ಬ್ರೇಕಿಂಗ್ ನ್ಯೂಸ್
05-10-23 10:13 pm HK News Desk ಕ್ರೈಂ
ಉತ್ತರ ಪ್ರದೇಶ, ಅ 05: ಕಾನೂನು ವಿದ್ಯಾರ್ಥಿಯೊಬ್ಬನಿಗೆ ಲೈಂಗಿಕ ಸುಲಿಗೆಕೋರರು ಹಿಂಸೆ ಕೊಟ್ಟ ಘಟನೆ ಉತ್ತರ ಪ್ರದೇಶದ ಲಖನೌನಲ್ಲಿ ನಡೆದಿದೆ. ಬಿಹಾರ ಮೂಲದ ಕಾನೂನು ವಿದ್ಯಾರ್ಥಿಗೆ ಕಾಡಿದ ಲೈಂಗಿಕ ಸುಲಿಗೆಕೋರರು ಆತನಿಂದ 77 ಸಾವಿರ ರೂ. ವಸೂಲಿ ಮಾಡಿದ್ದಾರೆ.
ಕಾಲೇಜ್‌ನ ಹಾಸ್ಟೆಲ್ ರೂಂನಲ್ಲಿ ಇದ್ದ ಕಾನೂನು ವಿದ್ಯಾರ್ಥಿಯ ಮೊಬೈಲ್‌ಗೆ ಅಪರಿಚಿತ ನಂಬರ್ ಒಂದರಿಂದ ವಿಡಿಯೋ ಕಾಲ್ ಬಂದಿತ್ತು. ಕಾಲ್ ರಿಸೀವ್ ಮಾಡಿದ ಕೂಡಲೇ ಬೆತ್ತಲಾಗಿದ್ದ ಯುವತಿಯೊಬ್ಬಳ ವಿಡಿಯೋ ಕಾಣ ಸಿಕ್ಕಿತ್ತು. ಆ ಯುವತಿಯು ನೀನೂ ಕೂಡಾ ಬೆತ್ತಲಾಗು ಎಂದು ವಿದ್ಯಾರ್ಥಿಗೆ ಪುಸಲಾಯಿಸಿದ್ದಳು. ಯುವತಿಯ ಮಾತಿಗೆ ಮರುಳಾದ ವಿದ್ಯಾರ್ಥಿ ಆಕೆ ಹೇಳಿದಂತೆಯೇ ತಾನೂ ಬೆತ್ತಲಾದ. ಕೇವಲ 30 ಸೆಕೆಂಡ್‌ನಲ್ಲಿಯೇ ಈ ಕರೆ ಕಡಿತವಾಗಿತ್ತು ಎನ್ನಲಾಗಿದೆ. ಇದಾದ ಕೂಡಲೇ ವಿದ್ಯಾರ್ಥಿಯ ಮೊಬೈಲ್‌ಗೆ ಬೆದರಿಕೆ ಕರೆ ಬಂತು. ವಿದ್ಯಾರ್ಥಿಗೆ ಕರೆ ಮಾಡಿದ್ದ ಯುವತಿ ಹಣ ಕೊಡು, ಇಲ್ಲವಾದ್ರೆ ನಿನ್ನ ಬೆತ್ತಲೆ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಬಹಿರಂಗ ಮಾಡುತ್ತೇನೆ ಎಂದು ಬೆದರಿಕೆ ಹಾಕಿದಳು ಎನ್ನಲಾಗಿದೆ.
