Prajwal Revanna Arrested, Bangalore; 34 ದಿನಗಳ ಬಳಿಕ ಪೆನ್ ಡ್ರೈವ್ ಬಾಯ್ ಬೆಂಗಳೂರಿಗೆ ರಿಟರ್ನ್ ; ವಿಮಾನದಿಂದ ಇಳಿಯುತ್ತಿದ್ದಂತೆ ಎಸ್ಐಟಿ ಬಲೆಗೆ ಬಿದ್ದ ಸಂಸದ ಪ್ರಜ್ವಲ್ ರೇವಣ್ಣ, ಕಣ್ಣಾಮುಚ್ಚಾಲೆ ಆಟಕ್ಕೆ ಅಂತ್ಯ..!

31-05-24 02:10 am       Bengaluru Correspondent   ಕ್ರೈಂ

ದೇಶದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ, ಹಾಸನದ ಜೆಡಿಎಸ್‌ ಸಂಸದ ಪ್ರಜ್ವಲ್‌ ರೇವಣ್ಣ ಕಡೆಗೂ ಸೆರೆಯಾಗಿದ್ದಾರೆ.

ಬೆಂಗಳೂರು, ಮೇ 31: ದೇಶದಲ್ಲಿ ತೀವ್ರ ಸಂಚಲನ ಸೃಷ್ಟಿಸಿದ್ದ ಅತ್ಯಾಚಾರ ಪ್ರಕರಣದ ಪ್ರಮುಖ ಆರೋಪಿ, ಹಾಸನದ ಜೆಡಿಎಸ್‌ ಸಂಸದ ಪ್ರಜ್ವಲ್‌ ರೇವಣ್ಣ ಕಡೆಗೂ ಸೆರೆಯಾಗಿದ್ದಾರೆ. ಕಳೆದೊಂದು ತಿಂಗಳಿಂದ ವಿದೇಶದಲ್ಲಿ ಭೂಗತರಾಗಿ ಕಣ್ಣಾಮುಚ್ಚಾಲೆ ಆಡುತ್ತಿದ್ದ ಪ್ರಜ್ವಲ್‌, ಗುರುವಾರ ತಡರಾತ್ರಿ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದ ಮರು ಕ್ಷಣವೇ ಎಸ್‌ಐಟಿ ಅಧಿಕಾರಿಗಳು ತಮ್ಮ ವಶಕ್ಕೆ ಪಡೆದಿದ್ದಾರೆ.

ಲೈಂಗಿಕ ದೌರ್ಜನ್ಯದ ಅಶ್ಲೀಲ ವಿಡಿಯೊಗಳು ಬಹಿರಂಗವಾದ ಬೆನ್ನಲ್ಲೇ ಏ.26ರಂದು ರಾತ್ರೋರಾತ್ರಿ ಜರ್ಮನಿಗೆ ಪಲಾಯನ ಮಾಡಿದ್ದ ಪ್ರಜ್ವಲ್‌, 34 ದಿನಗಳಿಂದ ಭೂಗತರಾಗಿದ್ದರು. ದುಬೈ, ಲಂಡನ್‌, ಜರ್ಮನಿಗೆ ವಾಸ್ತವ್ಯ ಬದಲಿಸಿದ್ದ ಅವರು, ಮೇ 27ರಂದು ವಿದೇಶದಿಂದಲೇ ವಿಡಿಯೊ ಹೇಳಿಕೆ ಬಿಡುಗಡೆ ಮಾಡಿ, ಶುಕ್ರವಾರ (ಮೇ 31) ರಾಜ್ಯಕ್ಕೆ ಮರಳಿ ಎಸ್‌ಐಟಿ ಅಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗುವುದಾಗಿ ಹೇಳಿದ್ದರು.

ಇದರ ಬೆನ್ನಲ್ಲೇ ಜರ್ಮನಿಯ ಮ್ಯೂನಿಚ್‌ನಿಂದ ಗುರುವಾರ ಬೆಂಗಳೂರಿಗೆ ಬರಲು ವಿಮಾನದ ಟಿಕೆಟ್‌ ಬುಕ್ಕಿಂಗ್‌ ಮಾಡಿದ್ದರು. ಲುಫ್ತಾನ್ಸಾ ಏರ್‌ಲೈನ್ಸ್‌ ವಿಮಾನದಲ್ಲಿ(ಎಲ್‌ ಎಚ್‌ 764) ಬ್ಯುಸಿನೆಸ್‌ ಕ್ಲಾಸ್‌ ಟಿಕೆಟ್‌ ಕಾಯ್ದಿರಿಸಿದ್ದರು. ಭಾರತೀಯ ಕಾಲಮಾನದ ಪ್ರಕಾರ ಸಂಜೆ 4.05ಕ್ಕೆ ಮ್ಯೂನಿಚ್‌ನಿಂದ ಹೊರಟ ಆ ವಿಮಾನ ತಡರಾತ್ರಿ 12. 50 ಕ್ಕೆ ಬೆಂಗಳೂರಿನ ಕೆಐಎಎಲ್‌ಗೆ ಬಂದಿತು.

ಪ್ರಜ್ವಲ್‌ರ ಬಂಧನದ ಹಿನ್ನೆಲೆಯಲ್ಲಿಯಾವುದೇ ಸಮಸ್ಯೆಯಾಗದಂತೆ ಕೈಗೊಳ್ಳಬೇಕಾದ ಭದ್ರತಾ ಕ್ರಮಗಳ ಕುರಿತು ಎಸ್‌ಐಟಿ ಮುಖ್ಯಸ್ಥ ಬಿ.ಕೆ.ಸಿಂಗ್‌ ಅವರು ನಗರ ಪೊಲೀಸ್‌ ಆಯುಕ್ತ ಬಿ.ದಯಾನಂದ ಅವರೊಂದಿಗೆ ಬೆಳಗ್ಗೆ ಸಭೆ ನಡೆಸಿದ್ದರು. ಎಸ್‌ಐಟಿ ಅಧಿಕಾರಿಗಳ ಮನವಿಯಂತೆ ಕೆಐಎಎಲ್‌ ಬಳಿ ಭದ್ರತೆಗೆ ಹೆಚ್ಚಿನ ಪೊಲೀಸರನ್ನು ನಿಯೋಜಿಸಲಾಗಿತ್ತು.

Janata Dal (Secular) leader Prajwal Revanna, who is accused of sexually abusing numerous women, returned to India on the intervening night of Thursday around 1:15am from Berlin, Germany, nearly a month after leaving the country on a diplomatic passport. He was immediately taken into custody.