ಬ್ರೇಕಿಂಗ್ ನ್ಯೂಸ್
26-09-23 10:44 pm Mangalore Correspondent ಕ್ರೈಂ
ಮಂಗಳೂರು, ಸೆ.26: ಸಾಮಾನ್ಯವಾಗಿ ಜನಸಾಮಾನ್ಯರನ್ನು ಯಾಮಾರಿಸಿ ಓಟಿಪಿ ಪಡ್ಕೊಂಡು ಸೈಬರ್ ಕಳ್ಳರು ಬ್ಯಾಂಕ್ ಖಾತೆಗಳಿಗೆ ಕನ್ನ ಹಾಕುತ್ತಾರೆ. ಆದರೆ ಈಗ ಓಟಿಪಿ, ಫೋನ್ ಕರೆ ಇದ್ಯಾವುದೇ ರಗಳೆಯೇ ಇಲ್ಲದೆ ಬ್ಯಾಂಕ್ ಖಾತೆಯಿಂದ ಹಣ ಪೀಕಿಸುತ್ತಿರುವ ಪ್ರಕರಣಗಳು ಮಂಗಳೂರಿನಲ್ಲಿ ಬೆಳಕಿಗೆ ಬಂದಿದೆ. ಆದರೆ, ಹೀಗೆ ಹಣ ಕಳಕೊಂಡವರು ಮಂಗಳೂರಿನ ಸಬ್ ರಿಜಿಸ್ಟ್ರಾರ್ ಬಗ್ಗೆಯೂ ಸಂಶಯ ವ್ಯಕ್ತಪಡಿಸುತ್ತಿದ್ದಾರೆ.
ಕುಲಶೇಖರ ನಿವಾಸಿ ಲೋಕೇಶ್ ಎಂಬವರು ಆಗಸ್ಟ್ 30ರಂದು ಜಾಗ ಖರೀದಿ ಬಗ್ಗೆ ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ನೋಂದಣಿ ಮಾಡಿಕೊಂಡಿದ್ದರು. ಪತಿ- ಪತ್ನಿಯ ಜಂಟಿ ಖಾತೆಯ ಹೆಸರಲ್ಲಿ ರಿಜಿಸ್ಟರ್ ಮಾಡಿಕೊಂಡಿದ್ದು, ಇಬ್ಬರೂ ತಮ್ಮ ಆಧಾರ್ ಸಂಖ್ಯೆ ಮತ್ತು ಬೆರಳಚ್ಚು ಕೊಟ್ಟಿದ್ದರು. ಸೆ.13ರಂದು ಲೋಕೇಶ್ ಮತ್ತು ಅವರ ಪತ್ನಿಯ ಖಾತೆಯಿಂದ ತಲಾ ಹತ್ತು ಸಾವಿರ ರೂ. ಹಣ ಕಡಿತಗೊಂಡಿತ್ತು. ಯಾವುದೇ ಫೋನ್ ಕರೆಯಾಗಲೀ, ಓಟಿಪಿ ಆಗಲೀ ಅವರಿಗೆ ಬಂದಿರಲಿಲ್ಲ. ಐದು ನಿಮಿಷಗಳ ಅಂತರದಲ್ಲಿ ಪತಿ- ಪತ್ನಿಯ ಬೇರೆ ಬೇರೆ ಬ್ಯಾಂಕಿನ ಖಾತೆಗಳಿಂದ ಹಣ ಕಟ್ ಆಗಿತ್ತು. ಆನಂತರ, ಇಬ್ಬರು ಕೂಡ ಮಂಗಳೂರಿನ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಬ್ಯಾಂಕ್ ಖಾತೆಯಿಂದ ಹಣ ಕಡಿತ ಆಗಿರುವ ಬಗ್ಗೆ ಮೊಬೈಲಿಗೆ ಮೆಸೇಜ್ ಬಂದಿತ್ತು. ಎರಡರಲ್ಲೂ ಎಇಪಿಎಸ್ ಮೂಲಕ ಹಣ ಕಟ್ ಆಗಿರುವುದಾಗಿ ಮೆಸೇಜ್ ಇತ್ತು ಎಂದು ಲೋಕೇಶ್ ತಿಳಿಸಿದ್ದಾರೆ.
