ಸೇಬು ಹಾಗು ಮೊಸಂಬಿ ಹಣ್ಣಿನ ಒಳಗೆ ಗಾಂಜಾ ಇರಿಸಿ ಜೈಲಿನ ಕಾಪೌಂಡ್ ಒಳಗಡೆಗೆ ಎಸೆಯಲು ಯತ್ನ ; ಮೂವರ ಬಂಧನ

06-09-23 01:14 pm       HK News Desk   ಕ್ರೈಂ

ಸೇಬು ಹಾಗು ಮೊಸಂಬಿ ಹಣ್ಣಿನ ಒಳಗೆ ಗಾಂಜಾ ಸೊಪ್ಪಿನ ಕಿಟ್ ಇಟ್ಟು ಸ್ಟಿಕ್ಕರ್ ಅಂಟಿಸಿ, ಜೈಲಿನ ಕಾಪೌಂಡ್ ಒಳಗಡೆಗೆ ಎಸೆಯಲು ಹೋಗುತ್ತಿದ್ದ ಆರೋಪದಡಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಹಾಸನ, ಸೆ.6: ಸೇಬು ಹಾಗು ಮೊಸಂಬಿ ಹಣ್ಣಿನ ಒಳಗೆ ಗಾಂಜಾ ಸೊಪ್ಪಿನ ಕಿಟ್ ಇಟ್ಟು ಸ್ಟಿಕ್ಕರ್ ಅಂಟಿಸಿ, ಜೈಲಿನ ಕಾಪೌಂಡ್ ಒಳಗಡೆಗೆ ಎಸೆಯಲು ಹೋಗುತ್ತಿದ್ದ ಆರೋಪದಡಿ ಮೂವರನ್ನು ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಆರೋಪಿಗಳನ್ನು ಅಂಬೇಡ್ಕರ್ ನಗರದ ತಬ್ರೇಝ್, ಪೆನ್ಷನ್‌ ಮೊಹಲ್ಲಾದ ವಾಸಿಂ, ರಕೀಬ್ ಎಂದು ಗುರುತಿಸಲಾಗಿದೆ.

ಮಂಗಳವಾರ ಬೆಳಗ್ಗೆ ಸೇಬು, ಮೊಸಂಬಿ ಹಣ್ಣುಗಳಲ್ಲಿ ಗಾಂಜಾ ಇರಿಸಿ ಜೈಲಿನೊಳಗೆ ಎಸೆಯಲು ತೆರಳುತ್ತಿದ್ದಾರೆ ಎಂಬ ಖಚಿತ ಮಾಹಿತಿ ತಿಳಿದ ನಗರ ಠಾಣಾ ಇನ್‌ಸ್ಪೆಕ್ಟರ್ ಹಾಗೂ ಸಿಬ್ಬಂದಿ , ಆರೋಪಿಗಳನ್ನು ವಶಕ್ಕೆ ಪಡೆದು ಮುಂದಿನ ಕ್ರಮಕೈಗೊಂಡಿದ್ದಾರೆ.

ಇತ್ತೀಚೆಗೆ ಹಾಸನ ಕಾರಾಗೃಹದ ಮೇಲೆ ಪೊಲೀಸರು ದಾಳಿ ನಡೆಸಿದ್ದರು. ದಾಳಿಯ ವೇಳೆ ಪೊಲೀಸರು ಗಾಂಜಾ ಮತ್ತು ಮೊಬೈಲ್‌ಗಳನ್ನು ವಶಪಡಿಸಿಕೊಂಡ ನಂತರ ನಾಲ್ವರು ಜೈಲು ಅಧಿಕಾರಿಗಳನ್ನು ಅಮಾನತುಗೊಳಿಸಲಾಗಿದೆ.

Karnataka police have arrested three persons on charges of attempting to smuggle ganja to prison inmates hidden in fruits in Hassan district, police said on Tuesday. Those arrested have been identified as 28-year-old Tabrez, 21-year-old Wasim and 20-year-old Rakeeb. The accused were into vegetable selling and scrap business.