ಸುಳ್ಯಕ್ಕೆ ಬಂದಿದ್ದ ಕೊಡಗಿನ ಯುವಕನಿಗೆ ಹಲ್ಲೆಗೈದು ದರೋಡೆ ; ಆಟೋ ಪ್ರಯಾಣಿಕರ ಸೋಗಿನಲ್ಲಿದ್ದ ಸುಲಿಗೆಕೋರರು

19-09-23 09:31 pm       Mangalore Correspondent   ಕ್ರೈಂ

ಆಟೋದಲ್ಲಿ ತೆರಳುತ್ತಿದ್ದ ಯುವಕನನ್ನು ಅದರಲ್ಲಿ ದರೋಡೆಕೋರರ ಸೋಗಿನಲ್ಲಿದ್ದ ಇತರ ಪ್ರಯಾಣಿಕರೇ ಸೇರಿಕೊಂಡು ಹಲ್ಲೆಗೈದು ಸುಲಿಗೆ ಮಾಡಿರುವ ಘಟನೆ ಸುಳ್ಯದಲ್ಲಿ ನಡೆದಿದೆ. 

ಸುಳ್ಯ, ಸೆ.19: ಆಟೋದಲ್ಲಿ ತೆರಳುತ್ತಿದ್ದ ಯುವಕನನ್ನು ಅದರಲ್ಲಿ ದರೋಡೆಕೋರರ ಸೋಗಿನಲ್ಲಿದ್ದ ಇತರ ಪ್ರಯಾಣಿಕರೇ ಸೇರಿಕೊಂಡು ಹಲ್ಲೆಗೈದು ಸುಲಿಗೆ ಮಾಡಿರುವ ಘಟನೆ ಸುಳ್ಯದಲ್ಲಿ ನಡೆದಿದೆ. 

ಮಡಿಕೇರಿ ನಿವಾಸಿ ದರ್ಶನ್ (27) ಎಂಬವರು ಸೆ.18ರಂದು ಕೆಲಸದ ನಿಮಿತ್ತ ಸುಳ್ಯಕ್ಕೆ ಬಂದಿದ್ದರು. ರಾತ್ರಿ 11 ಗಂಟೆ ವೇಳೆಗೆ ಕೆಲಸ ಮುಗಿಸಿ ಊರಿಗೆ ಹಿಂತಿರುಗುವ ಸಲುವಾಗಿ ಸುಳ್ಯ ಬಸ್ ನಿಲ್ದಾಣಕ್ಕೆ ತೆರಳಲು ಸುಳ್ಯ ಕಸಬಾ ಗ್ರಾಮದ ಹಳೆಗೇಟಿನಲ್ಲಿ ಆಟೋ ಹತ್ತಿದ್ದರು. ಈ ವೇಳೆ, ಆಟೋದಲ್ಲಿದ್ದ ಇತರ ಇಬ್ಬರು ಪ್ರಯಾಣಿಕರು ಯುವಕನ ಬಳಿಯಿದ್ದ ಬ್ಯಾಗ್ ಕಿತ್ತುಕೊಳ್ಳಲು ಯತ್ನಿಸಿದ್ದಾರೆ. 

ಪ್ರತಿರೋಧ ತೋರಿದ ಯುವಕನಿಗೆ ಹಲ್ಲೆಗೈದು ಬ್ಯಾಗ್ ಕಿತ್ತುಕೊಂಡು ಆಟೋದಿಂದ ಹೊರಕ್ಕೆ ದೂಡಿದ್ದಾರೆ. ಕಸಿದುಕೊಂಡ ಬ್ಯಾಗಿನಲ್ಲಿ 3.5 ಲಕ್ಷ ರೂ.‌ ನಗದು, ಎರಡು ಮೊಬೈಲ್, ಗುರುತಿನ ಚೀಟಿ, ಮೂರು ಎಟಿಎಂ ಕಾರ್ಡ್ ಗಳಿದ್ದವು. ಎಲ್ಲವನ್ನೂ ಕಿತ್ತುಕೊಂಡು ದರೋಡೆಕೋರರು ಪರಾರಿಯಾಗಿದ್ದಾರೆ. ಈ ಬಗ್ಗೆ ಯುವಕ ದರ್ಶನ್ ಸುಳ್ಯ ಠಾಣೆಗೆ ದೂರು ನೀಡಿದ್ದಾರೆ.

Kodagu youth assulted and robbed at Sullia.