ಬ್ರೇಕಿಂಗ್ ನ್ಯೂಸ್
28-05-24 02:29 pm HK News Desk ಕ್ರೈಂ
ಶಿವಮೊಗ್ಗ, ಮೇ 28: ರಾಜ್ಯ ವಾಲ್ಮೀಕಿ ಅಭಿವೃದ್ಧಿ ನಿಗಮದ ಬೆಂಗಳೂರು ಕಚೇರಿಯಲ್ಲಿ ಅಧೀಕ್ಷಕರಾಗಿದ್ದ ಚಂದ್ರಶೇಖರ್ ಪಿ. (52) ಎಂಬವರು ಭಾನುವಾರ ಸಂಜೆ ಶಿವಮೊಗ್ಗದ ಮನೆಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದು ಕಾಂಗ್ರೆಸ್ ಸರ್ಕಾರದ ಪರಿಶಿಷ್ಟ ಪಂಗಡಗಳ ಕಲ್ಯಾಣ ಸಚಿವ ನಾಗೇಂದ್ರ ಮತ್ತು ನಿಗಮದ ಇಬ್ಬರು ಹಿರಿಯ ಅಧಿಕಾರಿಗಳ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಜೊತೆಗೆ, ವಾಲ್ಮೀಕಿ ನಿಗಮದಲ್ಲಿ 85 ಕೋಟಿ ಅವ್ಯವಹಾರ ಮಾಡಿರುವ ಬಗ್ಗೆ ಡೆತ್ ನೋಟ್ ಬರೆದಿಟ್ಟಿದ್ದಾರೆ.
ತಮ್ಮ ಸಾವಿಗೆ ಕಾರಣರಾಗಿದ್ದಾರೆ ಎನ್ನಲಾದವರ ಹೆಸರು ಮತ್ತು ನಿಗಮದಲ್ಲಿ ನಡೆದಿರುವ ಅವ್ಯವಹಾರದ ಬಗ್ಗೆ ಆರು ಪುಟಗಳ ಸುದೀರ್ಘ ಡೆತ್‌ನೋಟ್ ಬರೆದಿದ್ದು ರಾಜ್ಯ ರಾಜಕೀಯದಲ್ಲಿ ಬಿರುಗಾಳಿ ಎಬ್ಬಿಸಿದೆ. ಪ್ರಕರಣದ ಬೆನ್ನಲ್ಲೇ ತನಿಖೆಯನ್ನು ಸಿಐಡಿಗೆ ವಹಿಸಿ ರಾಜ್ಯ ಸರ್ಕಾರ ಆದೇಶ ಹೊರಡಿಸಿದೆ. ನಮ್ಮ ವಿಶೇಷ ತಂಡ ಶಿವಮೊಗ್ಗಕ್ಕೆ ತೆರಳಿ ಮಾಹಿತಿ ಸಂಗ್ರಹಿಸಲಿದೆ ಎಂದು ಸಿಐಡಿ ಡಿಜಿಪಿ ಎಂ.ಎ. ಸಲೀಂ ತಿಳಿಸಿದ್ದಾರೆ.
