ಬ್ರೇಕಿಂಗ್ ನ್ಯೂಸ್
27-09-23 11:26 am Mangalore Correspondent ಕ್ರೈಂ
ಮಂಗಳೂರು, ಸೆ.27: ಗಂಡ-ಹೆಂಡತಿಯ ಗಲಾಟೆಯಲ್ಲಿ ಕೂಸು ಬಡವಾಯ್ತು ಎನ್ನುವಂತೆ ಪಾನಮತ್ತ ತಂದೆಯೊಬ್ಬ ಪೊಲೀಸ್ ಠಾಣೆಯಲ್ಲಿ ಪೊಲೀಸರೆದುರೇ ಇಬ್ಬರು ಮಕ್ಕಳನ್ನು ಗೋಡೆಗೆ ತಳ್ಳಿ ಕೊಲೆಗೆ ಯತ್ನಿಸಿದ ಘಟನೆ ಕದ್ರಿ ಪೊಲೀಸ್ ಠಾಣೆಯಲ್ಲಿ ನಡೆದಿದೆ.
ಕದ್ರಿ ವ್ಯಾಸನಗರ ನಿವಾಸಿ ಮಹೇಶ್ ಕೃತ್ಯವೆಸಗಿದ ಆರೋಪಿ. ವಿಪರೀತ ಮದ್ಯಸೇವನೆ ಚಟ ಹೊಂದಿದ್ದ ಆರೋಪಿ, ಪ್ರತಿನಿತ್ಯ ಪತ್ನಿ ಮತ್ತು ಮಕ್ಕಳಿಗೆ ಕಿರುಕುಳ ನೀಡುತ್ತಿದ್ದ. ಸೆಪ್ಟೆಂಬರ್ 24ರಂದು ರಾತ್ರಿ ಕ್ಷುಲ್ಲಕ ಕಾರಣಕ್ಕೆ ಪತ್ನಿ ಜೊತೆ ಜಗಳ ಮಾಡಿ ಪತ್ನಿ ಮತ್ತು ಮಕ್ಕಳನ್ನು ಬೆಂಕಿ ಹಚ್ಚಿ ಕೊಲ್ಲುತ್ತೇನೆ ಎಂದು ಬೆದರಿಸಿ, ಹಲ್ಲೆ ನಡೆಸಲು ಮುಂದಾಗಿದ್ದ. ಈ ಸಂದರ್ಭ ಆತನ ಪತ್ನಿ ತಪ್ಪಿಸಿಕೊಂಡು ಕದ್ರಿ ಠಾಣೆಗೆ ಬಂದಿದ್ದು, ಆದಷ್ಟು ಬೇಗ ನಮ್ಮ ಮನೆಗೆ ಬಂದು ಗಂಡನಿಂದ ಮಕ್ಕಳನ್ನು ರಕ್ಷಿಸಿ ಎಂದಿದ್ದಾರೆ.
ಈ ವೇಳೆ ಆರೋಪಿ ಮಹೇಶ ತನ್ನ 6 ವರ್ಷದ ಗಂಡು ಮಗು ಮತ್ತು ಒಂದೂವರೆ ವರ್ಷದ ಹೆಣ್ಣು ಮಗುವನ್ನು ಕರೆದುಕೊಂಡು ಠಾಣೆಗೆ ಬಂದಿದ್ದಾನೆ. ಪೊಲೀಸರು ಆತನನ್ನು ವಿಚಾರಿಸಿದಾಗ ಪತ್ನಿಯೇ ತನಗೆ ಹೊಡೆದಿರುವುದಾಗಿ ಹೇಳಿದ್ದಾನೆ. ದೂರು ನೀಡಲು ಹೇಳಿದಾಗ ಆತ ಕಿರುಚಾಡಿ, ನಿಮ್ಮನ್ನು ಯಾರನ್ನೂ ಬಿಡುವುದಿಲ್ಲ ಎಂದು ತನ್ನ ಇಬ್ಬರು ಮಕ್ಕಳನ್ನು ಎಳೆದುಕೊಂಡು ಠಾಣೆಯಿಂದ ಹೊರಗೆ ಬಂದಿದ್ದ.
ಠಾಣೆಯೊಳಗಿದ್ದ ಆತನ ಪತ್ನಿ ಹೊರಗೆ ಬಂದಾಗ ಮಹೇಶ ಮತ್ತಷ್ಟು ಜೋರಾಗಿ ಕಿರುಚಿದ್ದಾನೆ. ಹತ್ತಿರ ಬಂದಲ್ಲಿ ತನ್ನ ಕೈಯಲ್ಲಿದ್ದ ಮಗಳನ್ನು ಗೋಡೆಗೆ ಚಚ್ಚಿ ಕೊಲ್ಲುತ್ತೇನೆಂದು ಬೆದರಿಸಿದ್ದಾನೆ. ಪೊಲೀಸರು ಮಗುವನ್ನು ಬಿಟ್ಟು ಬಿಡುವಂತೆ ಹೇಳಿದಾಗ, ಮಗುವಿನ ಕುತ್ತಿಗೆಯನ್ನು ಹಿಡಿದು ಎಳೆದಾಡಿ ಮಗುವನ್ನು ಎತ್ತಿ ನೆಲಕ್ಕೆ ಎಸೆಯಲು ಪ್ರಯತ್ನಿಸಿದ್ದಾನೆ.
