ಬ್ರೇಕಿಂಗ್ ನ್ಯೂಸ್
09-10-23 09:44 pm Bangalore Correspondent ಕ್ರೈಂ
ಬೆಂಗಳೂರು, ಅ.9: ರಾಜ್ಯದಲ್ಲಿ ಸಿಡಿ ರಾಜಕಾರಣ ಮತ್ತೆ ತಲೆ ಎತ್ತಿದೆ. ಕಳೆದ ವಿಧಾನಸಭಾ ಚುನಾವಣೆ ವೇಳೆ ಸಾಕಷ್ಟು ಮಂದಿಯ ವಿರುದ್ಧ “ಸಿಡಿ” ಪ್ರಕರಣದ ಸುದ್ದಿಗಳು ಕೇಳಿಬಂದಿದ್ದವು. ಕೆಲವು ಬಿಡುಗಡೆಯೂ ಆಗಿದ್ದಲ್ಲದೆ, ಅವುಗಳನ್ನು ಫೇಕ್ ಎಂದೂ ಹೇಳಲಾಗಿತ್ತು. ಆದರೆ, ಈಗ ಕರ್ನಾಟಕ ರಾಜಕೀಯದಲ್ಲಿ ಮತ್ತೊಂದು ಸಿಡಿ ಲೇಡಿ ಪ್ರತ್ಯಕ್ಷವಾಗಿದ್ದಾರೆ. ಅವರು ಮಾಜಿ ಸಚಿವ, ಶಾಸಕ ಮುನಿರತ್ನ ವಿರುದ್ಧ ನೇರ ಆರೋಪ ಮಾಡಿದ್ದು, ಸ್ಫೋಟಕ ಸಂಗತಿಗಳ ಬಗ್ಗೆ ಬಿಚ್ಚಿಟ್ಟಿದ್ದಾರೆ. ತಮ್ಮಿಂದ ಹನಿಟ್ರ್ಯಾಪ್ ಮಾಡಿಸಿದ್ದಾರೆ. ಅಲ್ಲದೆ, ತಮ್ಮನ್ನು ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.
ಆರ್. ಆರ್. ನಗರ ಶಾಸಕರಾಗಿರುವ ಮಾಜಿ ಸಚಿವ ಮುನಿರತ್ನ ವಿರುದ್ಧ ಈಗ ಗಂಭೀರ ಆರೋಪವೊಂದು ಕೇಳಿಬಂದಿದೆ. ಮಹಿಳೆಯೊಬ್ಬರು ಹನಿಟ್ರ್ಯಾಪ್ ಆರೋಪ ಮಾಡಿದ್ದಾರೆ. ಈ ಮೂಲಕ ಕರ್ನಾಟಕ ರಾಜಕೀಯದಲ್ಲಿ ಹೊಸ ಸಿಡಿ ಲೇಡಿ ಪ್ರತ್ಯಕ್ಷವಾದಂತೆ ಆಗಿದೆ.

ನನ್ನ ಜೀವನದ ಅಧೋಗತಿಗೆ ಕಾರಣವೇ ಮಿಸ್ಟರ್ ಮುನಿರತ್ನ. ಎಲ್ಲ ಪ್ಲ್ಯಾನ್ ಮಾಡಿ ಎಕ್ಸಿಕ್ಯೂಟ್ ಮಾಡಿದ್ದೇ ಮುನಿರತ್ನ. ಅದಕ್ಕೋಸ್ಕರವೇ ನನ್ನ ಹೋರಾಟ. ಇದು ಅಂತ್ಯವಾಗಲೇಬೇಕು. ಬೇರೆ ಯಾವ ಹೆಣ್ಣು ಮಕ್ಕಳಿಗೂ ಈ ಸ್ಥಿತಿ ಬರಬಾರದು ಎಂದು ಸಿಡಿ ಲೇಡಿ ವಿಡಿಯೊ ಮೂಲಕ ಗುಡುಗಿದ್ದಾರೆ.
"ಒಕ್ಕಲಿಗರು ರಾಜರಾಜೇಶ್ವರಿ ನಗರ” ಎಂಬ ಫೇಸ್ಬುಕ್ ಪೇಜ್ನಲ್ಲಿ ಮಹಿಳೆ ಪ್ರತ್ಯಕ್ಷವಾಗಿದ್ದು, ಮಾಜಿ ಸಚಿವ ಮುನಿರತ್ನ ವಿರುದ್ಧ ನೇರವಾಗಿ ಆರೋಪ ಮಾಡಿದ್ದಾರೆ. “ನನ್ನ ಜೀವನದ ದುರಂತಕ್ಕೆ ಮುನಿರತ್ನ ಅವರೇ ಹೊಣೆ. ಯಾವ ಕಾರಣಕ್ಕೂ ಈ ಹೋರಾಟ ಕೈ ಬಿಡಲ್ಲ. ಮುನಿರತ್ನ ಅವರ ಹನಿಟ್ರ್ಯಾಪ್ ದಂಧೆ ಬಯಲಿಗೆ ಎಳೆಯುತ್ತೇನೆ” ಎಂದು ಹೇಳಿದ್ದಾರೆ.
