ಬ್ರೇಕಿಂಗ್ ನ್ಯೂಸ್
04-10-23 09:54 pm Mangalore Correspondent ಕ್ರೈಂ
ಮಂಗಳೂರು, ಅ.4: ಕಳ್ಳತನ ಪ್ರಕರಣದ ಬೆನ್ನು ಹತ್ತಿದ ಮುಲ್ಕಿ ಠಾಣೆ ಪೊಲೀಸರು ದಾವಣಗೆರೆ ಮೂಲದ ನಟೋರಿಯಸ್ ಕಳ್ಳರನ್ನು ಬಂಧಿಸಿದ್ದಾರೆ. ಬಂಧಿತರಿಂದ ಚಿನ್ನಾಭರಣ ಸಹಿತ 7.63 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆದಿದ್ದಾರೆ.
ದಾವಣಗೆರೆ ಜಿಲ್ಲೆಯ ಹೊನ್ನೂರು ಮಲಟ್ಟೆಹಳ್ಳಿ ಬಾಪೂಜಿ ಬಡಾವಣೆ ನಿವಾಸಿಗಳಾದ ರಘು ಎಸ್(30), ಮಂಜುನಾಥ (28), ವಿನೋಬ ನಗರ ನಿವಾಸಿ ಪ್ರಮೋದ್ ವಿ.(23), ಆವರಗೇರಿ, ಗೋಶಾಲೆ ನಿವಾಸಿ ಎಚ್.ರವಿಕಿರಣ್ (23), ಆವರಗೆರೆ ನಿವಾಸಿ ದವಲ ಸಾಬ್ (23), ಮಾಳಶೆಟ್ಟಿ ಗ್ರಾಮದ ಹೊನ್ನೂರು ನಿವಾಸಿ ಮಂಜುನಾಥ (29) ಬಂಧಿತರು. ಆರೋಪಿಗಳಿಂದ ಕಳವು ಮಾಡಿದ್ದ ಒಂದು ಹೋಂಡಾ ಬೈಕ್, 1 ರಾಯಲ್ ಎನ್ ಫೀಲ್ಡ್, 1 ಕಾರು ಮತ್ತು ಕರಿಮಣಿ ಸರ ಸೇರಿ ಒಟ್ಟು 7.63 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಕ್ಕೆ ಪಡೆಯಲಾಗಿದೆ.
ಬಂಧಿತರ ಪೈಕಿ ಮೂವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಿದ್ದು, ಇಬ್ಬರನ್ನು ಪೊಲೀಸ್ ಕಸ್ಟಡಿಗೆ ಪಡೆಯಲಾಗಿದೆ. ಕಳೆದ ಸೆಪ್ಟೆಂಬರ್ 17ರಂದು ಮೂಲ್ಕಿ ಪೊಲೀಸ್ ಠಾಣೆ ವ್ಯಾಪ್ತಿಯ ಕೊಳ್ನಾಡಿನ ಚಂದ್ರಮೌಳೇಶ್ವರ ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವಾಸಂತಿ ಶೆಟ್ಟಿ ಎಂಬವರ ಚಿನ್ನದ ಸರವನ್ನು ಕಳವು ಮಾಡಲಾಗಿತ್ತು. ಅದೇ ದಿನ ಚಂದ್ರಮೌಳೇಶ್ವರ ಬಸ್ ನಿಲ್ದಾಣದ ಬಳಿ ಸೂರ್ಯಪ್ರಕಾಶ ಎನ್ ಎಂಬವರು ನಿಲ್ಲಿಸಿದ್ದ ಕೆಎ-19-ಇಸಿ-2398 ರ ನೋಂದಣಿ ಸಂಖ್ಯೆಯಲ್ಲಿರುವ ಬಜಾಜ್ ಡಿಸ್ಕವರಿ ಬೈಕ್ ಕಳವು ಮಾಡಲಾಗಿತ್ತು. ಈ ಎರಡೂ ಕಳ್ಳತನಕ್ಕೆ ಸಂಬಂಧಿಸಿದಂತೆ ಮೂಲ್ಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಸುಳಿವು ಆಧರಿಸಿ ದಾವಣಗೆರೆಯಲ್ಲಿ ಅಡಗಿದ್ದ ತಂಡವನ್ನು ಬಂಧಿಸಿದ್ದಾರೆ.
Mangalore Mulki robbery case, Five notorious robbers arrested from Davanagere.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
11-01-26 09:59 pm
Mangaluru Staff
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm