಡಿ ಚೆಲ್ಲಾಪಿಲ್ಲಿ ಮಾಡಿದ್ದಾರೆ. ಕಪಾಟಿನಲ್ಲಿದ್ದ 15 ಸಾವಿರ ರೂಪಾಯಿ ನಗದು ಎಗರಿಸಿದ ಚಾಣಾಕ್ಷ ಕಳ್ಳರು ಮೂರು ಸ್ಮಾರ್ಟ್ ಫೋನ್ ಗಳನ್ನ ಅಲ್ಲೇ ಬಿಟ್ಟು ಒಂದು ಡಿವಿಆರ್ ಕದ್ದೊಯ್ದಿದ್ದಾರೆ. ಕಾಲೇಜು ಸ್ಟಾಫ್ ರೂಂಗೂ ಕಳ್ಳರು ನುಗ್ಗಿದ್ದು ಅಲ್ಲಿ ಏನೂ ಸಿಕ್ಕಿಲ್ಲ.
ಹೈಸ್ಕೂಲ್ ವೈಸ್ ಪ್ರಿನ್ಸಿಪಾಲ್ ಕೊಠಡಿಯ ಕಿಟಕಿಯ ಸಲಾಕೆ ಮುರಿದು ಒಳನುಗ್ಗಿದ ಕಳ್ಳರು ಎರಡು ಲ್ಯಾಪ್ ಟ್ಯಾಪ್ ,ಚಿಲ್ಲರೆ ನಗದು ಮತ್ತು ಎರಡು ಡಿವಿಆರ್ ಗಳನ್ನ ಕದ್ದೊಯ್ದಿದ್ದಾರೆ.
ಕಬಾಟುಗಳನ್ನ ತಡಕಾಡಿ ಅಮೂಲ್ಯ ದಾಖಲೆ ಪತ್ರಗಳನ್ನೆಲ್ಲ ನೆಲಕ್ಕೆಸೆದು ಹೋಗಿದ್ದಾರೆ. ಇಂದು ಬೆಳಗ್ಗೆ ಶಾಲೆಗೆ ಬಂದ ಶಿಕ್ಷಕರು, ವಿದ್ಯಾರ್ಥಿಗಳಿಗೆ ಕಳ್ಳತನ ನಡೆದಿರುವುದು ಗಮನಕ್ಕೆ ಬಂದಿದ್ದು ತಕ್ಷಣವೇ ಕೊಣಾಜೆ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ಪೊಲೀಸರು, ಶ್ವಾನದಳ, ಫೋರೆನ್ಸಿಕ್ ತಜ್ಞರು ಪರಿಶೀಲನೆ ನಡೆಸಿದ್ದು, ಚಾಲಾಕಿ ಕಳ್ಳರು ಡಿವಿಆರ್ ಹೊತ್ತೊಯ್ದಿರುವುದರಿಂದ ಸಮೀಪದ ಅಂಗಡಿಗಳಲ್ಲಿ ಸಿಸಿಟಿವಿ ಫೂಟೇಜ್ ಪರಿಶೀಲಿಸುತ್ತಿದ್ದಾರೆ.
Mangalore Robbers enter Naringana karnataka public school, flee with cash and laptop.
11-01-25 02:11 pm
HK News Desk
Asha Strick, CM Siddaramaiah ಆಶಾ ಕಾರ್ಯಕರ್ತೆಯರ...
10-01-25 11:01 pm
G Parameshwara: ನಕ್ಸಲರು ತಮ್ಮಲ್ಲಿದ್ದ ಶಸ್ತ್ರಾಸ್...
10-01-25 07:03 pm
NT chairman SN Subrahmanyan: ಇನ್ಫೋಸಿಸ್ ನಾರಾಯಣ...
10-01-25 02:44 pm
Car Accident, Chamarajanagar: ಶಬರಿಮಲೆ ಯಾತ್ರಿಕ...
10-01-25 02:06 pm
09-01-25 12:11 pm
HK News Desk
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
11-01-25 04:57 pm
Mangaluru Correspondent
Lava Kusha Jodukare Kambala, Mangalore; ತೃತೀಯ...
11-01-25 02:25 pm
Mangalore Annamalai, Naxals: ನಕ್ಸಲ್ ಶರಣಾಗತಿ ಬ...
11-01-25 12:44 pm
Mangalore, Missing, Marriage; ಮುಸ್ಲಿಂ ಯುವತಿಯನ...
10-01-25 11:14 pm
Mini Olympics, Mangalore- Uudpi: ಜ.17ರಿಂದ 23...
10-01-25 06:23 pm
10-01-25 11:05 pm
HK News Desk
Bangladeshi national illegal, Mangalore: ಮುಕ್...
10-01-25 09:51 pm
Mangalore Robbery, Crime, Singari Beedi: ಸಿಂಗ...
10-01-25 10:11 am
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm
Drugs, Mangalore Crime: ಗೋವಾದಿಂದ ಮಂಗಳೂರಿಗೆ ಹೈ...
09-01-25 10:32 pm