ಯುವತಿಯ ಬೆದರಿಕೆ ಕರೆಯಿಂದಾಗಿ ಕಂಗಾಲಾದ ವಿದ್ಯಾರ್ಥಿ ಕೂಡಲೇ ತನ್ನ ಎರಡು ಬ್ಯಾಂಕ್ ಖಾತೆಗಳಿಂದ ಒಟ್ಟು 77,599 ರೂ.ಗಳನ್ನು ಯುವತಿಯ ಖಾತೆಗೆ ವರ್ಗಾಯಿಸಿದ್ದಾನೆ. ಸೆಂಟ್ರಲ್ ಬ್ಯಾಂಕ್ ಹಾಗೂ ಕೆನರಾ ಬ್ಯಾಂಕ್‌ನ ಎರಡು ಖಾತೆಗಳಿಗೆ ಹಣ ವರ್ಗಾವಣೆ ಮಾಡಿರೋದಾಗಿ ಯುವಕ ಮಾಹಿತಿ ನೀಡಿದ್ದಾನೆ. ಇನ್ನು ಯುವತಿ ತನಗೆ ಕರೆ ಮಾಡಿದ ಮೊಬೈಲ್ ಸಮಖ್ಯೆ ಹನ್ಸ್‌ರಾಜ್ ಎಂಬುವನಿಗೆ ಸೇರಿದ್ದು ಎಂದು ವಿದ್ಯಾರ್ಥಿ ಪತ್ತೆ ಹಚ್ಚಿದ್ದಾನೆ. ಮತ್ತೊಂದು ನಂಬರ್‌ನ ಮೂಲ ಗೊತ್ತಾಗಿಲ್ಲ ಎಂದು ಪೊಲೀಸರಿಗೆ ಮಾಹಿತಿ ನೀಡಿದ್ದಾನೆ.
ವಿಡಿಯೋ ಕರೆ ಬಳಿಕ ವಿದ್ಯಾರ್ಥಿಗೆ ಮೊದಲಿಗೆ ಯುವತಿಯ ಮೊಬೈಲ್ ಕರೆ ಬಂದಿದೆ. ಆಕೆ ವಿಡಿಯೋ ಡಿಲೀಟ್ ಮಾಡಲು 28 ಸಾವಿರ ರೂ. ಕೊಡು ಎಂದು ಬೇಡಿಕೆ ಇಟ್ಟಿದ್ದಾಳೆ. ಆಗ ಯುವಕ ಈ ಬೇಡಿಕೆ ತಿರಸ್ಕರಿಸಿದ್ದಾನೆ. ಹಣ ಕೊಡೋದಿಲ್ಲ ಎಂದು ಪಟ್ಟು ಹಿಡಿದಿದ್ದಾನೆ. ಈ ವೇಳೆ ಯುವತಿ ಕರೆ ಕಟ್ ಮಾಡಿದ್ದಾಳೆ. ನಂತರ ಪುರುಷನೊಬ್ಬನ ಮೊಬೈಲ್ ಕರೆ ಬಂದಿದೆ. ಆತ ತನ್ನನ್ನು ತಾನು ದಿಲ್ಲಿಯ ಪೊಲೀಸ್ ಆಯುಕ್ತ ಎಂದು ಪರಿಚಯಿಸಿಕೊಂಡಿದ್ದಾನೆ. ನೀನು ಹಣ ಕೊಡದಿದ್ದರೆ ನಿನ್ನ ಭವಿಷ್ಯವನ್ನೇ ಹಾಳು ಮಾಡುತ್ತೇನೆ ಎಂದು ಬೆದರಿಕೆ ಹಾಕಿದ್ದಾನೆ.
ಯುವತಿ ನಿನ್ನ ಜೊತೆ ಬೆತ್ತಲೆಯಾಗಿ ವಿಡಿಯೋ ಸಂಭಾಷಣೆ ಮಾಡಿದ್ದಾಳೆ. ಈ ಸಂಬಂಧ ನಾವು ಎಫ್‌ಐಆರ್ ದಾಖಲು ಮಾಡಿಕೊಂಡಿದ್ದೇವೆ. ಈಗಾಗಲೇ ವಿಡಿಯೋ ಯೂಟ್ಯೂಬ್‌ನಲ್ಲಿದೆ. ನೀನು ಹಣ ಕೊಡದೇ ಹೋದರೆ ಈ ವಿಡಿಯೋ ವೈರಲ್ ಆಗುತ್ತದೆ ಎಂದು ವಿದ್ಯಾರ್ಥಿಗೆ ಬೆದರಿಕೆ ಹಾಕಿದ್ದಾರೆ. ಹೀಗಾಗಿ, ಆತ ದಿಕ್ಕೇ ತೋಚದಂತಾಗಿ ಹಣ ನೀಡಿದ್ದಾನೆ ಎಂದು ಎಫ್‌ಐಆರ್‌ನಲ್ಲಿ ನಮೂದಿಸಲಾಗಿದೆ.
Law student blackmailed of naked video record in Uttar Pradesh.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
11-01-26 09:59 pm
Mangaluru Staff
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm