Udupi, OTP Fraud, Kapu: ಬ್ಯಾಂಕ್‌ ಅಧಿಕಾರಿ ಎಂದು ನಂಬಿಸಿ ಕೆವೈಸಿ ನೆಪದಲ್ಲಿ 3 ಲಕ್ಷ ರೂ. ಪಂಗನಾಮ ;  ಒಟಿಪಿ ಕೇಳಿ ಟೋಪಿ, ಕೆನರಾ ಬ್ಯಾಂಕ್ ಅಕೌಂಟ್ ಖಾಲಿ !

24-09-23 10:27 pm       Udupi Correspondent   ಕ್ರೈಂ

ಶಂಕರಪುರ ನಿವಾಸಿಯ ಮೊಬೈಲ್ ಗೆ ಅಪರಿಚಿತನೊಬ್ಬ ಮೆಸೇಜ್‌ ಮಾಡಿ, ತಾನು ಬ್ಯಾಂಕ್‌ ಅಧಿಕಾರಿಯೆಂದು ನಂಬಿಸಿ, ಕೆವೈಸಿ ಪಡೆದು ಬ್ಯಾಂಕ್‌ ಖಾತೆಯಿಂದ 3,38,199 ರೂಪಾಯಿ ಎಗರಿಸಿದ ಘಟನೆ ರವಿವಾರ ಬೆಳಕಿಗೆ ಬಂದಿದೆ.

ಉಡುಪಿ, ಸೆ.24: ಶಂಕರಪುರ ನಿವಾಸಿಯ ಮೊಬೈಲ್ ಗೆ ಅಪರಿಚಿತನೊಬ್ಬ ಮೆಸೇಜ್‌ ಮಾಡಿ, ತಾನು ಬ್ಯಾಂಕ್‌ ಅಧಿಕಾರಿಯೆಂದು ನಂಬಿಸಿ, ಕೆವೈಸಿ ಪಡೆದು ಬ್ಯಾಂಕ್‌ ಖಾತೆಯಿಂದ 3,38,199 ರೂಪಾಯಿ ಎಗರಿಸಿದ ಘಟನೆ ರವಿವಾರ ಬೆಳಕಿಗೆ ಬಂದಿದೆ.

ಶಂಕರಪುರ ಕೆನರಾ ಬ್ಯಾಂಕ್‌ನಲ್ಲಿ ಅಕೌಂಟ್‌ ಹೊಂದಿರುವ ಶಂಕರಪುರ ನಿವಾಸಿ ವಲೇರಿಯನ್‌ ಅವರ ಪತ್ನಿಯ ಮೊಬೆ„ಲ್‌ ನಂಬರ್‌ಗೆ ಸೆ. 23ರಂದು ಅಪರಿಚಿತನೋರ್ವ 9387666481 ಸಂಖ್ಯೆಯಿಂದ ಮೆಸೇಜ್‌ ಮಾಡಿ ತಾನು ಬ್ಯಾಂಕ್‌ ಉದ್ಯೋಗಿಯಾಗಿದ್ದು ನಿಮ್ಮ ಖಾತೆಯ ಕೆವೈಸಿ ಅಪ್‌ಡೇಟ್‌ ಮಾಡಿಕೊಳ್ಳುವಂತೆ ಸೂಚಿಸಿದ್ದನು. ಅದನ್ನು ನಂಬಿದ ಅವರು ಬ್ಯಾಂಕ್‌ ಖಾತೆ ಸಹಿತ ಪಾಸ್‌ ಬುಕ್‌ ವಿವರವನ್ನು ನೀಡಿದ್ದರು, ಬಳಿಕ ಆತ ಖಾತೆಯ ನಾಮಿನಿಯಾಗಿರುವ ಗಂಡನ ವಿವರವನ್ನು ಕೂಡಾ ಅಪ್‌ಡೇಟ್‌ ಮಾಡುವಂತೆ ಸೂಚಿಸಿದ್ದನು.