ಸಬ್ ರಿಜಿಸ್ಟ್ರಾರ್ ಕಚೇರಿ ಬಗ್ಗೆ ಶಂಕೆ
ಪೊಲೀಸರು ಮೊದಲಿಗೆ, ನೀವೆಲ್ಲೋ ಓಟಿಪಿ ಕೊಟ್ಟಿರಬೇಕು ಎಂದೇ ವಾದ ಮಾಡಿದ್ದಾರೆ. ಆದರೆ ನಮಗೆ ಯಾವುದೇ ಓಟಿಪಿ ಬಂದಿಲ್ಲ. ಎಇಪಿಎಸ್ (ಆಧಾರ್ ಎನೇಬಲ್ ಪೇಮೆಂಟ್ ಸಿಸ್ಟಮ್) ಎಂದಷ್ಟೇ ಮೆಸೇಜ್ ಬಂದಿದೆ. ನಾವು ಜಾಗದ ನೋಂದಣಿ ಬಗ್ಗೆ ರಿಜಿಸ್ಟ್ರಾರ್ ಕಚೇರಿಯಲ್ಲಿ ಬೆರಳಚ್ಚು ಕೊಟ್ಟಿದ್ದೆವು. ಅಲ್ಲಿಂದಲೇ ಆಧಾರ್ ಸಂಖ್ಯೆ ಮತ್ತು ಬೆರಳಚ್ಚು ಲೀಕ್ ಆಗಿರಬೇಕೆಂಬ ಶಂಕೆಯಿದೆ ಎಂದು ಲೋಕೇಶ್ ತಿಳಿಸಿದ್ದಾರೆ. ಇವರ ಮತ್ತೊಬ್ಬ ಆಪ್ತರ ಖಾತೆಯಿಂದ 50 ಸಾವಿರ ರೂ. ಇದೇ ರೀತಿ ಕಡಿತ ಆಗಿದ್ದು ಅವರು ಬ್ಯಾಂಕಿನ ವಿರುದ್ಧ ಕೋರ್ಟಿನಲ್ಲಿ ಕೇಸು ದಾಖಲಿಸಿದ್ದಾರಂತೆ. ಮಂಗಳೂರಿನಲ್ಲಿ ಬಿಲ್ಡರ್ ಆಗಿರುವ ವಿನೋದ್ ಪಿಂಟೋ ಖಾತೆಯಿಂದಲೂ ಇದೇ ರೀತಿ ಹಣ ಕಡಿತವಾಗಿದ್ದು ಅವರೂ ಸೈಬರ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಓಟಿಪಿ ಇಲ್ಲದೆ ಹಣ ಕೀಳುವುದು ಹೇಗೆ ?