ಶಿವಮೊಗ್ಗ ಜಿಲ್ಲೆ ಮೂಲದ ಚಂದ್ರಶೇಖರ್ ಮೇ 25ರಂದು ಬೆಂಗಳೂರಿನಿಂದ ಶಿವಮೊಗ್ಗ ನಗರದ ಕೆಂಚಪ್ಪ ಲೇಔಟ್ ನಲ್ಲಿರುವ ಮನೆಗೆ ಬಂದಿದ್ದರು. 26ರಂದು ಪತ್ನಿ ಕವಿತಾ ಮತ್ತಿತರರು ಸಂಬಂಧಿಕ ವ್ಯಕ್ತಿಯ ಅಂತ್ಯಸಂಸ್ಕಾರದಲ್ಲಿ ಭಾಗವಹಿಸಲು ಮಾಚೇನಹಳ್ಳಿಗೆ ತೆರಳಿದ್ದರು. ಮನೆಯಲ್ಲಿ ಯಾರೂ ಇರದ ಸಮಯದಲ್ಲಿ ನೇಣು ಹಾಕಿಕೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಡೆತ್ ನೋಟ್ ನಲ್ಲಿ 85 ಕೋಟಿ ಲೂಟಿ ಬಗ್ಗೆ ಮಾಹಿತಿ ;
'ನಿಗಮಕ್ಕೆ ನಾನು ಮೋಸ, ವಂಚನೆ ಮಾಡಿಲ್ಲ, ಈ ಹಗರಣಕ್ಕೂ ನಾನು ಕಾರಣನಲ್ಲ. ಆದರೆ, ಅವಮಾನ ಸಹಿಸಲಾರೆ, ನನಗೆ ಬೇರೆ ದಾರಿ ತೋಚುತ್ತಿಲ್ಲ, ಎಲ್ಲರೂ ನನ್ನನ್ನು ಕ್ಷಮಿಸಿ ಎಂದು ಆರಂಭಿಸಿ ಶಾಲೆಯ ನೋಟ್ ಬುಕ್‌ನಲ್ಲಿ ಒಟ್ಟು ಆರು ಪುಟಗಳ ಮರಣಪತ್ರ ಬರೆದಿದ್ದಾರೆ. ಪ್ರತಿ ಪುಟದ ಮೇಲೆ ಮತ್ತು ಕೆಳಗೆ ಕಿರು ಸಹಿ ಮಾಡಿದ್ದಾರೆ. ತಮ್ಮ ಸಾವಿಗೆ ಕಾರಣರು ಯಾರು ಎಂಬುದನ್ನು ಪತ್ರದ ಆರಂಭ ಮತ್ತು ಕಡೆಯಲ್ಲಿ ಎರಡು ಬಾರಿ ಸ್ಪಷ್ಟವಾಗಿ ನಮೂದಿಸಿದ್ದಾರೆ. ನಿಗಮದ ಹೆಸರಲ್ಲಿನ ಬ್ಯಾಂಕ್ ಖಾತೆಯಲ್ಲಿ ಮೇಲಧಿಕಾರಿಗಳು 80ರಿಂದ 85 ಕೋಟಿ ರೂ.ಗಳನ್ನು ಲೂಟಿ ಹೊಡೆದಿರುವ ಬಗ್ಗೆ ದಿನಾಂಕ ಮತ್ತು ಸಮಯ ಸಹಿತ ಪ್ರತಿ ವಿವರ ನೀಡಿದ್ದಾರೆ.
ವಸಂತ ನಗರ ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾ ಶಾಖೆಯಲ್ಲಿದ್ದ ನಿಗಮದ ಉಳಿತಾಯ ಖಾತೆಯ ಉಪ ಖಾತೆ ‘ಸ್ವೀಪ್ ಇನ್ ಸ್ವೀಪ್ ಔಟ್’ನ್ನು ಎಂ.ಜಿ. ರಸ್ತೆ ಶಾಖೆಗೆ ಸಚಿವ ನಾಗೇಂದ್ರ ಅವರ ಮೌಖಿಕ ಸೂಚನೆ ಮೇರೆಗೆ ವರ್ಗಾಯಿಸುವಂತೆ ಪತ್ರ ಬರೆಯಲಾಗಿತ್ತು. ವಸಂತನಗರ ಬ್ಯಾಂಕ್ ವ್ಯವಸ್ಥಾಪಕರು ನಿರಾಕರಿಸಿದರೂ ಒತ್ತಾಯಪೂರ್ವಕವಾಗಿ ಜೀರೋ ಬ್ಯಾಲೆನ್ಸ್ ಖಾತೆಯನ್ನು ಮಾರ್ಚ್ 4ರಂದು ವರ್ಗಾಯಿಸಲಾಗಿತ್ತು. ಈ ಖಾತೆಗೆ ಮಾರ್ಚ್ 4ರಂದು 25 ಕೋಟಿ ರೂ., 6ರಂದು 25 ಕೋಟಿ ರೂ., 21ರಂದು 44 ಕೋಟಿ ರೂ., ರಾಜ್ಯ ಹುಜೂರ್ ಖಜಾನೆಯಿಂದ 43.33 ಕೋಟಿ ರೂ. ಮತ್ತು ಮೇ 21ರಂದು 50 ಕೋಟಿ ರೂ. ಸೇರಿ ಒಟ್ಟು 187.33 ಕೋಟಿ ರೂ.ಗಳನ್ನು ನಿಗಮ ಹೊಂದಿರುವ ವಿವಿಧ ಬ್ಯಾಂಕ್ ಖಾತೆಗಳಿಂದ ಮತ್ತು ರಾಜ್ಯ ಹುಜೂರ್ ಖಜಾನೆಯಿಂದ ವರ್ಗಾಯಿಸಲಾಗಿತ್ತು.
ಸದರಿ ಖಾತೆಯ ಚೆಕ್ ಬುಕ್ ಮತ್ತು ಪಾಸ್‌ಬುಕ್ ಅನ್ನು ಬ್ಯಾಂಕ್‌ನವರು ಇದುವರೆಗೆ ನೀಡಿಲ್ಲ. ನಾನು ಸಹ ಕೆಲಸದ ಒತ್ತಡದಿಂದಾಗಿ ಬ್ಯಾಂಕ್ ಸಂಪರ್ಕ ಮಾಡಿರಲಿಲ್ಲ. ಯಾವುದೇ ಪಾವತಿಗಳು ಇಲ್ಲದ ಕಾರಣ ಅವುಗಳ ಅವಶ್ಯಕತೆ ಬೀಳಲಿಲ್ಲ. ಆದರೆ, ನಿಗಮದ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ.ಪದ್ಮನಾಭ ಒತ್ತಾಯಪೂರ್ವಕವಾಗಿ ಅನುದಾನ ವರ್ಗಾಯಿಸುತ್ತಿದ್ದರು. ನಮಗೆ ಈ ಒಳಸಂಚು ಅರ್ಥವಾಗಲಿಲ್ಲ. ಮೇ 21ರಂದು 50 ಕೋಟಿ ರೂ.ಗಳ ಚೆಕ್ ಅನ್ನು ಯಾರಿಗೂ ತಿಳಿಯದ ಹಾಗೆ ಹಣ ತರಲು ವ್ಯವಸ್ಥಾಪಕ ನಿರ್ದೇಶಕರು ಸೂಚಿಸಿದ್ದಾರೆಂದು ಲೆಕ್ಕಾಧಿಕಾರಿಗಳು ಹೇಳಿದರು. ನಾನು ಒಪ್ಪದಿದ್ದರೂ ಒತ್ತಡ ತಂದು ಆರ್‌ಟಿಜಿಎಸ್ ಮಾಡಿಸಿ ಹಣ ತರಲು ಹೇಳಿದ್ದು ಮ್ಯಾನೇಜರ್ ಶುಚಿಸ್ಮಿತಾ ಅವರು ಚೆಕ್ ಬುಕ್ ಮತ್ತು ಪಾಸ್‌ಬುಕ್ ಕೊಡಲು ನಿರಾಕರಿಸಿ ನಾಳೆ ನಾನೇ ನಿಗಮಕ್ಕೆ ಬರುವುದಾಗಿ ಹೇಳಿದರು.