ನನ್ನನ್ನು ಬಳಸಿಕೊಂಡು ಹನಿ ಟ್ರ್ಯಾಪ್ ಮಾಡಿಸಿದ್ದಾರೆ. ಅಲ್ಲದೆ, ಮದುವೆ ಆಗುತ್ತೇನೆ ಎಂದು ಮುನಿರತ್ನ ನನಗೆ ಮೋಸ ಮಾಡಿದ್ದಾರೆ. ಅವರ ಮೇಲೆ ನಂಬಿಕೆ ಮೇಲೆ ನಾನು ಜತೆಗೆ ಹೋಗಿದ್ದೆ. ಆದರೆ, ಆ ನಂಬಿಕೆಗೆ ಅವರು ದ್ರೋಹ ಮಾಡಿದ್ದಾರೆ ಎಂದು ಆರೋಪ ಮಾಡಿರುವ ಮಹಿಳೆ ತಮ್ಮ ಕೈಯಲ್ಲಿ ಒಂದು ದಾಖಲೆ ಮಾದರಿಯಲ್ಲಿ ಫೈಲ್ ಅನ್ನು ಇಟ್ಟುಕೊಂಡಿದ್ದಾರೆ. ಆದರೆ, ಅದರ ಪ್ರದರ್ಶನವನ್ನು ಮಾತ್ರ ಮಾಡಿಲ್ಲ. ಜತೆಗೆ ತಾನು ಯಾರು? ಮುಂದೇನು ಮಾಡುತ್ತೇನೆ ಎಂಬುದನ್ನೂ ಹೇಳಿಲ್ಲ. ಪೊಲೀಸ್ ಠಾಣೆಗೆ ಹೋಗುವ ಬಗ್ಗೆಯೂ ಪ್ರಸ್ತಾಪ ಮಾಡಿಲ್ಲ. ಆ ಮಹಿಳೆ ತಮ್ಮ ಗುರುತನ್ನು ಮರೆಮಾಚಿಕೊಂಡು ವಿಡಿಯೊ ಮಾಡಿ ಅಪ್ಲೋಡ್ ಮಾಡಿದ್ದಾರೆ.
Bangalore R R Nagar MLA Munirathna alleged of Honey trap, woman shares video of being cheated of marriage.
10-01-26 10:28 pm
HK News Desk
"ಡ್ಯಾಡಿ ಈಸ್ ಹೋಮ್" ಎಐ ವಿಡಿಯೋ ರಿಲೀಸ್ ; ರಾಜ್ಯ ರಾ...
10-01-26 04:29 pm
ಚಾರ್ಮಾಡಿ ಘಾಟಿಯಲ್ಲಿ ರಸ್ತೆಗೆ ಅಡ್ಡ ನಿಂತ ಒಂಟಿ ಸಲಗ...
10-01-26 03:00 pm
Purushottam Bilimale, Legal Battle Against Ma...
10-01-26 01:17 pm
ಮಲಯಾಳ ಭಾಷಾ ಮಸೂದೆಯಿಂದ ಕಾಸರಗೋಡು ಕನ್ನಡಿಗರಿಗೆ ಧಕ್...
09-01-26 04:42 pm
11-01-26 06:07 pm
HK News
ವೆನಿಜುವೆಲಾ ತೈಲದ ನಿಯಂತ್ರಣಕ್ಕೆ ಮುಂದಾದ ಅಮೆರಿಕ ;...
10-01-26 03:22 pm
ಶಬರಿಮಲೆ ಚಿನ್ನ ಕಳವು ಪ್ರಕರಣ ; ಪ್ರಧಾನ ತಂತ್ರಿ ಕಂಠ...
09-01-26 11:00 pm
ಟ್ರಂಪ್ ಕೈಗಳು ಸಾವಿರಾರು ಇರಾನಿಗರ ರಕ್ತದಿಂದ ಒದ್ದೆಯ...
09-01-26 08:30 pm
ರಷ್ಯಾ ಹಡಗು ವಶಕ್ಕೆ ಪಡೆದ ಬೆನ್ನಲ್ಲೇ ಅಮೆರಿಕಕ್ಕೆ ತ...
08-01-26 11:21 pm
11-01-26 10:39 pm
Mangaluru Staffer
ಬಾಂಗ್ಲಾದಲ್ಲಿ ಹಿಂದುಗಳ ಹತ್ಯೆಯನ್ನು ಭಾರತ ನೋಡುತ್ತ...
11-01-26 07:06 pm
ಅಮೆರಿಕ ಬಿಟ್ಟು ಚೀನಾ ಜೊತೆಗೆ ಬಾಂಧವ್ಯ ಬೆಳೆಸಬೇಕಿದೆ...
11-01-26 12:56 pm
Cm Siddaramaiah, Mangalore: ಕರಾವಳಿ ಪ್ರವಾಸೋದ್ಯ...
10-01-26 10:45 pm
ಡೀಮ್ಡ್ ಯುನಿವರ್ಸಿಟಿಗಳಲ್ಲಿ ಭಾಷೆಯ ಅವಜ್ಞೆ ; ಸಾಹಿತ...
10-01-26 07:57 pm
11-01-26 09:59 pm
Mangaluru Staff
ಆರು ವರ್ಷದ ಬಾಲಕಿಯನ್ನು ಅಪಹರಿಸಿ, ಕೊಲೆ ; ತಾಯಿ ಜಗಳ...
07-01-26 10:45 pm
ಸಮಾಧಿಯಲ್ಲಿ ಡ್ರಗ್ಸ್ ಬಚ್ಚಿಟ್ಟು ಮಾರಾಟ ; 3.5 ಕೋಟಿ...
06-01-26 07:04 pm
Kanachur Hospital, POSCO, Doctor: ಚಿಕಿತ್ಸೆಗೆ...
06-01-26 02:24 pm
ಯಲ್ಲಾಪುರ ; ಮದ್ವೆಗೆ ಒಪ್ಪಿಲ್ಲವೆಂದು ನಡುರಸ್ತೆಯಲ್ಲ...
04-01-26 11:02 pm