ಈ ರೀತಿಯ ವಂಚನೆ ಬಗ್ಗೆ ಸೈಬರ್ ತಜ್ಞ ಅನಂತ ಪ್ರಭು ಅವರಲ್ಲಿ ಕೇಳಿದಾಗ, ಅಚ್ಚರಿಯ ಮಾಹಿತಿ ಹೇಳುತ್ತಾರೆ. ಎಟಿಎಂ ಇಲ್ಲದ ಕಡೆ ಹಣ ವರ್ಗಾವಣೆ ಅಥವಾ ನಗದು ಪಡೆಯಲು ಮೈಕ್ರೋ ಎಟಿಎಂ ಬಳಕೆ ಮಾಡುತ್ತಾರೆ. ಬಯೋ ಮೆಟ್ರಿಕ್ ಸಿಸ್ಟಂ ರೀತಿಯಲ್ಲೇ ಈ ಮೆಷಿನ್ ಇರುತ್ತದೆ. ಯಾವುದೇ ವ್ಯಕ್ತಿ ಮೈಕ್ರೋ ಎಟಿಎಂ ಬಗ್ಗೆ ತಿಳಿಯದೆ ಬೆರಳಚ್ಚು ಮತ್ತು ಆಧಾರ್ ಸಂಖ್ಯೆ ನೀಡಿದರೆ ಒಮ್ಮೆಗೆ ಆ ಖಾತೆಗೆ ಲಿಂಕ್ ಆಗಿರುವ ಬ್ಯಾಂಕ್ ಖಾತೆಗಳಿಂದ ತಲಾ 10 ಸಾವಿರದಂತೆ ಹಣ ಪಡೆಯಬಹುದು. ಮಂಗಳೂರಿನಲ್ಲಿ ಯಾವ ರೀತಿಯ ನಕಲು ಆಗಿದೆ ಗೊತ್ತಿಲ್ಲ. ಸಬ್ ರಿಜಿಸ್ಟ್ರಾರ್ ಕಚೇರಿಯಲ್ಲಿ ಅಂಥ ಮೆಷಿನ್ ಇಟ್ಕೊಂಡಿದ್ದಾರೋ ತಿಳಿದಿಲ್ಲ. ವೆಬ್ ಹ್ಯಾಕ್ ಆಗಿದೆಯೋ ತಿಳಿದಿಲ್ಲ. ಪೊಲೀಸರು ಎಇಪಿಎಸ್ ಮೆಸೇಜ್ ಆಧರಿಸಿ, ಹಣ ಕಳಕೊಂಡವರಿಗೆಲ್ಲ ಒಂದೇ ಕಡೆಯಿಂದ ಮೆಸೇಜ್ ಹೋಗಿದೆಯಾ ಅನ್ನುವ ಬೆನ್ನತ್ತಿ ತನಿಖೆ ಮಾಡಬಹುದು ಎಂದಿದ್ದಾರೆ.
ಆಧಾರ್ ಕ್ಲೋನಿಂಗ್ ಮಾಡಿ ದೋಖಾ
ನಾವು ಯಾವುದೇ ಕಡೆ ಆಧಾರ್ ಸಂಖ್ಯೆ ಮತ್ತು ಬೆರಳಚ್ಚು ನೀಡಿದರೆ ಅದನ್ನು ಕ್ಲೋನಿಂಗ್ (ನಕಲು) ಮಾಡಿಸಿಕೊಳ್ಳಲು ವ್ಯವಸ್ಥೆ ಇರುತ್ತದೆ. ಆಧಾರ್ ನಂಬರ್ ಜೊತೆಗೆ ಬೆರಳಚ್ಚನ್ನು ಅಕ್ರಮವಾಗಿ ನಕಲು ಮಾಡಿದರೆ, ಎಷ್ಟು ಬಾರಿಯೂ ದಿನಕ್ಕೆ ಹತ್ತು ಸಾವಿರದಂತೆ ಎಇಪಿಎಸ್ ವ್ಯವಸ್ಥೆಯಲ್ಲಿ ಯಾರಿಗೂ ಹಣ ಪಡೆಯಬಹುದು. ಹಾಗಾಗಿ, ನಮ್ಮ ಆಧಾರ್ ಖಾತೆಯನ್ನೇ ಲಾಕ್ ಮಾಡಿಕೊಳ್ಳುವುದು ಒಳ್ಳೆಯದು ಎನ್ನುತ್ತಾರೆ, ಅನಂತ ಪ್ರಭು.