ಮೇ 22ರಂದು ಬ್ಯಾಂಕ್ ಮ್ಯಾನೇಜರ್, ನಮ್ಮ ಕಚೇರಿಗೆ ಬಂದು ಈಗಾಗಲೇ ಚೆಕ್ ಬುಕ್ ಮತ್ತು ಪಾಸ್‌ಬುಕ್ ಕೊಟ್ಟಿದ್ದೇನೆ ಎಂದು ಹೇಳಿದಾಗ ಸಂಶಯಗೊಂಡು ಬ್ಯಾಂಕ್ ಖಾತೆಗೆ ಹೋಗಿ ಖಾತೆ ಪರಿಶೀಲಿಸಿದಾಗ ವ್ಯವಸ್ಥಾಪಕ ನಿರ್ದೇಶಕರು ಮತ್ತು ಲೆಕ್ಕಾಧಿಕಾರಿ ಜಂಟಿ ಸಹಿ ಮಾಡಿ ಖಾತೆಯಿಂದ ಅನುದಾನ ಡ್ರಾ ಮಾಡಿರುವುದು ಬೆಳಕಿಗೆ ಬಂತು. ಮಾರನೇ ದಿನ ಮೇ 23ರಂದು ನಾನು, ಎಂಡಿ ಮತ್ತು ಲೆಕ್ಕಾಧಿಕಾರಿ, ಪ್ರಾದೇಶಿಕ ಕಚೇರಿ ಮುಖ್ಯಸ್ಥ ಮಹೇಶ್‌ರನ್ನು ಸಂಪರ್ಕಿಸಿ ವಿಷಯ ತಿಳಿಸಿ ದೂರು ನೀಡಿದ್ದೇವೆ. ಆದರೆ, ಎಂಡಿ ಅವರು ಪರಿಶಿಷ್ಟ ವರ್ಗಗಳ ಕಲ್ಯಾಣ ಸಚಿವರ ಕಚೇರಿ ಸಿಬ್ಬಂದಿ ನಾಗರಾಜ್‌ರೊಂದಿಗೆ ಮಾತನಾಡಿದ್ದೇನೆ, ಎಲ್ಲ ಮೊತ್ತ ವಾಪಸ್ಸು ಬರುತ್ತದೆ. ಅಲ್ಲಿಯವರೆಗೆ ಯಾರಿಗೂ ವಿಷಯವನ್ನು ಹೇಳದೆ ಗೌಪ್ಯತೆ ಕಾಪಾಡಿ ಎಂದು ತಾಕೀತು ಮಾಡಿದರು. ಅದೇ ದಿನ ಸಂಜೆ 5 ಕೋಟಿ ರೂ. ವಾಪಸ್ಸಾಗಿದೆ ಎಂದು ತಿಳಿಸಿದರು. ಆದರೆ, ಅದರ ಬಗ್ಗೆ ಯಾವುದೇ ದಾಖಲೆಗಳು ಬಂದಿಲ್ಲ. ಇದರ ಬಗ್ಗೆ ಮೇ 24ರಂದು ನಿಗಮದ ಅಧ್ಯಕ್ಷರಿಗೆ ತಿಳಿಸಿದಾಗ ಇನ್ನೂ ಎರಡು ದಿನದ ಬೆಳವಣಿಗೆ ನೋಡಿ ನಂತರ ದೂರು ನೀಡುವುದಾಗಿ ತಿಳಿಸಿದರು.
ಒಟ್ಟಾರೆ ನಿಗಮದಿಂದ 80ರಿಂದ 85 ಕೋಟಿ ರೂ. ಗಳನ್ನು ಅನ್ಯಾಯ ಮತ್ತು ನಿಯಮಬಾಹಿರವಾಗಿ ಲೂಟಿ ಮಾಡಲಾಗಿದೆ. ಇದರಲ್ಲಿ ನನ್ನ ಪಾತ್ರವಿಲ್ಲ. ನನ್ನ ತಪ್ಪೆಂದರೆ ಕೆಲಸದ ಒತ್ತಡದಲ್ಲಿ ಬ್ಯಾಂಕ್ ಚೆಕ್ ಬುಕ್ ಪಡೆಯದಿರುವುದು ಮತ್ತು ಕ್ಯಾಶ್ ಪುಸ್ತಕ ಮುಕ್ತಾಯಗೊಳಿಸದಿರುವುದು. ನನ್ನ ಈ ಸ್ಥಿತಿಗೆ ವ್ಯವಸ್ಥಾಪಕ ನಿರ್ದೇಶಕ ಜೆ.ಜಿ.ಪದ್ಮನಾಭ, ಲೆಕ್ಕಾಧಿಕಾರಿ ಪರಶುರಾಮ ದುರಗಣ್ಣನವರ, ಯೂನಿಯನ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕಿ ಶುಚಿಸ್ಮಿತಾ ಕಾರಣ ಎಂದು ಪತ್ರದಲ್ಲಿ ವಿವರವಾಗಿ ಬರೆದಿದ್ದಾರೆ.
