Bajpe Gold Robbery, Mangalore: ಮನೆ ಬಾಗಿಲು ಒಡೆದು ಚಿನ್ನಾಭರಣ ಕಳವು ; ನಾಲ್ಕೇ ದಿನದಲ್ಲಿ ಆರೋಪಿ ಸೆರೆ, ಬಜ್ಪೆ ಪೊಲೀಸರ ಕಾರ್ಯಾಚರಣೆ 

05-09-23 08:26 pm       Mangalore Correspondent   ಕ್ರೈಂ

ನಾಲ್ಕು ದಿನಗಳ ಹಿಂದೆ ಬಜ್ಪೆಯಲ್ಲಿ ಮನೆ ಬಾಗಿಲು ಒಡೆದು ಚಿನ್ನಾಭರಣ ಕಳವು ಮಾಡಿದ್ದ ಪ್ರಕರಣದಲ್ಲಿ ಆರೋಪಿಯನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ. ತಾರಿಕಂಬ್ಳ ನಿವಾಸಿ ವಿನ್ಸೆಂಟ್ ಡಿ'ಸೋಜ (34) ಬಂಧಿತ ಆರೋಪಿ.

ಮಂಗಳೂರು, ಸೆ.5: ನಾಲ್ಕು ದಿನಗಳ ಹಿಂದೆ ಬಜ್ಪೆಯಲ್ಲಿ ಮನೆ ಬಾಗಿಲು ಒಡೆದು ಚಿನ್ನಾಭರಣ ಕಳವು ಮಾಡಿದ್ದ ಪ್ರಕರಣದಲ್ಲಿ ಆರೋಪಿಯನ್ನು ಬಜ್ಪೆ ಪೊಲೀಸರು ಬಂಧಿಸಿದ್ದಾರೆ. ತಾರಿಕಂಬ್ಳ ನಿವಾಸಿ ವಿನ್ಸೆಂಟ್ ಡಿ'ಸೋಜ (34) ಬಂಧಿತ ಆರೋಪಿ.

ಸೆ.1ರಂದು ಬಜಪೆ ಗ್ರಾಮದ ಪೊರ್ಕೋಡಿ ದೇವಸ್ಥಾನದ ರಸ್ತೆಯ ಕರೋಡಿ ಎಂಬಲ್ಲಿ ಮನೆಯ ಬೆಡ್ ರೂಮಿನಲ್ಲಿದ್ದ ಕಬ್ಬಿಣದ ಕಪಾಟಿನ ಲಾಕರ್ ಮುರಿದು 5 ಲಕ್ಷ ಮೌಲ್ಯದ ಚಿನ್ನಾಭರಣ ಕಳವುಗೈದ ಬಗ್ಗೆ ಬಜಪೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಪ್ರಕರಣದ ತನಿಖೆ ನಡೆಸಿದ ಬಜಪೆ ಪೊಲೀಸ್ ನಿರೀಕ್ಷಕ ಪ್ರಕಾಶ್ ನೇತೃತ್ವದ ತಂಡ ಗುಮಾನಿಯ ಮೇರೆಗೆ ಆರೋಪಿ ವಿನ್ಸೆಂಟ್ ಡಿಸೋಜಾನನ್ನ ಬಜ್ಪೆಯ ಕಿನ್ನಿಪದವು ಚೆಕ್ ಪೋಸ್ಟ್ ಬಳಿ ವಶಕ್ಕೆ ಪಡೆದಿತ್ತು. 

ವಿಚಾರಣೆ ವೇಳೆ ಆರೋಪಿ ತಪ್ಪು ಒಪ್ಪಿಕೊಂಡಿದ್ದು ಸುಮಾರು 5 ಲಕ್ಷ ರೂ. ಮೌಲ್ಯದ ಒಟ್ಟು 80 ಗ್ರಾಂ ತೂಕದ ಚಿನ್ನಾಭರಣಗಳನ್ನು ಪೊಲೀಸರು ವಶಪಡಿಸಿದ್ದಾರೆ. ಬಜ್ಪೆ ಪಿಎಸ್ಐ ಗುರಪ್ಪ ಕಾಂತಿ, ಪಿಎಸ್‌ಐ ರೇವಣ ಸಿದ್ದಪ್ಪ, ಪಿಎಸ್ಐ ಕುಮಾರೇಶನ್, ಪಿಎಸ್‌ಐ ಶ್ರೀಮತಿ ಲತಾ, ಎಎಸ್‌ಐ ರಾಮ ಪೂಜಾರಿ ಮೇರೆಮಜಲು, ರಶೀದ ಶೇಖ್, ಸುಜನ್, ರೋಹಿತ, ದುರ್ಗಾಪ್ರಸಾದ್ ಶೆಟ್ಟಿ, ಸಂತೋಷ, ಬಸವರಾಜ್ ಪಾಟೀಲ್, ಕೆಂಚನ ಗೌಡ ಮತ್ತು ಇತರ ಸಿಬ್ಬಂದಿ ಪತ್ತೆ ಕಾರ್ಯದಲ್ಲಿ ಭಾಗಿಯಾಗಿದ್ದರು.

Mangalore one arrested for stealing gold ornaments worth Rs five lac from house at Bajpe. The accused arrested is identified as Vincent D’Souza (34), a resident of Tarikambla of Bajpe.