Kyc otp fraud, Puttur, Mangalore: ಪುತ್ತೂರು ; ಕೆವೈಸಿ ಹೆಸರಲ್ಲಿ ಕೂಲಿ ಕಾರ್ಮಿಕನಿಗೆ ಟೋಪಿ, ಒಟಿಪಿ ಹೇಳಿ ಅಕೌಂಟ್‌ ನಿಂದ 1 ಲಕ್ಷ ರೂ.ಖಾಲಿ, ಇತ್ತೀಚೆಗೆ ಸಾಲ ಪಡೆದಿದ್ದ ದುಡ್ಡು ವಂಚಕರ ಕೈಯಲ್ಲಿ ! 

01-10-23 03:57 pm       Mangalore Correspondent   ಕ್ರೈಂ

ಮೊಬೈಲ್‌ಗೆ ಕರೆ ಮಾಡಿದ ವ್ಯಕ್ತಿಗೆ ಒಟಿಪಿ ಹೇಳಿದ ಕೂಲಿ ಕಾರ್ಮಿಕರೋರ್ವರು ತನ್ನ ಖಾತೆಯಲ್ಲಿದ್ದ 1 ಲಕ್ಷ ರೂ. ಕಳೆದುಕೊಂಡ ಘಟನೆ ತಾಲೂಕಿನ ತಿಂಗಳಾಡಿಯಲ್ಲಿ ನಡೆದಿದೆ.

ಪುತ್ತೂರು, ಅ.1: ಮೊಬೈಲ್‌ಗೆ ಕರೆ ಮಾಡಿದ ವ್ಯಕ್ತಿಗೆ ಒಟಿಪಿ ಹೇಳಿದ ಕೂಲಿ ಕಾರ್ಮಿಕರೋರ್ವರು ತನ್ನ ಖಾತೆಯಲ್ಲಿದ್ದ 1 ಲಕ್ಷ ರೂ. ಕಳೆದುಕೊಂಡ ಘಟನೆ ತಾಲೂಕಿನ ತಿಂಗಳಾಡಿಯಲ್ಲಿ ನಡೆದಿದೆ.

ವ್ಯಕ್ತಿಯ ಮೊಬೈಲ್‌ಗೆ ಸೆ.30ರಂದು ಬೆಳಗ್ಗೆ ಸಂದೇಶ ಬಂದಿದ್ದು ನಿಮ್ಮ ಅಕೌಂಟ್‌ ನಂಬರ್‌ಗೆ ತಕ್ಷಣವೇ ಕೆವೈಸಿ ಮಾಡಬೇಕು ಎಂದು ತಿಳಿಸಿ ಕೆಳಗೆ ಕೆನರಾ ಬ್ಯಾಂಕ್‌ ಎಂದು ಬರೆಯಲಾಗಿತ್ತು. ಈ ಬಗ್ಗೆ ಅವರು ಪುತ್ರನ ಬಳಿ ವಿಚಾರಿಸಿದಾಗ, ಬ್ಯಾಂಕ್‌ಗೆ ಹೋಗಿ ಅಲ್ಲಿ ಅವರು ಕೆವೈಸಿ ಮಾಡಿಕೊಡುತ್ತಾರೆ ಎಂದಿದ್ದರು. 

ಮಧ್ಯಾಹ್ನ ವೇಳೆಗೆ ಕರೆ ಬಂದಿದ್ದು ಕನ್ನಡದಲ್ಲಿ ಮಾತನಾಡಿದ ವ್ಯಕ್ತಿಯೊಬ್ಬ ಅಕೌಂಟ್‌ ನಂಬರ್‌ ಹೇಳಿದ್ದು, ಅದು ನನ್ನ ಅಕೌಂಟ್‌ ಎಂದು ಕೂಲಿ ಕಾರ್ಮಿಕ ಉತ್ತರಿಸಿದ್ದ. ಆಗ ನಿಮ್ಮ ಮೊಬೈಲ್‌ಗೆ ಒಟಿಪಿ ಬಂದಿದೆ. ಅದನ್ನು ಹೇಳಿ ಎಂದು ಹೇಳಿದ್ದಾಗ ಕೂಲಿ ಕಾರ್ಮಿಕ ಒಟಿಪಿ ನಂಬರ್ ಹೇಳಿದ್ದಾರೆ. ತಕ್ಷಣವೇ ಅಕೌಂಟ್‌ನಲ್ಲಿದ್ದ 1 ಲಕ್ಷ ರೂ. ಖೋತಾ ಆಗಿರುವ ಬಗ್ಗೆ ಮೊಬೈಲಿಗೆ ಮೆಸೇಜ್ ಬಂದಿತ್ತು. 

ಹಣ ಕಳೆದುಕೊಂಡ ವ್ಯಕ್ತಿ ಕೂಲಿ ಕಾರ್ಮಿಕನಾಗಿದ್ದು, ಅಲ್ಪಸ್ವಲ್ಪ ಕೂಡಿಟ್ಟ ಹಣದ ಜತೆಗೆ ಇತ್ತೀಚೆಗೆ ಸಾಲದ ರೂಪದಲ್ಲಿ ಪಡೆದ ಹಣವನ್ನು ಬ್ಯಾಂಕ್ ಖಾತೆಗೆ ಹಾಕಿದ್ದರು. ಕೂಡಿಟ್ಟ ಹಣದ ಜೊತೆಗೆ ಸಾಲದ ಹಣವೂ ವಂಚಕರ ಪಾಲಾಗಿದೆ.

Kyc otp fraud, coolie worker looses one lakh from his account at Puttur in Mangalore