Tribal corporation employee of Maharshi Valmiki Scheduled Tribe Development Corporation Chandrashekaran committed suicide in Shivamogga, Congress Minister Nagendra name found in death note, 187 crore Fraud exposed. A 50-year-old government officer working as superintendent at Karnataka Maharshi Valmiki Scheduled Tribe Development Corporation Ltd in Bengaluru ended his life by suicide at his residence in his hometown Shivamogga on Sunday. In a six-page note, he is said to have accused senior officers of pressuring him to open a parallel bank account and divert unaccounted money into that from the primary account.
13-01-25 06:21 pm
Mangaluru Correspondent
ಹಸುವಿನ ಕೆಚ್ಚಲು ಕೊಯ್ದ ಪ್ರಕರಣ ; ಬಿಹಾರ ಮೂಲದ ಆರೋಪ...
13-01-25 10:48 am
Minister Parameshwara, Yatnal: 'ನೀವು ಸಾಬರಿಗೆ...
11-01-25 10:53 pm
ಕೊಪ್ಪದ ಮೇಗೂರು ಅರಣ್ಯದಲ್ಲಿ ಶರಣಾಗಿದ್ದ ನಕ್ಸಲರ ಶಸ...
11-01-25 10:27 pm
BBMP Raid, Lokayukta; ಬಿಬಿಎಂಪಿ 50 ಕಡೆಗಳಲ್ಲಿ ಲ...
11-01-25 09:14 pm
13-01-25 09:58 am
HK News Desk
ಪಾಕಿಸ್ತಾನ ಪರಮಾಣು ಇಂಧನ ಆಯೋಗದ 18 ವಿಜ್ಞಾನಿಗಳನ್ನು...
12-01-25 05:07 pm
Hollywood hills, Los Angeles fires: ಲಾಸ್ ಏಂಜ...
09-01-25 12:11 pm
ತಿರುಪತಿಯಲ್ಲಿ ಕಾಲ್ತುಳಿತಕ್ಕೆ ಏಳು ಸಾವು ; ವೈಕುಂಠ...
09-01-25 11:22 am
StalinCM, Lipi: ಸಿಂಧೂ ನಾಗರಿಕತೆಯ ಲಿಪಿಗಳನ್ನು ಅರ...
08-01-25 11:07 pm
13-01-25 10:48 am
Bengaluru correspondent
Historian Vikram Sampath, Lit Fest Mangalore...
12-01-25 11:03 pm
PLD bank election, MLA Ashok Rai, Puttur: ಪಿಎ...
12-01-25 10:06 pm
Hardeep Singh Puri, Brijesh Chowta, Mangalore...
12-01-25 12:33 pm
CM Siddaramaiah, Kambala Mangalore, Naringana...
11-01-25 10:34 pm
13-01-25 03:30 pm
Mangaluru Correspondent
Mangalore, crime, rape: ಬ್ಯಾಂಕ್ ಉದ್ಯೋಗಿ ಯುವತಿ...
11-01-25 10:21 pm
Mumbai Crime, Fruad, Torres Ponzi: ಚೈನ್ ಸ್ಕೀಮ...
10-01-25 11:05 pm
Bangladeshi national illegal, Mangalore: ಮುಕ್...
10-01-25 09:51 pm
Mangalore Robbery, Crime, Singari Beedi: ಸಿಂಗ...
10-01-25 10:11 am