ಇದಾದ ಬಳಿಕ ಎಟಿಎಂ ಕಾರ್ಡ್‌ ವಿವರವನ್ನು ಪಡೆದುಕೊಂಡ ಅಪರಿಚಿತ ತತ್‌ಕ್ಷಣ ಖಾತೆದಾರರ ಮೊಬೆ„ಲ್‌ಗೆ ಒಟಿಪಿ ಕಳುಹಿಸಿದ್ದು, ಒಟಿಪಿ ವಿವರಗಳನ್ನು ಕೇಳಿ ಪಡೆದುಕೊಂಡು ಅವರ ಖಾತೆಯಿಂದ ಕ್ರಮವಾಗಿ 1,99,999/- , 50,000/- , 80,000/- ಮತ್ತು  8200/-  ಹೀಗೆ ಒಟ್ಟು 3,38,199/- ರೂಪಾಯಿ ಹಣವನ್ನು ಡ್ರಾ ಮಾಡಿ ವಂಚಿಸಿರುವುದಾಗಿ ತಿಳಿದು ಬಂದಿದೆ.

ವಂಚನೆಗೊಳಗಾಗಿರುವ ವಲೇರಿಯನ್‌ ಅವರು ಈ ಬಗ್ಗೆ ಕಾಪು ಪೊಲೀಸ್‌ ಠಾಣೆಗೆ ದೂರು ನೀಡಿದ್ದು, ಕಾಪು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಮುಂದುವರಿಸಿದ್ದಾರೆ.

ಆನ್‌ಲೈನ್‌ ಮೋಸ ಜಾಲಕ್ಕೆ ಸಿಲುಕಿ ಜನರು ನಿರಂತರವಾಗಿ ವಂಚನೆಗೊಳಗಾಗುತ್ತಿದ್ದು ಇಂತಹ ಘಟನೆಗಳು ಗ್ರಾಮೀಣ ಭಾಗಕ್ಕೂ ಕಾಲಿರಿಸಿರುವುದು ಆಘಾತಕಾರಿ ವಿಚಾರವಾಗಿದೆ. ಇಂತಹ ಜಾಲಗಳು ಮೊಬೈಲ್‌, ವಾಟ್ಸಾಪ್‌, ಫೇಸ್ ಬುಕ್ ಮತ್ತು ಇನ್‌ಸ್ಟಾಗ್ರಾಂ ಮೂಲಕವಾಗಿ ನಿರಂತರವಾಗಿ ಜನರನ್ನು ವಂಚಿಸುತ್ತಿದ್ದು ಈ ಬಗ್ಗೆ ಜನರು ಎಚ್ಚೆತ್ತುಕೊಳ್ಳಬೇಕಿದೆ. ಎಲ್ಲ ಊರುಗಳಲ್ಲೂ ಬ್ಯಾಂಕ್‌ಗಳು ಹತ್ತಿರದಲ್ಲೇ ಇದ್ದು ಯಾವುದೇ ಅಪರಿಚಿತರು ಮಾಹಿತಿ ಕೇಳಿದಾಗ ಮಾಹಿತಿಯನ್ನು ರವಾನಿಸಿದೇ ನೇರವಾಗಿ ಬ್ಯಾಂಕ್‌ಗೆ ತೆರಳಿ ತಮ್ಮ ಇ ಕೆವೈಸಿ ಅಪ್‌ಡೇಟ್‌ ಮಾಡಿಕೊಳ್ಳಬೇಕಿದೆ. ಆನ್‌ಲೈನ್‌ ಮೂಲಕವಾಗಿ ಯಾವುದೇ ಮಾಹಿತಿಗಳನ್ನು ಶೇರ್‌ ಮಾಡಿಕೊಳ್ಳಬಾರದು. ಇನ್‌ಸ್ಟಾಗ್ರಾಂ, ಫೇಸ್ಬುಕ್, ವಾಟ್ಸಾಪ್‌ ಜಾಲತಾಣಗಳನ್ನು ಬಳಸುವಾಗ ಎಚ್ಚರ ವಹಿಸ ಬೇಕು ಎಂದು ಕಾಪು ಎಸ್ಐ ಅಬ್ದುಲ್‌ ಖಾದರ್‌ ಜನರಲ್ಲಿ ಮನವಿ ಮಾಡಿದ್ದಾರೆ.

Udupi, fraudsters steal Rs 3 lakhs from canara bank after asking for OTP in the name of KYC update.