ಆಧಾರ್ ಖಾತೆಯನ್ನೇ ಲಾಕ್ ಮಾಡಿಸಿ
ಮಂಗಳೂರಿನ ಸೈಬರ್ ಠಾಣೆಯಲ್ಲಿ ಈ ರೀತಿಯ ಎರಡು ವಂಚನೆ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಸೈಬರ್ ಠಾಣೆಯ ಇನ್ಸ್ ಪೆಕ್ಟರ್ ಸತೀಶ್ ಅವರಲ್ಲಿ ಕೇಳಿದಾಗ, ಎಟಿಎಂ ಕಾರ್ಡ್, ಓಟಿಪಿ ಇಲ್ಲದೆಯೂ ಗರಿಷ್ಠ ಹತ್ತು ಸಾವಿರ ಹಣ ಪಡೆಯಲು ಎಇಪಿಎಸ್ ವ್ಯವಸ್ಥೆ ಇದೆ. ಯಾವುದೇ ಬಯೋಮೆಟ್ರಿಕ್ ವ್ಯವಸ್ಥೆಯಲ್ಲೂ ಇದು ಸಾಧ್ಯವಿದೆ. ಸಾರ್ವಜನಿಕರು ವಂಚನೆ ತಪ್ಪಿಸಲು ಬಯೋಮೆಟ್ರಿಕ್ ಮೆಶಿನಲ್ಲಿ ಬೆರಳಚ್ಚು ಕೊಡುವುದಕ್ಕೂ ಮುನ್ನ ಆನ್, ಆಫ್ ಮಾಡಿಕೊಳ್ಳಬೇಕು ಎನ್ನುವ ಸೂಚನೆ ಕೊಟ್ಟಿದ್ದೇವೆ. ಇದರಿಂದ ಬೆರಳಚ್ಚು ನಕಲು ಆಗುವುದನ್ನು ತಪ್ಪಿಸಬಹುದು. ಇದಲ್ಲದೆ, ಎಂ -ಆಧಾರ್ ಎನ್ನುವ ಏಪ್ ನಲ್ಲಿ ನಾವು ನಮ್ಮ ಆಧಾರ್ ಖಾತೆಯನ್ನೇ ಲಾಕ್ ಮಾಡಿಕೊಳ್ಳಬಹುದು. ಬಯೋಮೆಟ್ರಿಕ್ ನೀಡುವ ಸಂದರ್ಭದಲ್ಲಿ ಮಾತ್ರ ಓಪನ್ ಮಾಡಲು ಅವಕಾಶ ಇರುತ್ತದೆ. ಮಂಗಳೂರು ಸಬ್ ರಿಜಿಸ್ಟ್ರಾರ್ ಬಗ್ಗೆ ಆರೋಪ ಬಂದಿದ್ದರಿಂದ ನಾವು ಅಲ್ಲಿ ತೆರಳಿ ಪರಿಶೀಲನೆ ಮಾಡಿದ್ದೇವೆ. ಅಲ್ಲಿ ಅಂತಹ ಮೆಷಿನ್ ಇದೆಯೇ ಅಥವಾ ಬೆರಳಚ್ಚು ನಕಲು ಆಗಿದ್ದು ಹೇಗೆಂದು ತನಿಖೆ ಮಾಡುತ್ತಿದ್ದೇವೆ ಎಂದಿದ್ದಾರೆ.
ಕಾವೇರಿ ತಂತ್ರಾಂಶದಲ್ಲಿ ಸೋರಿಕೆಯೇ ?