ಮಗುವಿನ ಕುತ್ತಿಗೆ ಹಾಗೂ ತಲೆಗೆ ಗುದ್ದಿದ ಗಾಯವಾಗಿ ಮಗು ಜೋರಾಗಿ ಕೂಗಲಾರಂಭಿಸಿದೆ. ಈ ವೇಳೆ, ರಾತ್ರಿ ಕರ್ತವ್ಯದಲ್ಲಿದ್ದ ಪಿಎಸ್‌ಐ ಪ್ರತಿಭಾ ಕೂಡಲೇ ಮಗುವನ್ನು ಎತ್ತಿಕೊಂಡಿದ್ದು ಆರೋಪಿಯನ್ನು ಹಿಡಿದು ಕೂಡಿ ಹಾಕುವಂತೆ ಸಿಬಂದಿಗೆ ಸೂಚಿಸಿದ್ದಾರೆ. ಅಲ್ಲದೆ, ಮಗುವಿನ ತಾಯಿ ಹಾಗೂ ಬಾಲಕನನ್ನು ಕರೆದುಕೊಂಡು ಇಲಾಖಾ ವಾಹನದಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಹೆಡ್ ಕಾನ್‌ಸ್ಟೇಬಲ್ ಶರತ್ ಕುಮಾರ್ ಅವರು ಆರೋಪಿ ಮಹೇಶ್ ಕರ್ತವ್ಯ ನಿರ್ವಹಣೆಗೆ ಅಡ್ಡಿಪಡಿಸಿದ್ದಾನೆ ಎಂದು ದೂರು ನೀಡಿದ್ದು ಪ್ರಕರಣ ದಾಖಲಾಗಿದೆ.
Father attempts to kill daughter inside kadri police station in Mangalore.
03-03-25 02:07 pm
Bangalore Correspondent
ನಟರಿಗೆ ನಮ್ಮ ಸರ್ಕಾರ ಪ್ರಶಸ್ತಿ ಕೊಟ್ರೆ ಬೇಡ ಅಂತೀರಿ...
03-03-25 12:33 pm
DK Shivakumar, Veerappa Moily: ಡಿಕೆಶಿ ಸಿಎಂ ಆಗ...
03-03-25 12:03 pm
ರಾಜ್ ಕುಮಾರ್, ಶಂಕರ್ನಾಗ್, ವಿಷ್ಣುವರ್ಧನ್ ಅಂತವರು...
02-03-25 10:24 pm
DK Shivakumar, Kannada film industry: ಸಿನಿಮಾ...
02-03-25 09:39 pm
01-03-25 10:39 pm
HK News Desk
Trump Vs Zelenskyy, Talk fight: ಶ್ವೇತ ಭವನದಲ್ಲ...
01-03-25 05:35 pm
Pope Francis: ಪೋಪ್ ಫ್ರಾನ್ಸಿಸ್ ಆರೋಗ್ಯ ಸ್ಥಿತಿ ಗ...
01-03-25 01:20 pm
ಟ್ರಂಪ್ ಸುಂಕ ಬರೆಗೆ ನಲುಗಿದ ಷೇರುಪೇಟೆ ; NIFTY ಇತಿ...
28-02-25 08:11 pm
ಪಾಕಿಸ್ತಾನ ಮದ್ರಸಾದಲ್ಲಿ ಆತ್ಮಾಹುತಿ ಬಾಂಬ್ ದಾಳಿ ;...
28-02-25 07:46 pm
03-03-25 06:29 pm
Mangalore Correspondent
Mangalore FIR Vedavyasa Kamath, Congress: ದೇವ...
03-03-25 04:45 pm
Mangalore Suicide, Lodge, CISF: ಪ್ರೀತಿಸಿ ಲಿವಿ...
03-03-25 03:00 pm
Udupi, DK Shivakumar: ಜಾತಿ ರಾಜಕಾರಣ, ಗುಂಪುಗಾರಿ...
02-03-25 11:08 pm
Puttur Bus Auto Accident: ಪತಿಯ ಆಟೋದಲ್ಲಿ ತೆರಳು...
02-03-25 11:01 pm
03-03-25 01:51 pm
HK News Desk
Bangalore Falcon Ponzi scheme, Fraud: ಇನ್ ವಾಯ...
02-03-25 06:37 pm
Bangalore KR Puram Police, Bike Robbery, Crim...
01-03-25 05:54 pm
Bike Robbery, Mangalore Police, Crime, TD Nag...
01-03-25 02:40 pm
5 ವರ್ಷದ ಹೆಣ್ಣು ಮಗುವಿಗೆ ಕ್ರೂರ ಹಿಂಸೆ ನೀಡಿ ಅತ್ಯಾ...
28-02-25 02:37 pm