ಇತ್ತೀಚೆಗೆ ಕರ್ನಾಟಕ ರಾಜ್ಯದಲ್ಲಿ ನೋಂದಣಿ ಇನ್ನಿತರ ದಾಖಲಾತಿಗಳಿಗೆ ಕಾವೇರಿ ತಂತ್ರಾಂಶ ಬಳಕೆಗೆ ಬಂದಿದೆ. ಈ ನಡುವೆ, ಅಕ್ಟೋಬರ್ ಬಳಿಕ ರಾಜ್ಯ ಸರಕಾರ ನೋಂದಣಿ ಶುಲ್ಕ ಹೆಚ್ಚಿಸುವ ನಿರ್ಧಾರಕ್ಕೆ ಬಂದಿರುವುದರಿಂದ ಎರಡು ತಿಂಗಳಲ್ಲಿ ನೋಂದಣಿ ಇನ್ನಿತರ ಕೆಲಸಕ್ಕೂ ವೇಗ ಸಿಕ್ಕಿದೆ. ಇದರ ನಡುವಲ್ಲೇ ವಂಚನೆ ಪ್ರಕರಣಗಳೂ ಬೆಳಕಿಗೆ ಬಂದಿದ್ದು ರಿಜಿಸ್ಟ್ರಾರ್ ಕಚೇರಿಗಳ ತಂತ್ರಾಂಶಗಳ ಬಗ್ಗೆಯೂ ಜನರಲ್ಲಿ ಸಂಶಯ ಉಂಟಾಗಿದೆ. ಕಾವೇರಿ ತಂತ್ರಾಂಶವನ್ನು ಸೈಬರ್ ಕಳ್ಳರು ಹ್ಯಾಕ್ ಮಾಡಿ ಸಾರ್ವಜನಿಕರ ಆಧಾರ್ ಇನ್ನಿತರ ಮಾಹಿತಿಗಳನ್ನು ಕದಿಯುತ್ತಿದ್ದಾರೆಯೇ ಎನ್ನುವ ಗುಮಾನಿ ವ್ಯಕ್ತಪಡಿಸುತ್ತಿದ್ದಾರೆ.
Money hacking from various Bank accounts without OTP suspected, Sub Registrar office Bio Metric hacked in Mangalore.
11-01-25 02:11 pm
HK News Desk
Asha Strick, CM Siddaramaiah ಆಶಾ ಕಾರ್ಯಕರ್ತೆಯರ...
10-01-25 11:01 pm
G Parameshwara: ನಕ್ಸಲರು ತಮ್ಮಲ್ಲಿದ್ದ ಶಸ್ತ್ರಾಸ್...
10-01-25 07:03 pm
NT chairman SN Subrahmanyan: ಇನ್ಫೋಸಿಸ್ ನಾರಾಯಣ...
10-01-25 02:44 pm
Car Accident, Chamarajanagar: ಶಬರಿಮಲೆ ಯಾತ್ರಿಕ...
10-01-25 02:06 pm
09-01-25 12:11 pm
HK News Desk
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
Crime News, Nagpur Couple: ಮಧ್ಯರಾತ್ರಿವರೆಗೆ 26...
08-01-25 10:53 pm
ಹೊಸವರ್ಷದ ಆರಂಭದಲ್ಲೇ ಟಿಬೆಟ್ ಮಂದಿಗೆ ಭಾರಿ ಆಘಾತ ;...
07-01-25 06:32 pm
11-01-25 07:19 pm
Mangaluru Correspondent
DYFI, CM Siddaramaiah, IPS Anupam Agrawal; ಪೊ...
11-01-25 04:57 pm
Lava Kusha Jodukare Kambala, Mangalore; ತೃತೀಯ...
11-01-25 02:25 pm
Mangalore Annamalai, Naxals: ನಕ್ಸಲ್ ಶರಣಾಗತಿ ಬ...
11-01-25 12:44 pm
Mangalore, Missing, Marriage; ಮುಸ್ಲಿಂ ಯುವತಿಯನ...
10-01-25 11:14 pm
10-01-25 11:05 pm
HK News Desk
Bangladeshi national illegal, Mangalore: ಮುಕ್...
10-01-25 09:51 pm
Mangalore Robbery, Crime, Singari Beedi: ಸಿಂಗ...
10-01-25 10:11 am
Share Market Scam, Mangalore: ಷೇರು ಮಾರುಕಟ್ಟೆ...
09-01-25 10:43 pm
Drugs, Mangalore Crime: ಗೋವಾದಿಂದ ಮಂಗಳೂರಿಗೆ ಹೈ...
09-01-25 10:32 pm